ನವದೆಹಲಿ: ನಮ್ಮ ಡಯಟ್ನಲ್ಲಿ ಪೋಷಕಾಂಶಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಆರೋಗ್ಯಯುತ ಜೀವನಶೈಲಿ ಜೊತೆ ಪೋಷಕಯುಕ್ತ ಆಹಾರ ಸೇವನೆ ನಿರ್ವಹಣೆ ಸವಾಲಿನಿಂದ ಕೂಡಿರಲಿದೆ. ಪ್ರತಿಯೊಬ್ಬರೂ ಆರೋಗ್ಯಯುತ ಆಹಾರ ಸೇವನೆ ಜೊತೆ ಫಿಟ್ ಆಗಿರಬೇಕು. ಆದರೆ, ಎಲ್ಲಿಂದ ಆರಂಭಿಸುವುದು? ಅನಾರೋಗ್ಯದಿಂದ ಆರೋಗ್ಯವನ್ನು ಆರಿಸಿಕೊಳ್ಳುವುದು ಹೇಗೆ? ಎಂಬೆಲ್ಲ ಪ್ರಶ್ನೆಗಳು ಬರುತ್ತದೆ. ಸೆಲೆಬ್ರಿಟಿ ನ್ಯೂಟ್ರಿಷಿಯನ್ ಮತ್ತು ಕ್ಯೂಯುಎ ನ್ಯೂಟ್ರಿಷಿಯನ್ ಸಂಸ್ಥಾಪಕರಾದ ರಯನ್ ಫೆಮನ್ಡೊ ಇದಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಡಯಟ್ನಲ್ಲಿರಲಿ ಒಮೆಗಾ 3: ಒಮೆಗಾ 3 ಅತ್ಯಂತ ಅವಶ್ಯಕ ಪೋಷಕಾಂಶವಾಗಿದೆ. ಇದು ಉತ್ತಮ ಫ್ಯಾಟ್ ಮೂಲ ಇದಾಗಿದ್ದು, ಇದನ್ನು ಆಹಾರದ ಮೂಲಕ ಪಡೆಯಬಹುದಾಗಿದೆ. ಇದು ಹೃದಯ ಕಾಯಿಲೆಯ ತಡೆಗಟ್ಟುತ್ತದೆ. ಜೊತೆಗೆ ಆರೋಗ್ಯಯುತ ಪ್ರತಿರೋಧಕ ವ್ಯವಸ್ಥೆ ಬೆಂಬಲಿಸಲು ಸಹಾಯಕವಾಗಿದೆ, ಮಿದುಳಿನ ಆರೋಗ್ಯಕ್ಕೆ ಇದು ಅತ್ಯಂತ ಅವಶ್ಯವೂ ಆಗಿದೆ.
ಪ್ರೋಟಿನ್ ಭರಿತ ಆಹಾರ - ಒಮೆಗಾ 3 ಜೊತೆಯಲ್ಲಿ ಡಯಟ್ನಲ್ಲಿ ಪ್ರೋಟಿನ್ ಕಾಪಾಡುವಂತೆ ನೋಡಿಕೊಳ್ಳುವುದು ಅವಶ್ಯವಾಗಿದೆ. ದೇಹದಲ್ಲಿರುವ ಮ್ಯಾಕ್ರೋನ್ಯೂಟ್ರಿಯೆಂಟ್ ಆರೋಗ್ಯಯುತವಾಗಿರಬೇಕಿದೆ. ಈ ಪೋಷಕಾಂಶದಿಂದ ಅನಾವಶ್ಯಕ ಬಾಯಿ ಚಟಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಆರೋಗ್ಯಯುತ ತೂಕ ನಿರ್ವಹಣೆಗೆ ಸಹಾಯ ಮಾಡಿದಂತಾಗುತ್ತದೆ. ಈ ಪೋಷಕಾಂಶಗಳು ಟಿಶ್ಯೂ ನಿರ್ಮಾಣ ಮಾಡಿ ರಿಪೇರಿ ಮಾಡುತ್ತದೆ. ಮೊಟ್ಟೆ, ಚಿಕನ್ ಡೈರಿ ಉತ್ಪನ್ನ ಮತ್ತು ವಾಲ್ನಟ್ ಸೇರಿದಂತೆ ಹಲವುಗಳಲ್ಲಿ ಪ್ರೋಟಿನ್ ಸಿಗುತ್ತದೆ.
