ETV Bharat / sukhibhava

ಜಗತ್ತಿನ ಕ್ಯಾನ್ಸರ್ ರೋಗಿಗಳ ಪೈಕಿ ಭಾರತೀಯರ ಪಾಲು ಶೇ 20! ಕಾರಣವೇನು? ಇಲ್ಲಿದೆ ಪರಿಹಾರ.. - ವಿಶ್ವದ ಕ್ಯಾನ್ಸರ್ ರೋಗಿಗಳಲ್ಲಿ 20 ಪ್ರತಿಶತದಷ್ಟು ಭಾರತ

ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಾದ್ಯಂತ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್​ ದಿನಾಚರಿಸಲಾಗುತ್ತದೆ.

World Cancer Day 2023
ವಿಶ್ವ ಕ್ಯಾನ್ಸರ್​ ದಿನ 2023
author img

By

Published : Feb 3, 2023, 5:52 PM IST

ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರಗಳಲ್ಲಿ ನಡೆಯುವ ಪ್ರಗತಿಯಿಂದ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗುತ್ತಿದೆ. ಹೀಗಾಗಿ ವಿವಿಧ ರೀತಿಯ ಕ್ಯಾನ್ಸರ್‌ಗಳಿಂದ ಮುಕ್ತಿ ದೊರಕುತ್ತಿದೆ. ಇದರ ಹೊರತಾಗಿಯೂ ಕ್ಯಾನ್ಸರ್ ರೋಗಿಗಳ ಸಂಖ್ಯೆ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಹೆಚ್ಚುತ್ತಿದೆ. ಇದು ಆತಂಕಕಾರಿ ವಿದ್ಯಮಾನ. ಪ್ರತಿ ವರ್ಷ ಫೆಬ್ರುವರಿ 4 ರಂದು ವಿಶ್ವ ಕ್ಯಾನ್ಸರ್​ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಕ್ಯಾನ್ಸರ್​ ನಿರ್ಮೂಲನೆ ಹಾಗು ಇದಕ್ಕೆ ಸಂಬಂಧಿಸಿದ ಮಾಹಿತಿ, ಪ್ರಕಾರಗಳು, ಕಾರಣಗಳು ಮತ್ತು ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಅಂಕಿಅಂಶಗಳ ಪ್ರಕಾರ, 2010ರಲ್ಲಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 82.9 ಲಕ್ಷವಾಗಿದ್ದರೆ, 2019ರಲ್ಲಿ ಈ ಅಂಕಿಅಂಶವು 20.9 ಶೇಕಡಾದಷ್ಟು ಏರಿಕೆಯಾಗಿ ಒಂದು ಕೋಟಿ ತಲುಪಿದೆ. ಮತ್ತೊಂದೆಡೆ, ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಪ್ರಸ್ತುತ, ವಿಶ್ವದ ಕ್ಯಾನ್ಸರ್ ರೋಗಿಗಳಲ್ಲಿ 20 ಪ್ರತಿಶತದಷ್ಟು ಜನರು ಭಾರತದಲ್ಲೇ ಇದ್ದಾರೆ ಎನ್ನುವುದು ಕಳವಳ ಮೂಡಿಸಿದೆ.

'ಕ್ಲೋಸ್ ದಿ ಕೇರ್ ಗ್ಯಾಪ್': ಭಾರತದಲ್ಲಿ ಪ್ರತಿ ವರ್ಷ ಸುಮಾರು 75,000 ಜನರು ಕ್ಯಾನ್ಸರ್​ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಅಂಕಿಅಂಶಗಳಿಂದ ಮಾತ್ರವಲ್ಲ, ಜಾಗತಿಕವಾಗಿ ಸಾವಿನ ಪ್ರಮುಖ 10 ಕಾರಣಗಳಲ್ಲಿ ಕ್ಯಾನ್ಸರ್​ ಕೂಡು ಎಂದು ಪರಿಗಣಿಸಿರುವ ಅಂಶದಿಂದಲೂ ಕ್ಯಾನ್ಸರ್ ಪ್ರಮಾಣ ಎಷ್ಟಿದೆ ಎಂಬುದು ತಿಳಿದಿದೆ. ಪ್ರಸ್ತುತ ವರ್ಷ ವಿಶ್ವ ಕ್ಯಾನ್ಸರ್ ದಿನವನ್ನು 'ಕ್ಲೋಸ್ ದಿ ಕೇರ್ ಗ್ಯಾಪ್' ಧ್ಯೇಯ ವಾಕ್ಯದಡಿ ಆಚರಿಸಲಾಗುತ್ತಿದೆ.

