ETV Bharat / sukhibhava

ಸದಾ ಯೋಚಿಸಿ ಪ್ರಯೋಜನವಿಲ್ಲ: ಚಿಂತೆಗೆ ಹೇಳಿ ಗುಡ್​​ಬೈ! - ವಿಷಯಗಳು ಕೆಲವೊಮ್ಮೆ ನಮಗೆ ಬೇಸರ

Women wellbeing: ಮಹಿಳೆಯರ ಬಹು ಸಮಯ ಮನೆಗೆಲಸ, ಕಚೇರಿ, ಅಡುಗೆಯಲ್ಲಿ ಕಳೆದು ಹೋದಾಗ ಅವರಲ್ಲಿ ಆವರಿಸುವ ಶೂನ್ಯವೂ ಚಿಂತೆಗೆ ದಾರಿಯಾಗುತ್ತದೆ. ಆದರೆ, ಈ ಚಿಂತೆ ದೂರಾಗಿಸಲು ಈ ಕ್ರಮ ಅನುಸರಿಸಿ.

women-should-learn-to-say-goodbye-to-these-things

author img

By ETV Bharat Karnataka Team

Published : Nov 22, 2023, 2:33 PM IST

ಮನೆಗೆಲಸ, ಅಡುಗೆ ಅಥವಾ ಕಚೇರಿ ಯಾವುದೇ ಕೆಲಸದಲ್ಲಿ ಆಗಲಿ, ಬಿಡುವಿಲ್ಲದೇ ನಾವು ಸಮಯವನ್ನು ಕಳೆಯುತ್ತಿರುತ್ತೇವೆ. ಈ ರೀತಿಯ ವಿಷಯಗಳು ಕೆಲವೊಮ್ಮೆ ನಮಗೆ ಬೇಸರ ಮೂಡಿಸುವುದು ಹೌದು. ಈ ನಿರಾಶೆಗಳು ಕೆಲವೊಮ್ಮೆ ಯಾಕೆ ನಾವು ಇಷ್ಟೊಂದು ಕಷ್ಟ ಪಡಬೇಕು ಎಂಬ ಭಾವನೆ ಮೂಡಿಸುತ್ತದೆ. ಇದೆಲ್ಲವೂ ಮಾನಸಿಕ ಆಯಾಸದ ಲಕ್ಷಣಗಳಾಗಿದೆ. ಈ ರೀತಿಯ ಚಿಂತನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ ಸಾಮಾನ್ಯ ವಿಷಯಗಳು ಮತ್ತು ಚಿಂತನೆಗಳನ್ನು ಗಮನಹರಿಸಿ, ಹೇಗೆ ನಾವು ಸಾಗಬಹುದು ಎಂದು ಯೋಚಿಸುವುದು ಮುಖ್ಯವಾಗುತ್ತದೆ.

ಪದ್ದತಿ ಬದಲಾಯಿಸಿ: ವೈಫಲ್ಯ ಎಂಬುದು ಅನಿವಾರ್ಯ ಎಂಬ ಮಾತು ಯಾವಾಗ ಬರುತ್ತದೆ ಎಂದರೆ ನಾವು ಸೋಲಿಗೆ ಎದುರಾದಾಗ. ಇದು ನಮ್ಮನ್ನು ಕುಗ್ಗಿಸುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಬದಲಾವಣೆ ಮಾಡುತ್ತದೆ. ಮಹಿಳೆಯರು ಈ ಸೋಲಿನ ವಿಚಾರದಲ್ಲಿ ಕೊಂಚ ಹೆಚ್ಚಾಗಿ ಘಾಸಿಯಾಗುತ್ತಾರೆ. ಇದನ್ನು ಪಕ್ಕಕ್ಕೆ ಇಟ್ಟು, ನಿಮ್ಮಲ್ಲಿ ನೀವು ನಂಬಿಕೆ ಇಟ್ಟು, ಈ ಸಂಬಂಧ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಇದನ್ನು ನಂಬಿದಾಗ ಮಾತ್ರ ನೀವು ಏನನ್ನಾದರೂ ಸಾಧಿಸಲು ಸಾಧ್ಯ. ಬದಲಾವಣೆಗೆ ದಾರಿ ಇದೆ ಎಂಬುದನ್ನು ಮರೆಯಬೇಡಿ.

