ETV Bharat / sukhibhava

ವಿಶ್ವ ನಿದ್ರಾ ದಿನ: ಉತ್ತಮ ಆರೋಗ್ಯಕ್ಕೆ ನಿದ್ದೆಯ ಪಾಲೆಷ್ಟು..? - ಆರೋಗ್ಯದಲ್ಲಿ ನಿದ್ದೆಯ ಪಾತ್ರ

ಪ್ರತಿ ವರ್ಷ ಮಾರ್ಚ್​ ಮೂರನೇ ಶುಕ್ರವಾರ ವಿಶ್ವ ನಿದ್ರಾ ದಿನ ಆಚರಿಸಲಾಗುತ್ತಿದ್ದು, ಆ ಹಿನ್ನೆಲೆ ನಾಳೆ ವಿಶ್ವದಾದ್ಯಂತ ಆರೋಗ್ಯದಲ್ಲಿ ನಿದ್ದೆಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ನಿದ್ರಾ ದಿನ ಆಚರಿಸಲಾಗುತ್ತಿದೆ.

World Sleep Day 2023
ವಿಶ್ವ ನಿದ್ರಾ ದಿನ: ಉತ್ತಮ ಆರೋಗ್ಯಕ್ಕೆ ನಿದ್ದೆಯ ಪಾಲೆಷ್ಟು..?
author img

By

Published : Mar 16, 2023, 7:33 PM IST

ಪ್ರಪಂಚದಾದ್ಯಂತ ವೈದ್ಯರು ಮಾತ್ರವಲ್ಲ ಹಲವಾರು ಸಂಶೋಧನೆಗಳೇ ಕಳಪೆ ಗುಣಮಟ್ಟದ ನಿದ್ರೆ ದೇಹದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಗಂಭೀರ ಕಾಯಿಲೆಗಳು ಮತ್ತು ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬುದನ್ನು ಮತ್ತೆ ಮತ್ತೆ ದೃಢಪಡಿಸಿವೆ. ನಾವು ಆರೋಗ್ಯವಾಗಿರಲು ಮಾತ್ರವಲ್ಲ ನಮ್ಮ ಮನಸ್ಸು ಸಂತೋಷವಾಗಿರಲು ಮತ್ತು ಶಾಂತವಾಗಿರಲು ಕೂಡ ಉತ್ತಮ ನಿದ್ದೆಯ ಅವಶ್ಯವಿದೆ. ನಿದ್ದೆ ನಾವು ಆರೋಗ್ಯ ಮತ್ತು ಆರಾಮದಾಯಕವಾಗಿರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ಅನೇಕ ಆರೋಗ್ಯ ಮತ್ತು ಇತರ ಅಂಶಗಳಿಂದಾಗಿ, ಪ್ರಪಂಚದಾದ್ಯಂತ ಜನರ ನಿದ್ರೆಯ ಆರೋಗ್ಯವು ಬಹಳಷ್ಟು ಪರಿಣಾಮ ಬೀರುತ್ತಿದೆ.

ನಮ್ಮ ಆರೋಗ್ಯಕ್ಕೆ ಸಾಕಾಗುಷ್ಟು ನಿದ್ದೆ ಮಾಡುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಿದ್ರೆಯ ಕೊರತೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಎತ್ತಿ ತೋರಿಸಲು ಪ್ರತಿ ವರ್ಷ ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಪ್ರತಿ ವರ್ಷ ಮಾರ್ಚ್‌ನಲ್ಲಿ ಮೂರನೇ ಶುಕ್ರವಾರದಂದು ಆಚರಿಸಲಾಗುತ್ತದೆ. ಇದಷ್ಟೇ ಅಲ್ಲ ವಿಶ್ವಾದ್ಯಂತ ನಿದ್ರೆಯ ಆರೋಗ್ಯವನ್ನು ಉತ್ತೇಜಿಸಲು ವರ್ಲ್ಡ್ ಸ್ಲೀಪ್ ಸೊಸೈಟಿ ಎಂಬ ಲಾಭರಹಿತ ಸಂಸ್ಥೆ ಇದನ್ನು ಪ್ರಾರಂಭಿಸಿದೆ.

