ETV Bharat / sukhibhava

ಪಿಜ್ಜಾ, ಬರ್ಗರ್​​, ಡಯಟ್​ ಕೋಕ್ ಪ್ರಿಯರಿಗೆ ಖಿನ್ನತೆಯ ಅಪಾಯ ಹೆಚ್ಚು​!

ಹೆಚ್ಚು ಸಂಸ್ಕರಿತ ಆಹಾರ ಸೇವನೆ ಸ್ಥೂಲಕಾಯ, ರಕ್ತದ ಸಕ್ಕರೆ ಮಟ್ಟ ಏರಿಕೆ ಜೊತೆಗೆ ಖಿನ್ನತೆಗೂ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

ultra processed Food associated with increased risk of depression

author img

By ETV Bharat Karnataka Team

Published : Sep 23, 2023, 10:42 AM IST

ನ್ಯೂಯಾರ್ಕ್​: ಬರ್ಗರ್​​, ಪಿಜ್ಜಾ ಮತ್ತು ಡಯಟ್​​ ಕೋಕ್​ನಂತಹ ಅಲ್ಟ್ರಾ ಪ್ರೊಸೆಸ್ಡ್​​ (ಹೆಚ್ಚು ಸಂಸ್ಕರಿಸಿದ) ಆಹಾರಗಳು ಖಿನ್ನತೆಯೊಂದಿಗೆ ಸಂಬಂಧ ಹೊಂದಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಜಮಾ ನೆಟ್​ವರ್ಕ್​ ಓಪನ್​ ಜರ್ನಲ್​ನಲ್ಲಿ ಈ ಕುರಿತು ಪ್ರಕಟಿಸಲಾಗಿದೆ. ಶಕ್ತಿ ಆಧಾರಿತ, ರುಚಿಯಾದ ಮತ್ತು ರೆಡಿ ಟೂ ಇಟ್​ನಂತಹ ಆಹಾರಗಳು ಸೇರಿದಂತೆ ಸಿಹಿ ಮತ್ತು ಉಪ್ಪಿನ ಸ್ನಾಕ್​​, ರೆಡಿ ಮೇಡ್​ ಆಹಾರ ಮತ್ತು ಕೃತಕ ಸಿಹಿಕಾರಕ ಪಾನೀಯ, ಸಂಸ್ಕರಿಸಿದ ಮಾಂಶ, ಡೈರಿ ಉತ್ಪನ್ನ, ಕೊಬ್ಬು ಮತ್ತು ಸಾಸ್​​ಗಳು ಖಿನ್ನತೆ ಅಪಾಯವನ್ನು ಹೆಚ್ಚಿಸಬಹುದು ಎಂದು ತೋರಿಸಿದೆ.

ಖಿನ್ನತೆಗೆ ಯುಪಿಎಫ್ ಅನ್ನು ಸಂಯೋಜಿಸುವ ಕಾರ್ಯವಿಧಾನವು ತಿಳಿದಿಲ್ಲವಾದರೂ ಇತ್ತೀಚಿನ ದತ್ತಾಂಶಗಳು ಸಲಹೆ ನೀಡುವಂತೆ ಕೃತಕ ಸಿಹಿಕಾರಕಗಳು ಮೆದುಳಿನಲ್ಲಿ ಪ್ಯೂರಿನರ್ಜಿಕ್ ಪ್ರಸರಣವನ್ನು ಹೊರಹೊಮ್ಮಿಸುತ್ತದೆ. ಇದು ಖಿನ್ನತೆಯ ಎಟಿಯೋಪಾಥೋಜೆನೆಸಿಸ್​ನೊಂದಿಗೆ ಸಂಬಂಧ ಹೊಂದಿದೆ ಎಂದು ಅಮೆರಿಕದ ಹಾರ್ವರ್ಡ್​​ ಯುನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.

