ಚಿಕಾಗೋ: ತೂಕ ಇಳಿಸಿಕೊಳ್ಳಲು ಮಾಡುವ ಸರ್ಕಸ್ಗಳಲ್ಲಿ ನೀರಿನ ಉಪವಾಸವೂ ಒಂದು. ನಿರ್ದಿಷ್ಟ ಸಮಯದ ತನಕ ಕೇವಲ ನೀರು ಸೇವನೆ ಮಾಡುತ್ತಾ ಮಾಡುವ ಈ ಉಪವಾಸ ತೂಕ ಇಳಿಕೆಗೆ ಸಹಾಯಕವಾಗಬಹುದು. ಆದರೆ, ಇದು ಎಷ್ಟು ಸಮಯ ಇರಲಿದೆ ಎಂಬುದು ಅಸ್ಪಷ್ಟ ಎಂದು ಚಿಕಾಗೋದ ಇಲಿನಾಯ್ಸ್ ಯುನಿವರ್ಸಿಟಿ ಅಧ್ಯಯನ ತಿಳಿಸಿದೆ.
ನೀರಿನ ಉಪವಾಸದಿಂದ ಚಯಾಪಚಯನ ಕ್ರಿಯೆಗೆ ಪ್ರಯೋಜನ ಸಿಗಲಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಕಡಿಮೆ ರಕ್ತದೊತ್ತಡ, ಕೊಲೆಸ್ಟ್ರಾಲ್ ಕೂಡ ಈ ಉಪವಾಸದಿಂದ ಕಡಿಮೆ ಅವಧಿಯಲ್ಲಿ ಕಣ್ಮರೆಯಾಗುತ್ತದೆ. ಈ ಕುರಿತ ವರದಿಯನ್ನು ನ್ಯೂಟ್ರಿಷಿಯನ್ ರಿವ್ಯೂಸ್ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.
ದಿನಕ್ಕೆ ಕಡಿಮೆ ಮಟ್ಟದ ಕ್ಯಾಲೊರಿ ಸೇವಿಸಿ ಮಾಡುವ ಉಪವಾಸದ ಪರಿಣಾಮವನ್ನು ನೀರಿನ ಉಪವಾಸ ಹೊಂದಿದ್ದು, ಇದರಲ್ಲಿ ಯಾವುದೇ ಋಣಾತ್ಮಕ ಪರಿಣಾಮ ಕಂಡುಬಂದಿಲ್ಲ ಎಂದು ಅಧ್ಯಯನದ ಪ್ರಮುಖ ಲೇಖಕ ಕ್ರಿಸ್ಟಾ ವರಡೆ ತಿಳಿಸಿದ್ದಾರೆ. ಇದೇ ವೇಳೆ ಅವರು ನೀರಿನ ಉಪವಾಸವನ್ನು ವೈದ್ಯಕೀಯ ಮೇಲ್ವಿಚಾರಣೆ ಮೂಲಕ 5 ದಿನಗಳ ಕಾಲ ಮಾತ್ರ ಮಾಡಬಹುದು ಎಂದು ಒತ್ತಿ ಹೇಳಿದ್ದಾರೆ.
ಯುರೋಪ್ನಲ್ಲಿ ವೈದ್ಯಕೀಯ ಮೇಲ್ವಿಚಾರಣೆಯ ನೀರಿನ ಉಪವಾಸ ಪ್ರಖ್ಯಾತಿ ಪಡೆದಿದೆ. ಉಪವಾಸದ ವೇಳೆ ಜನರು ಸಣ್ಣ ಪ್ರಮಾಣದ ಜ್ಯೂಸ್ ಮತ್ತು ನೀರನ್ನು ದಿನದಲ್ಲಿ ಸೇವಿಸುತ್ತಾರೆ. ಈ ಹಿನ್ನೆಲೆಯಲ್ಲಿ ವರಡೆ ತಂಡ, ಉಪವಾಸದ ಫಲಿತಾಂಶದ ಮೇಲೆ ಹೆಚ್ಚು ಗಮನಹರಿಸಿತು. ನೀರಿನ ಉಪವಾಸವೂ ತೂಕ ನಷ್ಟದ ಮೇಲೆ ಪರಿಣಾಮ ಹೊಂದುವುದರೊಂದಿಗೆ ಚಯಾಪಚಯ ಅಂಶದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿಶೇಷವಾಗಿ ಗಮನಹರಿಸಿದೆ.
