ETV Bharat / sukhibhava

ಇಂದು ವಿಶ್ವ ಲೈಂಗಿಕ ಆರೋಗ್ಯ ದಿನ: ಸುರಕ್ಷಿತ ಲೈಂಗಿಕತೆಗೆ ಇಲ್ಲಿವೆ ಕೆಲವು ಸಲಹೆಗಳು

author img

By

Published : Sep 4, 2020, 6:55 PM IST

ಭಾರತದಲ್ಲಿ ಲೈಂಗಿಕ ಆರೋಗ್ಯದ ಬಗ್ಗೆ ಮಾತನಾಡಲು ಜನರು ತುಂಬಾ ನಾಚಿಕೆಪಡುತ್ತಾರೆ. ಸಾಮಾನ್ಯವಾಗಿ ಭಾರತೀಯ ಮನೆಗಳಲ್ಲಿ ಇದರ ಬಗ್ಗೆ ಚರ್ಚಿಸುವುದನ್ನು ನಿರ್ಬಂಧಿಸಲಾಗಿದೆ ಎಂದೇ ಹೇಳಬಹುದು. ಆದರೆ ಆಧುನೀಕರಣದಿಂದ ಬದಲಾಗುತ್ತಿರುವ ಮನಸ್ಥಿತಿಗಳು ಹಾಗೂ ಹೊಸ ತಲೆಮಾರಿನವರು ಈ ಕುರಿತು ಡಿಜಿಟಲ್/ಸಾಮಾಜಿಕ ಮಾಧ್ಯಮಗಳ ಮೂಲಕ ಮಾತನಾಡಲು ಪ್ರಾರಂಭಿಸಿದ್ದಾರೆ.

ವಿಶ್ವ ಲೈಂಗಿಕ ಆರೋಗ್ಯ ದಿನ
ವಿಶ್ವ ಲೈಂಗಿಕ ಆರೋಗ್ಯ ದಿನ

ಲೈಂಗಿಕತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಸೆ. 4ರಂದು ವಿಶ್ವ ಲೈಂಗಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷವೂ ಇದನ್ನು ಆಚರಿಸಲಾಗಿದ್ದು, ‘ಕೋವಿಡ್ -19 ಸಮಯದಲ್ಲಿ ಲೈಂಗಿಕ ಸಂತೋಷ’ ಇದರ ಥೀಮ್​​ ಆಗಿದೆ. "2010 ರಲ್ಲಿ, ವರ್ಲ್ಡ್ ಅಸೋಸಿಯೇಷನ್ ​​ಫಾರ್ ಲೆಕ್ಯ್ಷೂಯಲ್​​ ಹೆಲ್ತ್​​ (ಡಬ್ಲ್ಯುಎಎಸ್) ತನ್ನ ಎಲ್ಲ ಸಂಸ್ಥೆಗಳು ಪ್ರತಿ ವರ್ಷ ಸೆಪ್ಟೆಂಬರ್ 4ರಂದು ವಿಶ್ವ ಲೈಂಗಿಕ ಆರೋಗ್ಯ ದಿನವನ್ನು (ಡಬ್ಲ್ಯುಎಸ್ಹೆಚ್ಡಿ) ಆಚರಿಸಲು ಕರೆ ನೀಡಿತು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳುವ ಪ್ರಕಾರ “ಲೈಂಗಿಕ ಆರೋಗ್ಯದ ದೃಷ್ಟಿಯಿಂದ ಲೈಂಗಿಕತೆಗೆ ಮತ್ತು ಲೈಂಗಿಕ ಸಂಬಂಧಗಳಿಗೆ ಸಕಾರಾತ್ಮಕ ಹಾಗೂ ಗೌರವಾನ್ವಿತ ವಿಧಾನದ ಅಗತ್ಯವಿರುತ್ತದೆ. ಜೊತೆಗೆ ದಬ್ಬಾಳಿಕೆ, ತಾರತಮ್ಯ ಮತ್ತು ಹಿಂಸಾಚಾರದಿಂದ ಮುಕ್ತವಾದ ಆಹ್ಲಾದಕರ, ಸುರಕ್ಷಿತ ಲೈಂಗಿಕ ಅನುಭವಗಳನ್ನು ಹೊಂದುವುದು ಉತ್ತಮವಾಗಿದೆ. ಇದು ವ್ಯಕ್ತಿಗಳು, ದಂಪತಿ ಮತ್ತು ಕುಟುಂಬಗಳ ಒಟ್ಟಾರೆ ಆರೋಗ್ಯ, ಯೋಗಕ್ಷೇಮಕ್ಕೆ ಹಾಗೂ ಸಮುದಾಯ, ದೇಶಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅವಶ್ಯಕವಾಗಿದೆ”. ಆದ್ದರಿಂದ, ಲಿಂಗವನ್ನು ಲೆಕ್ಕಿಸದೆ ಜನರು ಲೈಂಗಿಕ ಆಸೆಗಳನ್ನು ಹೊಂದಿದ್ದಾರೆಂದು ಸಾಮಾಜಿಕವಾಗಿ ಒಪ್ಪಿಕೊಳ್ಳಬೇಕು ಮತ್ತು ಇದು ಮಾನವ ಜೀವನದ ಸಾಮಾನ್ಯ ಕ್ರಿಯೆಯಾಗಿದೆ.

