ETV Bharat / sukhibhava

ದೀರ್ಘ ಕಾಲ ಹೆಲ್ಮೆಟ್​ ಧರಿಸುವುದರಿಂದ ಯುವ ಜನತೆಯಲ್ಲಿ ಹೆಚ್ಚುತ್ತಿದೆ ಕೂದಲ ಸಮಸ್ಯೆ; ಇಲ್ಲಿದೆ ಪರಿಹಾರ - ಹೆಲ್ಮೆಟ್​ ಧರಿಸುವುದು ಕಡ್ಡಾಯ

ಕೂದಲ ಸಮಸ್ಯೆ ಎಂದು ಹೆಲ್ಮೆಟ್​ ಧರಿಸದೇ ಇರುವುದು ಕಾನೂನು ಉಲ್ಲಂಘನೆ. ಇದರ ಬದಲಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ

wearing-helmet-causes-hair-fracture-and-hair-damage-know-how-wear-helmet

author img

By

Published : Aug 9, 2023, 3:22 PM IST

Updated : Aug 9, 2023, 3:41 PM IST

ನವದೆಹಲಿ: ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್​ ಧರಿಸುವುದು ಕಡ್ಡಾಯ. ಇದು ಕೇವಲ ಸಂಚಾರಿ ನಿಯಮವಲ್ಲ. ಇದು ಅಪಘಾತದಿಂದ ಸವಾರನ ರಕ್ಷಣೆ ಮಾಡುವ ಸಾಧನವೂ ಆಗಿದೆ. ಆದರೆ, ದೀರ್ಘ ಕಾಲದ ಹೆಲ್ಮೆಟ್​ ಧರಿಸುವುದರಿಂದ ಕೂದಲಿನ ಸಮಸ್ಯೆ ಕಾಡದೆ ಇರಲಾರದು. ಈ ಕುರಿತು ಎಸ್ ​ಎನ್​ ಮೆಡಿಕಲ್​ ಕಾಲೇಜಿನ ವೈದ್ಯರು ಮಾತನಾಡಿದ್ದಾರೆ.

ದ್ವಿಚಕ್ರ ಸವಾರರಿಗೆ ಹೆಲ್ಮೆಟ್​ ಅತ್ಯವಶ್ಯಕವಾಗಿದೆ. ಇದು ಸುರಕ್ಷ ಸಾಧನವಾಗಿದೆ. ಆದರೆ, ದೀರ್ಘ ಕಾಲ ಹೆಲ್ಮೆಟ್​ ಧರಿಸುವುದು ಕೂದಲು ತುಂಡಾಗಲು ಕಾರಣವಾಗಬಹುದು. ಕೆಲವು ಪ್ರಕರಣದಲ್ಲಿ ಇದು ಹೇರ್​ ಟ್ರಾಮಗೆ ಕೂಡ ಕಾರಣವಾಗಿದೆ. ಈ ರೀತಿಯ ಐದರಿಂದ ಆರು ಪ್ರಕರಣಗಳು ಎಸ್​ಎನ್​ ಮೆಡಿಕಲ್​ ಕಾಲೇಜಿನ ಚರ್ಮ ಮತ್ತು ಚರ್ಮ ಸಂಬಂಧಿ ಸಮಸ್ಯೆಗಳ ವಿಭಾಗ ಒಪಿಡಿಯಲ್ಲಿ ಕಾಣಸಿಗುತ್ತಿದೆ. ರೋಗಿಗಳು ದಿಢೀರ್​ ಎಂದು ತಮ್ಮ ಕೂದಲು ಬೆಳವಣಿಗೆಯಾಗುವುದು ನಿಂತು ಹೋಗಿದೆ ಎಂದು ದೂರಿದ್ದಾರೆ. ರೋಗಿಗಳ ಇತಿಹಾಸ ಕೇಳಿದಾಗ ಹೆಚ್ಚು ಹೆಲ್ಮೆಟ್​ ಧರಿಸುವುದರಿಂದ ಅವರಲ್ಲಿ ಕೂದಲು ನಷ್ಟದ ಸಮಸ್ಯೆ ಕಂಡು ಬಂದಿದೆ ಎಂದಿದ್ದಾರೆ.

