ಲಂಡನ್: ಕೋವಿಡ್ ಸೋಂಕು ಗುಣವಾದ ಬಳಿಕವೂ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿ ತೀವ್ರ ಆಯಾಸ ಅನುಭವಿಸುತ್ತಾರೆ. ಈ ಆಯಾಸದಿಂದಾಗಿ ಅವರಲ್ಲಿ ಕೆಲಸ ಮಾಡುವ ಉತ್ಸಾಹ ಕಂಡು ಬರುವುದಿಲ್ಲ. ಕೋವಿಡ್ ಸಮಯದಲ್ಲಿ ಕಾಡುವ ಈ ಆಯಾಸವು ದೀರ್ಘ ಕೋವಿಡ್ ಕಾಲದಲ್ಲಿ ಇನ್ನಿಲ್ಲದಂತೆ ಕಾಡುತ್ತಿದೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಹೊಸ ಅಧ್ಯಯನ ತಿಳಿಸಿದೆ. ಕೋವಿಡ್ ಬಳಿಕ ವ್ಯಕ್ತಿಯ ನರ ವ್ಯವಸ್ಥೆಯ ಪ್ರಮುಖ ಪ್ರದೇಶದಲ್ಲಿ ಕ್ರಿಯಾಶೀಲತೆ ಕಡಿಮೆಯಾಗುವುದು ಈ ರೀತಿ ಆಯಾಸ್ಕೆ ಕಾರಣವಾಗಿದೆ. ದೀರ್ಘ ಕೋವಿಡ್ನಲ್ಲಿ ಆಯಾಸವೂ ಸಾಮಾನ್ಯ ಕಾರಣವಾಗಿದೆ ಎಂದು ಸಂಶೋಧನೆ ತಿಳಿಸಿದೆ.
ಬ್ರಿಟನ್ನ ನ್ಯೂ ಕ್ಯಾಸಲ್ ಯುನಿವರ್ಸಿಟಿಯ ಅಧ್ಯಯನ ತಂಡ ಈ ಸಂಶೋಧನೆ ನಡಿಸಿದೆ. ಇದರಲ್ಲಿ ಕೋವಿಡ್ ಸೋಂಕಿನ ಬಳಿಕ ಆಯಾಸದಿಂದ ಬಳಲುತ್ತಿರುವವನ್ನು ನ್ಯೂರೋಸೈಕೋಲಾಜಿಕಲ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರನ್ನು ಆಯಾಸ ಹೊಂದಿಲ್ಲದವರೊಂದಿಗೆ ಹೋಲಿಕೆ ಮಾಡಲಾಗಿದೆ. ಈ ಅಧ್ಯಯನದಲ್ಲಿ ಕೋವಿಡ್ ಬಳಿಕದ ಆಯೋಸ ಹೊಂದಿರುವವರ ನರ ವ್ಯವಸ್ಥೆಯಲ್ಲಿ ಅದರಲ್ಲಿ ಮೂರ ನಿರ್ದಿಷ್ಟ ಪ್ರದೇಶದಲ್ಲಿ ಕ್ರಿಯಾಶೀಲತೆ ಇಲ್ಲದಿರುವುದನ್ನು ಕಾಣಬಹುದಾಗಿದೆ ಎಂದು ಅಧ್ಯಯನದ ಫಲಿತಾಂಶ ತಿಳಿಸಿದೆ.
ನರಗಳ ವ್ಯವಸ್ಥೆ ಮೇಲೆ ಪರಿಣಾಮ: ಮಿದುಳಿನ ನಿರ್ದಿಷ್ಟ ಪ್ರದೇಶದಲ್ಲಿ ನಿಧಾನ ಪ್ರತಿಕ್ರಿಯೆಗಳನ್ನು ಕಾಣಬಹುದು. ಅದರಲ್ಲೂ ವಿಶೇಷವಾಗಿ ಕೊರ್ಟಿಕಲ್ ಸರ್ಕ್ಯೂಟ್ ಬಳಿಕ ಈ ನಿಷ್ಕ್ರಿಯತೆ ಕಾಣಲಿದೆ ಇದರಿಂದಲೇ ಆಯಾಸ ಹೆಚ್ಚುತ್ತದೆ. ರಕ್ತದೊತ್ತಡ ಪ್ರಕ್ರಿಯೆ ಮತ್ತು ಉಸಿರಾಟ ನಿಯಂತ್ರಿಸುವ ನಗರಗಳು ದುರ್ಬಲಗೊಂಡಿರುವುದು ಕಂಡು ಬಂದಿದೆ. ಇದು ದೇಹದ ವಿವಿಧ ಪ್ರಕ್ರಿಯೆಗಳ ಮೇಲೆ ವ್ಯಾಪಾಕ ಪರಿಣಾಮ ಬೀರಿದೆ.
