ETV Bharat / sukhibhava

ಮಹಿಳಾ ದಿನಾಚರಣೆ 2023: ಮುಟ್ಟಿನ ಬಗೆಗಿರುವ ತಪ್ಪು ಕಲ್ಪನೆಗಳಿವು..: ತಜ್ಞರ ಸಲಹೆ ಕೇಳಿ.. - ಮಹಿಳೆ ಸೇರಿದಂತೆ ಎಲ್ಲರೂ ಈ ವಿಷಯ

ಋತುಚಕ್ರದ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿದೆ. ಇವುಗಳನ್ನು ಹೋಗಲಾಡಿಸುವ ಕ್ರಮಕ್ಕೆ ಮಹಿಳೆ ಸೇರಿದಂತೆ ಪ್ರತಿಯೊಬ್ಬರೂ ಮುಂದಾಗಬೇಕು.

ಮಹಿಳಾ ದಿನಾಚರಣೆ 2023: ಮುಟ್ಟಿನ ಬಗ್ಗೆ ಇರುವ ತಪ್ಪು ಕಲ್ಪನೆಗಳು
womens-day-2023-misconceptions-about-menstruation
author img

By

Published : Mar 2, 2023, 11:58 AM IST

ಋತುಚಕ್ರ ಮಹಿಳೆಯ ಜೀವನದ ಅವಿಭಾಜ್ಯ ಅಂಗ. ಆದರೂ ಕೂಡ ಮಹಿಳೆಯೂ ಸೇರಿದಂತೆ ಎಲ್ಲರೂ ಈ ವಿಷಯವನ್ನು ಮುಕ್ತವಾಗಿ ಚರ್ಚಿಸಲು ಹಿಂಜರಿಯುತ್ತಾರೆ. ಅಷ್ಟೇ ಅಲ್ಲದೇ, ಈ ಸಮಯದಲ್ಲಿ ಅನೇಕ ಕಟ್ಟುಪಾಡುಗಳಿಗೆ ಮಹಿಳೆ ಗುರಿಯಾಗುತ್ತಾಳೆ. ಋತುಚಕ್ರದ ಸಂದರ್ಭದಲ್ಲಿ ಮಹಿಳೆ ಅಶುದ್ದಳು ಎಂಬ ಪರಿಕಲ್ಪನೆ ಇಂದಿಗೂ ಇದೆ. ಇದೇ ಕಾರಣದಿಂದ ಆಕೆಗೆ ಈ ಸಮಯದಲ್ಲಿ ಕೆಲ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಈ ದಿನಗಳಲ್ಲಿ ಅಡುಗೆ ಮನೆ, ದೇಗುಲ, ವ್ಯಾಯಾಮ, ಹಾಸಿಗೆ ಮೇಲೆ ಮಲಗುವುದೂ ಸೇರಿದಂತೆ ಕೆಲವು ವಿಚಾರಗಳಿಂದ ಆಕೆಯನ್ನು ದೂರವಿಡಲಾಗುತ್ತದೆ.

ವೈದ್ಯರು ಮತ್ತು ತಜ್ಞರು ಹೇಳುವ ಪ್ರಕಾರ, ಇವೆಲ್ಲ ಋತುಚಕ್ರದ ಬಗೆಗಿರುವ ತಪ್ಪು ಕಲ್ಪನೆಗಳು. ಆದರೆ, ವಾಸ್ತವವೇ ಬೇರೆ. ಋತುಚಕ್ರಮದಲ್ಲಿ ಆಕೆ ಅನುಭವಿಸುವ ನೋವು ಕಡಿಮೆ ಮಾಡಲು ಈ ನಿರ್ಬಂಧಗಳು ಆಕೆಗೆ ಸಹಾಯ ಮಾಡಬಹುದಷ್ಟೇ. ಮಹಿಳಾ ದಿನಾಚರಣೆಯ ಈ ಹೊತ್ತಿನಲ್ಲಿ ಮುಟ್ಟಿನ ಬಗ್ಗೆ ಹೊಂದಿರುವ ತಪ್ಪು ಪರಿಕಲ್ಪನೆ ಮತ್ತು ಮೂಢನಂಬಿಕೆಗಳ ಕುರಿತು ಉತ್ತಮ ಮಾಹಿತಿ ಹೊಂದುವುದರೊಂದಿಗೆ ಸಮಾಜದ ಚಿಂತನಾ ಶೈಲಿಯನ್ನು ಬದಲಾಯಿಸಬೇಕಿದೆ. ಈ ಕುರಿತು ನವದೆಹಲಿಯ ಸ್ತ್ರೀ ರೋಗ ತಜ್ಞೆ ಡಾ.ಅಂಜನಾ ಸಿಂಗ್​ ಉಪಯುಕ್ತ ಮಾಹಿತಿ ನೀಡಿದ್ದಾರೆ.