ಲೈಂಗಿಕವಾಗಿ ಹರಡುವ ಸೋಂಕುಗಳು (ಎಸ್‌ಟಿಐ):

ಜನರು ಲೈಂಗಿಕ ಪ್ರಚೋದನೆಗಳನ್ನು ಹೊಂದಿದ್ದರೂ, ಸುರಕ್ಷಿತ ಲೈಂಗಿಕತೆಯನ್ನು ಹೊಂದುವುದಕ್ಕೆ ಆದ್ಯತೆಯನ್ನು ನೀಡುವುದು ಒಳ್ಳೆಯದು. ನಿಮ್ಮ ಸಂಗಾತಿಯೊಂದಿಗೆ ಸಂಭೋಗ ಮಾಡಿದಾಗಲೂ ಅನೇಕ ಲೈಂಗಿಕ ಸೋಂಕುಗಳು ಹರಡುವ ಸಾಧ್ಯತೆ ಇರುತ್ತದೆ. ಡಬ್ಲ್ಯುಎಚ್‌ಒ ಪ್ರಕಾರ, ವಿಶ್ವಾದ್ಯಂತ ಪ್ರತಿದಿನ 1 ಮಿಲಿಯನ್‌ಗಿಂತಲೂ ಹೆಚ್ಚು ಸೋಂಕುಗಳು ಲೈಂಗಿಕ ಕ್ರಿಯೆಯಿಂದ ಹರಡುತ್ತಿವೆ. “30 ಕ್ಕೂ ಹೆಚ್ಚು ವಿಭಿನ್ನ ಬ್ಯಾಕ್ಟೀರಿಯಾಗಳು, ವೈರಸ್‌ಗಳು ಮತ್ತು ಪರಾವಲಂಬಿಗಳು ಲೈಂಗಿಕ ಸಂಪರ್ಕದ ಮೂಲಕ ಹರಡುತ್ತವೆ. ಲೈಂಗಿಕತೆಯಿಂದ ಹರಡುವ ಕೆಲವು ರೋಗಗಳು ಈ ಕೆಳಗಿನಂತಿವೆ.

ಗುಣಪಡಿಸಬಹುದಾದ ರೋಗಗಳು: ಸಿಫಿಲಿಸ್, ಗೊನೊರಿಯಾ, ಕ್ಲಮೈಡಿಯ ಮತ್ತು ಟ್ರೈಕೊಮೋನಿಯಾಸಿಸ್

ಗುಣಪಡಿಸಲಾಗದ ರೋಗಗಳು: ಹೆಪಟೈಟಿಸ್ ಬಿ, ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ (ಎಚ್‌ಎಸ್‌ವಿ ಅಥವಾ ಹರ್ಪಿಸ್),ಎಚ್‌ಐವಿ ಮತ್ತು ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್‌ಪಿವಿ).

"ಗುಣಪಡಿಸಲಾಗದ ವೈರಲ್ ಸೋಂಕಿನಿಂದ ಉಂಟಾಗುವ ಲಕ್ಷಣಗಳು ಅಥವಾ ರೋಗವನ್ನು ಚಿಕಿತ್ಸೆಯ ಮೂಲಕ ಕಡಿಮೆ ಮಾಡಬಹುದು ಅಥವಾ ಮಾರ್ಪಡಿಸಬಹುದು".

