ETV Bharat / sukhibhava

ಮಹಿಳೆಯರೇ ಸಂಪಾದಿಸಿದರಷ್ಟೇ ಸಾಲದು: ಈ ಸಂಗತಿಗಳು ತಿಳಿದಿರಲಿ

author img

By ETV Bharat Karnataka Team

Published : Nov 16, 2023, 1:01 PM IST

ಇಂದು ಮಹಿಳೆ ಕೈ ತುಂಬ ಸಂಪಾದಿಸಿದರೂ ಹಣಕಾಸಿನ ವಿಚಾರದಲ್ಲಿ ಮನೆಯ ಪುರುಷರ ಮೇಲೆ ಹೆಚ್ಚು ಅವಲಂಬನೆ ಹೊಂದಿದ್ದಾಳೆ.

women-should-have-knowledge-on-financial-affairs-is-very-important

ಇಂದು ಬಹುತೇಕ ಎಲ್ಲಾ ಕ್ಷೇತ್ರದಲ್ಲೂ ಮಹಿಳೆ ಪ್ರಗತಿ ಹೊಂದುತ್ತಿದ್ದರೂ ಇಂದಿಗೂ ಕೂಡ ಹಣಕಾಸಿನ ವಿಷಯದಲ್ಲಿ ತನ್ನ ತಂದೆ, ಸಹೋದರ ಅಥವಾ ಗಂಡನ ಮೇಲೆ ಅವಲಂಬಿತಳಾಗಿದ್ದಾಳೆ. ತಜ್ಞರು ಹೇಳುವಂತೆ, ಮಹಿಳೆಯರು ಹಣಕಾಸಿನ ವಿಚಾರದ ಕುರಿತು ಸರಿಯಾದ ತಿಳಿವಳಿಕೆ ಹೊಂದದೇ ಇರುವುದು ಇದಕ್ಕೆ ಪ್ರಮುಖ ಕಾರಣ. ಕೆಲವು ಮಹಿಳೆಯರು ಕೈ ತುಂಬಾ ಸಂಪಾದಿಸಿದರೂ ಆ ಹಣವನ್ನು ಗಂಡನ ಕೈಗಿಟ್ಟು ಅದರ ನಿರ್ವಹಣೆ ಮಾಡುವಂತೆ ತಿಳಿಸುತ್ತಾರೆ. ಈ ಟ್ರೆಂಡ್​ನಿಂದ ಮಹಿಳೆ ಹೊರಬರದೇ ಇದ್ದರೆ, ಅವರು ಅನಿರೀಕ್ಷಿತ ಸಂದರ್ಭಗಳಲ್ಲಿ ಎದುರಾಗುವ ಆರ್ಥಿಕ ತೊಂದರೆ ಎದುರಿಸಲು ಅಸಮರ್ಥಳಾಗುತ್ತಾಳೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಕೆಲವು ಅಗತ್ಯ ಮುನ್ನೆಚ್ಚರಿಕೆ ಹೊಂದಬೇಕಿದೆ.

ಉದ್ಯೋಗ ತೊರೆಯಬೇಡಿ: ಅನೇಕರು ತಮ್ಮ ವೈಯಕ್ತಿಕ ಅಥವಾ ಕುಟುಂಬದ ಕಾರಣದಿಂದಾಗಿ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ಇನ್ನೂ ಕೆಲವು ಮಹಿಳೆಯರು ತಾವು ಸಂಪಾದಿಸುವ ಅವಶ್ಯಕತೆ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ತಜ್ಞರು ಹೇಳುವಂತೆ, ಇವು ಹಣಕಾಸಿನ ಪ್ರಯೋಜನಗಳ ನಿರ್ಧಾರವಾಗಿದೆ. ಮದುವೆಯ ಆರಂಭದಲ್ಲಿ ಕೆಲಸ ಬೇಡ ಎನಿಸಿದರೂ ಭವಿಷ್ಯದಲ್ಲಿ ಸಣ್ಣ ಅವಶ್ಯಕತೆಗಾಗಿ ಗಂಡಂದಿರು ನಿಮ್ಮನ್ನು ಅವಲಂಬಿಸಬಹುದು. ಈ ಹಿನ್ನೆಲೆಯಲ್ಲಿ ಮದುವೆಯಾದಾಕ್ಷಣ ಕೆಲಸ ಬಿಡುವುದು ಉತ್ತಮ ನಿರ್ಧಾರವಲ್ಲ. ಭವಿಷ್ಯದಲ್ಲಿ ಒಂಟಿಯಾಗಿ ಜೀವಿಸುವಾಗ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲದಂತೆ ಇರುವುದು ಅಗತ್ಯ.

