ETV Bharat / sukhibhava

ನಿಮ್ಮ ಮಕ್ಕಳು ಮಂಕಾಗಿದ್ದಾರಾ? ಕಬ್ಬಿಣಾಂಶ ಕೊರತೆ ಬಗ್ಗೆ ಎಚ್ಚರವಹಿಸಿ..ಇಲ್ಲಿದೆ ಉಪಯುಕ್ತ ಮಾಹಿತಿ..

ಕಬ್ಬಿಣಾಂಶದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಗುವಿಗೆ ಕಬ್ಬಿಣಾಂಶ ಪೂರಕ ಆಹಾರ, ಫೋಲಿಕ್ ಆಮ್ಲ, ವಿಟಮಿನ್ ಸಿ ಮತ್ತು ಬಿ, ಪ್ರೊಟೀನ್ ನೀಡಬೇಕಾಗುತ್ತದೆ.

you-child-looks-dull-check-for-iron-deficiency
ಕಬ್ಬಿಣಾಂಶ ಕೊರತೆಗೆ ಎಚ್ಚರವಹಿಸಿ
author img

By

Published : Jul 15, 2021, 7:51 PM IST

Updated : Jul 15, 2021, 8:54 PM IST

ಕಬ್ಬಿಣಾಂಶ ಕೊರತೆ ಇಂದು ಬಹಳವಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದು. ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಉಂಟಾದರೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೇ ಕಬ್ಬಿಣಾಂಶದ ಕೊರತೆಯು ರಕ್ತಹೀನತೆಗೂ ದಾರಿಯಾಗುತ್ತದೆ. ಆದರೆ ಮಕ್ಕಳಲ್ಲಿ ಕಬ್ಬಿಣಾಂಶ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ ಎಂಬುದನ್ನು ಕಂಡುಕೊಳ್ಳುವುದು ಹೇಗೆ? ಈ ಕುರಿತು ವೈದ್ಯೆ ಡಾ.ಲತಿಕಾ ಜೋಶಿ ಉಪಯುಕ್ತ ಮಾಹಿತಿ ನೀಡಿದ್ದಾರೆ.

ಮಕ್ಕಳ ದೈಹಿಕ ಅಥವಾ ಮಾನಸಿಕ ಬೆಳವಣಿಗೆಯಲ್ಲಿ ಕಬ್ಬಿಣಾಂಶ ಪ್ರಮುಖ ಪೋಷಕ ಅಂಶ ಎಂದು ಪರಿಗಣಿಸಲಾಗುತ್ತದೆ. ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟದ ಮೇಲೂ ಇದರ ಪರಿಣಾಮ ಉಂಟಾಗುತ್ತದೆ. ಇದು ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಬಹುದು. ಮಕ್ಕಳಲ್ಲಿ ಕಬ್ಬಿಣದ ಅವಶ್ಯಕತೆಗಳು ವಯಸ್ಸಿನ ಪ್ರಕಾರ ಭಿನ್ನವಾಗಿರುತ್ತದೆ.

ಕಬ್ಬಿಣಾಂಶ ಕೊರತೆಯು ಮಕ್ಕಳಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದಾಗ್ಯೂ, ಪೋಷಕರು ಮಗುವಿನ ಆಹಾರದಲ್ಲಿ ಜೀವಸತ್ವಗಳು ಮತ್ತು ಪ್ರೊಟೀನ್‌ಗಳನ್ನು ಸೇರಿಸುವಲ್ಲಿ ಹೆಚ್ಚು ಗಮನಹರಿಸುತ್ತಾರೆ. ಆದರೆ ಕಬ್ಬಿಣಾಂಶ ತುಂಬಿರುವ ಬೀನ್ಸ್, ಗೋಡಂಬಿ, ಫುಲ್‌ಗ್ರೇನ್‌ಗಳಂತಹ ತರಕಾರಿಗಳನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ.

ಕಬ್ಬಿಣಾಂಶದ ಅವಶ್ಯಕತೆ ಏಕೆ?

ಕಬ್ಬಿಣಾಂಶದ ಕೊರತೆಯು ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಜೀವಕೋಶದ ಗಾತ್ರದ ಮೇಲೂ ಸಹ ಪರಿಣಾಮ ಬೀರುತ್ತದೆ. ಈ ಆಮ್ಲಜನಕದ ಮೂಲಕ ಜೀವಕೋಶಗಳ ಸಾಮರ್ಥ್ಯವು ದೇಹದಲ್ಲಿ ಕಡಿಮೆಯಾಗುತ್ತದೆ. ಈ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಮಗುವಿಗೆ ಕಬ್ಬಿಣಾಂಶ ಪೂರಕ ಆಹಾರ, ಫೋಲಿಕ್ ಆಮ್ಲ, ವಿಟಮಿನ್ ಸಿ ಮತ್ತು ಬಿ, ಪ್ರೊಟೀನ್ ನೀಡಬೇಕಾಗುತ್ತದೆ.

ಮಕ್ಕಳಲ್ಲಿ ಕಬ್ಬಿಣದ ಕೊರತೆಯ ಚಿಹ್ನೆಗಳು ಮತ್ತು ಲಕ್ಷಣಗಳಿವು..

