ETV Bharat / sukhibhava

ಬೇಸಿಗೆ ಬಂತು: ಬೆವರುಸಾಲೆ ನಿರ್ಮೂಲನೆಗೆ ಮನೆ ಮದ್ದು ಏನು? - ಬೆವರುಸಾಲೆ ನಿರ್ಮೂಲನೆಗೆ ಮನೆ ಮದ್ದು ಏನು?

ಈ ಬೆವರುಸಾಲೆಗೆ ದುಬಾರಿ ಚಿಕಿತ್ಸೆಯ ಅಗತ್ಯವಿಲ್ಲ. ಮನೆಮದ್ದಿನಿಂದ ಮತ್ತು ಕೆಲವು ಮುನ್ನೆಚ್ಚರಿಕಾ ಕ್ರಮಗಳಿಂದ ಬೆವರುಸಾಲೆ ಸಮಸ್ಯೆಯನ್ನು ಪರಿಹರಿಸಬಹುದು. ಪ್ರಕೃತಿ ಚಿಕಿತ್ಸೆಯಲ್ಲಿ ಇದಕ್ಕೆ ಕೆಲವು ಪರಿಹಾರಗಳಿವೆ. ಅವುಗಳಿಂದ ಈ ಬೆವರುಸಾಲೆ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ಹೇಳುತ್ತಾರೆ ಇಂದೋರ್‌ನ ಪ್ರಕೃತಿ ಮತ್ತು ಹೋಮಿಯೋಪತಿ ವೈದ್ಯೆ ಡಾ.ಸ್ಮಿತಾ ಕಾಂಬಳೆ..

heat rashes
ಬೆವರುಸಾಲೆ
author img

By

Published : Mar 26, 2022, 3:18 PM IST

ಬೇಸಿಗೆ ಕಾಲದ ಉರಿ ಜನರನ್ನು ಕಾಡಲಾರಂಭಿಸಿದೆ. ಬೇಸಿಗೆ ಪ್ರಾರಂಭವಾಯಿತೆಂದರೆ ಆರೋಗ್ಯದ ಸಮಸ್ಯೆಗಳು ಅದರಲ್ಲೂ ಚರ್ಮಕ್ಕೆ ಸಂಬಂಂಧಿಸಿದ ಸಮಸ್ಯೆಗಳು ನಮ್ಮನ್ನು ಬಾಧಿಸಲು ಸಾಲಿನಲ್ಲಿ ನಿಂತಿರುತ್ತವೆ. ಅವುಗಳಲ್ಲೂ ಬೆವರುಸಾಲೆ ಬೇಸಿಗೆಯಲ್ಲಿ ತುಂಬಾ ಸಾಮಾನ್ಯವಾದ ಚರ್ಮದ ಸಮಸ್ಯೆ. ಯಾರೇ ಆಗಿರಲಿ ಸಣ್ಣವರಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಬೆವರುಸಾಲೆ ಸಮಸ್ಯೆಯಿಂದ ಬಳಲಿದವರೆ.

ತುಂಬಾ ಸೂಕ್ಷ್ಮವಾಗಿರುವ ಚರ್ಮವಿರುವವರು ಈ ಬೆವರುಸಾಲೆಯಿಂದ ಹೆಚ್ಚು ಕಿರಿಕಿರಿ ಅನುಭವಿಸಿರುತ್ತಾರೆ. ಬೆವರುಸಾಲೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯಾದರೂ ಕೆಲವು ಮುನ್ನೆಚ್ಚರಿಕಾ ಕ್ರಮ ಅಥವಾ ಮನೆಮದ್ದುಗಳ ಸಹಾಯದಿಂದ ಇದನ್ನು ತಡೆಯಬಹುದು. ಆದರೆ, ಈ ಬೆವರುಸಾಲೆಯನ್ನು ತಡೆಗಟ್ಟುವಿಕೆ ಬಗ್ಗೆ ಮಾತನಾಡುವ ಮೊದಲು, ಏನಿದು ಬೆವರುಸಾಲೆ? ಯಾಕೆ ಆಗುತ್ತದೆ? ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವುದು ಮುಖ್ಯ.