ಜಾಗೃತಿ ಮೂಡಿಸಿ: ಕೆಲವು ಯುವತಿಯರು ಮದುವೆಗೆ ಮುನ್ನ ತಂದೆ, ಬಳಿಕ ಗಂಡನನ್ನು ಹಣಕಾಸಿನ ವಿಚಾರಕ್ಕೆ ಅವಲಂಬಿಸುತ್ತಾರೆ. ಇದೇ ಕಾರಣಕ್ಕೆ ಅವರಿಗೆ ಹಣಕಾಸಿನ ಉಳಿತಾಯ-ಹೂಡಿಕೆ ವಿಷಯದ ಬಗ್ಗೆ ಜ್ಞಾನ ಇರುವುದಿಲ್ಲ. ಅವರ ಮೇಲಿನ ಈ ರೀತಿಯ ಅವಲಂಬನೆಯು ಅಂತಹ ವ್ಯಕ್ತಿಗಳ ಅಲಭ್ಯತೆಯ ಸಂದರ್ಭದಲ್ಲಿ ಕಷ್ಟವಾಗುತ್ತದೆ. ಹಣ ಯಾಕೆ ಉಳಿಸಬೇಕು? ಯಾಕೆ ಆಸ್ತಿ ಮೇಲೆ ಹೂಡಿಕೆ ಮಾಡಬೇಕೆಂಬ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. ಇವೆಲ್ಲ ಜ್ಞಾನವನ್ನು ಒಮ್ಮೆಲೆ ಹೊಂದುವುದು ಅಸಾಧ್ಯ. ಆದರೆ, ತಜ್ಞರ ಸಲಹೆ ಪಾಲಿಸಿದಾಗ ಇಂತಹ ವಿಚಾರಗಳು ಅರ್ಥವಾಗುತ್ತವೆ. ಆರ್ಥಿಕ ವಿಚಾರದಲ್ಲಿ ನೀವು ಯಾರ ಮೇಲಾದರೂ ಅವಲಂಬನೆ ಆಗುವುದು ತಪ್ಪಲಿದೆ ಎನ್ನುತ್ತಾರೆ ತಜ್ಞರು.

ನಿಮ್ಮ ಹೆಸರಿನಲ್ಲಿರಲಿ ಆಸ್ತಿ: ಅನೇಕ ಸಮೀಕ್ಷೆಗಳು ತೋರಿಸುವಂತೆ ಮಹಿಳೆ ಕೆಲಸ ಮಾಡುತ್ತಿದ್ದರೂ, ಆರ್ಥಿಕ ವಿಷಯದಲ್ಲಿ ಪುರುಷರೇ ಪ್ರಾಬಲ್ಯರಾಗಿರುತ್ತಾರೆ. ಇದೇ ಕಾರಣಕ್ಕೆ ಹೂಡಿಕೆ ಮತ್ತು ಆರ್ಥಿಕ ವಹಿವಾಟಿನಲ್ಲಿ ಅವರೇ ನಿರ್ಧಾರ ನಡೆಸುತ್ತಾರೆ. ಆದರೆ, ಇದು ಬದಲಾಗಬೇಕು. ಮಹಿಳೆಯರು ಮಹಿಳೆಯರಿಗೆ ಈ ವಿಷಯದಲ್ಲಿ ಸ್ಪೂರ್ತಿಯಾಗಬೇಕು. ಅನೇಕ ಅಧ್ಯಯನಗಳು ತೋರಿಸುವಂತೆ ರಿಯಲ್​ ಎಸ್ಟೇಟ್​ ಮತ್ತು ಇತರೆ ಆಸ್ತಿಗಳನ್ನು ಹೊಂದುತ್ತಿರುವ ಮಹಿಳೆಯರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ನಿಮ್ಮದೇ ಆಸ್ತಿ ಹೊಂದಿ. ನಿಮ್ಮದೇ ಸಂಪಾದನೆಯಲ್ಲಿ ನಿಮ್ಮ ಹೆಸರಿನಲ್ಲಿ ದಾಖಲಾತಿ ಹೊಂದಬೇಕು. ಆಗ ನಿಮ್ಮಲ್ಲೂ ಒಂದು ಆತ್ಮಸ್ಥೈರ್ಯ ಮೂಡುತ್ತದೆ. ಈ ಆತ್ಮವಿಶ್ವಾಸ ಭವಿಷ್ಯದ ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮನ್ನು ಎದ್ದು ನಿಲ್ಲಲು ಸಾಧ್ಯವಾಗಿಸುತ್ತದೆ.