ಸ್ನಾಕ್ಸ್ ಸ್ಮಾರ್ಟ್: ನಿಯಮಿತವಾಗಿ ಹಾಗೂ ಮಿತವಾಗಿ ಲಘು ಉಪಾಹಾರವನ್ನು ಸೇವಿಸಬೇಕು. ಈ ಲಘು ಆಹಾರ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕಾಗಿರುವಂತೆ ನೋಡಿಕೊಳ್ಳಬೇಕು. ಅಧಿಕ ಸಕ್ಕರೆ, ಉಪ್ಪು ಮತ್ತು ಫ್ಯಾಟ್ ಹೊಂದಿರುವ ಸ್ನಾಕ್ಸ್ ಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು. ಹಣ್ಣು, ವೆಜಿಟೇಬಲ್, ನಟ್ಸ್ ಮತ್ತು ಧಾನ್ಯಗಳ ಬಳಕೆಯನ್ನು ಹೆಚ್ಚು ಮಾಡಿಕೊಂಡು, ಮಿತಮಾಡಬೇಕು.
ಆಹಾರದ ನಿಯಂತ್ರಣ ಇರಲಿ: ಏನು ತಿನ್ನುತ್ತೀರಾ ಎಂಬುದಷ್ಟೇ ಮುಖ್ಯವಲ್ಲ ಎಷ್ಟು ತಿನ್ನುತ್ತೀರಿ ಎಂಬುದು ಕೂಡಾ ಅಷ್ಟೇ ಮುಖ್ಯವಾಗುತ್ತದೆ. ಬೇಸರವಾದಾಗ, ಮಿಕ್ಕಿದೆ ಎಂದು ಅನೇಕ ಬಾರಿ ಸುಮ್ಮನೇ ಹೆಚ್ಚು ತಿನ್ನುವುದು ಅಭ್ಯಾಸವಾಗಿರುತ್ತದೆ. ಇದನ್ನು ದಯವಿಟ್ಟು ಅವಾಯ್ಡ್ ಮಾಡಬೇಕು. ಇದನ್ನು ನಿಲ್ಲಿಸದಿದ್ದರೆ, ಅದು ರೋಗ, ಬೊಜ್ಜು ಅಥವಾ ಡಯಾಬೀಟಿಸ್ ಸಮಸ್ಯೆಗೂ ಕಾರಣವಾಗುತ್ತದೆ. ಹಾಗಾಗಿ ಎಷ್ಟು ಬೇಕೋ ಅಷ್ಟನ್ನೇ ಸೇವನೆ ಮಾಡಿ.
ಆಹಾರ ಕೊಳ್ಳುವ ಮುನ್ನ ಲೇಬಲ್ ಓದಿ: ಡಯಟ್ ಎನ್ನುವುದು ಕ್ಯಾಲರೀಸ್ಗಳನ್ನು ಕಡಿತಗೊಳಿಸುವುದು ಅಥವಾ ನಿಯಂತ್ರಣ ಮಾಡುವುದು ಅಷ್ಟೇ ಅಲ್ಲ. ಆಹಾರದ ಬಗ್ಗೆ ಕೂಡ ಗಮನ ನೀಡುವುದಾಗಿದೆ. ಅದರ ಪೋಷಕಾಂಶದ ಬಗ್ಗೆ ಗಮನಹರಿಸುವುದಾಗಿದೆ. ಯಾವುದೇ ಪೋಷಕಾಂಶ ಆಹಾರ ಕೊಳ್ಳುವಾಗ ಅದರ ಲೇಬಲ್ನ ಅದರ ಪ್ರಮಾಣ, ಯಾವ ಆಹಾರವನ್ನು ಹೊಂದಿರುತ್ತದೆ. ಅಲರ್ಜಿಕ್ ಪ್ರಮಾಣ ಏನು ಎಂಬುದರ ಬಗ್ಗೆ ತಿಳಿಯಬೇಕು.
ಇದನ್ನೂ ಓದಿ: ಉತ್ತಮ ಆಹಾರ ಪದ್ಧತಿಯಿಂದ ಹೃದಯ ಸಂಬಂಧಿ ಸಾವು ತಡೆಯಬಹುದು: ಅಧ್ಯಯನ