ಹೆಚ್ಚುತ್ತಿರುವ ಸಮಸ್ಯೆ: ಪ್ರತಿ ದಿನ ಈ ರೀತಿಯ ಪ್ರಕರಣಗಳು ಒಪಿಡಿಗೆ ಬರುತ್ತಿವೆ. ಕೂದಲು ಉದುರಿ ತಮ್ಮ ಭುಜದ ಮೇಲೆ ಬೀಳುತ್ತಿರುವುದಾಗಿ ರೋಗಿಗಳು ತಿಳಿಸಿದ್ದಾರೆ. ಸ್ನಾನ ಮಾಡುವಾಗ ಹೆಚ್ಚು ಕೂದಲು ತುಂಡಾಗುತ್ತಿವೆ ಎಂದು ಅಲವತ್ತುಕೊಂಡಿದ್ದಾರೆ. ದಿನಕ್ಕೆ 40 ಕಿ.ಮೀ ಅಥವಾ ಅದಕ್ಕಿಂತ ಹೆಚ್ಚು ದೂರವನ್ನು ದ್ವಿಚಕ್ರದಲ್ಲಿ ಸಾಗುವ ಸವಾರರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ. ಹಾಗೆಂದ ಮಾತ್ರಕ್ಕೆ ಹೆಲ್ಮೆಟ್​ ಧರಿಸದಿರಲು ಸಾಧ್ಯವಿಲ್ಲ. ಹೆಲ್ಮೆಟ್​ ಧರಿಸುವುದು ಜೀವ ರಕ್ಷಣೆಗೆ ಎಂದಿದ್ದಾರೆ.

30 ರಿಂದ 45 ವರ್ಷದವರಲ್ಲಿ ಸಮಸ್ಯೆ: ವೈದ್ಯ ಯತೀಂದ್ರ ಸಿಂಗ್​ ಚಹರ್​ ವಿವರಿಸುವಂತೆ, ಶೇ 80ರಷ್ಟು ರೋಗಿಗಳಲ್ಲಿ ಕೂದಲು ನಷ್ಟ, ಕೂದಲು ತುಂಡಾಗುವುದು ಅಥವಾ ತೆಳುವಾಗುವುದು ಸಾಮಾನ್ಯ. ಅದರಲ್ಲೂ 30 ರಿಂದ 45 ವರ್ಷದವರಲ್ಲಿ ಹೆಚ್ಚು. ಈ ಸಮಸ್ಯೆ ಯುವಕರು, ಸೇಲ್ಸ್​ ಮ್ಯಾನ್ ಮತ್ತಿತರರಲ್ಲಿ ಹೆಚ್ಚಿದೆ. ಹೆಲ್ಮೆಟ್​ ಧರಿಸುವುದರಿಂದ ಕೂದಲಿನ ಮಧ್ಯ ಭಾಗದಲ್ಲಿ ಹೆಚ್ಚು ಅಥವಾ ಬುಡದಲ್ಲಿ ಹೆಚ್ಚು ತುಂಡಾಗುತ್ತದೆ. ಇದರಿಂದ ಕೂದಲಿನ ಕಾಂಡಕ್ಕೆ ಹಾನಿಯಾಗುತ್ತದೆ. ಇದು ಟ್ರಾಮಕ್ಕೆ ಕಾರಣವಾಗುತ್ತದೆ.

ಬೆವರಿನಿಂದ ಬ್ಯಾಕ್ಟೀರಿಯಾ: ದೀರ್ಘಕಾಲ ಹೆಲ್ಮೆಟ್​ ಧರಿಸುವುದರಿಂದ ಬೆವರಿನಿಂದ ಕೂದಲು ಒದ್ದೆಯಾಗುತ್ತದೆ. ಇದರಿಂದ ಕೂದಲಿನ ಬುಡ ದುರ್ಬಲವಾಗುತ್ತದೆ. ಇದು ನಿರಂತರವಾಗಿ ಆದಾಗ ಕೂದಲು ತೆಳುವಾಗಿ ಅದರ ಬುಡ ದುರ್ಬಲವಾಗುತ್ತದೆ. ಅಲ್ಲದೆ ಇದು ಇದು ಕೂದಲಿನ ಕಾಂಡವನ್ನು ಕತ್ತರಿಸುತ್ತದೆ. ಪರಿಣಾಮ ಕೂದಲು ತಡವಾಗಿ ಬೆಳೆಯುತ್ತದೆ. ಕಾರಣ ಇಲ್ಲಿ ಪದೇ ಪದೆ ಬ್ಯಾಕ್ಟೀರಿಯಾ ದಾಳಿಯಾಗುತ್ತದೆ.

