ETV Bharat / sukhibhava

World Chocolate Day: ರುಚಿ ಜೊತೆ ಮನತಣಿಸುವ ಚಾಕಲೇಟ್​ ಹುಟ್ಟು ಹೇಗಾಯ್ತು ಗೊತ್ತೇ? - ಚಾಕಲೇಟ್​ಗಾಗಿ ಒಂದು ದಿನ

ಚಾಕಲೇಟ್​ ಎಂದರೆ ಬೇಡ ಎನ್ನುವವರುಂಟೇ? ಬಾಯಲ್ಲಿ ನೀರೂರಿಸುವ ಚಾಕಲೇಟ್​ ಸಂತೋಷ, ಸಂಭ್ರಮದ ಸಂಕೇತವೂ ಹೌದು.

World Chocolate Day history and significance

author img

By

Published : Jul 7, 2023, 10:32 AM IST

ಜಗತ್ತಿನ ಬಹುತೇಕರು ಆಸ್ವಾದಿಸುವ ಅತ್ಯಂತ ರುಚಿಕರ ತಿನಿಸುಗಳಲ್ಲಿ ಚಾಕಲೇಟ್​ ಕೂಡಾ ಒಂದು. ಯಾರಿಗಾದರೂ ಉಡುಗೊರೆ ನೀಡಬೇಕಾದರೆ ಬರುವ ಮೊದಲ ಆಯ್ಕೆ ಕೂಡ ಚಾಕಲೇಟ್​​. ಇದರ ರುಚಿ ಅನೇಕರ ಮೂಡ್​ ಚುರುಕಾಗಿಸುತ್ತದೆ. ಇಂತಹ ಚಾಕಲೇಟ್​ಗಾಗಿ ಒಂದು ದಿನವನ್ನೇ ಮೀಸಲಿರಿಸಲಾಗಿದೆ. ಜುಲೈ 7ರಂದು ಜಾಗತಿಕವಾಗಿ ಪ್ರತಿ ವರ್ಷ ವಿಶ್ವ ಚಾಕಲೇಟ್​ ದಿನವೆಂದು ಆಚರಿಸಲಾಗುತ್ತಿದೆ. ವಿಶ್ವ ಚಾಕಲೇಟ್​ ದಿನ ಯುರೋಪ್​ನಿಂದ ಪ್ರಾರಂಭವಾಗಿ ಇಡೀ ಜಗತ್ತಿಗೆ ಹರಡಿತು.

ಚಾಕಲೇಟ್ ಸಂತೋಷ, ಸಂಭ್ರಮ ಮತ್ತು ಆಚರಣೆಯ ಸಂಕೇತವಾಗಿದೆ. ಸಂಸ್ಕೃತಿಯ ಗಡಿಗಳನ್ನು ಮೀರಿ ಇದು ಎಲ್ಲರ ಮನಗೆದ್ದಿದೆ. ಯಾವುದೇ ಸಮಾರಂಭವೇ ಇರಲಿ ಅಲ್ಲಿ ಪ್ರೀತಿ ಹಂಚಿಕೆ ವಸ್ತುವಾಗಿ ಚಾಕಲೇಟ್​ ಬಳಕೆಯಾಗುತ್ತದೆ. ಎಲ್ಲ ವಯೋಮಾನದ ಅಚ್ಚುಮೆಚ್ಚಿನ ಈ ಸಿಹಿ ತಿನಿಸು ಎಲ್ಲರನ್ನೂ ಆಕರ್ಷಿಸಿ, ಸನಿಹ ಸೆಳೆಯಬಲ್ಲದು.

ಚಾಕಲೇಟ್​ ಇತಿಹಾಸ: ಚಾಕಲೇಟ್​​ಗೆ 2,500 ವರ್ಷಗಳ ಇತಿಹಾಸವಿದೆ. 2,000 ವರ್ಷಗಳ ಹಿಂದೆ ಅಮೆರಿಕದ ಮಳೆಕಾಡುಗಳಲ್ಲಿ ಕೋಕೋ ಮರದ ಬೀಜ ಪಡೆದು ಚಾಕೋಲೆಟ್​ ತಯಾರಿಸಲಾಗುತ್ತಿತ್ತು. ಆರಂಭದಲ್ಲಿ ಕೇವಲ ಮೆಕ್ಸಿಕೊ ಮತ್ತು ಸೆಂಟ್ರಲ್​ ಅಮೆರಿಕದಲ್ಲಿ ಮಾತ್ರ ಚಾಕಲೇಟ್​ ತರಯಾರಿಸಲಾಗುತ್ತಿತ್ತು. ಮೆಕ್ಸಿಕೊವನ್ನು ಸ್ಪೇನ್​ 1528ರಲ್ಲಿ ವಶಕ್ಕೆ ಪಡೆದ ಬಳಿಕ ಸ್ಪಾನಿಷ್​ ರಾಜ ಅಗಾಧ ಕೋಕೋ ಬೀಜ ಮತ್ತು ಚಾಕಲೇಟ್​​ ತಯಾರಿಸುವ ಸಾಧನಗಳೊಂದಿಗೆ ಸ್ಪೇನ್​ಗೆ ಮರಳಿದ. ಇದಾದ ಬಳಿಕ ಚಾಕಲೇಟ್​​ ಸ್ಪಾನಿಷ್​ನಲ್ಲಿ ಫ್ಯಾಷನಬಲ್​ ಪಾನೀಯವಾಗಿ ಪ್ರಖ್ಯಾತಗೊಂಡಿತು. ಜಗತ್ತಿನ ಕೆಲವು ಭಾಗದಲ್ಲಿ ಚಾಕಲೇಟ್​ ಅನ್ನು ಹಣವಾಗಿ ಕೂಡಾ ಬಳಕೆ ಮಾಡಲಾಗಿದೆ.

