ETV Bharat / sukhibhava

ಫಲವತ್ತತೆ ವಿಷಯಕ್ಕೆ ಬಂದಾಗ ವಯಸ್ಸು ಏಕೆ ಮುಖ್ಯವಾಗುತ್ತದೆ...? - ಮಹಿಳೆಯರ ಫಲವತ್ತತೆ

ಪುರುಷರು ಮತ್ತು ಮಹಿಳೆಯರ ಫಲವತ್ತತೆ ಮೇಲೆ ವಯಸ್ಸು ವಿಭಿನ್ನ ಪರಿಣಾಮವನ್ನು ಬೀರುತ್ತದೆ. ಈ ಕುರಿತು ತಿಳುವಳಿಕೆ ಹೊಂದಿದ್ದರೆ ಇದು ಗರ್ಭಧರಿಸಲು ಸಹಾಯ ಮಾಡುತ್ತದೆ ಮತ್ತು ಮಗುವಿನ ಆರೋಗ್ಯವನ್ನೂ ಉತ್ತಮ ಸ್ಥಿತಿಯಲ್ಲಿ ಇಡುತ್ತದೆ.

age-matters-for-fertility
age-matters-for-fertility
author img

By

Published : May 5, 2021, 10:50 PM IST

ಹೈದರಾಬಾದ್: ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ವಯಸ್ಸು ಫಲವತ್ತತೆ (fertility) ಮೇಲೆ ಪರಿಣಾಮ ಬೀರುತ್ತದೆ. ಪುರುಷರು ಮತ್ತು ಮಹಿಳೆಯರ ಫಲವತ್ತತೆ ಮೇಲೆ ವಯಸ್ಸು ವಿಭಿನ್ನ ಪರಿಣಾಮವನ್ನು ಬೀರುತ್ತದೆ.

ಒಬ್ಬ ಮಹಿಳೆ ನಿರ್ದಿಷ್ಟ ಸಂಖ್ಯೆಯ ಮೊಟ್ಟೆಗಳೊಂದಿಗೆ ಜನಿಸುತ್ತಾಳೆ. ಅದು ಸ್ವಲ್ಪ ಸಮಯದ ಬಳಿಕ ಖಾಲಿಯಾಗುತ್ತದೆ ಮತ್ತು ಅದಾದ ಬಳಿಕ ಆಕೆಯ ದೇಹ ಯಾವುದೇ ಮೊಟ್ಟೆಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ. ಆದರೆ ಪುರುಷರು ಮಾತ್ರ ತಮ್ಮ ಇಡೀ ಜೀವನದಲ್ಲಿ ವೀರ್ಯಾಣುಗಳನ್ನು ಉತ್ಪಾದಿಸಬಹುದು.

ಆದ್ದರಿಂದ ಪುರುಷರಿಗೆ ಹೋಲಿಕೆಗೆ ಹೋಲಿಸಿದರೆ ಮಹಿಳೆಯರ ಗರ್ಭಧಾರಣೆ ಅವಧಿ ಹಾಗೂ ಫಲವತ್ತತೆಯ ಅವಧಿ ಚಿಕ್ಕದಾಗಿರುತ್ತದೆ.

20ರ ದಶಕದಲ್ಲಿ ಮಹಿಳೆಯರ ಫಲವತ್ತತೆ:

ತಜ್ಞರ ಪ್ರಕಾರ, ಮಹಿಳೆಯು ಆರೋಗ್ಯಕರ ಗರ್ಭಧಾರಣೆಯನ್ನು ಹೊಂದಲು ಇದು ಸೂಕ್ತವಾದ ವಯಸ್ಸು. ಮಹಿಳೆಯರು ಹೆಚ್ಚು ಫಲವತ್ತಾಗಿರುವ ವಯಸ್ಸು ಇದು. ಈ ವಯಸ್ಸಿನ ಅವಧಿಯಲ್ಲಿ ಗರ್ಭಧಾರಣೆಯ ಕೆಲವು ಉತ್ತಮ ಅನುಕೂಲಗಳು ಹೀಗಿವೆ:

  • ನಿಮ್ಮ ಮೊಟ್ಟೆಗಳು ಆನುವಂಶಿಕ ವೈಪರೀತ್ಯಗಳನ್ನು ಹೊಂದುವ ಸಾಧ್ಯತೆ ಕಡಿಮೆಯಿರುವುದರಿಂದ, ನಿಮ್ಮ ಮಗುವಿಗೆ ಡೌನ್ ಸಿಂಡ್ರೋಮ್, ಥಲಸ್ಸೆಮಿಯಾ ಮುಂತಾದ ಯಾವುದೇ ಆನುವಂಶಿಕ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳು ಕಡಿಮೆ.
  • ಗರ್ಭಪಾತದ ಅಪಾಯವು ಕೇವಲ 10 ಪ್ರತಿಶತದಷ್ಟಿರುತ್ತದೆ.
  • ನೀವು ಕಡಿಮೆ ಜನನ ತೂಕ ಹೊಂದಿರುವ ಅಥವಾ ಅಕಾಲಿಕ ಮಗುವನ್ನು ಹೊಂದುವ ಸಾಧ್ಯತೆ ಕಡಿಮೆ.
  • ಗರ್ಭಾವಸ್ಥೆಯ ಸಂದರ್ಭದಲ್ಲಿ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಯಾವುದೇ ಆರೋಗ್ಯ ತೊಂದರೆಗಳ ಕಡಿಮೆ ಅಪಾಯವಿದೆ.

ಈ ಹಂತದ ಅನಾನುಕೂಲಗಳು ಹೀಗಿವೆ:

  • ಮೊದಲ ಗರ್ಭಧಾರಣೆಯಲ್ಲಿ, ಗರ್ಭಧಾರಣೆಯ ತೊಡಕು, ಪ್ರಿ ಎಕ್ಲಾಂಪ್ಸಿಯಾದ ಅಪಾಯವು ಹೆಚ್ಚಾಗುತ್ತದೆ.
  • ನೀವು ಪಿಸಿಒಡಿ ಅಥವಾ ಗರ್ಭಾಶಯದ ಫೈಬ್ರಾಯ್ಡ್‌ಗಳನ್ನು ಹೊಂದಿದ್ದರೆ ಅಥವಾ ಇತರ ಯಾವುದೇ ವೈದ್ಯಕೀಯ ಸ್ಥಿತಿಯನ್ನು ಹೊಂದಿದ್ದರೆ, ಗರ್ಭಧಾರಣೆ ಜಟಿಲವಾಗಲಿದೆ.
  • ಪುರುಷ ಫಲವತ್ತತೆ ವಿಷಯಕ್ಕೆ ಬಂದರೆ, ಅವರು ಸ್ವಲ್ಪವೂ ಚಿಂತಿಸಬೇಕಾಗಿಲ್ಲ. ಪುರುಷರಲ್ಲಿ ಬಂಜೆತನ ಪತ್ತೆಯಾಗಿದ್ದರೆ ಅದು ಬೊಜ್ಜು, ಅಧಿಕ ರಕ್ತದೊತ್ತಡ, ಲೈಂಗಿಕವಾಗಿ ಹರಡುವ ಯಾವುದೇ ಸೋಂಕು, ಮಧುಮೇಹ ಮತ್ತು ಜೀವನಶೈಲಿಯಿಂದಾಗಿರುತ್ತದೆ.

30ರ ದಶಕದಲ್ಲಿ ಮಹಿಳೆಯರ ಫಲವತ್ತತೆ:

  • ಒಬ್ಬ ಮಹಿಳೆ ತನ್ನ ಜೀವನದ ಈ ಹಂತದಲ್ಲಿ ಗರ್ಭಧರಿಸಲು ಬಯಸಿದರೆ, 30ರ ಹರೆಯದ ಮಹಿಳೆಯರು ತಮ್ಮ ಮೊದಲ ಪ್ರಯತ್ನದಲ್ಲಿ ಗರ್ಭಧರಿಸಲು ಶೇಕಡಾ 30ರಷ್ಟು ಅವಕಾಶಗಳಿವೆ ಎಂದು ಅಧ್ಯಯನವೊಂದು ದೃಢಪಡಿಸಿದೆ.
  • ಆದರೆ ಮೊಟ್ಟೆಗಳ ಗುಣಮಟ್ಟ ಮತ್ತು ಪ್ರಮಾಣ ಕಡಿಮೆಯಾದರೆ ಮಹಿಳೆ 35ಕ್ಕೆ ತಲುಪಿದಾಗ ಫಲವತ್ತತೆ ಕುಸಿಯುತ್ತದೆ.
  • 35ರ ನಂತರ ಸ್ವಾಭಾವಿಕವಾಗಿ ಗರ್ಭಧರಿಸುವ ಸಾಧ್ಯತೆಗಳೂ ಕಡಿಮೆಯಿರುತ್ತದೆ.
  • ಸ್ತ್ರೀ ದೇಹದಲ್ಲಿ ಈ ಹಂತದಲ್ಲಿ ಕೋಶಕ-ಉತ್ತೇಜಿಸುವ ಹಾರ್ಮೋನ್ ಹೆಚ್ಚಿದರೆ ಅವಳಿ ಅಥವಾ ತ್ರಿವಳಿಗಳನ್ನು ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ.