ಬೆವರುಸಾಲೆ ಎಂದರೇನು? : ಮುಂಬೈನ ಡರ್ಮಾ ಕ್ಲಿನಿಕ್‌ನ ಚರ್ಮರೋಗ ತಜ್ಞ ಡಾ.ಸಬಾ ಶೇಖ್ ಹೇಳುವಂತೆ, ಬೆವರುಸಾಲೆ ಬೇಸಿಗೆಯಲ್ಲಿ ಸಾಮಾನ್ಯ. ಸಾಮಾನ್ಯವಾಗಿ ಬೆನ್ನು, ಕುತ್ತಿಗೆ ಮತ್ತು ಎದೆಯ ಮೇಲೆ ಸಣ್ಣ ಕೆಂಪು ಕಜ್ಜಿಗಳ ಹಾಗೆ ಕಾಣಿಸಿಕೊಳ್ಳುತ್ತವೆ. ಹೆಚ್ಚು ತುರಿಕೆ, ಕಿರಿಕಿರಿ ಅಥವಾ ಉರಿ ಇರುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೆವರುವುದು ಹೆಚ್ಚು.

ಆದರೆ, ಕೆಲವೊಮ್ಮೆ ಮಾಲಿನ್ಯ, ಧೂಳು-ಮಣ್ಣು, ಸತ್ತ ಚರ್ಮದ ಜೀವಕೋಶಗಳು ಅಥವಾ ಯಾವುದೇ ಬ್ಯಾಕ್ಟೀರಿಯಾದ ಪರಿಣಾಮದಿಂದಾಗಿ ಬೆವರು ಗ್ರಂಥಿಗಳ ಬಾಯಿ ಮುಚ್ಚಲ್ಪಡುತ್ತದೆ. ಆಗ ಬೆವರು ಚರ್ಮದ ಹೊರಗಡೆ ಬರುವುದಿಲ್ಲ. ಇದರಿಂದಾಗಿ ಸಣ್ಣ ಕೆಂಪು ದದ್ದುಗಳು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತವೆ. ಇದು ಗಂಭೀರ ಸಮಸ್ಯೆಯಲ್ಲದಿದ್ದರೂ, ತುರಿಕೆ ಮತ್ತು ಸುಡುವಿಕೆ ವ್ಯಕ್ತಿಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ.

ಬೆವರುಸಾಲೆಗೆ ಮನೆಮದ್ದು: ಈ ಬೆವರುಸಾಲೆಗೆ ದುಬಾರಿ ಚಿಕಿತ್ಸೆಯ ಅಗತ್ಯವಿಲ್ಲ. ಮನೆಮದ್ದಿನಿಂದ ಮತ್ತು ಕೆಲವು ಮುನ್ನೆಚ್ಚರಿಕಾ ಕ್ರಮಗಳಿಂದ ಬೆವರುಸಾಲೆ ಸಮಸ್ಯೆಯನ್ನು ಪರಿಹರಿಸಬಹುದು. ಪ್ರಕೃತಿ ಚಿಕಿತ್ಸೆಯಲ್ಲಿ ಇದಕ್ಕೆ ಕೆಲವು ಪರಿಹಾರಗಳಿವೆ. ಅವುಗಳಿಂದ ಈ ಬೆವರುಸಾಲೆ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ಹೇಳುತ್ತಾರೆ ಇಂದೋರ್‌ನ ಪ್ರಕೃತಿ ಮತ್ತು ಹೋಮಿಯೋಪತಿ ವೈದ್ಯೆ ಡಾ.ಸ್ಮಿತಾ ಕಾಂಬಳೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.

ಅಲೋವೆರಾ ಹಚ್ಚುವುದರಿಂದ ಬೆವರುಸಾಲೆ ಸಮಸ್ಯೆಗೆ ಸಾಕಷ್ಟು ಪರಿಹಾರ ಸಿಗುತ್ತದೆ. ತಾಜಾ ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಲೋವೆರಾ ಜೆಲ್ ಅನ್ನು ಬೆವರುಸಾಲೆ ಮೇಲೆ 15 ರಿಂದ 25 ನಿಮಿಷಗಳ ಕಾಲ ಹಚ್ಚಿ, ನಂತರ ನೀರಿನಿಂದ ತೊಳೆದರೆ ಬೆವರುಸಾಲೆಗೆ ಉತ್ತಮ ಪರಿಹಾರ ದೊರೆಯುತ್ತದೆ.

