ETV Bharat / sukhibhava

ತರಕಾರಿ ಕಟಿಂಗ್​ ಬೋರ್ಡ್​ ಉತ್ಪಾದಿಸುತ್ತವೆ ಹಾನಿಕಾರಕ ಮೈಕ್ರೋಪ್ಲಾಸ್ಟಿಕ್​ಗಳು: ಎಚ್ಚರ

ತರಕಾರಿಗಳನ್ನು ಕತ್ತರಿಸುವ ಬೋರ್ಡ್​​ಗಳಿಂದ ಆಹಾರದಲ್ಲಿ ಹಾನಿಕಾರಕ ಮೈಕ್ರೋ ಪ್ಲಾಸ್ಟಿಕ್​ ಅಂಶ ಹೆಚ್ಚಿರುತ್ತದೆ ಎಂದು ಹೊಸ ಭಾರತೀಯ ಅಧ್ಯಯನ ತಿಳಿಸಿದೆ.

Vegetable cutting boards produce harmful microplastics

author img

By

Published : Jun 3, 2023, 10:42 AM IST

ನ್ಯೂಯಾರ್ಕ್​: ತರಕಾರಿಗಳನ್ನು ಸುಲಭವಾಗಿ, ಬೇಗ ಹೆಚ್ಚಲು ಮರ ಅಥವಾ ಪ್ಲಾಸ್ಟಿಕ್​ ಬೋರ್ಡ್​ಗಳನ್ನು ಬಳಸುವುದು ಸಹಜ. ಇಂತಹ ಬೋರ್ಡ್​​ಗಳ ಕುರಿತು ಹೊಸ ಅಧ್ಯಯನವೊಂದನ್ನ ನಡೆಸಲಾಗಿದೆ. ತರಕಾರಿಗಳನ್ನು ಕತ್ತರಿಸುವ ಬೋರ್ಡ್​​ಗಳಿಂದ ಆಹಾರದಲ್ಲಿ ಹಾನಿಕಾರಕ ಮೈಕ್ರೋ ಪ್ಲಾಸ್ಟಿಕ್​ ಅಂಶ ಹೆಚ್ಚಿರುತ್ತದೆ ಎಂದು ಹೊಸ ಭಾರತೀಯ ಅಧ್ಯಯನ ತಿಳಿಸಿದೆ.

ಬೋರ್ಡ್​ಗಳಿಗೆ ಪದೇ ಪದೆ ಕಟ್​ ಮಾಡುವುದರಿಂದ ಇದರಲ್ಲಿನ ಮೈಕ್ರೋ ಪ್ಲಾಸ್ಟಿಕ್​ಗಳು ಆಹಾರ ಸೇರುತ್ತಿವೆ. ಈ ಮೈಕ್ರೋಪ್ಲಾಸ್ಟಿಕ್​ಗಳು ಊರಿಯೂತ, ಇನ್ಸುಲಿನ್​ ಪ್ರತಿರೋಧ, ಟೈಪ್​ 2 ಡಯಾಬೀಟಿಸ್​ ಮತ್ತು ಹೃದ್ರೋಗದಂತಹ ಹಲವಾರು ಅಪಾಯವನ್ನು ಹೊಂದಿದ್ದು, ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಜೀವ ಕೋಶಕ್ಕೆ ಹಾನಿ: ಅಷ್ಟೇ ಅಲ್ಲದೆ ಇವು, ಜೀವಕೋಶದ ಹಾನಿಯನ್ನು ಉಂಟು ಮಾಡುತ್ತದೆ. ಊರಿಯೂತ ಮತ್ತು ಅಲರ್ಜಿಗೆ ಕಾರಣವಾಗುವುದರ ಜೊತೆಗೆ ಮಾನವರ ಸಂತಾನೋತ್ಪತ್ತಿಯಲ್ಲಿ ತೊಡಗುವ ಹಾಗೂ ಸ್ಥೂಲಕಾಯತೆಗೆ ಕಾರಣವಾಗಬಹುದು. ಈ ಸಂಬಂಧ ನಾರ್ಟ್​​ ಡಕೋಟಾ ಯುನಿವರ್ಸಿಟಿ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಮರದ ಮತ್ತು ಪ್ಲಾಸ್ಟಿಕ್ ಬೋರ್ಡ್‌ಗಳ ಮೇಲೆ ಕ್ಯಾರೆಟ್ ಅನ್ನು ಕತ್ತರಿಸುವುದರಿಂದ ವರ್ಷಕ್ಕೆ ಹತ್ತು ಮಿಲಿಯನ್ ಮೈಕ್ರೋ ಪಾರ್ಟಿಕಲ್‌ಗಳನ್ನು ಉತ್ಪಾದಿಸಬಹುದು ಎಂದು ಅಧ್ಯಯನ ತಿಳಿಸಿದೆ. ಕತ್ತರಿಸುವ ಸಮಯದಲ್ಲಿ ಬಿಡುಗಡೆಯಾದ ಪಾಲಿಥಿಲೀನ್ ಅಥವಾ ಮರದ ಮೈಕ್ರೊಪಾರ್ಟಿಕಲ್‌ಗಳು ಕೋಶದ ಬದುಕುಳಿಯುವಿಕೆ ಪರಿಣಾಮ ಹೊಂದಿಲ್ಲ ಎಂದಿದ್ದಾರೆ

