ETV Bharat / sukhibhava

7.2 ಅಡಿ ಬೆಳೆದರೂ ನಿಲ್ಲದ ಎತ್ತರ: ಕಡೆಗೆ ಶಸ್ತ್ರ ಚಿಕಿತ್ಸೆಗೆ ಮೊರೆ ಹೋದ ಯುವಕ

ಮಕ್ಕಳು ಅನಿರೀಕ್ಷಿತ ಎತ್ತರಕ್ಕೆ ಬೆಳೆದರೆ ಅದು ಆರೋಗ್ಯ ಸಮಸ್ಯೆ ಆಗಿರುತ್ತದೆ. ಈ ಹಿನ್ನೆಲೆ ನಿರ್ಲಕ್ಷ್ಯ ಮಾಡಬೇಡಿ ಎಂದು ವೈದ್ಯರು ಪೋಷಕರಿಗೆ ಕಿವಿಮಾತು ಹೇಳಿದ್ದಾರೆ.

author img

By ETV Bharat Karnataka Team

Published : Nov 17, 2023, 5:36 PM IST

young man goes surgical treatment for abnormal growth in height

ಲಖನೌ(ಉತ್ತರಪ್ರದೇಶ): ಮಿತಿ ಮೀರಿದ ಎತ್ತರ ಬೆಳೆದು ದಾಖಲೆ ಪುಟ ಸೇರಿದ ಅನೇಕ ಮಂದಿ ನಮ್ಮ ಮುಂದೆ ಇದ್ದಾರೆ. ಈ ಎತ್ತರ, ದಾಖಲೆ ನಿರ್ಮಿಸಲು ಸಹಾಯವಾದರೂ ಇದರಿಂದ ಆಗುವ ಸಮಸ್ಯೆಗಳು ಕಡಿಮೆಯೇನೂ ಅಲ್ಲ. ಆರೋಗ್ಯ, ಸಾಮಾಜಿಕ ಸಮಸ್ಯೆಗಳಿಂದ ಇವರು ಅನೇಕ ಬಾರಿ ತೊಂದರೆ ಅನುಭವಿಸುತ್ತಾರೆ. ಇದೇ ಕಾರಣಕ್ಕೆ ಲಖನೌದ 23 ವರ್ಷದ ಯುವಕನೊಬ್ಬ ತನ್ನ ಎತ್ತರದ ಕಾರಣದಿಂದ ಶಸ್ತ್ರ ಚಿಕಿತ್ಸೆಯ ಮೊರೆ ಹೋಗಿದ್ದಾನೆ.

ಉತ್ತರ ಪ್ರದೇಶದ ಲಖೀಂಪುರ್​​ ಖೇರಿಯ 23 ವರ್ಷದ ಯುವಕನೊಬ್ಬ 7.2 ಅಡಿ ಬೆಳೆದಿದ್ದು, ಇಡೀ ರಾಜ್ಯದಲ್ಲಿ ಅತಿ ಎತ್ತರದ ವ್ಯಕ್ತಿ ಎಂಬ ಕೀರ್ತಿ ಕೂಡ ಹೊಂದಿದ್ದಾರೆ. ಈತನ ಸಮಸ್ಯೆ ಎಂದರೆ, ಈ ಎತ್ತರ ಇಲ್ಲಿಗೆ ನಿಲ್ಲುತ್ತಿಲ್ಲ. ಬೆಳೆಯುವ ವಯಸ್ಸು ಮೀರಿದರೂ ಎತ್ತರವನ್ನು ಹೊಂದುತ್ತಲೇ ಇದ್ದಾನೆ. ಇದು ಈತನಿಗೆ ಸಂಕಷ್ಟವನ್ನು ತಂದೊಡ್ಡಿದೆ. ಇದೇ ಕಾರಣಕ್ಕೆ ಇದೀಗ ವೈದ್ಯರ ಬಳಿ ಓಡಿದ್ದಾನೆ.

ಈ ವೇಳೆ, ಯುವಕ ಆರೋಗ್ಯ ಪರಿಶೀಲಿಸಿದ ವೈದ್ಯರು ಆತನ ದೇಹದಲ್ಲಿನ ಪಿಟ್ಯೂಟರಿ ಗ್ರಂಥಿಯಲ್ಲಿನ ಟ್ಯೂಮರ್​ ತೆಗೆದು ಹಾಕಿದ್ದಾರೆ. ರಾಮ್​ ಮನೋಹರ್​ ಲೋಹಿಯಾ ಇನ್ಸುಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ನ್ಯೂರೋಸರ್ಜರಿ ವಿಭಾಗದ ವೈದ್ಯರು ಈ ಶಸ್ತ್ರ ಚಿಕಿತ್ಸೆ ನಿರ್ವಹಿಸಿದ್ದಾರೆ.

