ETV Bharat / sukhibhava

ಮಗು ಹೊಂದುವ ಕನಸಿಗೆ ಅಡ್ಡಿಯಾಗುವುದು ಈ ಜೀವನ ಶೈಲಿ: ಬೇಕಿದೆ ಆರೋಗ್ಯಕರ ಅಭ್ಯಾಸ

ಸಂತಾನೋತ್ಪತ್ತಿ ಮೇಲೆ ಯಾವ ಅಂಶಗಳು ಪ್ರಮುಖವಾಗುತ್ತವೆ ಎಂದು ಅರಿತು, ಅರ್ಥೈಸಿಕೊಳ್ಳುವುದು ಅವಶ್ಯವಾಗಿದೆ ಎನ್ನುತ್ತಾರೆ ಐವಿಎಫ್​ನ ಫಲವತ್ತತೆ ತಜ್ಞೆ ಡಾ ನಿಖಿತಾ ಮೂರ್ತಿ.

This lifestyle hinders the dream of having a child

author img

By ETV Bharat Karnataka Team

Published : Oct 28, 2023, 12:28 PM IST

ನವದೆಹಲಿ: ಮಗುವನ್ನು ಪಡೆಯಬೇಕೆಂಬ ಹಂಬಲದ ಮೇಲೆ ಆರೋಗ್ಯ ಮತ್ತು ವಿರ್ಯಾಣುಗಳು ಸಂಖ್ಯೆ ಅತ್ಯಂತ ನಿರ್ಣಾಯಕ ಪಾತ್ರವನ್ನು ಹೊಂದಿದೆ. ಅನೇಕ ಜೀವನಶೈಲಿಯ ಬದಲಾವಣೆಗಳು ಈ ವೀರ್ಯಾಣಗಳು ಸಂಖ್ಯೆ ಮೇಲೆ ಪರಿಣಾಮ ಬೀರಿ ಆರೋಗ್ಯಕರ ಗರ್ಭಾವಸ್ಥೆ ಮೇಲೆ ಪರಿಣಾಮ ಬೀರುವುದು ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ ಸಂತಾನೋತ್ಪತ್ತಿ ಮೇಲೆ ಯಾವ ಅಂಶಗಳು ಪ್ರಮುಖವಾಗುತ್ತವೆ ಎಂದು ಅರಿತು, ಅರ್ಥೈಸಿಕೊಳ್ಳುವುದು ಅವಶ್ಯವಾಗಿದೆ ಎನ್ನುತ್ತಾರೆ ಐವಿಎಫ್​ನ ಫಲವತ್ತತೆ ತಜ್ಞೆ ಡಾ ನಿಖಿತಾ ಮೂರ್ತಿ. ಆರೋಗ್ಯಕರ ಮಗುವನ್ನು ಹೊಂದಲು ತೊಡಕಾಗುವ ಮತ್ತು ವೀರ್ಯಾಣುಗಳ ಸಂಖ್ಯೆ ಮೇಲೆ ಪ್ರಭಾವ ಬೀರುವ ಈ ಆರು ನಕಾರಾತ್ಮಕ ಅಂಶದಿಂದ ದೂರ ಇರುವುದು ಉತ್ತಮ ಎಂದು ಇವರು ಸಲಹೆ ನೀಡುತ್ತಾರೆ.

ಧೂಮಪಾನ ಮತ್ತು ಆಲ್ಕೋಹಾಲ್​ ಸೇವನೆ: ಆರೋಗ್ಯ ಮೇಲೆ ಪರಿಣಾಮ ಬೀರುವ ಪ್ರಮುಖ ಮತ್ತು ಮೊದಲ ಅಂಶ ಎಂದರೆ ಧೂಮಪಾನ ಮತ್ತು ತಂಬಾಕು ಬಳಕೆ. ಸಿಗರೇಟ್​ ಮತ್ತು ತಂಬಾಕಿಯನ್ನಲಿ 2 ಸಾವಿರಕ್ಕೂ ವಿಧದ ರಾಸಾಯನಿಕಗಳಿರುತ್ತದೆ. ಇದರಲ್ಲಿನ ನಿಕೋಟಿನ್​ ಹೆಚ್ಚಿನ ಹಾನಿ ಮಾಡುತ್ತದೆ. ಇದು ವೀರ್ಯಾಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ವೀರ್ಯಾಣುಗಳ ಚಲನಶೀಲತೆ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಇದು ಅಂಡಾಣುವಿಗೆ ಚಲಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಇದು ವೀರ್ಯಾಣುಗಳ ಮೂಲಕ ಡಿಎನ್​ಎಗೆ ಹಾನಿ ಮಾಡಬಹುದು. ಇದರಿಂದ ಗರ್ಭಪಾತ ಅಥವಾ ಗರ್ಭ ನಿಲ್ಲುವಲ್ಲಿ ಸಮಸ್ಯೆ ಎದುರಾಗಬಹುದು.

ಅದೇ ರೀತಿ ಅಪರೂಪಕ್ಕೆ ಸೇವಿಸುವ ಮದ್ಯಕೂಡ ವೀರ್ಯಾಣುಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಹೊಂದಿದೆ. ಇದು ಕೂಡ ವೀರ್ಯಾಣುಗಳ ಚಲನಶೀಲತೆ ಮೇಲೆ ತುಂಬಾ ಅಂದೆ ತುಂಬಾ ಪರಿಣಾಮ ಬೀರುತ್ತದೆ.