ಹಲವು ವಿಧದ ಬೋರ್ಡ್​ ಲಭ್ಯ: ಬಹುತೇಕ ತರಕಾರಿ ಕಟಿಂಗ್​ ಬೋರ್ಡ್‌ಗಳನ್ನು ರಬ್ಬರ್, ಬಿದಿರು, ಮರ ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಪಾಲಿಪ್ರೊಪಿಲೀನ್ ಮತ್ತು ಪಾಲಿಥಿಲೀನ್ ಸೇರಿದಂತೆ ಕೆಲವು ಪ್ಲಾಸ್ಟಿಕ್ ಬೋರ್ಡ್ ವಸ್ತುಗಳು ಚಾಕುಗಳಿಂದ ಕತ್ತರಿಸಿದಾಗ ನ್ಯಾನೊ ಮತ್ತು ಸೂಕ್ಷ್ಮ ಗಾತ್ರದ ಫ್ಲೆಕ್ಸ್ ಅನ್ನು ಹೊರ ಹಾಕುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ

ಅಧ್ಯಯನದ ಫಲಿತಾಂಶ: ಎನ್ವಿರಾನ್ಮೆಂಟಲ್ ಸೈನ್ಸ್ ಅಂಡ್​​ ಟೆಕ್ನಾಲಜಿ ನಿಯತಕಾಲಿಕದಲ್ಲಿ ಈ ಕುರಿತು ಅಧ್ಯಯನ ಪ್ರಕಟಿಸಲಾಗಿದೆ. ಐದು ಜನರು ವಿವಿಧ ರೀತಿಯ ವಸ್ತುಗಳನ್ನು ಕತ್ತರಿಸುವುದ ಕುರಿತು ಅಧ್ಯಯನ ನಡೆಸಲಾಯಿತು. ಈ ವೇಳೆ, ಆಹಾರ ತಯಾರಿಕೆಯು 14 ರಿಂದ 71 ಮಿಲಿಯನ್ ಪಾಲಿಥಿಲೀನ್ ಮೈಕ್ರೋಪ್ಲಾಸ್ಟಿಕ್‌ಗಳನ್ನು ಮತ್ತು 79 ಮಿಲಿಯನ್ ಪಾಲಿಪ್ರೊಪಿಲೀನ್ ಮೈಕ್ರೋಪ್ಲಾಸ್ಟಿಕ್‌ಗಳನ್ನು ಉತ್ಪಾದಿಸುತ್ತದೆ ಎಂಬುದು ತಿಳಿದು ಬಂದಿದೆ.

ಇನ್ನು ಮರದ ಹಲಗೆಗಳಿಗೆ ವಾರ್ಷಿಕ ಅಂದಾಜುಗಳನ್ನು ನಿರ್ಧರಿಸಲಾಗಿಲ್ಲವಾದರೂ, ವಿವಿಧ ಪರೀಕ್ಷೆಗಳಲ್ಲಿ ಈ ವಸ್ತುಗಳು ಪ್ಲಾಸ್ಟಿಕ್‌ಗಿಂತ 4 ರಿಂದ 22 ಪಟ್ಟು ಹೆಚ್ಚು ಮೈಕ್ರೊಪಾರ್ಟಿಕಲ್‌ಗಳನ್ನು ಕಡಿಮೆ ಮಾಡುತ್ತವೆ. ಕ್ಯಾರೆಟ್‌ಗಳನ್ನು ಕತ್ತರಿಸುವಾಗ ಬಿಡುಗಡೆಯಾದ ಪಾಲಿಥಿಲೀನ್ ಮೈಕ್ರೋಪ್ಲಾಸ್ಟಿಕ್‌ಗಳು ಮತ್ತು ಮರದ ಮೈಕ್ರೊಪಾರ್ಟಿಕಲ್‌ಗಳು ಲ್ಯಾಬ್ ಪರೀಕ್ಷೆಗಳಲ್ಲಿ ಕೋಶಗಳ ಕಾರ್ಯಸಾಧ್ಯತೆಯನ್ನು ಗಮನಾರ್ಹವಾಗಿ ಬದಲಾಯಿಸುವುದಿಲ್ಲ ಎಂದು ಅಧ್ಯಯನ ತಿಳಿಸಿದೆ.

ಸುರಕ್ಷತೆಗೆ ಆದ್ಯತೆ: ಈ ಕಟಿಂಗ್​ ಬೋರ್ಡ್​ಗಳನ್ನು ಪ್ರತಿ ಬಾರಿ ತರಕಾರಿ ಅಥವಾ ಇನ್ನಿತರ ವಸ್ತುಗಳನ್ನು ಕತ್ತರಿಸಿದ ಮೇಲೆ ಪದೇ ಪದೇ ಶುಚಿಗೊಳಿಸುವುದು ಅಗತ್ಯವಾಗಿದೆ. ಇಲ್ಲದೇ, ಹೋದಲ್ಲಿ ಇವು ಇನ್ನಷ್ಟು ಹಾನಿಕಾರಕವಾಗುತ್ತವೆ.

ಇದನ್ನೂ ಓದಿ: ನೀವು ಜಂಕ್​ಫುಡ್ ತಿಂತೀರಾ? ಹಾಗಾದರೆ ನಿಮ್ಮ ನಿದ್ದೆಗೆ ಬರುತ್ತೆ ಕುತ್ತು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.