ಬೆಂಗಳೂರಲ್ಲಿ ಭಾರಿ ಮಳೆ: ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ಬಂದ್.. ಅಪಾರ್ಟ್ಮೆಂಟ್ಗಳು ಜಲಾವೃತ - ಬೆಂಗಳೂರಲ್ಲಿ ಭಾರಿ ಮಳೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16291722-thumbnail-3x2-bengalururain.jpg)
ಬೆಂಗಳೂರು: ಬೆಂಗಳೂರಲ್ಲಿ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಮಹಾದೇವಪುರ ವಲಯದಲ್ಲಿ ಹಲವು ಮನೆಗಳು ಹಾಗೂ ರಸ್ತೆಗಳು ಜಲಾವೃತಗೊಂಡು ರಸ್ತೆ ಸಂಚಾರ ಬಂದ್ ಆಗಿದೆ. ಫೋರಂ ವ್ಯಾಲ್ಯೂ ಮಾಲ್‌ನಲ್ಲಿ ನೀರು ತುಂಬಿದ್ದರಿಂದ ವೈಟ್‌ಫೀಲ್ಡ್ ಮುಖ್ಯ ರಸ್ತೆ ಹಾಗೂ ಸ್ಪೈಸ್ ಗಾರ್ಡನ್‌ನಲ್ಲಿ ಪ್ರವಾಹದಿಂದಾಗಿ ಒಎಆರ್ ಮತ್ತು ಪಾಣತ್ತೂರು ಆರ್‌ಯುಬಿಯಲ್ಲಿ ನೀರು ತುಂಬಿದ್ದರಿಂದ ಬಳಗೆರೆ ಮುಖ್ಯರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಬೆಳ್ಳಂದೂರು ರೈನ್ಬೋ ಡ್ರೈವ್, ಸರ್ಜಾಪುರ ಬಳಿ ಭಾರಿ ಟ್ರಾಫಿಕ್ ಜಾಮ್ ಆಗಿದೆ. ಮಹಾದೇವಪುರ ವ್ಯಾಪ್ತಿಯ 30ಕ್ಕೂ ಅಧಿಕ ಅಪಾರ್ಟ್ಮೆಂಟ್ಗಳ ಜಲಾವೃತವಾಗಿವೆ. ಮತ್ತೊಂದೆಡೆ, ಬಿಬಿಎಂಪಿ, ಅಗ್ನಿಶಾಮಕ ಇಲಾಖೆ ಮತ್ತು ನೂರಾರು ಸ್ವಯಂಸೇವಕರು ಈಗಾಗಲೇ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
Last Updated : Feb 3, 2023, 8:27 PM IST