30ರ ದಶಕದಲ್ಲಿ ಗರ್ಭಧರಿಸುವ ಅಪಾಯಗಳು ಹೀಗಿವೆ:

  • ಸಿ-ಸೆಕ್ಷನ್ ಹೆರಿಗೆಯಾಗುವ ಸಾಧ್ಯತೆ ಹೆಚ್ಚು.
  • ನವಜಾತ ಶಿಶುವಿನಲ್ಲಿ ಆನುವಂಶಿಕ ಸಮಸ್ಯೆಗಳ ಹೆಚ್ಚಿನ ಸಾಧ್ಯತೆ.
  • ಗರ್ಭಪಾತದ ಪ್ರಮಾಣ ಹೆಚ್ಚು.

40ರ ದಶಕ ಮತ್ತು ಅದರ ಬಳಿಕ ಮಹಿಳೆಯರ ಫಲವತ್ತತೆ:

  • ಈ ವಯಸ್ಸಿನಲ್ಲಿ ಮಹಿಳೆಯರು ಗರ್ಭಧರಿಸಲು ಅಸಾಧ್ಯವಲ್ಲ, ಆದರೆ ಪ್ರತಿ ಅಂಡೋತ್ಪತ್ತಿ ಚಕ್ರದಲ್ಲಿ, ಗರ್ಭಧಾರಣೆಯ ಪ್ರಮಾಣವು 40 ಮತ್ತು 44ರ ವಯಸ್ಸಿನ ನಡುವೆ 5 ಪ್ರತಿಶತಕ್ಕೆ ಇಳಿಯುತ್ತದೆ. ಆದರೆ, 45 ವರ್ಷಕ್ಕೆ ಅದು 1 ಪ್ರತಿಶತಕ್ಕೆ ಇಳಿಯುತ್ತದೆ.
  • ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಪ್ರಕಾರ, ಜಗತ್ತಿನಾದ್ಯಂತ ಅರ್ಧದಷ್ಟು ಮಹಿಳೆಯರು ತಮ್ಮ 40ರ ದಶಕದಲ್ಲಿ ಫಲವತ್ತತೆ ಸಮಸ್ಯೆಗೆ ಒಳಗಾಗುತ್ತಾರೆ. ಈ ವಯಸ್ಸಿನಲ್ಲಿ ಹೆಣ್ಣು ಗರ್ಭಧರಿಸಲು ಯಾವುದೇ ಖಚಿತತೆ ಇರುವುದಿಲ್ಲ.
  • ಪುರುಷರಲ್ಲಿ ವೀರ್ಯಾಣುಗಳ ಪ್ರಮಾಣವೂ ಈ ವಯಸ್ಸಿನಲ್ಲಿ ಕಡಿಮೆಯಾಗುವುದರಿಂದ ಪುರುಷರ ಫಲವತ್ತತೆ ಕೂಡ ಈ ವಯಸ್ಸಿನಲ್ಲಿಯೇ ಕುಸಿಯುತ್ತದೆ.

ನಿಮಗೆ ಸರಿಯಾದ ಸಮಯ ಎಂದು ನೀವು ಭಾವಿಸಿದರೆ ಅದುವೇ ಗರ್ಭಿಣಿಯಾಗಲು ಸೂಕ್ತ ಸಮಯ. ನಿಮ್ಮ ವೃತ್ತಿಜೀವನ ಮತ್ತು ಹಣಕಾಸಿನ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದ ಬಳಿಕವೇ ಈ ಕುರಿತರು ಯೋಚಿಸುವುದು ಉತ್ತಮವಾಗಿದೆ. ಈ ಸಂದರ್ಭದಲ್ಲಿ ನಿಮ್ಮ ವೈದ್ಯರು ಅಥವಾ ಫಲವತ್ತತೆ ತಜ್ಞರನ್ನು ಸಂಪರ್ಕಿಸಿ. ಫಲವತ್ತತೆ ತಜ್ಞರ ಸಹಾಯದಿಂದ ನೀವು ತಾಯಿಯಾಗಲು ಸಿದ್ಧವಾಗುವ ತನಕ ನಿಮ್ಮ ಫಲವತ್ತತೆಯನ್ನು ಕಾಪಾಡುವ ಮಾರ್ಗಗಳು ಮತ್ತು ವಿಧಾನಗಳ ಕುರಿತು ಸಲಹೆ ಪಡೆಯಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.