ETV Bharat / sukhibhava

ನರಗಳ ಗಾಯಗಳ ನೋವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ ವರ್ಚುವಲ್ ರಿಯಾಲಿಟಿ!

author img

By

Published : Mar 20, 2021, 9:46 PM IST

ವರ್ಚುವಲ್ ರಿಯಾಲಿಟಿಯು ನರಗಳ ಗಾಯದ ರೋಗಿಗಳಲ್ಲಿ ಹೆಚ್ಚಾಗಿ ಕಂಡುಬರುವ ಮುಳ್ಳು ಚುಚ್ಚುವಂತಹ ನೋವು ಹಾಗೂ ನೋವಿನ ನಂತರದ ಸ್ಪರ್ಶದಂತಹ ನೋವಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

Virtual Reality
Virtual Reality

ಹೈದರಾಬಾದ್: ವರ್ಚುವಲ್ ರಿಯಾಲಿಟಿ (ವಿಆರ್) ನರಗಳ ಗಾಯಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ನೋವನ್ನು ಕಡಿಮೆ ಮಾಡುತ್ತದೆ ಮತ್ತು ವಿಆರ್ ನಿಷ್ಕ್ರಿಯ ನೋವು ನಿಗ್ರಹ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ದಿ ಜರ್ನಲ್ ಆಫ್ ಪೇನ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ವಿಆರ್ ಸಹ ಮುಳ್ಳು ಚುಚ್ಚುವಂತಹ ನೋವು ಹಾಗೂ ನೋವಿನ ನಂತರದ ಸ್ಪರ್ಶದಂತಹ ನೋವಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದ್ದು, ಇದು ನರಗಳ ಗಾಯದ ರೋಗಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

"ವರ್ಚುವಲ್ ರಿಯಾಲಿಟಿ ಮಾನವರಲ್ಲಿ ದೀರ್ಘಕಾಲದ ನೋವಿನ ಗ್ರಹಿಕೆಯನ್ನು ಕಡಿಮೆ ಮಾಡಲು ಮಾತ್ರವಲ್ಲ, ಈ ಪರಿಣಾಮದ ಹಿಂದಿನ ಕಾರ್ಯವಿಧಾನಗಳ ಬಗ್ಗೆ ನಮಗೆ ಒಳನೋಟವನ್ನು ನೀಡುತ್ತದೆ ಎಂಬುದಕ್ಕೆ ಹೆಚ್ಚಿನ ಪುರಾವೆಗಳನ್ನು ತೋರಿಸುವುದರಿಂದ ನಾವು ಈ ಫಲಿತಾಂಶಗಳನ್ನು ನೋಡಿದ್ದೇವೆ ಹಾಗೂ ಇದು ಅದ್ಭುತವಾಗಿದೆ" ಎಂದು ಪ್ಲೈಮೌತ್ ವಿಶ್ವವಿದ್ಯಾಲಯದ ಸೈಕಾಲಜಿ ಉಪನ್ಯಾಸಕ ಸ್ಯಾಮ್ ಹ್ಯೂಸ್ ಹೇಳಿದ್ದಾರೆ.

"ಸಹಜವಾಗಿ ಮುಂದಿನ ಹಂತವೆಂದರೆ ದೀರ್ಘಕಾಲದ ನೋವನ್ನು ಅನುಭವಿಸುವ ಜನರೊಂದಿಗೆ ಅಧ್ಯಯನವನ್ನು ನಡೆಸುವುದು ಮತ್ತು ಅದು ಅವರಿಗೆ ಕೆಲಸ ಮಾಡುತ್ತದೆಯೇ ಎಂದು ನೋಡಬೇಕಿದೆ" ಎಂದು ಹ್ಯೂಸ್ ತಿಳಿಸಿದ್ದಾರೆ.

ಸಂಶೋಧಕರ ಪ್ರಕಾರ, ನಾವೆಲ್ಲರೂ ದೈಹಿಕ ನೋವನ್ನು ವಿಭಿನ್ನ ರೀತಿಯಲ್ಲಿ ಅನುಭವಿಸುತ್ತೇವೆ. ಆದರೆ ನರಗಳ ಗಾಯಗಳಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ನಿಷ್ಕ್ರಿಯ ನೋವು ನಿಗ್ರಹ ವ್ಯವಸ್ಥೆಯನ್ನು ಹೊಂದಿರುತ್ತಾರೆ. ಇದರಿಂದಾಗಿ ಅವರು ವಿಶೇಷವಾಗಿ ಅಸ್ವಸ್ಥತೆಗೆ ಗುರಿಯಾಗುತ್ತಾರೆ.

"ಇದು ಕೆಲಸ ಮಾಡಿದರೆ, ದೀರ್ಘಕಾಲದ ನೋವಿಗೆ ಕಾರಣವಾಗುವ ಮೆದುಳಿನಲ್ಲಿನ ಅಪಸಾಮಾನ್ಯ ಕ್ರಿಯೆಗಳನ್ನು ಗುರಿಯಾಗಿಸಲು ಸಹಾಯ ಮಾಡುವ ಮೂಲಕ ನೋವು ನಿರ್ವಹಣೆಯ ಭಾಗವನ್ನು ರೂಪಿಸುವಲ್ಲಿ ಇದು ನಿಜವಾಗಿಯೂ ಸಹಾಯಕವಾಗಬಹುದು" ಎಂದು ಹ್ಯೂಸ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.