ಶಿಗ್ಗಾಂವಿ: ಸಿಸಿಟಿವಿ ಕ್ಯಾಮರಾಗೆ ಬಟ್ಟೆ ಹಾಕಿ ಚಿನ್ನದಂಗಡಿ ದೋಚಿದ ಕಳ್ಳರು - ಸಿಸಿಟಿವಿ ಕಂಡ ಕಳ್ಳರು ಕ್ಯಾಮೆರಾಗೆ ಬಟ್ಟೆ ಹಾಕಿ ಕಳ್ಳತನ
🎬 Watch Now: Feature Video
ಹಾವೇರಿ: ದುಷ್ಕರ್ಮಿಗಳು ಗ್ಯಾಸ್ ಕಟರ್ ಬಳಸಿ ಚಿನ್ನದಂಗಡಿ ದೋಚಿದ ಘಟನೆ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಜರುಗಿದೆ. ನಾರಾಯಣ ಜುವೆಲ್ಲರ್ಸ್‌ನಲ್ಲಿ ಅಂದಾಜು 15 ಲಕ್ಷ ರೂಪಾಯಿ ಮೌಲ್ಯದ 15 ಕೆ.ಜಿ ಬೆಳ್ಳಿ ಮತ್ತು 80 ಗ್ರಾಂ ಬಂಗಾರ ಕಳ್ಳತನವಾಗಿದೆ. ಮಾಲೀಕರು ಮುಂಜಾನೆ ಅಂಗಡಿ ತೆರೆಯಲು ಮುಂದಾಗಿದ್ದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.
ಮೂವರ ತಂಡ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ಕಂಡ ಕೂಡಲೇ ಕಳ್ಳರು ಕ್ಯಾಮರಾಗೆ ಬಟ್ಟೆ ಹಾಕಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ್, ಸಿಪಿಐ ಸತ್ಯಪ್ಪ ಮಾಳಗೋಡ, ಪಿಎಸ್ಐ ಸಂಪತ್ ಆನಿಕಿವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂಓದಿ: ಅಂಗನವಾಡಿ ಕೇಂದ್ರದ ಸೆಪ್ಟಿಕ್ ಟ್ಯಾಂಕ್ನಲ್ಲಿ ಬಿದ್ದು ಪುಟ್ಟ ಬಾಲಕಿ ಸಾವು
Last Updated : Feb 14, 2023, 11:34 AM IST