ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಟಾಟಾ ಗೂಡ್ಸ್ ವಾಹನ- ವಿಡಿಯೋ - ETV Bharat kannada News
🎬 Watch Now: Feature Video
ತುಮಕೂರು : ಚಲಿಸುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನಕ್ಕೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ತುಮಕೂರು ತಾಲೂಕಿನ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಹಾಳ್ ಬಳಿ ನಡೆದಿದೆ. ಅಂಗಡಿಗೆ ದಿನಸಿ ಪದಾರ್ಥ ಸಾಗಿಸುತ್ತಿದ್ದ ವಾಹನದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ ಎಂದು ಹೇಳಲಾಗಿದೆ. ಬೆಂಕಿ ಇಡೀ ವಾಹನ ವ್ಯಾಪಿಸಿ ದಿನಸಿ ಸೇರಿದಂತೆ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತುಮಕೂರು: ಗಾಯಗೊಂಡು ನರಳಾಡುತ್ತಿದ್ದ ಗೂಬೆಯ ರಕ್ಷಣೆ
Last Updated : Feb 3, 2023, 8:39 PM IST