ಟಿಕ್​ ಟಾಕ್​ ಬ್ಯಾನ್​: 1 ಲಕ್ಷ 58 ಸಾವಿರ ಫಾಲೋವರ್ಸ್​ ಹೊಂದಿದ್ದ 10 ವರ್ಷದ ಬಾಲಕಿ ಕಣ್ಣೀರು! - 10 ವರ್ಷದ ಬಾಲಕಿ ಕಣ್ಣೀರು

🎬 Watch Now: Feature Video

thumbnail

By

Published : Jun 30, 2020, 6:48 PM IST

ಶಿರಡಿ: ದೇಶಾದ್ಯಂತ ಟಿಕ್​ ಟಾಕ್​ ಸೇರಿದಂತೆ ಚೀನಾದ 59 ಆ್ಯಪ್​ ಬ್ಯಾನ್​ ಮಾಡಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಬೇಸರಗೊಂಡಿರುವ 10 ವರ್ಷದ ಬಾಲಕಿಯೋರ್ವಳು ಕಣ್ಣೀರು ಹಾಕಿರುವ ಘಟನೆ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದಿದೆ. ಕಳೆದ ಒಂದು ವರ್ಷದಿಂದ ಟಿಕ್​ ಟಾಕ್​​ ವಿಡಿಯೋ ಮಾಡಲು ಆರಂಭಿಸಿರುವ ರಾಶಿ ಈಗಾಗಲೇ 1 ಲಕ್ಷ 58 ಸಾವಿರ ಫಾಲೋವರ್ಸ್​​ ಹಾಗೂ 35 ಲಕ್ಷ ಲೈಕ್ಸ್​​ ಪಡೆದಿದ್ದಾಳೆ. ಜತೆಗೆ ಅನೇಕ ವಾಹಿನಿಗಳಲ್ಲಿ ಈ ಬಾಲಕಿಯ ವಿಡಿಯೋ ಕೂಡ ಬಿತ್ತರಗೊಂಡಿದ್ದವು. ಆದರೆ ಇದೀಗ ದಿಢೀರ್​ ಆಗಿ ಬ್ಯಾನ್​ ಮಾಡಿದ್ದರಿಂದ ಆಘಾತಕ್ಕೊಳಗಾಗಿರುವ ಬಾಲಕಿ ಕಣ್ಣೀರು ಹಾಕಿದ್ದಾಳೆ. ಆದರೆ ಮಗಳಿಗೆ ಪೋಷಕರು ಸಮಾಧಾನ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.