  • ಹಸಿವಾಗದಿರುವುದು
  • ಕುಂಠಿತ ಬೆಳವಣಿಗೆ
  • ಉಸಿರಾಟದ ಸಮಸ್ಯೆ
  • ಮಗುವಿಗೆ ಸೋಂಕು ತಗಲುವ ಸಾಧ್ಯತೆ
  • ಸಣ್ಣಗಾಗುವುದು
  • ಚರ್ಮ, ಕಣ್ಣು ಮತ್ತು ಉಗುರುಗಳು ಬಿಳಿಯಾಗುವುದು
  • ಮಕ್ಕಳು ಎಲ್ಲಾ ಸಮಯದಲ್ಲೂ ಕಿರಿಕಿರಿ ಮತ್ತು ನಿಷ್ಕ್ರಿಯರಾಗುವುದು

ಮಕ್ಕಳಿಗೆ ಎಷ್ಟು ಪ್ರಮಾಣದ ಕಬ್ಬಿಣಾಂಶ ಬೇಕು?

ಡಾ.ಲತಿಕಾ ಪ್ರಕಾರ, ಎದೆಹಾಲು ಕುಡಿಯುವ ಮಗುವಿಗೆ 6 ತಿಂಗಳವರೆಗೆ ಕಬ್ಬಿಣಾಂಶದ ಅಗತ್ಯವಿಲ್ಲ, ಏಕೆಂದರೆ ತಾಯಿಯ ಹಾಲು ಸಂಪೂರ್ಣ ಆಹಾರವಾಗಿದೆ. ಕೆಲವು ಪರಿಸ್ಥಿತಿಗಳಲ್ಲಿ, ಮಗುವಿಗೆ ತಾಯಿಯ ಹಾಲಿನ ಮೂಲಕ ಸಾಕಷ್ಟು ಕಬ್ಬಿಣಾಂಶ ಸಿಗದಿದ್ದರೆ, ಮಕ್ಕಳ ವೈದ್ಯರು ಕಬ್ಬಿಣಾಂಶದ ಹನಿಗಳು ಕಬ್ಬಿಣಾಂಶದ ಬಲವರ್ಧಿತ ಸೂತ್ರ ಹಾಲನ್ನು ಸೂಚಿಸುತ್ತಾರೆ.

ಸಾಮಾನ್ಯ ಪರಿಸ್ಥಿತಿಗಳಲ್ಲಿ 7-12 ತಿಂಗಳ ನಡುವಿನ ಮಗುವಿಗೆ ಪ್ರತಿದಿನ 11 ಮಿಗ್ರಾಂ ಕಬ್ಬಿಣಾಂಶ, 1-3 ವರ್ಷ 7 ಮಿ.ಗ್ರಾಂ, 4-8 ವರ್ಷ ದಲ್ಲಿ 10 ಮಿ.ಗ್ರಾಂ, ಮತ್ತು 9-13 ವರ್ಷದ ಮಗುವಿಗೆ ಪ್ರತಿದಿನ 8 ಮಿ.ಗ್ರಾಂ ಕಬ್ಬಿಣಾಂಶ ನೀಡಬೇಕು.11 ವರ್ಷಕ್ಕಿಂತ ಮೇಲ್ಪಟ್ಟ ಹುಡುಗನಿಗೆ 11 ಮಿ.ಗ್ರಾಂ ಕಬ್ಬಿಣಾಂಶ ನೀಡಬೇಕು, ಒಂದು ಹುಡುಗಿ ಪ್ರತಿದಿನ 15 ಮಿ.ಗ್ರಾಂ ಕಬ್ಬಿಣಾಂಶ ಸೇವಿಸಬೇಕು.

ಕಬ್ಬಿಣಾಂಶದ ಮೂಲಗಳಿವು..

ಸಸ್ಯಾಹಾರಿಗಳು: ಹಸಿರು ಸೊಪ್ಪು ತರಕಾರಿಗಳು, ಸೇಬು, ದಾಳಿಂಬೆ ಮತ್ತು ಅಂಜೂರ ಹಣ್ಣುಗಳು, ದ್ವಿದಳ ಧಾನ್ಯಗಳು, ಬೀಟ್ ರೂಟ್​​, ಒಣದ್ರಾಕ್ಷಿಗಳಂತಹ ಒಣ ಹಣ್ಣುಗಳು, ಕಪ್ಪು ಒಣದ್ರಾಕ್ಷಿ ಮತ್ತು ಡೇಟ್ಸ್​​ಗಳು.

ಮಾಂಸಾಹಾರಿಗಳು: ಮೊಟ್ಟೆ, ಲಿವರ್, ಮೀನು, ಕೋಳಿ, ಟರ್ಕಿ, ಕೆಂಪು ಮಾಂಸ, ಮಟನ್

ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆ ಏಕೆ?

  • ಅವಧಿ ಪೂರ್ವ ಜನನ
  • ಹಾಲುಣಿಸದ ಮಕ್ಕಳಿಗೆ ಹಸು ಅಥವಾ ಮೇಕೆ ಹಾಲು ನೀಡುವುದು
  • ಕಬ್ಬಿಣಾಂಶ ರಹಿತ ಹಾಲು ಕುಡಿಯುವ ಮಕ್ಕಳು
  • ತೀವ್ರ ಅನಾರೋಗ್ಯ ಪರಿಸ್ಥಿತಿಗಳು

Last Updated : Jul 15, 2021, 8:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.