ETV Bharat / sukhibhava

ಹದಿಹರೆಯದ ಮಕ್ಕಳಿಗೆ ನೀವೇ ರೋಲ್​ ಮಾಡೆಲ್​.. ಅವರೊಂದಿಗೆ ಹೀಗೆ ನಡೆದುಕೊಳ್ಳಬೇಕು.. - ಹದಿಹರೆಯದ ಮಕ್ಕಳ ಬಗ್ಗೆ ಮಾಹಿತಿ

ಸಾಮಾನ್ಯವಾಗಿ, ಪೋಷಕರು ತಮ್ಮ ಮಕ್ಕಳೊಂದಿಗೆ ಕೋಪದಿಂದ ಮಾತನಾಡುವಾಗ, ಮಕ್ಕಳು ಸಹ ಅದೇ ರೀತಿಯಲ್ಲೇ ಪ್ರತಿಕ್ರಿಯಿಸುತ್ತಾರೆ. ಈ ವಯಸ್ಸಿನ ಮಕ್ಕಳು ಹೆಚ್ಚಿನ ಸಂವೇದನಾಶೀಲರಾಗಿರುವ ಕಾರಣ ನೀವು ಅವರಲ್ಲಿ ಕೋಪ ತೋರ್ಪಡಿಸಿದರೆ ನಿಮ್ಮ ಬಗ್ಗೆ ಅವರು ನಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಹುದು..

teenagers tantrums
ಹದಿಹರೆಯದ ಮಕ್ಕಳಿ
author img

By

Published : Dec 29, 2021, 4:52 PM IST

ಹದಿಹರೆಯವು ವ್ಯಕ್ತಿಯ ಜೀವನದಲ್ಲಿ ಒಂದು ಸೂಕ್ಷ್ಮ ಹಂತವಾಗಿದೆ. ದೇಹದಲ್ಲಿ ಸಾಕಷ್ಟು ಹಾರ್ಮೋನ್ ಮತ್ತು ದೈಹಿಕ ಬದಲಾವಣೆಗಳು ಸಂಭವಿಸುವುದಲ್ಲದೇ, ಮಗುವಿನ ಮನಸ್ಥಿತಿ ಮತ್ತು ನಡವಳಿಕೆಯ ಮೇಲೂ ಅದರ ಪ್ರಭಾವವನ್ನು ಕಾಣಬಹುದು. ಆದ್ದರಿಂದ, ಅವರು ಹೆಚ್ಚಾಗಿ ಕಿರಿಕಿರಿ, ಕೋಪ ಮತ್ತು ಮುನಿಸನ್ನು ಬೆಳೆಸಿಕೊಳ್ಳುತ್ತಾರೆ.

ಮಕ್ಕಳು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಅನೇಕ ಹೊಸ ವಿಷಯಗಳು ಮತ್ತು ಸಮಸ್ಯೆಗಳನ್ನು ಎದುರಿಸುವ ಹಂತವಾಗಿದೆ. ಅಲ್ಲದೆ, ಅವರು ಶಾಲೆ, ಸ್ನೇಹಿತರು, ಕುಟುಂಬ, ಸಮಾಜ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಒತ್ತಡವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ.

ಅವರ ಮನಸ್ಸು ಕುತೂಹಲದ ಗೂಡಾಗಿರುತ್ತದೆ. ಇದಲ್ಲದೆ, ಅವರು ಎಲ್ಲದರಲ್ಲೂ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಕುತೂಹಲಗಳು ತಣಿಯದಿದ್ದಾಗ, ಅವರ ಬೇಡಿಕೆಗಳು ಈಡೇರದಿದ್ದಾಗ ಅವರ ನಡವಳಿಕೆ ವಿಪರೀತವಾಗಿರುತ್ತದೆ.

ಹದಿಹರೆಯದವರನ್ನು ಹೇಗೆ ಎದುರಿಸುವುದು?

ಈ ವಯಸ್ಸಿನ ಮಕ್ಕಳ ಆಲೋಚನಾ ಕ್ರಮ ಮತ್ತು ಅವರ ನಡವಳಿಕೆಯನ್ನು ಪೋಷಕರು ಹೆಚ್ಚಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಿ, ಆಗ ಮಾತ್ರ ಅವರು ಎಲ್ಲ ವಿಷಯಗಳ ಬಗ್ಗೆಯೂ ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಬಹುದು.

ಸಾಮಾನ್ಯವಾಗಿ, ಪೋಷಕರು ತಮ್ಮ ಮಕ್ಕಳೊಂದಿಗೆ ಕೋಪದಿಂದ ಮಾತನಾಡುವಾಗ, ಮಕ್ಕಳು ಸಹ ಅದೇ ರೀತಿಯಲ್ಲೇ ಪ್ರತಿಕ್ರಿಯಿಸುತ್ತಾರೆ. ಈ ವಯಸ್ಸಿನ ಮಕ್ಕಳು ಹೆಚ್ಚಿನ ಸಂವೇದನಾಶೀಲರಾಗಿರುವ ಕಾರಣ ನೀವು ಅವರಲ್ಲಿ ಕೋಪ ತೋರ್ಪಡಿಸಿದರೆ ನಿಮ್ಮ ಬಗ್ಗೆ ಅವರು ನಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಹುದು.