ಈ ಸೋಂಕುಗಳು ಮೌಖಿಕ, ಯೋನಿ ಅಥವಾ ಗುದ ಸಂಭೋಗದ ಮೂಲಕ ಹರಡಬಹುದು. ಅಲ್ಲದೇ ಅಂತಹ ಸೋಂಕುಗಳ ಹೊರತಾಗಿ ಅಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡುವುದು ಅನಗತ್ಯ ಗರ್ಭಧಾರಣೆಗೆ ಕಾರಣವಾಗಬಹುದು ವಿಶೇಷವಾಗಿ ಚಿಕ್ಕ ವಯಸ್ಸಿನಲ್ಲಿ.

ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡಲು ಕೆಲವು ಸಲಹೆಗಳು:

ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಮಿತಿಗೊಳಿಸಿ.

ಅವನ/ಅವಳೊಂದಿಗೆ ನಿಮ್ಮ ಹಿಂದಿನ ಲೈಂಗಿಕ ಜೀವನದ ಬಗ್ಗೆ ಪ್ರಾಮಾಣಿಕವಾಗಿರಿ.

ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ಸಂಭೋಗದ ಮೊದಲು ಪರೀಕ್ಷಿಸಲು ಹಿಂಜರಿಯಬೇಡಿ.

ಎಚ್‌ಪಿವಿ ಮತ್ತು ಹೆಪಟೈಟಿಸ್ ಬಿ ವಿರುದ್ಧ ನೀವೇ ಲಸಿಕೆ ಪಡೆಯಿರಿ.

ನೀವು ಗುದ, ಯೋನಿ ಅಥವಾ ಮೌಖಿಕ ಸಂಭೋಗ ಮಾಡುವಾಗ ಪ್ರತಿ ಬಾರಿ ಕಾಂಡೋಮ್ ಬಳಸಿ. ಇದು ಎಸ್‌ಟಿಡಿ ಹರಡುವ ಅಪಾಯವನ್ನು ಕಡಿಮೆ ಮಾಡುತ್ತದೆ.

ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ಮಹಿಳೆಯರು ಕಾಂಡೋಮ್​ಗಳನ್ನು ಹೊರತುಪಡಿಸಿ ಇತರ ಜನನ ನಿಯಂತ್ರಣ ಕ್ರಮಗಳನ್ನು ಬಳಸಬೇಕು.

ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧವಾಗುವ ತನಕ ಲೈಂಗಿಕ ಕ್ರಿಯೆಯಿಂದ ದೂರವಿರಿ.

ನೀವು ಯಾವುದೇ ಲೈಂಗಿಕ ಆಟಿಕೆಗಳನ್ನು ಬಳಸುತ್ತಿದ್ದರೆ, ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.

ನೀವು ಗರ್ಭಧರಿಸಲು ಸಿದ್ಧರಿದ್ದರೆ ನಿಮ್ಮ ಸಂಗಾತಿಯೊಂದಿಗೆ ಸರಿಯಾದ ಫ್ಯಾಮಿಲಿ ಪ್ಲಾನಿಂಗ್​ ಮಾಡಿಕೊಳ್ಳಿ.

ಈ ಎಲ್ಲ ಕ್ರಮಗಳನ್ನ ಅನುಸರಿಸುವುದರಿಂದ ಆರೋಗ್ಯಕರ ಲೈಂಗಿಕ ಕ್ರಿಯೆಯೂ ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ಸುರಕ್ಷಿತವಾಗಿರಿಸುತ್ತದೆ. ಲೈಂಗಿಕ ಶಿಕ್ಷಣವು ಇನ್ನೂ ಭಾರತೀಯ ಶಿಕ್ಷಣ ವ್ಯವಸ್ಥೆಯ ಒಂದು ಭಾಗವಾಗಿಲ್ಲ. ಆದರೆ ಪೋಷಕರು ತಮ್ಮ ಮಕ್ಕಳೊಂದಿಗೆ ಈ ವಿಷಯವಾಗಿ ಮಾತನಾಡಲು ನಾಚಿಕೆಪಡಬಾರದು. ನಿಮ್ಮ ಲೈಂಗಿಕ ಆಸೆಗಳನ್ನು ಮರೆಮಾಚುವುದು ಭಾವನಾತ್ಮಕವಾಗಿ ನಿರಾಶಾದಾಯಕವಾಗಿರುತ್ತದೆ. ಆದ್ದರಿಂದ, ಇದು ಒಬ್ಬರ ಜೀವನದಲ್ಲಿ ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಇದು ನಿಷೇಧವಲ್ಲ, ಇದರ ಬಗ್ಗೆ ಮಾತನಾಡಲು ಅಥವಾ ಪ್ರಶ್ನಿಸಲು ಎಂದಿಗೂ ನಾಚಿಕೆಪಡಬೇಡಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.