ETV Bharat / sukhibhava

ವಿಶ್ವ ಕ್ಯಾನ್ಸರ್​ ದಿನ: ರೋಗವನ್ನು ಗೆದ್ದು ಹಲವರ ಬಾಳಿಗೆ ಬೆಳಕಾದವರ ಸ್ಟೋರಿ

author img

By

Published : Feb 4, 2023, 1:36 PM IST

ಇಂದು ವಿಶ್ವ ಕ್ಯಾನ್ಸರ್​ ದಿನ- ಕ್ಯಾನ್ಸರ್​ಗೆ ತುತ್ತಾಗಿ ಅದರಿಂದ ಹೊರಬಂದು ಇತರೆ​ ರೋಗಿಗಳ ಪಾಲಿಗೆ ಬೆಳಕು - ಚೇತರಿಸಿಕೊಂಡವರ ಜೀವನ ಕಥೆ

World Cancer Day
ವಿಶ್ವ ಕ್ಯಾನ್ಸರ್​ ದಿನ

ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್​ ದಿನವನ್ನು ಆಚರಣೆ ಮಾಡಲಾಗುತ್ತದೆ. ಕ್ಯಾನ್ಸರ್​ಗಳಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ವಿಧಗಳಿವೆ. ಚರ್ಮದ ಕ್ಯಾನ್ಸರ್​, ಸ್ತನ ಕ್ಯಾನ್ಸರ್​, ಶ್ವಾಸಕೋಶದ ಕ್ಯಾನ್ಸರ್​, ಬಾಯಿಯ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಬ್ರೇನ್ ಕ್ಯಾನ್ಸರ್​ಗಳಿವೆ. ಆದರೆ ಭಾರತದಲ್ಲಿ ಬಾಯಿ, ಗರ್ಭಾಶಯ ಮತ್ತು ಸ್ತನ ಕ್ಯಾನ್ಸರ್​ಗಳು ಹೆಚ್ಚಾಗಿ ಕಂಡುಬರುತ್ತವೆ.

ಕ್ಯಾನ್ಸರ್​ ಕಾಯಿಲೆ ಬಂದವರಿಗೆ ಕೂದಲುಗಳು ಉದುರುವುದು, ಲೆಕ್ಕವಿಲ್ಲದಷ್ಟು ಚುಚ್ಚುಮದ್ದುಗಳು, ದೇಹವನ್ನು ಗರಗಸದಲ್ಲಿ ಕತ್ತರಿಸುವಂತೆ ನೋವು ಕೊಡುವ ಕೀಮೋಸ್​ ಎಲ್ಲಾ ಸಮಸ್ಯೆಗಳನ್ನು ಒಮ್ಮೆಲೇ ಎದುರಿಸಬೇಕಾಗುತ್ತದೆ. ಇದೆಲ್ಲಾ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಿದವರು ಇತರೆ ಕ್ಯಾನ್ಸರ್​ ರೋಗಿಗಳ ಬಾಳಿಗೆ ಬೆಳಕಾಗಿದ್ದಾರೆ. ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.

'ಕನಸುಗಳು ಮತ್ತು ಸಾಧಿಸುವ ಗುರಿಯನ್ನು ನಾಶಪಡಿಸಿತು...' "ನಾನು ಸ್ವಾಗತಿಕಾ ಆಚಾರ್ಯ. ನನಗಿನ್ನೂ 19 ವರ್ಷ ವಯಸ್ಸು. ಕ್ಯಾನ್ಸರ್​ ನನ್ನ ಜೀವನದ ಕನಸುಗಳು ಮತ್ತು ಸಾಧಿಸುವ ಗುರಿಯನ್ನೇ ನಾಶಪಡಿಸಿತು. ನಾನು ಅದರ ವಿರುದ್ಧ ಹೋರಾಡಲು ಸಿದ್ದವಿದ್ದೇನಾ? ಎಂಬ ಭಯ ನನ್ನಲ್ಲಿತ್ತು. ಅಲ್ಲದೇ ನೂರಾರು ಚುಚ್ಚುಮದ್ದುಗಳು ನನ್ನ ದೇಹವನ್ನು ಸೇರುತ್ತಿದ್ದವು. ನಾಲ್ಕು ತಿಂಗಳು ನನಗೆ ಮಾತನಾಡಲು ಸಾಧ್ಯವಿರಲಿಲ್ಲ. ದ್ರವ ರೂಪದ ಆಹಾರವನ್ನು ಮಾತ್ರ ಸೇವಿಸುತ್ತಿದ್ದೆ. ಕೂದಲು ಉದುರುವಿಕೆ, ಮುಖದ ಬಣ್ಣ ಬದಲಾವಣೆ, ತೂಕ ನಷ್ಟ ಎಲ್ಲವೂ ಆಗಿತ್ತು."

