ನವದೆಹಲಿ: ಮಧುಮೇಹ ತಡೆಯುವಲ್ಲಿ ವಿಟಮಿನ್ ಕೆ ಪ್ರಮುಖವಾಗಿದೆ ಎಂಬುದನ್ನು ಕೆನಡಿಯನ್ ಸಂಶೋಧಕರು ಪತ್ತೆ ಮಾಡಿದ್ದಾರೆ. 11 ಜನರಲ್ಲಿ ಇದು ಒಬ್ಬರಿಗೆ ಪರಿಣಾಮಕಾರಿಯಾಗಿದ್ದು, ಯಾವುದೇ ಚಿಕಿತ್ಸೆ ಇಲ್ಲದೇ, ಅದನ್ನು ಉಪಶಮನ ಮಾಡುವಲ್ಲಿ ಇದು ಸಹಾಯವಾಗಿದೆ ಎಂಬುದನ್ನು ಫಲಿತಾಂಶ ಪತ್ತೆ ಮಾಡಿದೆ.
ಈ ಹಿಂದೆ ಅನೇಕ ಸಂಶೋಧನೆಗಳು ವಿಟಮಿನ್ ಕೆ ಸೇವನೆ ಕಡಿಮೆ ಮಾಡಿದಾಗ ಅವರಲ್ಲಿ ಮಧುಮೇಹ ಹೆಚ್ಚಳಗೊಂಡಿರುವುದು ಪತ್ತೆಯಾಗಿದೆ ಎಂಬುದನ್ನು ತೋರಿಸಿದೆ. ಆದಾಗ್ಯೂ ವಿಟಮಿನ್ ಕೆ ಮಧುಮೇಹ ತಡೆಗಟ್ಟುವಲ್ಲಿ ವಿಟಮಿನ್ ಕೆ ಜೈವಿಕ ಕಾರ್ಯುವಿಧಾನ ಇನ್ನೂ ನಿಗೂಢವಾಗಿದೆ.
ಯುನಿವರ್ಸಿಟಿ ಡೆ ಮೊನ್ಟ್ರೆಲ್ ನ ತಂಡ ಈ ಸಂಶೋಧನೆ ನಡೆಸಿದ್ದು, ವಿಟಮಿನ್ ಕೆ ಮತ್ತು ಗಾಮಾ ಕಾರ್ಬೊಕ್ಸಿಲೆಷನ್ ರಕ್ಷಣಾ ಸಾಮರ್ಥ್ಯ ಕಂಡು ಹಿಡಿದಿದ್ದಾರೆ. ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ವಿಟಮಿನ್ ಕೆ ಪಾತ್ರ ಹೆಚ್ಚಿಸಿದೆ. ಅದರಲ್ಲೂ ಗಾಮಾ ಕಾರ್ಬೊಕ್ಸಿಲೆಷನ್ ಪ್ರತಿಕ್ರಿಯೆಗೆ ಹೆಚ್ಚಿನ ಕಿಣ್ವಗಳ ಪ್ರತಿಕ್ರಿಯೆ ಹೊಂದಿರುವುದು ಕಂಡು ಬಂದಿದೆ.
ಈ ಅಧ್ಯಯವನ್ನು ಜರ್ನಲ್ ಸೆಲ್ ರಿಪೋರ್ಟ್ನಲ್ಲಿ ಪ್ರಕಟಿಸಲಾಗಿದೆ, ಗಾಮಾ ಕಾರ್ಬಾಕ್ಸಿಲೇಷನ್‌ನಲ್ಲಿ ಒಳಗೊಂಡಿರುವ ಕಿಣ್ವಗಳು ಮತ್ತು ಆದ್ದರಿಂದ ವಿಟಮಿನ್ ಕೆ ಬಳಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಯಾಂಕ್ರಿಯಾಟಿಕ್ ಬೀಟಾ ಕೋಶಗಳಲ್ಲಿ ಇರುತ್ತವೆ ಎಂದು ನಿರ್ಧರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಅಮೂಲ್ಯವಾದ ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳಾಗಿವೆ.