ಕಳವಳಕಾರಿ ಮಾಹಿತಿ: ಎಲ್ಲಾ ರೀತಿಯ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಜಾಗತಿಕವಾಗಿ ಆತಂಕ ಹೆಚ್ಚಿಸಿದೆ. ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ಪ್ರಕಾರ, 2020 ರಲ್ಲಿ ಸುಮಾರು 14 ಲಕ್ಷ ಜನರು ಕ್ಯಾನ್ಸರ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ, ವಿವಿಧ ರೀತಿಯ ಕ್ಯಾನ್ಸರ್ ಹೊಂದಿರುವ ರೋಗಿಗಳ ಸಂಖ್ಯೆಯಲ್ಲಿ ಒಟ್ಟು ಶೇಕಡಾ 12.8 ರಷ್ಟು ಹೆಚ್ಚಳವಾಗಿದೆ. ಇಷ್ಟೇ ಅಲ್ಲ, ಒಂದು ಅಂದಾಜಿನ ಪ್ರಕಾರ, 2025ರ ವೇಳೆಗೆ ಸುಮಾರು 15,69,793 ಜನರು ಕ್ಯಾನ್ಸರ್‌ನಿಂದ ಜೀವ ಕಳೆದುಕೊಳ್ಳುತ್ತಾರೆ. ಇನ್ನೊಂದು ವರದಿಯಂತೆ ಭಾರತದಲ್ಲಿ ಪ್ರತಿ ಗಂಟೆಗೆ 159 ಜನರು ವಿವಿಧ ರೀತಿಯ ಕ್ಯಾನ್ಸರ್​ನಿಂದ ಸಾಯುತ್ತಿದ್ದಾರೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, 2020 ರ ವೇಳೆಗೆ, ಭಾರತದ ವಿವಿಧ ಕ್ಯಾನ್ಸರ್ ಸ್ಕ್ರೀನಿಂಗ್ ಕೇಂದ್ರಗಳಲ್ಲಿ 16 ಕೋಟಿ ಬಾಯಿ ಕ್ಯಾನ್ಸರ್, 8 ಕೋಟಿ ಸ್ತನ ಕ್ಯಾನ್ಸರ್ ಮತ್ತು 5.53 ಕೋಟಿ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಕಳೆದ ಎಂಟು ವರ್ಷಗಳಲ್ಲಿ, ಈ ಕಾಯಿಲೆಗೆ ಸಂಬಂಧಿಸಿದ ಸುಮಾರು 300 ಮಿಲಿಯನ್ ಗಂಭೀರ ಪ್ರಕರಣಗಳು ವರದಿಯಾಗಿವೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಆ್ಯಂಡ್ ರಿಸರ್ಚ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, 2020 ರಲ್ಲಿ ಕ್ಯಾನ್ಸರ್ ಪೀಡಿತ ಪುರುಷರ ಸಂಖ್ಯೆ ಸುಮಾರು 6.8 ಲಕ್ಷ ಎಂದು ಹೇಳಲಾಗಿದ್ದು, ಮಹಿಳೆಯರ ಸಂಖ್ಯೆ 7.1 ಲಕ್ಷ ಎಂದು ಹೇಳಲಾಗಿತ್ತು. ಅದೇ ವರದಿಯಲ್ಲಿ, 2025 ರ ವೇಳೆಗೆ ಪುರುಷರಲ್ಲಿ ಸುಮಾರು 7.6 ಲಕ್ಷ ಕ್ಯಾನ್ಸರ್ ಪ್ರಕರಣಗಳು ಮತ್ತು ಮಹಿಳೆಯರಲ್ಲಿ 8.1 ಲಕ್ಷ ಪ್ರಕರಣಗಳು ವರದಿಯಾಗಬಹುದು ಎಂದು ಭವಿಷ್ಯ ನುಡಿದಿದೆ.