ಅಧ್ಯಯನದಲ್ಲಿ ನೀರಿನ ಉಪವಾಸ ನಡೆಸಿದ ಭಾಗಿದಾರರಲ್ಲಿ ಕೆಲವು ಮಂದಿ, ತಮ್ಮ ಉಪವಾಸ ಮುಗಿದ ಬಳಿಕ ಮತ್ತೆ ತಮ್ಮ ಕಳೆದುಕೊಂಡ ತೂಕ ಪಡೆದಿರುವುದು ಗೊತ್ತಾಗಿದೆ. ತೂಕ ಮತ್ತೆ ಪಡೆದುಕೊಂಡವರು ಕಳೆದ ಮೂರು ತಿಂಗಳಲ್ಲಿ ಐದು ದಿನ ನೀರಿನ ಉಪವಾಸ ನಡೆಸಿದ್ದರು. ಇನ್ನು ಇತರೆ ಎರಡು ಅಧ್ಯಯನದಲ್ಲಿ, ಸಣ್ಣ ಪ್ರಮಾಣದ ತೂಕ ನಷ್ಟವೂ ಮರುಕಳಿಸಿದ್ದನ್ನು ಕಾಣಬಹುದು. ಆದರೆ, ಅಧ್ಯಯನದಲ್ಲಿ ಭಾಗಿದಾರರನ್ನು ಉಪವಾಸ ಮುಗಿದ ಬಳಿಕ ಕಡಿಮೆ ಕ್ಯಾಲೋರಿ ಸೇವನೆಗೆ ಕಟ್ಟುನಿಟ್ಟು ಮಾಡಲಾಗಿದೆ. ಚಯಾಪಚಯನದ ಪ್ರಯೋಜನವೂ ಉಪವಾಸ ಮುಗಿದ ಬಳಿಕ ಕಣ್ಮರೆಯಾಗುವುದು ಕಂಡುಬಂದಿದೆ. ರಕ್ತದೊತ್ತಡದ ಸುಧಾರಣೆ, ಕೊಲೆಸ್ಟ್ರಾಲ್ ಮತ್ತು ರಕ್ತದ ಸಕ್ಕರೆ ಮಟ್ಟಗಳ ನಿಯಂತ್ರಣ ಕಡಿಮೆ ಅವಧಿಗೆ ಇದ್ದು, ಭಾಗಿದಾರರು ಮತ್ತೆ ಆಹಾರ ಸೇವನೆ ಶುರು ಮಾಡಿದಾಗ ಇದು ಇವುಗಳು ಬೇಸ್ಲೈನ್ ಮಟ್ಟಕ್ಕೆ ಮರುಕಳಿಸಿದೆ.
ಟೈಪ್ 1 ಮತ್ತು ಟೈಪ್ 2 ಡಯಾಬಿಟೀಸ್ನಿಂದ ಬಳಲುತ್ತಿರುವವರು ಈ ಉಪವಾಸದಿಂದ ಯಾವುದೇ ತೊಂದರೆಗೆ ಒಳಗಾಗಿಲ್ಲ. ಅವರಿಗೆ ಇನ್ಸುಲಿನ್ ಡೋಸ್ ನೀಡುವ ಮೂಲಕ ಅವರನ್ನು ಹತ್ತಿರದಿಂದ ಗಮನಿಸಲಾಗಿದೆ. ಈ ದೀರ್ಘಾವಧಿಯ ಉಪವಾಸದಿಂದ ತಲೆ ನೋವು, ನಿದ್ರಾಹೀನತೆ, ಹೊಟ್ಟೆ ಹಸಿವು ಕಂಡು ಬಂದಿದೆ. ಇದರ ಹೊರತಾಗಿ ಯಾವುದೇ ನಕಾರಾತ್ಮಕ ಪರಿಣಾಮಗಳಿಲ್ಲ.
ದೀರ್ಘಾವಧಿಯ ಉಪವಾಸದಲ್ಲಿ ಮೂರನೇ ಎರಡರಷ್ಟು ಜನರ ತೆಳುವಾದ ತೂಕ ನಷ್ಟವಾದರೆ, ಮತ್ತು ಒಂದನೇ ಮೂರರಷ್ಟು ಮಂದಿ ಕೊಬ್ಬಿನ ನಷ್ಟ ಹೊಂದಿದ್ದಾರೆ. ತೂಕ ನಿರ್ವಹಣೆಯಲ್ಲಿ ಸಾಮಾನ್ಯವಾಗಿ ಸ್ನಾಯುವಿಗಿಂತ ಹೆಚ್ಚಾಗಿ ಕೊಬ್ಬು ಕರಗುತ್ತದೆ. ಕಾರಣ ಹೆಚ್ಚಿನ ಉಪವಾಸದಲ್ಲಿ ದೆಹಕ್ಕೆ ಪ್ರೋಟಿನ್ ಅವಶ್ಯಕತೆ ಇರುತ್ತದೆ. ಇದು ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ವರಡೆ, ನೀರಿನ ಉಪವಾಸಕ್ಕಿಂತ ಇಂಟರ್‌ಮಿಟೆಂಟ್ ಉಪವಾಸದಿಂದ ಹೆಚ್ಚು ತೂಕ ಕಳೆದುಕೊಳ್ಳಲು ಸಾಧ್ಯ ಎಂದಿದ್ದಾರೆ. ಇಂಟರ್ಮಿಟ್ಟೆಂಟ್ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಸಾಕಷ್ಟು ದತ್ತಾಂಶಗಳು ತೋರಿಸಿದೆ.
ಇದನ್ನೂ ಓದಿ: ಪೋಷಕರು ಮಗುವಿಗೆ ಹೆಚ್ಚು ಗಮನ ನೀಡಬೇಕೇ? ಏನನ್ನುತ್ತದೆ ಅಧ್ಯಯನ?