ಮಧುಮೇಹವೂ ಬೆಟಾ ಕೋಶಗಳ ಸಂಖ್ಯೆ ಅಥವಾ ಇನ್ಸುಲಿನ್ ಉತ್ಪಾದನೆಯನ್ನು ಕಡಿಮೆ ಮಾಡುವಲ್ಲಿ ಕಾರಣವಾಗಿದೆ. ಈ ಕಾರಣದಿಂದ ಈ ಸಂಬಂಧ ಅಧ್ಯಯನಲ್ಲಿ ಹೆಚ್ಚಿ ಪ್ರಾಮುಖ್ಯತೆ ಹೊಂದಲಾಗಿದೆ ಎಂದು ಅಧ್ಯಯನಕಾರ ಮಥೈಯು ಫೆರೊನ್ ತಿಳಿಸಿದ್ದಾರೆ. ನಾವು ಇಆರ್ಜಿಪಿ ಎಂಬ ಹೊಸ ಗಾಮಾ - ಕಾರ್ಬಾಕ್ಸಿಲೇಟೆಡ್ ಪ್ರೊಟೀನ್ ಅನ್ನು ಗುರುತಿಸಲು ಸಾಧ್ಯವಾಯಿತು.
ನಮ್ಮ ಅಧ್ಯಯನದಲ್ಲಿ ನ್ಸುಲಿನ್ ಸ್ರವಿಸುವಿಕೆಯ ಅಡಚಣೆಯನ್ನು ತಡೆಗಟ್ಟಲು ಬೀಟಾ ಕೋಶಗಳಲ್ಲಿ ಕ್ಯಾಲ್ಸಿಯಂನ ಶಾರೀರಿಕ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಈ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತೋರಿಸಿದೆ. ಇಆರ್ಜಿಪಿ ತನ್ನ ಪಾತ್ರವನ್ನು ನಿರ್ವಹಿಸಲು ಗಾಮಾ-ಕಾರ್ಬಾಕ್ಸಿಲೇಷನ್ ಮೂಲಕ ವಿಟಮಿನ್ ಕೆ ಅತ್ಯಗತ್ಯ ಎಂದು ನಾವು ತೋರಿಸಿದ್ದೇವೆ ಎಂದು ಅಧ್ಯಯನ ತಿಳಿಸಿದೆ.
15 ವರ್ಷದಲ್ಲಿ ಇದೇ ಮೊದಲ ಬಾರಿ ವಿಟಮಿನ್ ಕೆ ಅವಲಂಬಿತ ಪ್ರೊಟಿನ್ ಅನ್ನು ಪತ್ತೆ ಮಾಡಲಾಗಿದೆ. ಇದು ಹೊಸ ಪ್ರದೇಶದಲ್ಲಿ ಸಂಶೋಧನೆಗೆ ಅವಕಾಶ ನೀಡುತ್ತದೆ.
ವಿಟಮಿನ್ ಕೆ: ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಹಲವು ಆರೋಗ್ಯ ಅಭಿವೃದ್ಧಿಗೆ ವಿಟಮಿನ್ ಕೆ ಅತ್ಯಗತ್ಯವಾಗಿದೆ. ವಿಟಮಿನ್ ಕೆ ಕಡಿಮೆಯಾದರೆ ರಕ್ತ ಸ್ರಾವ ಸೇರಿದಂತೆ ಪ್ರಮುಖ ಸಮಸ್ಯೆಗಳು ಉಂಟಾಗುತ್ತದೆ. ಮೂಳೆಗಳ ಮತ್ತು ಹೃದಯದ ಆರೋಗ್ಯದಲ್ಲೂ ಇದರ ಪಾತ್ರ ಹೆಚ್ಚಿದ್ದು, ಈ ವಿಟಮಿನ್ ಕೆ ಕಡಿಮೆ ಮಾದರೆ ಕೀಲು ಮತ್ತು ಮೂಳೆಗಳ ನೋವು ಕಾಣಿಸುತ್ತದೆ.
ವಿಟಮಿನ್ ಕೆ ಹೆಚ್ಚಾಗಿ ಪಾಲಕ್, ಸಾಲ್ಮನ್, ಬ್ರಕೋಲಿ, ಗೋಡಂಬಿ, ಒಣದ್ರಾಕ್ಷಿ, ಹಾರ್ಡ್ ಚೀಸ್, ಕಿವಿ ಹಣ್ಣು, ಹಸಿರು ತರಕಾರಿಗಳಲ್ಲಿ ಸಿಗುತ್ತದೆ.
ಇದನ್ನೂ ಓದಿ: ಆರೋಗ್ಯಕರ ಆಹಾರ ಯುಗ: ಪರಿಣಾಮಕಾರಿ ಊಟ ಯೋಜನೆ ರೂಪಿಸುವುದು ಹೇಗೆ?