ಪಾರ್ಥಿವ ಶರೀರದ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ: ನವೀನ್ ತಂದೆಗೆ ಸಿಎಂ ಭರವಸೆ - Steps are being taken to bring deadbody safely
🎬 Watch Now: Feature Video
ಹಾವೇರಿ: ಉಕ್ರೇನ್- ರಷ್ಯಾ ಸಂಘರ್ಷದ ವೇಳೆ ಶೆಲ್ ದಾಳಿಯಲ್ಲಿ ಬಲಿಯಾಗಿರುವ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ ಅವರ ಮನೆಗೆ ರಾಜಕೀಯ ನಾಯಕರು ಆಗಮಿಸಿ ಸಾಂತ್ವನ ಹೇಳುತ್ತಿದ್ದಾರೆ. ಮೃತಪಟ್ಟ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್ ಅವರಿಗೆ ಸಿಎಂ ದೂರವಾಣಿಯ ಮೂಲಕ ಕರೆ ಮಾಡಿ ಮತ್ತೊಮ್ಮೆ ಸಾಂತ್ವನ ಹೇಳಿದರು. ಈ ವೇಳೆ ಮಗನ ಮೃತದೇಹವನ್ನು ತರುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪಾರ್ಥಿವ ಶರೀರವನ್ನು ಸುರಕ್ಷಿತವಾಗಿ ತರುವುದಕ್ಕೆ ಕ್ರಮ ಕೈಗೊಳ್ಳುತ್ತಿರುವುದಾಗಿ ಭರವಸೆ ನೀಡಿದ್ದು, ಧೈರ್ಯ ಕಳೆದುಕೊಳ್ಳದಂತೆ ಸಾಂತ್ವನ ಹೇಳಿದರು.
Last Updated : Feb 3, 2023, 8:18 PM IST