ಇದರ ಬದಲಾಗಿ ಪೋಷಕರು ಶಾಂತಚಿತ್ತದಿಂದ ಮಕ್ಕಳನ್ನು ಮೃದುವಾಗಿ ಮಾತನಾಡಿಸಿ ಅವರ ಮಾತು, ಆಲೋಚನೆಗಳಿಗೆ ಅವಕಾಶ ನೀಡಬೇಕು. ಇದು ಮಕ್ಕಳು ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮಕ್ಕಳ ಜೊತೆ ವಾದ ಮಾಡಬೇಡಿ

ಮಕ್ಕಳು ವಿಪರೀತ ಕೋಪಗೊಂಡಾಗ ಅವರೊಂದಿಗೆ ಮಾತನಾಡುವುದು ಅಥವಾ ವಿವರಿಸುವುದು ಅರ್ಥಹೀನ ಎನ್ನುತ್ತಾರೆ ಡಾ.ರೇಣುಕಾ. ಮಕ್ಕಳು ಕೋಪಗೊಂಡಾಗ ಅವರ ಪಾಡಿಗೆ ಅವರನ್ನು ಬಿಡಬೇಕು. ಕೋಪದಲ್ಲಿ ಅವರ ಮನಸ್ಸು ಸ್ಥಿಮಿತ ಕಳೆದುಕೊಂಡಿರುತ್ತದೆ.

ಈ ವೇಳೆ ಮಾತು ಶುರು ಮಾಡಿದರೆ ಮಾತಿಗೆ ಮಾತು ಬೆಳೆದು ವಾದ-ಪ್ರತಿವಾದದಿಂದ ನಿಮ್ಮ ಮಗು ಇನ್ನಷ್ಟು ಕಠೋರವಾಗುವ ಸಾಧ್ಯತೆ ಇರುತ್ತದೆ. ಅವರು ಶಾಂತರಾದಾಗ ಕೇಳುವ ಮನಸ್ಸು ಇದ್ದಾಗ ವಿಷಯವನ್ನು ಅರ್ಥ ಮಾಡಿಸಬೇಕು.

ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಿರಿ

ಹದಿಹರೆಯದ ಮಕ್ಕಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸ್ವತಂತ್ರವಾಗಿರಲು ಬಯಸುತ್ತಾರೆ. ಪೋಷಕರ ನಿರ್ದಿಷ್ಟ ಕಟ್ಟು ಪಾಡುಗಳಿಗೆ ಒಳಗಾಗಲು ಅವರು ಮನಸ್ಸು ಒಪ್ಪುವುದಿಲ್ಲ. ಅಲ್ಲದೆ, ಅನೇಕ ಬಾರಿ ಪೋಷಕರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವಾಗದಿದ್ದರೆ, ಅವರು ಒಂಟಿತನವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ.

ವಿವಿಧ ಕಾರಣಗಳಿಂದ ಅವರು ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲ. ಇದು ಅವರೊಳಗೆ ಕೋಪ, ಅಂತರವನ್ನು ಪ್ರಚೋದಿಸಬಹುದು. ಮಕ್ಕಳು ಇನ್ನೂ ಚಿಕ್ಕವರು ಎಂಬ ಭಾವನೆಯನ್ನು ಯಾವಾಗಲೂ ಮೂಡಿಸಬಾರದು. ಬದಲಿಗೆ ಸ್ವಾವಲಂಬಿಗಳಾಗಲು ಅವರಿಗೆ ಅವಕಾಶ ನೀಡಬೇಕು. ಇದು ಅವರಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬಲಪಡಿಸುತ್ತದೆ.

ನಿಮ್ಮ ನಡವಳಿಕೆ ಮಕ್ಕಳಿಗೆ ಮಾದರಿ

ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಮತ್ತು ಕೆಟ್ಟದ್ದರ ಬಗ್ಗೆ ಅರಿವು ಮೂಡಿಡುತ್ತಾರೆ. ಆದರೆ, ಅವರೇ ಅದನ್ನು ಅನುಸರಿಸುವುದಿಲ್ಲ. ಮಕ್ಕಳು ತಮ್ಮ ಹೆತ್ತವರನ್ನು ಅವರ 'ರೋಲ್ ಮಾಡೆಲ್' ಎಂದು ಪರಿಗಣಿಸುತ್ತಾರೆ. ಅವರಂತೆಯೇ ನಡೆದುಕೊಳ್ಳಲು ಪ್ರಯತ್ನಿಸುತ್ತಾರೆ.

ಮಕ್ಕಳು ಪದಗಳಿಗಿಂತ ಕ್ರಿಯೆಗಳಿಂದ ಹೆಚ್ಚು ಕಲಿಯುತ್ತಾರೆ. ಆದ್ದರಿಂದ, ಶಿಸ್ತನ್ನು ಅನುಸರಿಸುವುದು, ಇತರರೊಂದಿಗೆ ಸೌಮ್ಯವಾಗಿರುವುದು, ಉತ್ತಮ ನಡವಳಿಕೆ ಮತ್ತು ಭಾವನೆಗಳ ಮೇಲೆ ನಿಯಂತ್ರಣವನ್ನು ಹೊಂದಿರುವಂತಹ ಉತ್ತಮ ಅಭ್ಯಾಸಗಳನ್ನು ಮನೆಯಲ್ಲಿಯೂ ಕಲಿಸಬೇಕು.

ಪೋಷಕರು ತಮ್ಮ ಮಗುವಿನ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮಗು ಕೋಪಗೊಂಡಿದ್ದರೆ, ಬರೀ ಮಾತನಾಡುತ್ತಿದ್ದರೆ ಅಥವಾ ಸರಿಯಾಗಿ ತಿನ್ನದಿದ್ದರೆ ಅಥವಾ ತನಗೆ ತಾನೇ ಹಾನಿ ಮಾಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದರೆ ಅದನ್ನು ಪೋಷಕರು ತಕ್ಷಣ ಪತ್ತೆ ಹಚ್ಚಿ ಸಮಾಲೋಚನೆ ಮಾಡಬೇಕು. ಆಗ ಮಗು ತನ್ನಲ್ಲಿನ ಗೊಂದಲವನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.