ಕಳಪೆ ನಿದ್ದೆಯೂ ಕಾರಣ: ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆ ಬಹಳ ಮುಖ್ಯ. ಆದರೆ, ಹೆಚ್ಚಿನ ಜನರು ವಿವಿಧ ಕಾರಣಗಳಿಂದ ಸರಿಯಾದ ಪ್ರಮಾಣದಲ್ಲಿ ಮತ್ತು ಉತ್ತಮ ಗುಣಮಟ್ಟದ ನಿದ್ರೆ ಪಡೆಯಲು ಸಾಧ್ಯವಾಗುವುದಿಲ್ಲ. ಕಳಪೆ ಜೀವನಶೈಲಿಯೊಂದಿಗೆ, ವಿಶ್ವದಾದ್ಯಂತ ರೋಗಗಳು ಮತ್ತು ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಮುಖ್ಯ ಕಾರಣಗಳಲ್ಲಿ ಕಳಪೆ ನಿದ್ರೆ ಕೂಡ ಒಂದು ಎಂಬುದಾಗಿ ತಜ್ಞ ಹೇಳುತ್ತಾರೆ.

ವಿವಿಧ ಜಾಗೃತಿ ಕಾರ್ಯಕ್ರಮ: ಈ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಕಷ್ಟು ನಿದ್ರೆ ಪಡೆಯುವ ಅಗತ್ಯವನ್ನು ವಿವರಿಸಲಾಗುತ್ತದೆ. ನಿದ್ರಾಹೀನತೆ, ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮತ್ತು ವಿವಿಧ ನಿದ್ರಾಹೀನತೆಗಳಂತಹ ನಿದ್ರೆಗೆ ಸಂಬಂಧಿಸಿದ ಪರಿಸ್ಥಿತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ. ಆರೋಗ್ಯಕರ ನಿದ್ರೆಗೆ ಆದ್ಯತೆ ನೀಡಲು ಮತ್ತು ನಿದ್ರೆಯ ಅಭ್ಯಾಸವನ್ನು ಸುಧಾರಿಸುವಂತೆ ಜನರನ್ನು ಉತ್ತೇಜಿಸಲು ಕಾರ್ಯಾಗಾರಗಳು, ಸೆಮಿನಾರ್‌ಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಂತಹ ವಿವಿಧ ಚಟುವಟಿಕೆಗಳನ್ನು ಈ ದಿನದಂದು ಆಯೋಜಿಸಲಾಗುತ್ತದೆ.

2023ರಲ್ಲಿ ವಿಶ್ವ ನಿದ್ರಾ ದಿನವನ್ನು ಮಾರ್ಚ್ 17ರಂದು ಅಂದರೆ ನಾಳೆ "ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ" ಎಂಬ ವಿಷಯ ಆಧಾರದಲ್ಲಿ ಆಚರಿಸಲಾಗುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿದ್ರೆಯ ಪ್ರಾಮುಖ್ಯತೆ ಥೀಮ್ ಅನ್ನು ಈ ಬಾರಿ ಎತ್ತಿಕೊಳ್ಳಲಾಗಿದೆ. ವಿಶ್ವ ನಿದ್ರಾ ದಿನವನ್ನು ಪ್ರತಿ ವರ್ಷ ವಸಂತ ಋತುವಿನ ವಿಷುವತ್ ಸಂಕ್ರಾಂತಿಯ ಹಿಂದಿನ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ವರ್ಷ ಈವೆಂಟ್ ಅನ್ನು ಮಾರ್ಚ್ 17 ರಂದು ನಡೆಸಲಾಗುತ್ತದೆ.

ಇದನ್ನು 2008 ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಮಾರ್ಚ್ ಮೂರನೇ ಶುಕ್ರವಾರದಂದು ವಿಶ್ವ ನಿದ್ರಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವರ್ಲ್ಡ್ ಸ್ಲೀಪ್ ಡೇ ಸಮಿತಿಯು ಗ್ಲೋಬಲ್ ಸ್ಲೀಪ್ ಸೊಸೈಟಿಯ ಒಂದು ಶಾಖೆಯಾಗಿದೆ. ಇದು ನಿದ್ರೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಿದ್ರೆಯ ಮೌಲ್ಯವನ್ನು ಜನರು ಅರ್ಥಮಾಡಿಕೊಳ್ಳಲು ಈ ದಿನದ ಆಚರಣೆಯನ್ನು ಪ್ರಾರಂಭಿಸಿತು.