ಋತುಚಕ್ರ ಎಂದರೇನು?: ಪ್ರತೀ ತಿಂಗಳು ಮಹಿಳೆಯ ಹಾರ್ಮೋನ್​ಗಳಿಂದ ಗರ್ಭಕೋಶದಲ್ಲಿ ಒಳ ಪದರ ಉತ್ಪತ್ತಿಯಾಗುತ್ತದೆ. ಆಕೆ ಸಂತಾನೋತ್ಪತಿ ಮಾಡುವವರೆಗೆ ಪ್ರತಿ ಋತುಚಕ್ರದ ವೇಳೆ ಆ ಪದರ ಒಡೆದು ರಕ್ತಸ್ರಾವವಾಗುತ್ತದೆ. ಈ ಪ್ರಕ್ರಿಯೆ ಆಕೆ ಗರ್ಭಿಣಿಯಾದಾಗ ನಿಲ್ಲುತ್ತದೆ. ಪ್ರತೀ ಮಾಸ ಆಕೆಯ ದೇಹದಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಈ ಸಮಯದಲ್ಲಿ ಆಕೆ ಹೊಟ್ಟೆ ನೋವು, ಮಾನಸಿಕ ಮತ್ತು ದೈಹಿಕವಾಗಿ ಕಿರಿಕಿರಿ ಅನುಭವಿಸುತ್ತಾಳೆ. ಇಂಥ ಸಂದರ್ಭದಲ್ಲಿ ಆಕೆಗೆ ಸಾಕಷ್ಟು ಸಮಯದ ಅವಶ್ಯಕತೆ ಕೂಡ ಇರುತ್ತದೆ. ಈ ಹಿನ್ನೆಲೆಯಲ್ಲಿ ಆಕೆಗೆ ಪ್ರತ್ಯೇಕ ಕಾಲಾವಕಾಶ ನೀಡಲು ಕೆಲವು ನಿರ್ಬಂಧ ವಿಧಿಸಲಾಗಿದೆ. ಆದರೆ, ಕಾಲಾನಂತರದಲ್ಲಿ ಇದರ ಬಗ್ಗೆ ತಪ್ಪು ಕಲ್ಪನೆಗಳು ಮೂಡಿವೆ.

ತಜ್ಞರ ಮಾತು ಕೇಳಿ..: ಮಾಸಿಕ ಋತುಚಕ್ರದ ವೇಳೆ ಮಹಿಳೆ ವ್ಯಾಯಾಮ ಮಾಡಬಹುದು. ಇದರಿಂದ ಆಕೆಗೆ ನೋವಿನಿಂದ ಸಾಕಷ್ಟು ವಿರಾಮ ಸಿಗಲಿದೆ. ಇದು ಸ್ನಾಯುಗಳ ಆರೋಗ್ಯಕ್ಕೆ ಮಾತ್ರ ಸಹಾಯ ಮಾಡದೇ ದೈಹಿಕ, ಮಾನಸಿಕ ಮತ್ತು ಹಾರ್ಮೋನ್​ಗಳ ಆರೋಗ್ಯದಿಂದಲೂ ಇದು ಉತ್ತಮವಾಗಿದೆ. ಈ ಸಮಯದಲ್ಲಿ ತಲೆ ಸ್ನಾನ ಮಾಡಬಾರದು ಎಂದು ಹೇಳುತ್ತಾರೆ. ಆದರೆ, ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ನೋವಿನಿಂದಾಗುವ ಕಿರಿಕಿರಿ ತಪ್ಪಿಸಬಹುದು. ಆಹಾರದ ವಿಷಯದಲ್ಲಿ ಕೆಲವು ಕಟ್ಟುಪಾಡುಗಳಿವೆ. ಆದರೆ, ಈ ಸಂದರ್ಭದಲ್ಲಿ ಯಾವುದೇ ಆಹಾರ ತಿನ್ನಲು ಆಕೆಗೆ ನಿರ್ಬಂಧವಿಲ್ಲ ಎಂದು ಡಾ.ಅಂಜನಾ ಹೇಳುತ್ತಾರೆ. ಸರಳ ಡಯಟ್​ಗಳನ್ನು ಈ ಅನುಸರಿಸಬಹುದು, ತಣ್ಣನೆಯ ಪಾನೀಯಗಳನ್ನು ತಪ್ಪಿಸುವುದೊಳ್ಳೆಯದು.

ಋತುಚಕ್ರದ ಸಂದರ್ಭದಲ್ಲಿ ಉಂಟಾಗುವ ಹಾರ್ಮೋನ್​ ಚಟುವಟಿಕೆಗಳು ಚಯಾಪಚಯನ ಕ್ರಿಯೆಗೂ ಪರಿಣಾಮ ಬೀರುತ್ತದೆ. ಆಕೆ ನೋವಿನಿಂದ ಬಳಲುತ್ತಿರುತ್ತಾಳೆ. ಇದರಿಂದಾಗಿ ಗ್ಯಾಸ್ಟ್ರಿಕ್​ ಸಮಸ್ಯೆಗಳು ಕಾಡಬಹುದು. ಇದರ ಹೊರತಾಗಿರುವ ಸಾಮಾನ್ಯ ತಪ್ಪು ಕಲ್ಪನೆಯೆಂದರೆ ಮಹಿಳೆಯು ಈ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು ಎಂಬುದು. ಇದು ಸಂಪೂರ್ಣವಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವ ವ್ಯಕ್ತಿಯ ಮೇಲೆ ಬಿಟ್ಟಿದ್ದು. ಇದರಿಂದ ಯಾವುದೇ ದೈಹಿಕ ಹಾನಿಯಾಗುವುದಿಲ್ಲ. ಅನೇಕ ಬಾರಿ ಈ ಸಮಯದಲ್ಲಿ ಉಂಟಾಗುವ ನೋವು ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಉಪಶಮನವಾಗುತ್ತದೆ. ಋತುಚಕ್ರ ಎಂಬುದು ಮಹಿಳೆಯರ ಜೀವನದ ಅಗತ್ಯ ಮತ್ತು ಸಾಮಾನ್ಯ ಪ್ರಕ್ರಿಯೆ. ಬಹುತೇಕ ಮಹಿಳೆಯರು ಋತುಚಕ್ರದಲ್ಲಿ ನೋವಿನಲ್ಲಿ ಆರಾಮವಾಗಿಯೂ ಇರುತ್ತಾರೆ.

ಇದನ್ನೂ ಓದಿ: ಋತುಚಕ್ರದ ಸಮಸ್ಯೆಗೆ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ; ಸಮಸ್ಯೆ ಕಾರಣವಾದಿತು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.