"ಇದರ ಜೊತೆಗೆ ನೀನು ಮದುವೆಯಾಗಿಲ್ಲ. ಅಜ್ಜ, ಅಜ್ಜಿಗೆ ಹೊರೆ ಎಂಬ ನೇರ ಮಾತುಗಳು. ನಾನು ಮಾನಸಿವಾಗಿ ಸಧೃಢವಾಗಿರುವುದತ್ತ ಗಮನ ಹರಿಸುತ್ತಿದ್ದೆ. ಆದರೆ ಕೆಲವರು ಹಾಗಿಲ್ಲ. ಅವರು ಖಿನ್ನತೆಗೆ ಒಳಗಾಗುವುದಲ್ಲದೇ, ಭಯಪಡುವುದನ್ನು ನಾನು ಗಮನಿಸಿದ್ದೇನೆ. ಅಲ್ಲದೇ ಕೆಲವರಿಗೆ ಚಿಕಿತ್ಸೆಯ ವೆಚ್ಚ ಭರಿಸಲು ಸಾಧ್ಯವಾಗದೇ ತುಂಬಾ ಚಿಂತಿತರಾಗಿರುತ್ತಾರೆ. ಅದಕ್ಕಾಗಿಯೇ ನಾನು ಕ್ಯಾನ್ಸರ್​ನಿಂದ ಮುಕ್ತಿ ಪಡೆದ ಮರುವರ್ಷವೇ ಉಚಿತವಾಗಿ ಕ್ಯಾನ್ಸರ್​ ಸೇವೆಗಳನ್ನು ಒದಗಿಸುವ ಸಂಸ್ಥೆಗಳ ಬಗ್ಗೆ ತಿಳಿದುಕೊಂಡೆ. ಅದರಂತೆ 2018ರ ಕೊನೆಯಲ್ಲಿ 'ಅವೇಕನ್ ಕ್ಯಾನ್ಸರ್ ಕೇರ್ ಟ್ರಸ್ಟ್' ಅನ್ನು ಪ್ರಾರಂಭಿಸಿದೆ."

'ನಾನು ಕ್ಯಾನ್ಸರ್​ ಸೋಲಿಸಿದಂತೆ ನೀವೂ ಸೋಲಿಸಿ..' ಸ್ವಾಗತಿಕಾ ಒಡಿಶಾ ರಾಜ್ಯದ ಕಟಕ್​ನವರು. ತನ್ನ ಎನ್​ಜಿಒ ಮೂಲಕ ಸಾವಿರಾರು ಕ್ಯಾನ್ಸರ್​ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ 5 ಸಾವಿರ ಗ್ರಾಮೀಣ ಮಹಿಳೆಯರಿಗೆ ಉಚಿತ ಪರೀಕ್ಷೆಗಳನ್ನು ನಡೆಸಿದ್ದಾರೆ. ಸಂತ್ರಸ್ತರಿಗೆ ವೈದ್ಯಕೀಯ ಸೌಲಭ್ಯಗಳು ಮತ್ತು ಆರೋಗ್ಯಕರ ಆಹಾರವನ್ನು ಒದಗಿಸಿದ್ದಾರೆ. ಜೊತೆಗೆ ಅವರಿಗೆ 'ನಾನು ಕ್ಯಾನ್ಸರ್​ ಸೋಲಿಸಿದಂತೆ ನೀವೂ ಸೋಲಿಸಿ' ಎಂದು ಧೈರ್ಯ ತುಂಬುತ್ತಾರೆ.

ಸ್ತನ ಕ್ಯಾನ್ಸರ್​ಗೆ ತುತ್ತಾಗಿದ್ದ ಪ್ರೇಮಿ ಮ್ಯಾಥ್ಯೂ: ಪ್ರೇಮಿ ಮ್ಯಾಥ್ಯೂ ಎಂಬವರು ಸ್ತನ ಕ್ಯಾನ್ಸರ್​ಗೆ ತುತ್ತಾಗಿದ್ದರು. ಅವರಿಗೆ ವಿವಾಹವಾಗಿದ್ದು, ಪತಿ ಶಸ್ತ್ರಚಿಕಿತ್ಸಕರಾಗಿದ್ದಾರೆ. ಅವರ ಹುಟ್ಟೂರು ಎರ್ನಾಕುಲಂ ಆದರೂ ಉದ್ಯೋಗಿಯಾಗಿ ಅಬುಧಾಬಿಯಲ್ಲಿ ನೆಲೆಸಿದ್ದಾರೆ. ಮ್ಯಾಥ್ಯೂ ಅವರಿಗೆ ಎದೆಯಲ್ಲಿ ಗೆಡ್ಡೆ ಕಾಣಿಸಿಕೊಂಡಿತ್ತು. ಬಳಿಕ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದು ಸ್ತನ ಕ್ಯಾನ್ಸರ್​ ಎಂಬುದಾಗಿ ಕಂಡುಬಂದಿತ್ತು ಮತ್ತು ಎರಡನೇ ಹಂತವಾಗಿದ್ದರಿಂದ ಆರು ತಿಂಗಳ ಚಿಕಿತ್ಸೆಯಲ್ಲಿ ಗುಣಮುಖರಾದರು.