ದೇಹದ ಸಮಸಗ್ರ ಆರೋಗ್ಯಕ್ಕೆ ಬೇಕು ಸರಿಯಾದ ನಿದ್ದೆ: ತೂಕವನ್ನು ಕಾಪಾಡಿಕೊಳ್ಳಲು, ಏಕಾಗ್ರತೆ ಮತ್ತು ಉತ್ಪಾದಕತೆ ಸುಧಾರಿಸಲು, ಹೆಚ್ಚು ಅಥ್ಲೆಟಿಕ್ ಆಗಿ, ಹೃದಯದ ಆರೋಗ್ಯವನ್ನು ಸುಧಾರಿಸಲು, ಮಧುಮೇಹವನ್ನು ನಿರ್ವಹಿಸಲು, ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ಒಟ್ಟಾರೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಿರ್ವಹಿಸಲು ನಿದ್ರೆ ಜನರಿಗೆ ಸಹಾಯ ಮಾಡುತ್ತದೆ. ವಿಶ್ವ ನಿದ್ರಾ ದಿನದ ಮೂಲಕ, ಜನರಲ್ಲಿ ನಿದ್ರೆಯ ಪ್ರಾಮುಖ್ಯತೆ ಮತ್ತು ನಮ್ಮ ಆರೋಗ್ಯದ ಮೇಲೆ ಅದರ ಪ್ರಭಾವದ ಅರಿವು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಲಾಗುತ್ತದೆ. ವೈದ್ಯಕೀಯ ತಜ್ಞರು, ಸಂಸ್ಥೆಗಳು ಮತ್ತು ಜನರು ಸಾಮಾನ್ಯವಾಗಿ ಮಾಹಿತಿಯನ್ನು ಹಂಚಿಕೊಳ್ಳಲು, ಪರಸ್ಪರ ಮಾತನಾಡಲು ಮತ್ತು ಉತ್ತಮ ಮಲಗುವ ಅಭ್ಯಾಸವನ್ನು ಉತ್ತೇಜಿಸಲು ಇದು ಉತ್ತಮ ಅವಕಾಶವಾಗಿದೆ.

ಮನಶ್ಶಾಸ್ತ್ರಜ್ಞರ ಪ್ರಕಾರ, ಮೆದುಳು ಮತ್ತು ದೈಹಿಕ ಆರೋಗ್ಯಕ್ಕೆ ಉತ್ತಮ ನಿದ್ರೆ ಅತ್ಯಗತ್ಯ. ಉತ್ತಮ ಗುಣಮಟ್ಟದ ನಿದ್ರೆಗಾಗಿ ನಿದ್ರೆಯ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಕೂಡ ಬಹಳ ಮುಖ್ಯ. ಇದಕ್ಕಾಗಿ, ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವುದು ಬಹಳ ಮುಖ್ಯ, ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ:

  • ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿ ಮತ್ತು ಎದ್ದೇಳಿ
  • ಸರಿಯಾದ ಮಲಗುವ ಸಮಯವನ್ನು ನಿಗದಿಪಡಿಸಿಕೊಳ್ಳಿ,
  • ಜೊತೆಗೆ ಮಲಗುವ ಕೋಣೆಯ ವಾತಾವರಣವನ್ನು ಉತ್ತಮವಾಗಿ ಇಟ್ಟುಕೊಳ್ಳಿ,
  • ಹೆಚ್ಚು ಗಂಟೆಗಳ ಕಾಲ ಟಿವಿ ಮತ್ತು ಮೊಬೈಲ್ ನೋಡುವುದನ್ನು ನಿಲ್ಲಿಸಿ.
  • ಸರಿಯಾದ ಸಮಯದಲ್ಲಿ ಸರಿಯಾದ ಆಹಾರವನ್ನು ಸೇವಿಸುವುದು.
  • ನಿಯಮಿತ ವ್ಯಾಯಾಮ ಮತ್ತು ಧ್ಯಾನ.
  • ಒತ್ತಡ ಮುಕ್ತವಾಗಿರಲು ಪ್ರಯತ್ನಗಳನ್ನು ಮಾಡಿ.
  • ಕೆಲಸದ ನಡುವೆ ವಿಶ್ರಾಂತಿ ಪಡೆಯಲು ಮರೆಯಬೇಡಿ.
  • ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ.
  • ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮತ್ತು ನಿದ್ರಾಹೀನತೆಯಂತಹ ಅಸ್ವಸ್ಥತೆಗಳಿಗೆ ಚಿಕಿತ್ಸೆ ಪಡೆಯಿರಿ.

ಇದನ್ನೂ ಓದಿ: ಕಡಿಮೆ ನಿದ್ದೆ ಅವಧಿಯಿಂದ ಹೃದಯದ ನಾಳಗಳಿಗೆ ಅಪಾಯ: ಸಂಶೋಧನೆಗಳಿಂದ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.