ETV Bharat / sukhibhava

TikTok ಹದಿಹರೆಯದವರಲ್ಲಿ ಕೆಟ್ಟ ಆಹಾರ ಸಂಸ್ಕೃತಿ ಉತ್ತೇಜಿಸುತ್ತದೆ: ಸಂಶೋಧನೆ - ಕೆಟ್ಟ ಆಹಾರ ಪದ್ಧತಿ

ವರ್ಮೊಂಟ್ ವಿಶ್ವವಿದ್ಯಾನಿಲಯದ ಹೊಸ ಸಂಶೋಧನೆಯ ಪ್ರಕಾರ, ಆಹಾರ, ಪೋಷಕಾಂಶ ಮತ್ತು ತೂಕ ನಷ್ಟಕ್ಕೆ ಸಂಬಂಧಿಸಿದ ಅತ್ಯಂತ ಜನಪ್ರಿಯ TikTok ವಿಡಿಯೋಗಳು ಕೆಟ್ಟ ಆಹಾರ ಪದ್ಧತಿಗೆ ಕಾರಣವಾಗುತ್ತವೆ.

ಟಿಕ್​ಟಾಕ್
ಟಿಕ್​ಟಾಕ್
author img

By

Published : Nov 28, 2022, 3:59 PM IST

ವರ್ಮೊಂಟ್: ಟಿಕ್​ಟಾಕ್​ನಲ್ಲಿ ಆಹಾರ, ಪೋಷಕಾಂಶ ಮತ್ತು ತೂಕ ಕಡಿಮೆ ಮಾಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ಹಾಕಲಾಗುತ್ತದೆ. ಈ ವಿಡಿಯೋಗಳು ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಹಾನಿಕಾರಕ ಆಹಾರ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಂತೆ ಮಾಡುತ್ತವೆ ಎಂದು ಸಂಶೋಧನೆ ಹೇಳಿದೆ.

PLOS One ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಲೇಖನವೊಂದು ಪ್ರಕಟವಾಗಿದೆ. ಟಿಕ್​ ಟಾಕ್​ನಲ್ಲಿ ಹೆಚ್ಚಾಗಿ ತೂಕ ನಷ್ಟಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹಾಕಲಾಗುತ್ತಿದೆ. ತೆಳ್ಳಗೆ ಆಗಲು ಯಾವ ರೀತಿ ಆಹಾರ ಸೇವಿಸಬೇಕು ಎಂಬುದರ ಬಗ್ಗೆ ವಿಡಿಯೋಗಳು ಇರುತ್ತವೆ. ಇದು ಅವರ ಆಹಾರ ಪದ್ಧತಿಯ ಮೇಲೆ ಪರಿಣಾಮ ಬೀರಬಹುದು ಎಂದು ಸಂಶೋಧನೆ ಹೇಳಿದೆ.

ಪ್ರತಿದಿನ ಲಕ್ಷಾಂತರ ಹದಿಹರೆಯದವರು ಮತ್ತು ಯುವ ವಯಸ್ಕರಿಗೆ ಟಿಕ್‌ಟಾಕ್‌ನಲ್ಲಿ ಯಾವ ರೀತಿ ಆಹಾರವನ್ನು ಸೇವಿಸಬೇಕು ಎಂಬುದರ ಬಗ್ಗೆ ಹೇಳಲಾಗುತ್ತಿದೆ. ಇದು ಆಹಾರ, ಪೋಷಕಾಂಶ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಯುವಿಎಂನ ಡಯೆಟಿಕ್ಸ್‌ನಲ್ಲಿ ಡಿಡಾಕ್ಟಿಕ್ ಪ್ರೋಗ್ರಾಂನ ಸಹ ಪ್ರಾಧ್ಯಾಪಕ ಮತ್ತು ನಿರ್ದೇಶಕಿ ಹಿರಿಯ ಸಂಶೋಧಕ ಲಿಜ್ಜಿ ಪೋಪ್ ಹೇಳಿದ್ದಾರೆ.

ಇದನ್ನೂ ಓದಿ: ಕಡಿಮೆ ಜ್ವರ ಪ್ರಕರಣಗಳಲ್ಲಿ ಪ್ರತಿಜೀವಕ ಮಾತ್ರೆ ಬಳಸಬೇಡಿ: ICMR

ಟಿಕ್​ಟಾಕ್​ನಲ್ಲಿ ತೂಕನಷ್ಟಕ್ಕೆ ಇರುವ ಟಾಪ್ 10 ವಿಡಿಯೋಗಳು ಮತ್ತು ಹ್ಯಾಶ್​ಟ್ಯಾಗ್​ಗಳಿಂದ ಆಯ್ದ ಟಾಪ್​ 100 ವಿಡಿಯೋಗಳ ಆಧಾರದ ಮೇಲೆ ಈ ಸಂಶೋಧನೆ ಮಾಡಲಾಗಿದೆ. 2020 ರಲ್ಲಿ ಅಧ್ಯಯನ ಪ್ರಾರಂಭವಾದಾಗ, ಪ್ರತಿ 10 ಹ್ಯಾಶ್‌ಟ್ಯಾಗ್‌ಗಳು ಶತಕೋಟಿಗಿಂತ ಹೆಚ್ಚಿನ ವೀಕ್ಷಣೆಗಳನ್ನು ಹೊಂದಿದ್ದವು. ಟಿಕ್‌ಟಾಕ್‌ನ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಆಯ್ಕೆಮಾಡಿದ ಹ್ಯಾಶ್‌ಟ್ಯಾಗ್‌ಗಳು ಗಮನಾರ್ಹವಾಗಿ ಹೆಚ್ಚಾಗಿವೆ.

ಅಧ್ಯಯನದಲ್ಲಿ ವಿಶ್ಲೇಷಿಸಲಾದ ಹೆಚ್ಚಿನ ವಿಷಯವನ್ನು ಹದಿಹರೆಯದ ಮಹಿಳೆಯರು ಮತ್ತು ಯುವ ವಯಸ್ಕರು ತಯಾರಿಸಿದ್ದಾರೆ. ಸಂಶೋಧಕರು, ತಜ್ಞರು, ವೈದ್ಯರು ಅಥವಾ ಪ್ರಮಾಣೀಕೃತ ತರಬೇತುದಾರರ ಅಭಿಪ್ರಾಯಗಳನ್ನು ಸಂಶೋಧಕರು ಪರಿಗಣಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.