ಮುಲ್ತಾನಿ ಮಿಟ್ಟಿ: ಮುಲ್ತಾನಿ ಮಿಟ್ಟಿಯೂ ಕೂಡ ಬೆವರುಸಾಲೆ ಸಮಸ್ಯೆಗೆ ಸೂಕ್ತ ಮದ್ದು ಎಂದು ಸ್ಮಿತಾ ಹೇಳುತ್ತಾರೆ. ಮುಲ್ತಾನಿ ಮಿಟ್ಟಿಗೆ ರೋಸ್ ವಾಟರ್ ಬೆರೆಸಿ ಬೆವರುಸಾಲೆ ಇರುವ ಜಾಗಕ್ಕೆ ಹಚ್ಚುವುದರಿಂದ ಬೆವರುಸಾಲೆ ಮತ್ತು ಅದರಿಂದಾದ ಉರಿ ಮತ್ತು ತುರಿಕೆ ನಿವಾರಣೆಯಾಗುತ್ತದೆ.

ಹಸಿ ಆಲೂಗೆಡ್ಡೆಯನ್ನು ಚೆನ್ನಾಗಿ ಹೆಚ್ಚಿ, ಅದರ ರಸವನ್ನು ತೆಗೆದು ಬೆವರುಸಾಲೆ ಇರುವ ಜಾಗಕ್ಕೆ ಹಚ್ಚುವುದು ತುಂಬಾ ಪ್ರಯೋಜನಕಾರಿ. ಆಲೂಗೆಡ್ಡೆಯ ರಸವನ್ನು ಹಚ್ಚಿ ಸುಮಾರು 10 ರಿಂದ 15 ನಿಮಿಷಗಳ ಕಾಲ ಬಿಡಬೇಕು ಮತ್ತು ನಂತರ ಆ ಸ್ಥಳವನ್ನು ತಣ್ಣೀರಿನಿಂದ ಸ್ವಚ್ಛಗೊಳಿಸಬೇಕು. ಇದು ಬೆವರುಸಾಲೆ ಸಮಸ್ಯೆಯನ್ನು ಕಡಿಮೆ ಮಾಡುವುದಲ್ಲದೆ ತ್ವಚೆಗೆ ಇನ್ನೂ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

ಗೋರಂಟಿ ಪೇಸ್ಟ್ ಅನ್ನು ಬೆವರುಸಾಲೆಗೆ ಮದ್ದಾಗಿ ಬಳಸಬಹುದು. ವಾಸ್ತವವಾಗಿ ಗೋರಂಟಿ ನೈಸರ್ಗಿಕ ಆ್ಯಂಟಿಬ್ಯಾಕ್ಟೀರಿಯಲ್ ಗುಣಲಕ್ಷಣ, ಚರ್ಮವನ್ನು ನೈಸರ್ಗಿಕವಾಗಿ ತಂಪಾಗಿರಿಸುವಂತಹ ಗುಣವನ್ನು ಹೊಂದಿದೆ. ಮೆಹೆಂದಿಯನ್ನು ಹಚ್ಚಿ ದೇಹವನ್ನು ತಂಪಾಗಿರಿಸಿದರೆ ಬೆವರು ಸಾಲೆ ಕಡಿಮೆಯಾಗುತ್ತದೆ.

ಅರಿಶಿನ: ಗೋರಂಟಿಯಂತೆ, ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಸ್ನಾನ ಮಾಡುವ ಮೊದಲು 5 ರಿಂದ 10 ನಿಮಿಷಗಳ ಕಾಲ ಬೆವರುಸಾಲೆ ಇರುವ ಜಾಗಕ್ಕೆ ನೀರು ಅಥವಾ ರೋಸ್ ವಾಟರ್​ನೊಂದಿಗೆ ಮಿಶ್ರಣ ಮಾಡಿದ ಅರಶಿನ ಪೇಸ್ಟ್ ಅನ್ನು ಹಚ್ಚುವುದರಿಂದ ಬೆವರುಸಾಲೆ ಸಮಸ್ಯೆಗೆ ಉತ್ತಮ ಪರಿಹಾರ ಸಿಗಲಿದೆ.