ಈ ಕಾರಣದಿಂದಲೂ ಕೂದಲು ತುಂಡಾಗುತ್ತದೆ: ಹೆಲ್ಮೆಟ್​ ಹೊರತಾಗಿ ಹಾರ್ಮೋನ್​ಗಳ ಬದಲಾವಣೆ, ಪೋಷಕಾಂಶ ಕೊರತೆ, ಕೂದಲಿನ ಸೋಂಕಿನಿಂದಾಗಿ ನೈಸರ್ಗಿಕ ಕೂದಲ ಬೆಳವಣಿಗೆ ನಿಲ್ಲುತ್ತದೆ.

ಈ ರೀತಿ ಎಚ್ಚರ ವಹಿಸಿ..

  • ಹೆಲ್ಮೆಟ್​ ಧರಿಸುವ ಮುನ್ನ ಕೂದಲನ್ನು ಕಾಟನ್​ ಬಟ್ಟೆಯಿಂದ ಕವರ್​ ಮಾಡಿ, ಧರಿಸಿ
  • ಬೆವರು ಅತಿಯಾದಾಗ ಪದೇ ಪದೇ ಹೆಲ್ಮೆಟ್​ ತೆಗೆಯಿರಿ
  • ಹೆಲ್ಮೆಟ್​ನಲ್ಲಿ ಸ್ಕಾಲ್ಪ​​ ಕ್ಯಾಪ್​ ಇರುವಂತಹವುಗಳನ್ನು ಧರಿಸಬಹುದು
  • ಹೆಲ್ಮೆಟ್​ ಅನ್ನು ಆಗಾಗ್ಗೆ ಶುಚಿಗೊಳಿಸಿ
  • ಹೆಲ್ಮೆಟ್​ ಅನ್ನು ಗಾಳಿಯಾಡುವ ಪ್ರದೇಶದಲ್ಲಿ ಹೆಚ್ಚಾಗಿ ಇಡಿ
  • ದೀರ್ಘ ಕಾಲದ ಪ್ರಯಾಣ ಮಾಡುವ ದ್ವಿಚಕ್ರ ಸವಾರರು, ಕೂದಲನ್ನು ಪದೇ ಪದೇ ಒಣಗಿಸುವುದು ಅಗತ್ಯ.

ಈ ರೀತಿ ಚಿಕಿತ್ಸೆ: ಕೂದಲಿಗೆ ಸೆರಾಂ ಮತ್ತು ಎಣ್ಣೆಯನ್ನು ಬಳಕೆ ಮಾಡುವುದು ಅಗತ್ಯ. ಜೊತೆಗೆ ಕೂದಲಿನ ಆರೋಗ್ಯ ಕಾಪಾಡಲು ಟ್ಯಾಬ್ಲೆಟ್​​, ಮಾತ್ರೆ ಅಥವಾ ಇನ್ನಿತರ ಔಷಧಿಗಳನ್ನು ಕೂಡ ವೈದ್ಯರ ಸಲಹೆ ಮೇಲೆ ಸೇವಿಸಬಹುದು.

ಇದನ್ನೂ ಓದಿ: ಮಾನ್ಸೂನ್​ನಲ್ಲಿ ಕೂದಲಿನ ಆರೈಕೆ ಬಗ್ಗೆ ಬೇಡ ನಿರ್ಲಕ್ಷ್ಯ..! ಹೀಗಿರಲಿ ನಿಮ್ಮ ಕಾಳಜಿ!!

Last Updated : Aug 9, 2023, 3:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.