ಈ ಹಿಂದಿನ ಅಧ್ಯಯನದಲ್ಲಿ ಕಡಿಮೆ ಅವಧಿಯ ಆಹಾರದ ದತ್ತಾಂಶ ಮತ್ತು ಸಂಭಾವ್ಯಗಳು ಸೀಮಿತ ಸಾಮರ್ಥ್ಯದಿಂದ ಅಡ್ಡಿಪಡಿಸಲಾಗಿದೆ. ಜೊತೆಗೆ ಯಾವುದೇ ಅಧ್ಯಯನವೂ ಯುಪಿಎಫ್​ ಆಹಾರವನ್ನು ಅಥವಾ ಸಾಮಾಗ್ರಿಯು ಖಿನ್ನತೆ ಅಪಾಯದೊಂದಿಗೆ ಸಂಬಂಧ ಹೊಂದಿದೆ ಎಂದು ತೋರಿಸಿರಲಿಲ್ಲ.

ಇದನ್ನು ಅರ್ಥೈಸಿಕೊಳ್ಳಲು ತಂಡವು ಯುಪಿಎಫ್​ ಮತ್ತು ಖಿನ್ನತೆ ಘಟಕಗಳ ನಡುವಿನ ನಿರೀಕ್ಷಿತ ಸಂಬಂಧವನ್ನು ತಂಡವು ತನಿಖೆ ಮಾಡಿದೆ. ಈ ಅಧ್ಯಯನಕ್ಕಾಗಿ 42 ರಿಂದ 64 ವರ್ಷದ ವಯೋಮಾನದ 31,712 ಮಹಿಳೆಯರನ್ನು 2003 ರಿಂದ 2017ರವರೆಗೆ ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಫಲಿತಾಂಶದಲ್ಲಿ ಸಾಮಾನ್ಯ ಸ್ಥಿರ ಆಹಾರ ಸೇವನೆ ಮಹಿಳೆಗೆ ಹೋಲಿಸಿದಾಗ ಪ್ರತಿನಿತ್ಯ ಮಹಿಳೆಯರು 9 ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಅಲ್ಟ್ರಾ ಪ್ರೊಸೆಸ್ಡ್​​ ಆಹಾರ ಸೇವನೆ ಮಾಡಿದಾಗ ಖಿನ್ನತೆಯು ಶೇ 49ರಷ್ಟು ಅಭಿವೃದ್ಧಿ ಆಗಿರುವುದು ಕಂಡು ಬಂದಿದೆ.

ಮಹಿಳೆಯರು ತಮ್ಮ ಈ ಅಲ್ಟ್ರಾ ಪ್ರೊಸೆಸ್ಡ್​ ಆಹಾರ ಸೇವನೆಯನ್ನು ಕನಿಷ್ಟ ಮೂರು ಬಾರಿ ಕಡಿಮೆ ಮಾಡಿದಾಗ ಸ್ಥಿರ ಆಹಾರ ಸೇವನೆ ಮಹಿಳೆಗೆ ಹೋಲಿಸಿದಾಗ ಖಿನ್ನತೆ ಅಪಾಯ ಕಡಿಮೆ ಮಾಡಬಹುದು ಎಂದು ಅಧ್ಯಯನ ತೋರಿಸಿದೆ.

ಅಲ್ಟ್ರಾ ಸಂಸ್ಕರಿತ ಆಹಾರಗಳನ್ನು ಹೆಚ್ಚು ಸೇವನೆ ಮಾಡಿದರೆ, ಅದು ಸ್ಥೂಲಕಾಯ ಮತ್ತು ರಕ್ತದ ಸಕ್ಕರೆ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ. ಜೊತೆಗೆ ಟೈಪ್​ 2 ಮಧುಮೇಹ ಅಭಿವೃದ್ಧಿಯ ಅಪಾಯ ಹೆಚ್ಚಿಸುತ್ತದೆ. ಇದರಿಂದ ಹೃದಯದ ಸಮಸ್ಯೆ ಮತ್ತು ಪಾರ್ಶ್ವವಾಯು ಹಾಗೂ ಕ್ಯಾನ್ಸರ್​ ಅಪಾಯ ಕೂಡ ಹೆಚ್ಚಗಲಿದೆ. (ಐಎಎನ್​ಎಸ್​)

ಇದನ್ನೂ ಓದಿ: ನಕಾರಾತ್ಮಕ ಅಂಶಗಳನ್ನು ಹತ್ತಿಕ್ಕುವುದು ಮಾನಸಿಕ ಆರೋಗ್ಯಕ್ಕೆ ಉತ್ತಮ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.