1993ರಲ್ಲಿ ಮೊದಲ ಕ್ಯಾನ್ಸರ್​ ದಿನ: ಜಾಗತಿಕ ಮಟ್ಟದಲ್ಲಿ ಎಲ್ಲಾ ರೀತಿಯ ಕ್ಯಾನ್ಸರ್ ನಿರ್ಮೂಲನೆಗೆ ಜಾಗೃತಿ ಮೂಡಿಸಲು, ಅದಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಚರ್ಚಿಸಲು ಮತ್ತು ವೈದ್ಯರು ಮತ್ತು ಸರ್ಕಾರಿ ಸಂಸ್ಥೆಗಳು, ಸಾಮಾಜಿಕ ಮತ್ತು ಆರೋಗ್ಯ ಸಂಬಂಧಿತ ಸಂಸ್ಥೆಗಳಿಗೆ ವೇದಿಕೆಯನ್ನು ನೀಡುವುದು ಮತ್ತು ಎಲ್ಲಾ ರೀತಿಯ ಕ್ಯಾನ್ಸರ್ ತಡೆಗಟ್ಟಲು ಕ್ರಮಗಳನ್ನು ರಚಿಸಲು ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿವರ್ಷ ಫೆಬ್ರವರಿ 4 ರಂದು ಆಚರಿಸಲಾಗುತ್ತದೆ. ಈ ದಿನದಂದು, ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಅದರ ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಸಂಬಂಧಿತ ಸಂಸ್ಥೆಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಹ ನಡೆಸುತ್ತವೆ.

ವಿಶ್ವ ಕ್ಯಾನ್ಸರ್ ದಿನವನ್ನು ಮೊದಲ ಬಾರಿಗೆ 1993ರಲ್ಲಿ ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ಆಚರಿಸಿತು. ಆದರೆ ಔಪಚಾರಿಕವಾಗಿ ಫೆಬ್ರವರಿ 4 ರಂದು, 2000 ರಲ್ಲಿ, ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಕ್ಯಾನ್ಸರ್ ಸಮ್ಮೇಳನದಲ್ಲಿ 'ಕ್ಯಾನ್ಸರ್ ವಿರುದ್ಧದ ವಿಶ್ವ ಶೃಂಗಸಭೆ'ಯಲ್ಲಿ ಜಾಗತಿಕ ಹಂತದಲ್ಲಿ ಅದರ ಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಆಚರಿಸಲಾಯಿತು. ನಿರಂತರವಾಗಿ ಹೆಚ್ಚುತ್ತಿರುವ ಕ್ಯಾನ್ಸರ್ ಅಂಕಿಅಂಶಗಳು ಭಯಾನಕ ಚಿತ್ರವನ್ನು ಪ್ರಸ್ತುತಪಡಿಸುತ್ತವೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ, ವೈದ್ಯಕೀಯ ಕ್ಷೇತ್ರ ಮತ್ತು ಚಿಕಿತ್ಸಾ ವಿಧಾನಗಳಲ್ಲಾದ ಅಭಿವೃದ್ಧಿಯಿಂದಾಗಿ ಇಂದಿನ ಕಾಲಘಟ್ಟದಲ್ಲಿ ಕ್ಯಾನ್ಸರ್ ಒಂದು ಗುಣಪಡಿಸಲಾಗದ ಕಾಯಿಲೆ ಎನ್ನುವುದಾಗಿ ಪರಿಗಣಿಸಲಾಗುತ್ತಿಲ್ಲ.