ಸ್ಥೂಲಕಾಯ: ದೇಹದ ಅಧಿಕ ತೂಕವೂ ಕೂಡ ವೀರ್ಯಾಣುಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಸ್ಥೂಲಕಾಯುವು ಹಾರ್ಮೋನ್​ಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ವಿಶೇಷವಾಗಿ ಈಸ್ಟ್ರೋಜನ್​ನಿಂದ ಟೆಸ್ಟ್ರೋಜನ್​ ದರದ ಮೇಲೆ ಪರಿಣಾಮ ಬೀರುತ್ತದೆ. ಈ ಹಾರ್ಮೋನ್​ ಬದಲಾವಣೆಗಳು ವೀರ್ಯಾಣಗಳು ಉತ್ಪಾದನೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಟೆಸ್ಟೊಸ್ಟ್ರೊನ್​ ಮಟ್ಟ ಕಡಿಮೆಯಾಗುತ್ತದೆ.

ಲಾಪ್​ಟಾಪ್​ನ ಅಧಿಕ ತಾಪ ಮತ್ತು ಬಿಗಿ ಪ್ಯಾಂಟ್​: ದೀರ್ಘಕಾಲದ ಬಿಸಿಯಾದ ಲ್ಯಾಪ್​ಟಾಪ್​ಗಳನ್ನು ತೊಡೆಯ ಮೇಲೆ ಇರಿಸಿಕೊಳ್ಳುವುದರಿಂದ ಅಥವಾ ಬಿಗಿಯಾದ ಪ್ಯಾಂಟ್​ ಧರಿಸುವುದರಿಂದ ಕೂಡ ವೀರ್ಯಾಣುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಬಿಡುಗಡೆಯಾಗುವಾಗ ಅಧಿಕ ತಾಪಮಾನವು ವೃಷಣಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇದು ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ.

ಲೈಂಗಿಕ ಆಟಿಕೆ ಬಳಕೆ: ಲೈಂಗಿಕ ಆಟಿಕೆ ಬಳಕೆಯು ಕೂಡ ವೀರ್ಯಾಣುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಕೂಡ ವೀರ್ಯಾಣಗಳು ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲರ್ಜಿ ಅಥವಾ ಮತ್ತಿತ್ತರ ಕಿರಿಕಿರಿಯಿಂದಾಗಿ ವೀರ್ಯಾಣುಗಳ ಮೇಲೆ ಪ್ರಭಾವ ಬೀರುತ್ತದೆ.

ಡಯಟ್​​: ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆ ಎಂಬುದು ಕೂಡ ವೀರ್ಯಾಣುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ಕೊಬ್ಬಿನ ಮತ್ತು ಪ್ಯಾಕ್ಡ್​​​, ರೆಡಿ ಟೂ ಈಟ್​ ಆಹಾರಗಳು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಾರ್ಬೋನೆಟೆಡ್​ ಪಾನೀಯಗಳು ಅಧಿಕ ಮಟ್ಟದ ಸಕ್ಕರೆ ಅಂಶವನ್ನು ಹೊಂದಿದ್ದು ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ತರಕಾತಿ, ಹಣ್ಣು ಮತ್ತು ಬೆಳೆಗಳಿಂದ ಕೂಡಿದ ಸಮೃದ್ಧ ಆಹಾರ ಸೇವನೆ ಅವಶ್ಯವಾಗಿದೆ.

ನಿದ್ರೆಯ ಕೊರತೆ: ನಿಯಮಿತ ನಿದ್ರೆ ಮಾಡುವುದು ಕೂಡ ಅಗತ್ಯವಾಗಿದೆ. ಶಿಫ್ಟ್​ ವರ್ಕ್​ ಅಥವಾ ಅನಿಯಮಿತ ನಿದ್ರೆಯ ಅವಧಿಗಳು ದೇಹದ ರಿಥಮ್​ ಮೇಲೆ ಹಾನಿ ಮಾಡಿ ಅವು ಗುಣಮಟ್ಟದ ವೀರ್ಯಾಣು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಒಟ್ಟಾರೆ ಆರೋಗ್ಯವನ್ನು ಕಾಪಾಡಲು ದಿನಕ್ಕೆ ಕನಿಷ್ಠ 7-8 ಗಂಟೆ ನಿದ್ದೆ ಮಾಡುವುದು ತುಂಬಾ ಎಂದರೆ ತುಂಬಾ ಅಶ್ಯಕವಾಗಿದೆ.

ಮಗುವನ್ನು ಹೊಂದುವ ಸಾಮರ್ಥ್ಯದ ಮೇಲೆ ನಮ್ಮ ಜೀವನಶೈಲಿ ಗಮನಾರ್ಹವಾದ ಪಾತ್ರವನ್ನು ಹೊಂದಿದೆ. ಹೀಗಾಗಿ ಈ ಬಗ್ಗೆ ಬಹಳ ಎಚ್ಚರ ವಹಿಸಬೇಕಿದೆ. ಸರಳ ಜೀವನ ಬದಲಾವಣೆಗಳು ಒಟ್ಟಾರೆ ಆರೋಗ್ಯದ ಮೇಲೆ ಪ್ರಯೋಜನ ನೀಡಿ ಆರೋಗ್ಯವಂತ ಕುಟುಂಬದ ಕನಸಿಗೆ ಸಹಕಾರಿಯಾಗಲಿದೆ ಎನ್ನುತಾರೆ ಡಾ ನಿಖಿತಾ. ( ಐಎಎನ್​ಎಸ್​)

ಇದನ್ನೂ ಓದಿ: ಹೃದಯಕ್ಕೆ ಹಾನಿ; ಮಕ್ಕಳ ಮೊಬೈಲ್, ಟಿವಿ​​​​​ ವೀಕ್ಷಣೆಗೆ ಬೇಕಿದೆ ಕಡಿವಾಣ.. ಇಲ್ಲದಿದ್ದರೆ ಆಗುವ ಅವಾಂತರ ಹೇಳೋಕಾಗಲ್ಲ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.