ETV Bharat / sukhibhava

ವಿಶ್ವ ಸಸ್ಯಾಹಾರಿ ದಿನ 2022: ಸಸ್ಯಾಹಾರ ಸೇವನೆಯಿಂದ ಆಗುವ ಪ್ರಯೋಜನಗಳಿವು! - ಸಸ್ಯಾಹಾರ ಆರೋಗ್ಯಕ್ಕೆ ಉತ್ತಮ

ಆಹಾರದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ಪ್ರಮುಖ ಪದ್ಧತಿಗಳಿವೆ. ಜನರು ತಮ್ಮ ಸಮುದಾಯ, ಪ್ರಾದೇಶಿಕತೆ, ಅಭಿರುಚಿ, ಆರೋಗ್ಯ ಕಾಳಜಿ, ಪೌಷ್ಟಿಕಾಂಶ ಇತ್ಯಾದಿಗಳನ್ನು ಪರಿಗಣಿಸಿ ಸಸ್ಯಾಹಾರ ಅಥವಾ ಮಾಂಸಾಹಾರಗಳನ್ನು ರೂಢಿಸಿಕೊಂಡಿದ್ದಾರೆ. ಈಗ ಮಾಂಸಾಹಾರಕ್ಕಿಂತ ಸಸ್ಯಾಹಾರ ಸೇವನೆ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಒಳ್ಳೆಯದು ಎಂಬೊಂದು ಕಾಳಜಿ ವ್ಯಕ್ತವಾಗಿದೆ. ಹಾಗಾಗಿ ಇತ್ತೀಚೆಗೆ ಹೆಚ್ಚಿನ ಜನ ಸಸ್ಯಾಹಾರದತ್ತ ಮುಖ ಮಾಡುತ್ತಿದ್ದಾರೆ.

World Vegetarian Day 2022
ವಿಶ್ವ ಸಸ್ಯಾಹಾರಿ ದಿನ 2022
author img

By

Published : Sep 30, 2022, 5:48 PM IST

ಹೈದರಾಬಾದ್: ಸಸ್ಯಾಹಾರಿ ಜೀವನ ಶೈಲಿ ಅನುಸರಿಸಲು ಹಾಗೂ ಜನರನ್ನು ಪ್ರೋತ್ಸಾಹಿಸಲು ವಿಶ್ವ ಸಸ್ಯಾಹಾರಿ ದಿನವನ್ನು ಅಕ್ಟೋಬರ್ 1ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ಪ್ರತಿವರ್ಷ ವರ್ಲ್ಡ್‌ ವೆಜಿಟೇರಿಯನ್‌ ಡೇ ಅಥವಾ ವಿಶ್ವ ಸಸ್ಯಾಹಾರಿಗಳ ದಿನ ಎಂದು ಎಲ್ಲೆಡೆ ಆಚರಿಸಲಾಗುತ್ತದೆ.

ಸಸ್ಯಾಹಾರದ ಮಹತ್ವ, ಅದರ ಅಗತ್ಯತೆ ಇತ್ಯಾದಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಮೂಲತಃ ಈ ದಿನವನ್ನು ಮೊದಲ ಬಾರಿಗೆ ಆರಂಭಿಸಿದ್ದು, ಉತ್ತರ ಅಮೆರಿಕದ ವೆಜಿಟೇರಿಯನ್‌ ಸೊಸೈಟಿ. 1977 ರಲ್ಲಿ ಆರಂಭವಾದ ಈ ದಿನಾಚರಣೆ ಆಹಾರದಲ್ಲಿ ಸಸ್ಯಗಳ ಪಾತ್ರದ ಬಗ್ಗೆ ಜನರಿಗೆ ಶಿಕ್ಷ ಣ ನೀಡುವ ಗುರಿ ಹೊಂದಿತ್ತು.

ಸಸ್ಯಾಹಾರಿ ಆಹಾರ ನಮಗೆ ತರಕಾರಿ, ಧಾನ್ಯ, ದ್ವಿದಳ ಧಾನ್ಯಗಳು, ಹಣ್ಣುಗಳು, ಒಣ ಹಣ್ಣುಗಳಿಂದ ಸಿಗುತ್ತದೆ. ಈ ಜೀವನಶೈಲಿಯು ಲ್ಯಾಕ್ಟೋ-ಓವೊ ಸಸ್ಯಾಹಾರಿಗಳನ್ನು ಸಹ ಒಳಗೊಂಡಿದೆ. ಇವರು ಮೊಟ್ಟೆ, ಡೈರಿ ಮತ್ತು ಜೇನುತುಪ್ಪದಂತಹ ಪ್ರಾಣಿ ಉತ್ಪನ್ನಗಳನ್ನು ಸೇವಿಸುತ್ತಾರೆ. ನಿಜವಾದ ಸಸ್ಯಾಹಾರ ಸೇವಿಸುವ ವ್ಯಕ್ತಿ ಯಾವುದೇ ರೀತಿಯ ಪ್ರಾಣಿ ಉತ್ಪನ್ನಗಳನ್ನು ಸೇವಿಸುವುದಿಲ್ಲ.

