ರಾಜೌರಿಯಲ್ಲಿ ಭೂ ಕುಸಿತ.. ರಸ್ತೆ ಸಂಚಾರಕ್ಕೆ ತಾತ್ಕಾಲಿಕ ತಡೆ - ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಭೂಕುಸಿತ
🎬 Watch Now: Feature Video
ಇಲ್ಲಿನ ರಜೌರಿ ಜಿಲ್ಲೆ ಮತ್ತು ಪೂಂಚ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣದಿಂದಾಗಿ ಭೂಕುಸಿತ ಉಂಟಾಗಿದೆ. ಹೀಗಾಗಿ, ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ. ಈ ರಸ್ತೆಯು ರಜೌರಿಯಿಂದ ಸುರನ್‌ಕೋಟ್‌ಗೆ ಮತ್ತು ಠಾಣಾ ಮಂಡಿಯ ಜನರನ್ನು ಕಣಿವೆಯೊಂದಿಗೆ ಸಂಪರ್ಕಿಸುವ ಮೊಘಲ್ ಹೆದ್ದಾರಿಗಿದ್ದ ಏಕೈಕ ಸಂಪರ್ಕ ಈ ರಸ್ತೆಯಾಗಿದೆ. ಹೆದ್ದಾರಿಯನ್ನು ಪುನಃ ಯಥಾ ಸ್ಥಿತಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ಕೆಲಸ ಮಾತ್ರ ವಿಳಂಬವಾಗುತ್ತಿದೆ. ರಸ್ತೆ ಸಂಚಾರಕ್ಕೆ ಯೋಗ್ಯವಾಗುವವರೆಗೆ ಯಾವುದೇ ವಾಹನಗಳನ್ನು ಬಂದು ಹೋಗಲು ಬಿಡುತ್ತಿಲ್ಲ. ರಸ್ತೆ ಸುಧಾರಣೆಯಾಗುವವರೆಗೆ ಸಂಚಾರ ಮಾಡದಂತೆ ಆಡಳಿತ ಮಂಡಳಿ ಜನರಲ್ಲಿ ಮನವಿ ಮಾಡಿದೆ.
Last Updated : Feb 3, 2023, 8:25 PM IST