ಅರ್ಧ ದಿನ ತಡವಾಗಿ ಬಂದ ವಿಮಾನ : ಸ್ಪೈಸ್ ಜೆಟ್ ವಿರುದ್ಧ ಪ್ರಯಾಣಿಕರ ಪ್ರತಿಭಟನೆ - ETV Bharath Kannada
🎬 Watch Now: Feature Video
ವಾರಾಣಸಿ(ಉತ್ತರ ಪ್ರದೇಶ): ಮುಂಬೈಗೆ ತೆರಳ ಬೇಕಾಗಿದ್ದ ವಿಮಾನ 12 ಗಂಟೆಗಳ ಕಾಲ ತಡವಾಗಿ ಬಂದಿದ್ದಕ್ಕೆ ಪ್ರಯಾಣಿಕರು ಸ್ಪೈಸ್ ಜೆಟ್ ವಿಮಾನದ ವಿರುದ್ಧ ಪ್ರತಿಭಟನೆ ಮಾಡಿದರು. ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ಏರ್‌ಲೈನ್ಸ್ ವಿಮಾನ SG-201 ಗುರುವಾರ ಬೆಳಗ್ಗೆ 10:30ಕ್ಕೆ ಟೇಕ್ ಆಫ್ ಆಗಿ ಮಧ್ಯಾಹ್ನ 12:30ಕ್ಕೆ ಮುಂಬೈ ತಲುಪಬೇಕಿತ್ತು. ಆದರೆ, ವಿಮಾನ ಬಂದದ್ದು ರಾತ್ರಿ 8ಗಂಟೆಗೆ ಮತ್ತು ಟೇಕ್ ಆಫ್ ಆದ್ದದ್ದು 10:30ಕ್ಕೆ. ಸ್ಪೈಸ್ ಜೆಟ್ ಏರ್‌ಲೈನ್ಸ್ ವಿರುದ್ಧ ಪ್ರಯಾಣಿಕರು ವಿಮಾನ ನಿಲ್ದಾಣದ ಮುಖ್ಯ ಟರ್ಮಿನಲ್ ಎದುರೇ ಧರಣಿ ಕುಳಿತಿದ್ದರು.
Last Updated : Feb 3, 2023, 8:35 PM IST