ETV Bharat / sukhibhava

2030ರ ಹೊತ್ತಿಗೆ ಕ್ಷಯರೋಗ ನಿರ್ಮೂಲನೆ: ವಿಶ್ವನಾಯಕರಿಂದ ಸಂಕಲ್ಪ

author img

By ETV Bharat Karnataka Team

Published : Sep 23, 2023, 12:06 PM IST

ಕ್ಷಯರೋಗದಿಂದ ಜಾಗತಿಕ ಸಾವಿನ ಸಂಖ್ಯೆ ಹೆಚ್ಚಿದ್ದು, ಇದನ್ನು ತಡೆಯುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ.

World leaders commit to end tuberculosis by 2030 at UN high level meeting

ವಿಶ್ವಸಂಸ್ಥೆ ಸಾಮಾನ್ಯ ಸಭೆಯಯಲ್ಲಿ ಜಾಗತಿಕ ನಾಯಕರ ಉನ್ನತ ಮಟ್ಟದ ಸಭೆ ನಡೆದಿದ್ದು, ಸಭೆಯಲ್ಲಿ ಕ್ಷಯರೋಗ (ಟ್ಯೂಬಕ್ಯುಲೊಸಿಸ್​​- ಟಿಬಿ) ವನ್ನು 2030ರ ವೇಳೆ ಕೊನೆಗೊಳಿಸುವ ಪ್ರಯತ್ನ ಮುಂದುವರೆಸುವ ರಾಜಕೀಯ ಘೋಷಣೆಯನ್ನು ಅನುಮೋದಿಸಲಾಗಿದೆ. ಮುಂದಿನ ಐದು ವರ್ಷದಲ್ಲಿ ಈ ಗುರಿಯನ್ನು ಸಾಧಿಸುವ ದಾಖಲೆಯನ್ನು ಮಂಡಿಸಲಾಗಿದ್ದು, ಇದರಲ್ಲಿ ಶೇ.90ರಷ್ಟು ಕ್ಷಯ ಪ್ರಕರಣಗಳನ್ನು ತಡೆಗಟ್ಟುವ ಮತ್ತು ಚಿಕಿತ್ಸೆ ಸೇವೆ ನೀಡುವ, ರೋಗಿಗಳಿಗೆ ಸಾಮಾಜಿಕ ಪ್ರಯೋಜನ ಪ್ಯಾಕೇಜ್​ ನೀಡುವ ಮತ್ತು ಕನಿಷ್ಟ ಒಂದು ಲಸಿಕೆಗೆ ಪರವಾನಗಿ ನೀಡುವುದಾಗಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ತಿಳಿಸಿದೆ.

ಈ ಕರಡು ರಾಜಕೀಯ ಘೋಷಣೆಗೆ ಒಪ್ಪಿಗೆ ಸೂಚಿಸಿದ ಎಲ್ಲಾ ಸದಸ್ಯರಿಗೆ ಅಭಿನಂದನೆ ತಿಳಿಸುತ್ತೇನೆ. ಇದನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಲಾಗಿದ್ದು, ನಂತರದ ದಿನದಲ್ಲಿ ಔಪಚಾರಿಕ ಅಳವಡಿಕೆ ನಡೆಸಲಾಗುವುದು ಎಂದು ಅಮೆರಿಕದ ಸಾಮಾನ್ಯ ಸಭೆಯ ಅಧ್ಯಕ್ಷ ಡೆನ್ನಿಸ್​ ಪ್ರಾನ್ಸಿಸ್​ ತಿಳಿಸಿದರು. ಕ್ಷಯರೋಗವನ್ನು ನಿರ್ಮೂಲನೆಗೊಳಿಸುವ ಉದ್ದೇಶದ ಬದ್ಧತೆಯಿಂದ ನಾವು ಇಲ್ಲಿ ಇಂದು ಸೇರಿದ್ದೇವೆ ಎಂದರು.

ಚಂದ್ರನಲ್ಲಿಗೆ ಮನುಷ್ಯರನ್ನು ಕಳುಹಿಸಿ ಸಾಧನೆ ಮಾಡುತ್ತಿರುವ ನಾವು ಇಂದು ಜಾಗತಿಕವಾಗಿ ಎಷ್ಟೆಲ್ಲಾ ಪ್ರಯತ್ನ ನಡೆಸಿದ್ದೆವೆ. ಪ್ರತಿ ನಿತ್ಯ 4,400ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿರುವ ಈ ರೋಗವನ್ನು ತಡೆಯಲಾಗುತ್ತಿಲ್ಲ ಏಕೆ? ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ರೋಗವನ್ನು ಸೋಲಿಸಲು ನಮಗೆ ಸಾಧ್ಯವಾಗಲಿಲ್ಲವೇ ಎಂದು ಹೇಳಿದರು.