ಪ್ರೇಮಿ ಮ್ಯಾಥ್ಯೂ ಮಾತು.. ''ಆರೋಗ್ಯದ ಬಗ್ಗೆ ನನಗೆ ನಿರ್ಲಕ್ಷ್ಯವಿಲ್ಲ. ನಾನು ಈ ಹಿಂದೆ ಒಂದು ಗಡ್ಡೆಯನ್ನು ಗಮನಿಸಿದ್ದೇನೆ ಮತ್ತು ವೈದ್ಯರನ್ನು ಸಂಪರ್ಕಿಸಿದ್ದೇನೆ. ಆದರೆ ಅವರು ಅದೆಲ್ಲಾ ಸಾಮಾನ್ಯ ಎಂದು ತಳ್ಳಿಹಾಕಿದರು. ಅದನ್ನೇ ನನ್ನ ಪತಿಗೆ ಹೇಳಿದಾಗ ಅವರು ಅನುಮಾನಗೊಂಡು ಪರೀಕ್ಷೆ ಮಾಡಿದ್ದಾರೆ. ಆಗ ನನಗೆ ಸ್ತನ ಕ್ಯಾನ್ಸರ್​ ಇರುವುದಾಗಿ ಗೊತ್ತಾಗಿದೆ. 6 ತಿಂಗಳ ಸತತ ಚಿಕಿತ್ಸೆಯ ನಂತರ ನಾನು ಅದರಿಂದ ಹೊರ ಬಂದೆ. ನನ್ನ ಪರಿಸ್ಥಿತಿಯೇ ಹೇಳತೀರದಾಗಿತ್ತು. ಹಾಗಾದರೆ ಉಳಿದವರ ಪಾಡೇನು? ಅದಕ್ಕಾಗಿಯೇ ನಾನು 2011 ರಲ್ಲಿ 'ಪ್ರೊಟೆಕ್ಟ್ ಯುವರ್ ಮಾಮ್ ಇಂಟರ್ನ್ಯಾಷನಲ್' ಅನ್ನು ಪ್ರಾರಂಭಿಸಿದೆ''

''ಹೇಗಿದ್ದರೂ ನಾನು ಪ್ರೊಫೆಸರ್! ಶಾಲಾ-ಕಾಲೇಜುಗಳಿಗೆ ಹೋಗಿ ಮಕ್ಕಳ ತಾಯಂದಿರಿಗೆ ಸ್ತನ ಪರೀಕ್ಷೆ ಮಾಡಿಸುತ್ತೇನೆ. ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಅನೇಕ ಜನರ ಕೂದಲು ಉದುರುತ್ತದೆ. ಕನ್ನಡಿಯಲ್ಲಿ ಕೂದಲು ಇಲ್ಲದ ಮುಖವನ್ನು ನೋಡುವುದು ಆತ್ಮವಿಶ್ವಾಸವನ್ನು ಕುಗ್ಗಿಸುವ ಅಂಶವಾಗಿದೆ. ಇದಕ್ಕಾಗಿಯೇ ನಾನು 2013ರಲ್ಲಿ ‘ಹೇರ್ ಫಾರ್ ಹೋಪ್’ ಆರಂಭಿಸಿ ಕೇಶದಾನಕ್ಕೆ ಉತ್ತೇಜನ ನೀಡಿದ್ದೇನೆ. ಭಾರತ, ಯುಎಇ, ಅಮೆರಿಕ ಮತ್ತು ಆಸ್ಟ್ರೇಲಿಯಾದಂತಹ ಹಲವು ದೇಶಗಳಿಂದ 30,000 ಕ್ಕೂ ಹೆಚ್ಚು ಜನರು ತಮ್ಮ ಕೂದಲನ್ನು ದಾನ ಮಾಡಿದ್ದಾರೆ."

59 ಹರೆಯದ ಪ್ರೇಮಿ ಮ್ಯಾಥ್ಯೂ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು 'ಭಾರತದಲ್ಲಿ 100 ಮಹಿಳಾ ಸಾಧಕರು' ಮತ್ತು 'ಏಷ್ಯಾದಲ್ಲಿನ ಸೂಪರ್ 100 ಮಹಿಳೆಯರು' ನಂತಹ ಪಟ್ಟಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಇಂತಹವರು ಕ್ಯಾನ್ಸರ್​ ರೋಗಿಗಳ ಬಾಳಿಗೆ ಆಶಾಕಿರಣವಾಗಿದ್ದಾರೆ.

ಇದನ್ನೂ ಓದಿ: ಜಗತ್ತಿನ ಕ್ಯಾನ್ಸರ್ ರೋಗಿಗಳ ಪೈಕಿ ಭಾರತೀಯರ ಪಾಲು ಶೇ 20! ಕಾರಣವೇನು? ಇಲ್ಲಿದೆ ಪರಿಹಾರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.