ಗುರಿ ನಿರ್ಮಿಸಿ: ಚೆನ್ನಾಗಿ ಓದಬೇಕು, ಉತ್ತಮ ಕೆಲಸ ಮಾಡಬೇಕು. ಇವೆಲ್ಲವನ್ನೂ ಸಾಧಿಸದ ಬಳಿಕ ಮುಂದೆ ಏನು ಎಂಬ ಶೂನ್ಯ ಆವರಿಸುತ್ತದೆ. ಇದರಿಂದ ಕೂಡ ನಿರಾಶೆ ಕಾಡುವುದು. ಜೀವನದಲ್ಲಿ ಇಷ್ಟೆ ಸಾಲದು ಎಂಬ ಅನಿಸಿದರೆ, ಮತ್ತೆ ಹೊಸ ಗುರಿಯನ್ನು ಸೃಷ್ಟಿಸಿಕೊಳ್ಳಿ, ಅದನ್ನು ಸಾಧಿಸಲು ಮುಂದಾಗಿ, ಆಗ ನಿಮಗೆ ಬೇಸರಕ್ಕೆ ಯಾವುದೇ ಅವಕಾಶ ಇರುವುದಿಲ್ಲ. ನೀವು ದೊಡ್ಡ ಗುರಿಗಳನ್ನು ನಿರ್ಮಿಸಿಕೊಳ್ಳುವ ಬದಲಾಗಿ ಸಣ್ಣ ಸಣ್ಣ ಗುರಿಯನ್ನು ಹಾಕಿಕೊಂಡು ಸುಲಭವಾಗಿ ಸಾಧಿಸಲು ಮುಂದಾಗಿ.

ಆತ್ಮವಿಶ್ವಾಸ ನಿರ್ಮಾಣ: ಮಕ್ಕಳು ನಡೆಯುವ ಮುನ್ನ ಎಷ್ಟು ಬಾರಿ ಬೀಳುತ್ತಾರೆ. ಎಷ್ಟು ಬಾರಿ ಗಾಯಗೊಳ್ಳುತ್ತಾರೆ. ಆದರೂ ಕೂಡ ಅವರು ಮುನ್ನಡೆಯುತ್ತಾರೆ. ಅದೇ ರೀತಿ ನೀವು ಕೂಡ ಮುಂದೆ ಸಾಗಬೇಕು. ನಿಮ್ಮನ್ನು ಬೆಂಬಲಿಸುವರ ಜೊತೆಗೆ ನಿಮಗೆ ಖುಷಿ ನೀಡುವ ವ್ಯಕ್ತಿಗಳ ಜೊತೆ ಸಮಯ ಕಳೆಯಿರು. ಸದಾ ಕಚೇರಿ ಮನೆಯಲ್ಲಿ ಸಮಯ ಕಳೆಯಬೇಡಿ. ಕೆಲವು ಉತ್ಸಾಹಗಳನ್ನುಯ ಬೆಳೆಸಿಕೊಳ್ಳಿ. ಅಂತಹ ವಿಷಯಗಳನ್ನು ನಿಮ್ಮ ಆಪ್ತರ ಬಳಿ ಚರ್ಚಿಸಿ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ, ನಿರಂತರ ಕೆಲಸದ ಒತ್ತಡವೂ ಕೂಡ ನಿಮ್ಮ ಮಿದುಳಿಗೆ ಭಾರವಾಗುತ್ತದೆ. ನಿಮ್ಮನ್ನು ಆಯಾಸಗೊಳಿಸುತ್ತದೆ. ಇದರ ಫಲಿತಾಂಶವಾಗಿ ನೀವು ಯಾಕೆ ಹೀಗೆ ಎಂದು ಆಲೋಚಿಸುತ್ತೀರ. ನಿಮ್ಮನ್ನು ಉತ್ಸಾಹಿಯಾಗಿಡುವವರ ಜೊತೆಗೆ ಕಳೆಯುವ ಸಮಯವು ಮನಸ್ಸಿನ ವಿಶ್ರಾಂತಿ ನೀಡುತ್ತದೆ. ಇದರಿಂದ ಸಾಮಾಜಿಕ ಬಂಧ ಬಲವಾಗುತ್ತದೆ. ಆತಂಕ ಮತ್ತು ಖಿನ್ನತೆ ದೂರಾವಾಗುತ್ತದೆ.

ಇದನ್ನೂ ಓದಿ: ಒಂಟಿ ಪ್ರವಾಸದ ಮೋಜು ಅನುಭವಿಸಬೇಕೇ? ಯುವತಿಯರು ಈ ಮುನ್ನೆಚ್ಚರಿಕೆ ಪಾಲಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.