ಸರ್ಜರಿ ಬಗ್ಗೆ ವ್ಯದ್ಯರು ಹೇಳಿದ್ದಿಷ್ಟು: ಈ ಕುರಿತು ಮಾತನಾಡಿರುವ ವಿಭಾಗದ ಮುಖ್ಯಸ್ಥ ಡಾ ದೀಪಕ್​ ಸಿಂಗ್​, ನಿರಂತರ ಎತ್ತರದ ಬೆಳವಣಿಗೆಗೆ ಕಾರಣವಾಗುತ್ತಿದ್ದ ಟ್ಯೂಮರ್​ ಅನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲಾಗಿದೆ. ಸರ್ಜರಿ ಬಳಿಕ ಯುವಕನ ಆರೋಗ್ಯ ಚೇತರಿಕೆ ಕಾಣುತ್ತಿದ್ದು, ಡಿಸ್ಛಾರ್ಜ್​ ಮಾಡಲಾಗಿದೆ. ಆಯುಷ್​ಮಾನ್​ ಭಾರತ್​ ಯೋಜನೆ ಅಡಿ ಈ ಸರ್ಜರಿ ನಡೆಸಲಾಗಿದೆ.

ಇದೇನೂ ಅಪರೂಪದ ಪ್ರಕರಣವಲ್ಲ. 16ರಿಂದ 17 ವರ್ಷದ ವಯಸ್ಸಿನಲ್ಲಿ ಪ್ರತಿಯೊಬ್ಬರಲ್ಲೂ ಈ ರೀತಿಯ ಟ್ಯೂಮರ್​ ಬೆಳವಣಿಗೆ ಆಗುತ್ತದೆ. ಇದು ಎತ್ತರದ ಬೆಳವಣಿಗೆಗೆ ಕಾರಣವಾಗುತ್ತದೆ. ಆದರೆ, ಈ ಟ್ಯೂಮರ್​ ತಡವಾಗಿ ಅಭಿವೃದ್ಧಿಯಾದಾಗ ಮುಖದ ಮೂಳೆ ಅಥವಾ ಸ್ನಾಯುವು ಅನಿರೀಕ್ಷಿತ ಬೆಳವಣೆಗೆ ಆಗಲು ಕಾರಣವಾಗುತ್ತದೆ ಎಂದು ವಿವರಣೆ ನೀಡಿದರು.

ಇದೇ ವೇಳೆ ವೈದ್ಯರು, ಮಕ್ಕಳ ಬೆಳವಣಿಗೆ ಈ ರೀತಿ ಅನಿರೀಕ್ಷಿತವಾಗಿ ಎತ್ತರವಾಗುತ್ತಿದ್ದರೆ, ನಿರ್ಲಕ್ಷ್ಯವಹಿಸದಂತೆ ಪೋಷಕರಿಗೆ ಸಲಹೆ ನೀಡಿದ್ದಾರೆ. ಈ ರೀತಿ ಕಂಡು ಬಂದಾಕ್ಷಣ ತಕ್ಷಣಕ್ಕೆ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ ಎಂದರು. ಅಪೊಪ್ಲೆಕ್ಸಿಯೊಂದಿಗೆ ಹಾರ್ಮೋನ್ - ಸ್ರವಿಸುವ ಪಿಟ್ಯುಟರಿ ಅಡೆನೊಮಾ ಎಂದು ಕರೆಯಲ್ಪಡುವ ರೋಗನಿರ್ಣಯ ಸಮಸ್ಯೆಯಿಂದ ಈ ರೀತಿ ಆಗುತ್ತದೆ. ಲಕ್ಷದಲ್ಲಿ ಒಬ್ಬರು ಈ ರೀತಿಯ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಸರ್ಜರಿ ಮಾಡಿದ ವೈದ್ಯರು ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಕೃತಕ ಬೆಳಕಿಗೆ ಹೆಚ್ಚು ಒಗ್ಗಿಕೊಳ್ಳಬೇಡಿ... ಖಿನ್ನತೆಗೆ ಇದೇ ಪ್ರಮುಖ ಕಾರಣವಂತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.