  • ಇದರ ಹೊರತಾಗಿ ಈ ವಿಷಯದಲ್ಲೂ ಮಹಿಳೆಯರು ಮುಂಜಾಗ್ರತೆ ಹೊಂದುವುದು ಅಗತ್ಯ.
  • ಮಹಿಳೆ ತಮ್ಮ ಹೆಸರಿನಲ್ಲಿ ವೈದ್ಯಕೀಯ ವಿಮೆ ಹೊಂದಬೇಕು. ಅನಿರೀಕ್ಷಿತ ಆರೋಗ್ಯ ಸಮಸ್ಯೆ ಸಂದರ್ಭದಲ್ಲಿ ಹಣಕಾಸಿನ ಬಿಕ್ಕಟ್ಟಿನಿಂದ ಇದು ರಕ್ಷಿಸುತ್ತದೆ.
  • ನಿಮ್ಮ ಗಂಡ, ಅತ್ತೆ-ಮಾವ/ಕುಟುಂಬದ ಇತರೆ ಸದಸ್ಯರು ಯಾವುದೇ ದಾಖಲಾತಿಗೆ ಸಹಿ ಹಾಕುವಂತೆ ತಿಳಿಸಿದಾಗ ಕಣ್ಮುಚ್ಚಿ ಮಾಡಬೇಡಿ. ಇದನ್ನು ಓದಿದ ಬಳಿಕವೇ ಈ ಸಂಬಂಧ ನಿರ್ಧಾರ ಮಾಡಿ. ಅಲ್ಲದೇ ಕೆಲವು ಬಾರಿ ಇಂತಹ ದಾಖಲಾತಿ ವಿಚಾರದಲ್ಲಿ ಸಂಬಂಧಿಸಿದ ತಜ್ಞರ ಸಲಹೆ ಪಡೆಯುವುದರಲ್ಲಿ ಕೂಡ ಯಾವುದೇ ತಪ್ಪಿಲ್ಲ.
  • ಮಹಿಳೆ ಹುಟ್ಟುಹಬ್ಬ/ಹೊಸ ಸಂಬಂಧದ ಆರಂಭದಲ್ಲಿ ನೀಡುವ ಉಡುಗೊರೆಗಳನ್ನು ಸ್ತ್ರೀದಾನ ಎಂದು ಕರೆಯಲಾಗುವುದು. ಅವು ಹೂಡಿಕೆ, ರಿಯಲ್​ ಎಸ್ಟೇಟ್​, ಪರಂಪರೆ, ಹಣ ಅಥವಾ ಬಂಗಾರದ ರೂಪದಲ್ಲಿ ಇರಬಹುದು. ಇವುಗಳನ್ನು ರಕ್ಷಿಸುವುದು ಮತ್ತು ಅದರ ದಾಖಲಾತಿ ಕಾಪಾಡುವುದು ಕೂಡ ಅವಶ್ಯಕ.

ಇದನ್ನೂ ಓದಿ: ಸ್ಟಾಕ್​ ಮಾರ್ಕೆಟ್​ನಲ್ಲಿ ಹೂಡಿಕೆ, ಲಾಭ - ನಷ್ಟ ಅಷ್ಟೇ ಅಲ್ಲ.. ಇಲ್ಲಿದೆ ಅಪಾರ ಪ್ರಮಾಣದ ಉದ್ಯೋಗಾವಕಾಶ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.