ವಿಶೇಷ ಪೌಷ್ಟಿಕಾಂಶಗಳನ್ನು ಹೊಂದಿರುವ ಆಹಾರವೆಂದರೆ ಸಸ್ಯಾಹಾರ ಎಂದು ಹೇಳಬಹುದು. ಬಹಳಷ್ಟು ಜನರು ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳ ಜನರು ಸ್ವತಃ ಸಸ್ಯಾಹಾರದತ್ತ ಪರಿವರ್ತನೆ ಆಗುವುದನ್ನು ನಾವು ಕಾಣುತ್ತಿದ್ದೇವೆ.

ಸಸ್ಯಾಹಾರವನ್ನು ಸೇವಿಸಲು ಕಾರಣ: ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮದಂತಹ ಅನೇಕ ಸಂಸ್ಕೃತಿಗಳಲ್ಲಿ ಸಸ್ಯಾಹಾರವು ಧರ್ಮದ ಅವಿಭಾಜ್ಯ ಅಂಗವಾಗಿದೆ. ಅಂತಹ ಅನೇಕ ಪಂಥಗಳು ಮಾಂಸ ಮತ್ತು ಪ್ರಾಣಿ ಉತ್ಪನ್ನಗಳ ಸೇವನೆಯನ್ನು ನಿಷೇಧಿಸುತ್ತವೆ. ಆದರೂ ಹಾಲು, ಜೇನುತುಪ್ಪ ಮತ್ತು ಕೆಲವೊಮ್ಮೆ ಕೋಳಿ ಮೊಟ್ಟೆಗಳನ್ನು ಬಳಸುವುದು ಸ್ವೀಕಾರಾರ್ಹವಾಗಿದೆ.

ಧಾರ್ಮಿಕ ಸಸ್ಯಾಹಾರವು ನೈಸರ್ಗಿಕ ಪ್ರಪಂಚದ ಕಡೆಗೆ ಅಹಿಂಸೆ ಮತ್ತು ಸಹಾನುಭೂತಿಯ ತತ್ತ್ವಶಾಸ್ತ್ರದಿಂದ ಹೊರಹೊಮ್ಮುತ್ತದೆ. ಆದ್ದರಿಂದ ಜೈನ ಧರ್ಮದವರು ಸಸ್ಯಾಹಾರದ ಒಂದು ರೂಪವನ್ನು ಅನುಸರಿಸುತ್ತಾರೆ. ಅವರು ಪ್ರಾಣಿ ಉತ್ಪನ್ನಗಳನ್ನು ತಿನ್ನುವುದಿಲ್ಲ. ಅಷ್ಟೇ ಅಲ್ಲದೇ ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆಗಳಂತಹ ತರಕಾರಿಗಳ ಸೇವನೆ ಮಾಡುವುದಿಲ್ಲ.

ಇದನ್ನೂ ಓದಿ: ಇಷ್ಟವಿಲ್ಲದ ಆಹಾರ ಹೊಟ್ಟೆಯಲ್ಲೇ ತಿರಸ್ಕರಿಸುವ ಭ್ರೂಣ..ಅಮ್ಮ ತಿನ್ನಬೇಕು ಕಂದ ಮೆಚ್ಚುವ ಊಟ

ಆಹಾರಕ್ಕಾಗಿ ಪ್ರಾಣಿಗಳನ್ನು ಸಾಕುವುದು ಮತ್ತು ಕೊಲ್ಲುವುದು ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದು ಮಾಲಿನ್ಯವನ್ನು ಸೃಷ್ಟಿಸುತ್ತದೆ ಮತ್ತು ಹವಾಮಾನ ಬದಲಾವಣೆಗೆ ಕೊಡುಗೆ ನೀಡುತ್ತದೆ ಎಂದು ಜನರು ನಂಬಿರುವುದರಿಂದ ಜನರು ಪರಿಸರವನ್ನು ರಕ್ಷಿಸುವ ಮಾರ್ಗವಾಗಿ ಸಸ್ಯಾಹಾರವನ್ನು ಅನುಸರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾಂಸಾಹಾರಕ್ಕಿಂತ ಸಸ್ಯಾಹಾರ ಸೇವನೆ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಒಳ್ಳೆಯದು ಎಂಬ ಕಾಳಜಿ ವ್ಯಕ್ತವಾಗಿದೆ.

