ಬಾಯಿ ಮೂಲೆಯಲ್ಲಿ ಹುಣ್ಣು ಕಾಣಿಸಿಕೊಳ್ಳುವುದು ಮಂಕಿಪಾಕ್ಸ್ ವೈರಸ್ ಸೋಂಕಿನ ಮೊದಲ ಲಕ್ಷಣ ಎಂದು ವಿಜ್ಞಾನಿಗಳು ದಾಖಲಿಸಿದ್ದಾರೆ. ಪ್ರಾರಂಭದಲ್ಲಿ ಅಷ್ಟೇನು ಲಕ್ಷಣಗಳು ಕಂಡುಬರುವುದಿಲ್ಲ. ನಂತರದಲ್ಲಿ ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ.
51 ವರ್ಷದ ಎಚ್ಐವಿ ಪಾಸಿಟಿವ್ ರೋಗಿಯೊಬ್ಬರಲ್ಲಿ ಬಾಯಿಯ ಎಡ ಮೂಲೆಯಲ್ಲಿ ಹುಣ್ಣು ಕಾಣಿಸಿಕೊಂಡಿತ್ತು. ಮೊದಲಿಗೆ ಅದು ಮಂಕಿ ಪಾಕ್ಸ್ ಲಕ್ಷಣವೆಂದು ತಿಳಿದಿರಲಿಲ್ಲ. ನಂತರ ಆತನ ಬಾಯಿಯ ಸ್ವಾಬ್ನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಪಿಸಿಆರ್ ಪರೀಕ್ಷೆಯು ಮಂಕಿಪಾಕ್ಸ್ ವೈರಸ್ನ್ನು ದೃಢಪಡಿಸಿತು. ನಂತರದಲ್ಲಿ ಮಂಕಿಪಾಕ್ಸ್ ಚರ್ಮ ಮತ್ತು ಅಂಗುಳಿಯಲ್ಲಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಂಡ ತಜ್ಞರು ಈ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಿದ್ದಾರೆ.
ಈಗಾಗಲೇ 106 ದೇಶಗಳಲ್ಲಿ ಮಂಕಿಪಾಕ್ಸ್ ಕಂಡುಬಂದಿದೆ. 8000 ಪ್ರಕರಣಗಳು ದಾಖಲಾಗಿದ್ದು, 36 ಸಾವುಗಳು ಸಂಭವಿಸಿವೆ. ಮಂಕಿಪಾಕ್ಸ್ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಮುಂದುವರೆದಿದೆ, ಇದು ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಅತ್ಯುನ್ನತ ಮಟ್ಟದ ಎಚ್ಚರಿಕೆಯಾಗಿದೆ.
ಇದನ್ನೂ ಓದಿ: ಶೀತದಿಂದ ಹೃದಯಾಘಾತದ ಸಾಧ್ಯತೆಗಳು ಶೇ 50 ಹೆಚ್ಚು.. ಮುನ್ನೆಚ್ಚರಿಕೆ ಕುರಿತು ವೈದ್ಯರ ಸಲಹೆ ಹೀಗಿವೆ