ಮಕ್ಕಳಂತೆ ಹಿಮದಲ್ಲಿ ಆಟವಾಡಿದ ರಾಹುಲ್ ಗಾಂಧಿ - ಸಹೋದರಿ ಪ್ರಿಯಾಂಕಾ - ಹಿಮದಲ್ಲಿ ಆಟವಾಡಿದ ರಾಹುಲ್ ಗಾಂಧಿ
🎬 Watch Now: Feature Video
ಶ್ರೀನಗರ: ಕೈ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕ ಗಾಂಧಿ ಹಿಮದಲ್ಲಿ ಮಕ್ಕಳಂತೆ ಸ್ನೋಬಾಲ್ ಆಟವಾಡಿರುವ ವಿಡಿಯೋ ಸಾಮಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇನ್ನು ಸೋಮವಾರ ದಿನ ಇಲ್ಲಿಯ ಲಾಲ್ ಚೌಕ್ನಲ್ಲಿ ಧ್ವಜರೋಹಣ ಮಾಡುವ ಮೂಲಕ ಭಾರತ್ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿ ಮುಕ್ತಾಯಗೊಳಿಸಿದ್ದರು. ಸಮಾರೋಪ ಕಾರ್ಯಕ್ರಮ ಮುಕ್ತಾಯವಾದ ನಂತರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನಗರ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ರಾಹುಲ್ ಮತ್ತು ಪ್ರಿಯಾಂಕಾ ಹಿಮದಲ್ಲಿ ಮಕ್ಕಳಂತೆ ಆಟವಾಡುವ ಮೂಲಕ ಗಮನ ಸೆಳೆದಿದ್ದಾರೆ. ಬಳಿಕ ಸಂಜೆ ವೇಳೆಗ ಇಲ್ಲಿಯ ದಾಲ್ ಸರೋವರಕ್ಕೆ ಭೇಟಿ ನೀಡಿದ್ದರು.
ಈ ವೇಳೆ ರಾಹುಲ್ ಅಭಿಮಾನಿಯೊಬ್ಬರು ಅವರನ್ನು ಅಪ್ಪಿಕೊಳ್ಳುವ ಬಯಕೆ ಇದೆ ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ಅದಕ್ಕೆ ರಾಹುಲ್ ಒಪ್ಪಿಗೆ ಸೂಚಿಸಿ ಅಭಿಮಾನಿಯನ್ನು ತಬ್ಬಿಕೊಂಡಿರುವ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಅಲ್ಲದೇ ನಡು ರಸ್ತೆಯಲ್ಲಿ ನಿಂತಿದ್ದ ಕಾರನ್ನು ತಳ್ಳುವ ಮೂಲಕ ರಾಹುಲ್ ಕಾರ್ ಚಾಲಕನಿಗೆ ಸಹಾಯ ಮಾಡಿರುವ ದೃಶ್ಯವನ್ನು ಸಹ ಸೆರೆ ಹಿಡಿಯಲಾಗಿದ್ದು, ಈ ವಿಡಿಯೋಗಳು ವೈರಲ್ ಆಗಿವೆ. ಇನ್ನು, ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಕಾಶ್ಮೀರದಲ್ಲಿ ಕೊನೆಗೊಂಡಿದ್ದು, ಸುಮಾರು 4000 ಕಿ.ಮೀ ಯಾತ್ರೆ ಇದಾಗಿತ್ತು.
ಇದನ್ನೂ ಓದಿ: ಜಮ್ಮು ಕಾಶ್ಮೀರ: ಖೀರ್ ಭವಾನಿ ದೇಗುಲಕ್ಕೆ ರಾಹುಲ್, ಪ್ರಿಯಾಂಕಾ ಭೇಟಿ