ವಿವಿಧ ಚಾಕಲೇಟ್​ ಹುಟ್ಟಿದ ರೀತಿ: ಆರಂಭದಲ್ಲಿ ಚಾಕಲೇಟ್​ ಅನ್ನು ಈಗಿನಂತೆ ಬಾರ್​ಗಳ ರೀತಿಯಲ್ಲಿ ಅಲ್ಲದೆ,​ ಕಹಿ ಮತ್ತು ಮಂದ ಪಾನೀಯವಾಗಿಯೂ ಬಳಕೆ ಮಾಡಲಾಗುತ್ತಿತ್ತು. ಈ ಪಾನೀಯವನ್ನು ಜೇನು, ವೆನಿಲಾ, ಸಕ್ಕರೆ ಮತ್ತು ಚಕ್ಕೆಯೊಂದಿಗೆ ಬೆರೆಸಿ ಜಾಗತಿನೆಲ್ಲೆಡೆ ಸ್ವಾದ ಆಹ್ಲಾದಿಸುತ್ತಿದ್ದರು. 17ನೇ ಶತಮಾನದಲ್ಲಿ ಐರಿಷ್​ ಪಿಸಿಷಿಯನ್​ ಆಗಿದ್ದ ಸರ್​ ಹನ್ಸ್​ ಸ್ಲೊನೆ, ಅಗೆಯುವ ರೀತಿಯಲ್ಲಿ ಪಾನೀಯವನ್ನು ಸಂಸ್ಕರಿಸಿದರಂತೆ.

25 ವರ್ಷಗಳ ಬಳಿಕ ಸ್ಲೊನೆ ಅಗೆಯುವ ಚಾಕಲೇಟ್​ ತಯಾರಿಸಿದ. ಸ್ಲೊನೆಯಿಂದ ಈ ಸಂಸ್ಕರಿಸುವ ಸಾಧನವನ್ನು ಖರೀದಿಸಿದ ಬಳಿಕ ಇಂಗ್ಲೆಡ್​ನಲ್ಲಿ ಕ್ಯಾಡ್ಬರಿ ಆರಂಭವಾಯಿತು. ಕ್ಯಾರೆಮೆಲ್​ ಲೇಪಿತ ಚಾಕಲೇಟ್​ ಉತ್ಪಾದಿಸವಲ್ಲಿ ಹರ್ಷಿಸ್​​ ಕೂಡ ಜಾಗತಿಕವಾಗಿ ಪ್ರಖ್ಯಾತಿ ಪಡೆಯಿತು. ಇದು 1860ರಲ್ಲಿ ಆರಂಭವಾಯಿತು. ಹಾಲಿ ಚಾಕಲೇಟ್​ ತಯಾರಿಸುವಲ್ಲಿ ಜಾಗತಿಕವಾಗಿ ನೆಸ್ಲೆ ಕೂಡ ಹೆಸರುಗಳಿಸಿತು.

ಆರೋಗ್ಯಕ್ಕೇನು ಲಾಭ?: ಚಾಕಲೇಟ್​ ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ. ನೈಸರ್ಗಿಕ ರಾಸಯನಿಕಗಳು ನಿಮ್ಮ ಮೂಡ್​ ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಚಾಕಲೇಟ್​ನಲ್ಲಿರುವ ಟ್ರಿಪ್ಟೊಫಾನ್ ನಮ್ಮ ಮೆದುಳಿನಲ್ಲಿರುವ ಎಂಡಾರ್ಫಿನ್ ಮಟ್ಟವನ್ನು ಪರಿಣಾಮ ಬೀರುತ್ತದೆ. ಇದು ನಮಗೆ ಸಂತೋಷ ನೀಡುತ್ತದೆ. ಪ್ರತಿದಿನ ನಿಯಂತ್ರಿತ ಪ್ರಮಾಣದಲ್ಲಿ ಚಾಕೊಲೇಟ್ ತಿನ್ನುವುದು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದು ಹೃದ್ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ.

ಇದನ್ನೂ ಓದಿ: ಚಹಾ, ಟೀ, ಚಾಯ್​; ಹೆಸರಲ್ಲಿ ವಿಭಿನ್ನತೆ ಇರಬಹುದು.. ಆದರೆ, ಭಾವನೆಯಲ್ಲಿ ಅಲ್ಲ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.