ಸೌತೆಕಾಯಿ ರಸಕ್ಕೆ ಕೆಲವು ಹನಿ ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ ಬೇಸಿಗೆಯಲ್ಲಿ ಬೆವರುಸಾಲೆ ಮೇಲೆ ಹಚ್ಚುವುದರಿಂದ ಸಮಸ್ಯೆಯಿಂದ ಸ್ವಲ್ಪ ರಿಲೀಫ್​ ತೆಗೆದುಕೊಳ್ಳಬಹುದು ಎನ್ನುತ್ತಾರೆ ಡಾ.ಸ್ಮಿತಾ.

ಇದನ್ನೂ ಓದಿ: ಚರ್ಮದ ತ್ವಚೆಗೆ ಕ್ರೀಮ್​ಗಳನ್ನು ಬಳಸುತ್ತಿದ್ದೀರಾ..?: ಇಲ್ಲಿವೆ ಕೆಲವು ಸಲಹೆಗಳು

ತಣ್ಣೀರಿನಿಂದ ಸ್ನಾನ ಮಾಡುವುದರಿಂದ, ಫ್ಯಾನ್ ಅಥವಾ ಇತರ ವಿಧಾನಗಳಿಂದ ಚರ್ಮವನ್ನು ತಂಪಾಗಿರಿಸಲು ಪ್ರಯತ್ನಿಸಿ. ಆದಷ್ಟು ಬೆವರು ಒಣಗುವ ಮತ್ತು ದೇಹದ ಎಲ್ಲಾ ಭಾಗಗಳು ತಾಜಾ ಗಾಳಿಗೆ ತೆರೆದುಕೊಳ್ಳುವಂತಹ ಹಗುರವಾದ, ಸಡಿಲವಾದಂತಹ ಬಟ್ಟೆಗಳನ್ನು ಧರಿಸಿ. ಕಂಕುಳ ಕೆಳಗೆ, ತೊಡೆಯ ಸಂಧಿಗಳು ಮತ್ತು ಬೆನ್ನಿನಂತಹ ಗಾಳಿ ಹೋಗಲು ಸಾಧ್ಯವಾಗದಂತಹ ದೇಹದ ಭಾಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಆ ಭಾಗಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಒಣಗಿಸಿದ ನಂತರ ಈ ಭಾಗಗಳ ಮೇಲೆ ಸುಗಂಧ ರಹಿತ, ಕಡಿಮೆ ಪರಿಮಳ ಅಥವಾ ಔಷಧೀಯ ಟಾಲ್ಕಮ್ ಪೌಡರ್​ಗಳನ್ನು ಹಚ್ಚಿಕೊಳ್ಳಿ.

ಬಳಕೆಗೆ ಮುನ್ನ ಅಲರ್ಜಿಗಳ ಬಗ್ಗೆ ಕಾಳಜಿ ವಹಿಸಿ: ಈ ಮನೆಮದ್ದುಗಳು ತುಂಬಾ ಪರಿಣಾಮಕಾರಿಯಾಗಿದ್ದರೂ, ಅವುಗಳನ್ನು ಅಳವಡಿಸಿಕೊಳ್ಳುವ ಮೊದಲು, ಅವುಗಳನ್ನು ಬಳಸುವುದರಿಂದ ನಿಮಗೆ ಯಾವುದೇ ರೀತಿಯ ಅಲರ್ಜಿಗಳಾಗುವ ಸಾಧ್ಯತೆಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗಿದ್ದರೆ ಆ ವಸ್ತುಗಳನ್ನು ಬಳಸುವುದರಿಂದ ದೂರವಿರಿ. ಇದರ ಹೊರತಾಗಿ, ಸಮಸ್ಯೆ ಹೆಚ್ಚಾದರೆ ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸುವುದು ಉತ್ತಮ ಎಂದು ಹೇಳುತ್ತಾರೆ ಡಾ.ಸ್ಮಿತಾ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.