ಸಸ್ಯಾಹಾರ ಆರೋಗ್ಯಕ್ಕೆ ಉತ್ತಮ: ಮತ್ತೊಂದೆಡೆ, ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ದೃಷ್ಟಿಯಿಂದ ಸಸ್ಯಾಹಾರಿ ಆಹಾರವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಫೈಬರ್, ಧಾನ್ಯಗಳು, ಕಾಳುಗಳು, ಬೀಜಗಳು ಇತ್ಯಾದಿ ಹೃದಯ ಮತ್ತು ದೇಹದ ಆರೋಗ್ಯಕ್ಕೆ ಉತ್ತಮವಾದ ಕಾರಣ ಸಸ್ಯ ಆಧಾರಿತ ಆಹಾರವು ಉತ್ತಮ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ. ಇದು ಕಡಿಮೆ ರಕ್ತದೊತ್ತಡ, ಮೂಳೆಗಳನ್ನು ಸದೃಢಗೊಳಿಸುವುದು, ತೂಕ ನಿರ್ವಹಣೆ ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಸಸ್ಯಾಹಾರ ಸೇವನೆಯಿಂದ ಆಗುವ ಪ್ರಯೋಜನಗಳು:

  • ಸಸ್ಯಾಹಾರಿ ಆಹಾರಗಳು ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಿಂದ ಸಮೃದ್ಧವಾಗಿವೆ.
  • ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಸಸ್ಯಾಹಾರಿ ಆಹಾರವು ನಿಮ್ಮ ಮನಸ್ಥಿತಿ ಹೆಚ್ಚಿಸುತ್ತದೆ.
  • ಆರೋಗ್ಯಕರ ದೇಹದ ತೂಕದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡುತ್ತದೆ.
  • ಇದು ಟೈಪ್ 2 ಡಯಾಬಿಟಿಸ್ ತಡೆಗಟ್ಟಲು ಸಹಾಯ ಮಾಡುತ್ತದೆ.
  • ಸಸ್ಯಾಹಾರ ತಿನ್ನುವುದರಿಂದ ಸಂಧಿವಾತದ ನೋವು ಕಡಿಮೆಯಾಗುತ್ತದೆ.
  • ಸಸ್ಯ ಆಧಾರಿತ ಆಹಾರವು ಸಂಪೂರ್ಣ ಪ್ರೋಟೀನ್​ ಅನ್ನು ಸುಲಭವಾಗಿ ಒದಗಿಸುತ್ತದೆ.
  • ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.
  • ಸರಾಸರಿ ಶೇ 16ರಷ್ಟು ವೇಗವಾಗಿ ಕ್ಯಾಲೊರಿಗಳನ್ನು ಸುಡುತ್ತದೆ.

ನ್ಯಾಷನಲ್ ಹೆಲ್ತ್ ಪೋರ್ಟಲ್ ಆಫ್ ಇಂಡಿಯಾದ ಪ್ರಕಾರ, ಸಸ್ಯಾಹಾರಿ ಆಹಾರದಲ್ಲಿ ಪ್ರೋಟೀನ್ ಕೊರತೆಯಿದೆ. ಯಾವುದೇ ರುಚಿ ಅಥವಾ ವೈವಿಧ್ಯತೆಯನ್ನು ಹೊಂದಿಲ್ಲ ಎಂಬುದನ್ನು ತಳ್ಳಿಹಾಕಲಾಗಿದೆ. ಅಗತ್ಯ ಅಮೈನೋ ಆಮ್ಲಗಳನ್ನು ಪಡೆಯಲು, ಜನರು ಮಸೂರ, ಮೊಗ್ಗುಗಳು, ಓಟ್ಸ್, ಸೋಯಾ, ಸೋಯಾ ಹಾಲು, ಬಾದಾಮಿ ಮತ್ತು ವಾಲ್‌ನಟ್ಸ್, ಬೀನ್ಸ್, ಬೀಜಗಳು, ಹಾಲು ಮತ್ತು ಕಾಟೇಜ್ ಚೀಸ್ (ಪನೀರ್) ಒಳಗೊಂಡಿರುವ ವಿವಿಧ ಪ್ರೋಟೀನ್ - ಭರಿತ ಆಹಾರವನ್ನು ಸೇವಿಸುವುದರ ಮೇಲೆ ಕೇಂದ್ರೀಕರಿಸಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.