ಕ್ಯಾನ್ಸರ್​ ಗುಣಪಡಿಸಲು ಸಾಧ್ಯ: ಇಂದೋರ್‌ನ ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಮತ್ತು ಇಂದೋರ್ ಕ್ಯಾನ್ಸರ್ ಫೌಂಡೇಶನ್‌ನ ಸಂಸ್ಥಾಪಕ ಡಾ ದಿಗ್ಪಾಲ್ ಧಾರ್ಕರ್, ಸರಿಯಾದ ಸಮಯದಲ್ಲಿ ಕ್ಯಾನ್ಸರ್​ ರೋಗಕ್ಕೆ ತುತ್ತಾಗಿರುವುದನ್ನು ಪತ್ತೆಹಚ್ಚಿದರೆ, ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲು ಸಂಪೂರ್ಣವಾಗಿ ಸಾಧ್ಯ ಎಂದು ಹೇಳುತ್ತಾರೆ. ಆದರೆ, ರೋಗವು ಎರಡನೇ ಅಥವಾ ಮೂರನೇ ಹಂತದಲ್ಲಿ ಪತ್ತೆಯಾದರೆ, ಚಿಕಿತ್ಸೆಯಲ್ಲಿ ತೊಂದರೆಗಳು ಉಂಟಾಗಬಹುದು. ಎಲ್ಲಾ ವಯೋಮಾನದವರಲ್ಲಿ ಕ್ಯಾನ್ಸರ್ ಹೆಚ್ಚುತ್ತಿರುವುದಕ್ಕೆ ಹಲವು ಕಾರಣಗಳಿರಬಹುದು. ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡಾ 10 ರಷ್ಟು ಆನುವಂಶಿಕವಾಗಿ ಬಂದರೆ ಉಳಿದವುಗಳು ಅವುಗಳಲ್ಲಿ, ಜಡ ಜೀವನಶೈಲಿ, ಬೊಜ್ಜು ಇತ್ಯಾದಿಗಳಿಂದ ಬರಬಹುದು ಎನ್ನುತ್ತಾರೆ ಡಾ.ಧಾರ್ಕರ್.

ಅದೇ ಸಮಯದಲ್ಲಿ, ಜಡ ಜೀವನಶೈಲಿ ಮತ್ತು ಆಹಾರದಲ್ಲಿನ ಅಡಚಣೆಗಳು ಹೆಚ್ಚಾಗಿ ಯುವಜನರಲ್ಲಿ ಮಾತ್ರವಲ್ಲ ಎಲ್ಲಾ ವಯಸ್ಸಿನ ಮಹಿಳೆಯರು ಮತ್ತು ಪುರುಷರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾಗಿದೆ. ಇಂಟರ್ನ್ಯಾಷನಲ್ ಯೂನಿಯನ್ ಅಗೈನ್ಸ್ಟ್​ ಕ್ಯಾನ್ಸರ್ ಪ್ರಕಾರ, ಮೂವರಲ್ಲಿ ಒಬ್ಬರು ತಮ್ಮ ಕಳಪೆ ಜೀವನಶೈಲಿಯಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾರೆ.

ಕಾರಣವೇನು? ತಡೆ ಹೇಗೆ?: ಆಹಾರ ಕ್ರಮದಲ್ಲಿ ನಿರ್ಲಕ್ಷ್ಯ, ಅಶಿಸ್ತಿನ ದಿನಚರಿ ಮತ್ತು ದೈಹಿಕ ಚಟುವಟಿಕೆ ಮತ್ತು ವ್ಯಾಯಾಮದ ಕೊರತೆ, ಚಿಕ್ಕ ವಯಸ್ಸಿನಲ್ಲೇ ಧೂಮಪಾನ ಮತ್ತು ಮದ್ಯ ಅಥವಾ ಇತರ ಮಾದಕ ದ್ರವ್ಯಗಳ ಸೇವನೆಯು ದೇಹದಲ್ಲಿ ಯಾವುದೇ ರೀತಿಯ ಕ್ಯಾನ್ಸರ್ ಹರಡಲು ಕಾರಣವಾಗಬಹುದು. ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಲು ವಯಸ್ಸಾಗುವುದು ಕೂಡ ಒಂದು ಕಾರಣ ಎನ್ನುತ್ತಾರೆ ಅವರು.