ಇದೇ ವೇಳೆ ಸ್ನಾಯುಗಳ ಅನಿಯಂತ್ರಣವನ್ನು ಕಾಣಬಹುದಾಗಿದೆ. ಕೋವಿಡ್ ಬಳಿಕ ಚೇತರಿಕೆ ಕಂಡ ವ್ಯಕ್ತಿ ವ್ಯಾಯಾಮದ ಬಳಿಕ ಸ್ನಾಯುವಿನ ಫೈಬರ್ಗಳು ಸುಲಭವಾಗಿ ಆಯಾಸಕ್ಕೆ ಒಳಗಾಗುವುದು ಕೂಡ ಕಂಡು ಬಂದಿದೆ.
ಈ ಅನಿಯಂತ್ರಣಗಳ ಫಲಿತಾಂಶಗಳು ದೀರ್ಘ ಕೋವಿಡ್ ಆಯಾಸವನ್ನು ಹೊಂದಿದೆ. ಇದು ಕೋವಿಡ್ ಬಳಿಕ ನರಗಳ ವ್ಯವಸ್ಥೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅಧ್ಯಯನಕಾರ ಡಾ ಡೆಮೆಟ್ರಿಸ್ ತಿಳಿಸಿದ್ದಾರೆ. ಈ ಅಧ್ಯಯನವನ್ನು ಬ್ರೈನ್ ಕಮ್ಯೂನಿಕೇಷನ್ನಲ್ಲಿ ಸಂಶೋಧಕರು ಪ್ರಕಟಿಸಿದ್ದಾರೆ.
ಕೋವಿಡ್ ಬಳಿಕದ ಆಯಾಸದಿಂದ ಬಳಲುತ್ತಿರುವವರಲ್ಲಿನ ನಡುವಳಿಕೆ ಮತ್ತು ನ್ಯೂರೋಸೈಕಾಲಾಜಿಕಲ್ ಪರೀಕ್ಷೆಯನ್ನು ಮಾಡಲಾಗಿದೆ. ಇದಕ್ಕಾಗಿ 37 ಮಂದಿ ಸ್ವಯಂ ಸೇವಕರನ್ನು ರೀಕ್ಷೆಗೆ ಒಳಪಡಡಿಸಲಾಗಿದೆ. 52 ನಿಯಂತ್ರಿಕ ಅಂಶಗಳ ಮೇಲೆ ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ಈ ಅಧ್ಯಯನ ಹೋಲಿಕೆ ಮಾಡಲಾಗುತ್ತಿದೆ. 33 ದತ್ತಾಂಶದಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ.
ನರಗಳ ವ್ಯವಸ್ಥೆಗಳ ಸುಧಾರಣೆ ಮಾದರಿಯು ಕೋವಿಡ್ ಆಯಾಸವನ್ನು ಹೇಗೆ ಅಭೊವೃದ್ದಿ ಮಾಉತ್ತದೆ ಎಂಬುದನ್ನು ತಂಡ ನೀಡಿದೆ. ಆಯಾಸಕ್ಕೆ ಸಂಬಂಧಿಸಿದ ರಕ್ತದಲ್ಲಿನ ಉರಿಯೂತದ ಗುರುತುಗಳನ್ನು ಅಳೆಯುವ ಮೂಲಕ ಚಿಕಿತ್ಸೆಯ ಪರಿಣಾಮಗಳನ್ನು ಅಧ್ಯಯನವು ಪರಿಶೀಲಿಸುತ್ತದೆ ಮತ್ತು ಮುಖ್ಯವಾಗಿ ಇದು ಆಯಾಸದ ಲಕ್ಷಣಗಳನ್ನು ಸುಧಾರಿಸುತ್ತದೆ.
ಇದನ್ನೂ ಓದಿ: ಕಡಿಮೆ ವಿಟಮಿನ್ ಡಿ ಪ್ರಮಾಣದಿಂದ ದೀರ್ಘ ಕೋವಿಡ್ ಅಪಾಯ: ಅಧ್ಯಯನ