ವಾಷಿಂಗ್ಟನ್: ಕ್ಯಾನ್ಸರ್ ಮತ್ತು ಹೃದ್ರೋಗಿಗಳಿಗೆ ಸಿಹಿ ಸುದ್ದಿವೊಂದು ಹೊರಬಿದ್ದಿದೆ. ಈ ರೋಗಗಳಿಗೆ ಶೀಘ್ರದಲ್ಲೇ ಲಸಿಕೆಯನ್ನು ತಯಾರಿಸಬಹುದು ಎಂದು ಅಮೆರಿಕನ್ ತಜ್ಞರು ಹೇಳುತ್ತಿದ್ದಾರೆ. ಈ ದಶಕದ ಕೊನೆಯಲ್ಲಿ ಪ್ರಪಂಚದಾದ್ಯಂತದ ಕ್ಯಾನ್ಸರ್ ಮತ್ತು ಹೃದ್ರೋಗಿಗಳನ್ನು ಈ ಲಸಿಕೆ ಮೂಲಕ ಗುಣಪಡಿಸಲು ಸಾಧ್ಯವಾಗುತ್ತದೆ ಎನ್ನುತ್ತಿದೆ ಸಂಶೋಧನೆ.
ಪ್ರಮುಖ ಕೊರೊನಾವೈರಸ್ ಲಸಿಕೆ ತಯಾರಿಸುವ ಸಂಸ್ಥೆಯು ವಿವಿಧ ರೀತಿಯ ಗೆಡ್ಡೆಗಳನ್ನು ಗುರಿಯಾಗಿಸುವ ಕ್ಯಾನ್ಸರ್ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಕೊರೊನೊವೈರಸ್ ಸಾಂಕ್ರಾಮಿಕ ರೋಗದಲ್ಲಿ ಲಸಿಕೆ ಸಂಶೋಧನೆಯು ಕ್ಯಾನ್ಸರ್ ಮತ್ತು ಹೃದ್ರೋಗಿಗಳಿಗೆ ಲಸಿಕೆಗಳನ್ನು ಕಂಡು ಹಿಡಿಯುವುದನ್ನು ವಿಜ್ಞಾನಿಗಳಿಗೆ ಸುಲಭಗೊಳಿಸಿದೆ. ಕ್ಯಾನ್ಸರ್, ಹೃದಯರಕ್ತನಾಳದ ಮತ್ತು ಸ್ವಯಂ ನಿರೋಧಕ ಕಾಯಿಲೆಗಳು ಮತ್ತು ಇತರ ಪರಿಸ್ಥಿತಿಗಳನ್ನು ತಡೆಗಟ್ಟಲು ಜನರು ಶೀಘ್ರದಲ್ಲೇ ಲಸಿಕೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಔಷಧೀಯ ಸಂಸ್ಥೆ ಈಗ ಸೂಚಿಸಿದೆ.
ದಿ ಗಾರ್ಡಿಯನ್ ವರದಿಯ ಪ್ರಕಾರ, ಕೋವಿಡ್ ಲಸಿಕೆ ನಂತರ ಅಮೆರಿಕದ ತಜ್ಞರು ಈಗ ಅನೇಕ ರೀತಿಯ ಗೆಡ್ಡೆಗಳ ಕ್ಯಾನ್ಸರ್ ಅನ್ನು ತೊಡೆದುಹಾಕುವ ಲಸಿಕೆಯನ್ನು ತಯಾರಿಸುವಲ್ಲಿ ತೊಡಗಿದ್ದಾರೆ. ಈ ಲಸಿಕೆಗಳು 2030 ರ ವೇಳೆಗೆ ಸಿದ್ಧವಾಗುತ್ತವೆ. ಲಸಿಕೆ ಸಿದ್ಧವಾದರೆ ಲಕ್ಷಾಂತರ ಜನರ ಜೀವ ಉಳಿಸಬಹುದು ಎಂದು ಅಧ್ಯಯನದಲ್ಲಿ ನಂಬಲಾಗಿದೆ. ಔಷಧೀಯ ಕಂಪನಿ ಮಾಡರ್ನಾ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಪಾಲ್ ಬರ್ಟನ್ ಮಾತನಾಡಿ, ಸಂಸ್ಥೆಯು ಐದು ವರ್ಷಗಳಲ್ಲಿ ಎಲ್ಲಾ ರೀತಿಯ ರೋಗಗಳಿಗೆ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬರ್ಟನ್ ಮಾತು ಮುಂದುವರಿಸಿ, ನಾವು ಹೊಂದಿರುವ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಇದು ಕನಿಷ್ಠ ನೂರಾರು ಜನರನ್ನಲ್ಲ ಲಕ್ಷಾಂತರ ಜೀವಗಳನ್ನು ಉಳಿಸುತ್ತದೆ. ಪ್ರಪಂಚದಾದ್ಯಂತದ ಜನರಿಗೆ ವಿವಿಧ ರೀತಿಯ ಟ್ಯೂಮರ್ ಕ್ಯಾನ್ಸರ್‌ಗೆ ಲಸಿಕೆಗಳನ್ನು ಒದಗಿಸಲು ನಮಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಒಂದೇ ಚುಚ್ಚುಮದ್ದಿನಿಂದ ಅನೇಕ ರೀತಿಯ ಸೋಂಕುಗಳನ್ನು ತೊಡೆದು ಹಾಕಬಹುದು. ದುರ್ಬಲ ಜನರು ಸಹ ಕೋವಿಡ್, ಫ್ಲೂ ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ನಿಂದ ರಕ್ಷಿಸಲ್ಪಡಬಹುದು ಎಂದು ನಾನು ಭಾವಿಸುತ್ತೇನೆ. 10 ವರ್ಷಗಳ ನಂತರ ನೀವು ನಿಜವಾಗಿಯೂ ಕಾಯಿಲೆಯ ಕಾರಣವನ್ನು ಗುರುತಿಸುವ ಮತ್ತು ಅದರ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುವಂತಹ ಜಗತ್ತನ್ನು ನಾವು ತಲುಪುತ್ತೇವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
ಓದಿ: ದೀರ್ಘಾವಧಿ ಕೋವಿಡ್ಗೆ ಆಯುರ್ವೇದ ಚಿಕಿತ್ಸೆ ಉತ್ತಮ ಪರಿಹಾರವಾಗಬಲ್ಲದು!
ಈ ಲಸಿಕೆ ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ವಿರುದ್ಧವೂ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಪ್ರಸ್ತುತ ಯಾವುದೇ ಔಷಧಿ ಇಲ್ಲದ ಇತರ ಹಲವು ಅಪರೂಪದ ಕಾಯಿಲೆಗಳಿಗೂ ಲಸಿಕೆಗಳು ಲಭ್ಯವಾಗಲಿವೆ. ಈ ಲಸಿಕೆ mRNA ಲಸಿಕೆಯನ್ನು ಆಧರಿಸಿದೆ. ಇದು ರೋಗಗಳ ವಿರುದ್ಧ ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುವ ಪ್ರೋಟೀನ್‌ಗಳನ್ನು ಹೇಗೆ ತಯಾರಿಸಬೇಕೆಂದು ಜೀವಕೋಶಗಳಿಗೆ ಕಲಿಸುತ್ತದೆ ಎಂದು ಬರ್ಟನ್ ತಿಳಿಸಿದ್ದಾರೆ.
(ಗಮನಿಸಿ: ಈ ಸುದ್ದಿಯನ್ನು ಈಟಿವಿ ಭಾರತ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಸ್ವಯಂ-ರಚಿಸಲಾಗಿದೆ.)