ಕ್ಯಾನ್ಸರ್ ಅಥವಾ ಯಾವುದೇ ರೋಗವನ್ನು ತಪ್ಪಿಸಲು, ಪೌಷ್ಟಿಕ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು, ಶಿಸ್ತುಬದ್ಧ ಮತ್ತು ಸಕ್ರಿಯ ಜೀವನಶೈಲಿಯನ್ನು ಅನುಸರಿಸುವುದು ಮತ್ತು ಸ್ಥೂಲಕಾಯತೆಗೆ ಕಾರಣವಾಗುವಂತಹ ಆಹಾರಗಳನ್ನು ತಪ್ಪಿಸುವುದು ಬಹಳ ಮುಖ್ಯ. ಇದಲ್ಲದೆ, ಧೂಮಪಾನ ಮತ್ತು ಮದ್ಯಸೇವನೆ ತಪ್ಪಿಸಿ, ದಿನಚರಿಯಲ್ಲಿ ನಿಯಮಿತ ವ್ಯಾಯಾಮವನ್ನು ಸೇರಿಸಿ ಮತ್ತು ಹೆಚ್ಚು ದೈಹಿಕ ಚಟುವಟಿಕೆಯಿರುವ ದಿನಚರಿಯನ್ನು ನಿಮ್ಮದಾಗಿಸಿಕೊಳ್ಳಿ. ಇದರ ಜೊತೆ ಜೊತೆಗೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿರಿ, ವಿಶೇಷವಾಗಿ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇತ್ತು ಎಂದಾದರೆ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು.

ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳಿಂದಾಗಿ ಇಂದೋರ್ ಕ್ಯಾನ್ಸರ್ ಫೌಂಡೇಶನ್ ಇಂದೋರ್‌ನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಜನರಿಗೆ ಕ್ಯಾನ್ಸರ್‌ನ ಲಕ್ಷಣಗಳು, ಚಿಹ್ನೆಗಳು ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲು ವಿಶೇಷ ಪ್ರಯತ್ನಗಳನ್ನು ಮಾಡುತ್ತಿದೆ. 'ಕ್ಯಾನ್ಸರ್ ಸಂಕೇತ್' ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಫೌಂಡೇಶನ್ ಸಿದ್ಧಪಡಿಸಿದೆ. ಇದು ಬಹುತೇಕ ಎಲ್ಲಾ ರೀತಿಯ ಕ್ಯಾನ್ಸರ್​ನ ಲಕ್ಷಣಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಈ ಕಾರಣದಿಂದಾಗಿ, ಒಬ್ಬ ವ್ಯಕ್ತಿಯು ತನ್ನ ರೋಗಲಕ್ಷಣಗಳನ್ನು ಪತ್ತೆಹಚ್ಚಬಹುದು ಮತ್ತು ಸರಿಯಾದ ಸಮಯದಲ್ಲಿ ತಜ್ಞರಿಂದ ರೋಗನಿರ್ಣಯವನ್ನು ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಈಗಲೇ ಕಾರ್ಯನಿರ್ವಹಿಸಿ, ರೋಗವನ್ನು ಕೊನೆಗೊಳಿಸಿ: 'ವಿಶ್ವ ಕುಷ್ಠರೋಗ ದಿನ 2023'ರ ಘೋಷ ವಾಕ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.