ಬಡತನ ಮತ್ತು ಅಪೌಷ್ಟಿಕತೆಯಂತಹ ಸಮಸ್ಯೆಗಳೊಂದಿಗೆ ಕ್ಷಯರೋಗವೂ ಸೇರಿಕೊಂಡಿದೆ. ಇದರ ಜೊತೆಗೆ ಹವಾಮಾನ ಬದಲಾವಣೆ ಸೇರಿದಂತೆ ಮತ್ತಷ್ಟು ಬಿಕ್ಕಟ್ಟುಗಳು ಸೇರಿಕೊಂಡಿದೆ ಎಂದು ಪ್ರಾನ್ಸಿಸ್​ ತಿಳಿಸಿದರು.

ಟಿಬಿ ವಿರುದ್ಧ ಹೋರಾಡುತ್ತಿರುವವರಿಗೆ ಕೋವಿಡ್​ 19 ಸಾಂಕ್ರಾಮಿಕತೆ ಮತ್ತಷ್ಟು ಒತ್ತಡವನ್ನು ತಂದಿತು. ಇದರಿಂದ ರೋಗಿಗಳು ಅದರಲ್ಲೂ ದುರ್ಬಲರು ಸಾಕಷ್ಟು ಹಾನಿಗೆ ಒಳಗಾದರು ಎಂದರು.

ಸೋಂಕಿನ ಪ್ರಮುಖ ಕಾರಣಗಳನ್ನು ಪತ್ತೆ ಮಾಡಬೇಕಿದೆ. ಬಡತನ, ಅಪೌಷ್ಟಿಕಾಂಶತೆ, ಆರೋಗ್ಯ ಸೇವೆಗಳು ಇಲ್ಲದಿರುವುದು, ಹೆಚ್​ಐವಿ ಸೋಂಕು, ಮಧುಮೇಹ, ಮಾನಸಿಕ ಆರೋಗ್ಯ ಮತ್ತು ಧೂಮಪಾನಗಳು ಇದಕ್ಕೆ ಕಾರಣವಾಗಲಿದ್ದು, ಇದರ ವಿರುದ್ಧವೂ ಕ್ರಮ ಕೈಗೊಳ್ಳಬೇಕಿದೆ. 37 ವರ್ಷಗಳ ಹಿಂದೆ ಟಿಬಿಗೆ ನನ್ನ ತಂದೆ ಕಳೆದುಕೊಳ್ಳಬೇಕಾಯಿತು ಎಂದು ವಿಶ್ವಸಂಸ್ಥೆ ಉಪ ಕಾರ್ಯದರ್ಶಿ ಅಮಿನಾ ಮೊಹಮ್ಮದ್​ ತಿಳಿಸಿದರು.

ಕ್ಷಯರೋಗವನ್ನು ನಿರ್ಮೂಲನೆಗೊಳಿಸಲು ಸಾಧ್ಯ. ರಾಜಕೀಯ ಇಚ್ಛಾಶಕ್ತಿ, ಆರ್ಥಿಕ ಬದ್ಧತೆ ಮತ್ತು ಜಾಗತಿಕವಾಗಿ ಒಟ್ಟುಗೂಡುವುದು ಅಗತ್ಯವಾಗಿದೆ. ವಿಶ್ವಸಂಸ್ಥೆ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಸಿದ್ಧವಾಗಿದೆ. ಕ್ಷಯರೋಗವನ್ನು ಕೊನೆಗೊಳಿಸಲು ಪ್ರಯತ್ನ ಮಾಡುವಂತೆ ಪ್ರತಿಜ್ಞೆ ಮಾಡಬೇಕು ಎಂದು ಮೊಹಮ್ಮದ್​ ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2021ರಲ್ಲಿ ಕೋವಿಡ್​ 19 ನಿಂದ ಹೆಚ್ಚು ಸಾವು ಸಂಭವಿಸಿದರೆ, ಎರಡನೇ ಅತಿ ದೊಡ್ಡ ಸಮಸ್ಯೆ ಎಂದರೆ ಟಿ ಬಿಯಿಂದ 1.6 ಮಿಲಿಯನ್​ ಸಾವು ಸಂಭವಿಸಿತು. (ಐಎಎನ್​ಎಸ್​)

ಇದನ್ನೂ ಓದಿ: ಪಿಜ್ಜಾ, ಬರ್ಗರ್​​, ಡಯಟ್​ ಕೋಕ್ ಪ್ರಿಯರಿಗೆ ಖಿನ್ನತೆಯ ಅಪಾಯ ಹೆಚ್ಚು​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.