ETV Bharat / sukhibhava

ಚಳಿಗಾಲದಲ್ಲಿ ಈ ಸಿಹಿತಿನಿಸುಗಳ ಸೇವನೆ ಉತ್ತಮ: ದೇಹದ ಶಕ್ತಿಯ ಜೊತೆಗೆ ಉಷ್ಣತೆಯೂ ಹೆಚ್ಚಳ - ಸೋಂಕುಗಳಿಗೆ ಆಹ್ವಾನವನ್ನು ನೀಡುತ್ತದೆ

Food items for winters: ಚಳಿಗಾಲದ ಸಮಯದಲ್ಲಿ ಸೇವಿಸುವ ಆಹಾರಗಳು ದೇಹದ ತಾಪ ಹೆಚ್ಚಿಸುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವಂತಿರಲಿ. ಈ ನಿಟ್ಟಿನಲ್ಲಿ ಆಹಾರದ ಆಯ್ಕೆ ಹೇಗಿರಬೇಕು ಎಂಬ ಕುರಿತ ಮಾಹಿತಿ ಇಲ್ಲಿದೆ.

These sweets give energy and heat to body in winter

author img

By ETV Bharat Karnataka Team

Published : Nov 20, 2023, 1:06 PM IST

ಚಳಿಗಾಲದ ಋತುಮಾನದಲ್ಲಿ ವಾತಾವರಣದಲ್ಲಾಗುವ ಬದಲಾವಣೆಗಳು ಅನೇಕ ಸೋಂಕುಗಳಿಗೂ ಆಹ್ವಾನ ನೀಡುತ್ತವೆ. ಈ ಸಮಯದಲ್ಲಿ ದೇಹಕ್ಕೆ ಉಷ್ಣಾಂಶ, ಶುಷ್ಕತೆಯ ಪ್ರಮಾಣ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಆಹಾರದ ಆಯ್ಕೆಯಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸುವುದು ಅತಿ ಅಗತ್ಯ. ಚಳಿಗಾಲದಲ್ಲಿ ಸೇವಿಸುವ ಆಹಾರಗಳು ದೇಹದ ತಾಪಮಾನ ಹೆಚ್ಚಿಸುವ ಜೊತೆಗೆ ರೋಗ ನಿರೋಧಕವನ್ನೂ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಈ ಕೆಳಗಿನ ಆಹಾರಗಳು ಸೂಕ್ತ.

ಕ್ಯಾರೆಟ್​ ಹಲ್ವ: ಭಾರತೀಯರ ಅಚ್ಚುಮೆಚ್ಚಿನ ಸಿಹಿ ತಿನಿಸಿನಲ್ಲಿ ಇದೂ ಒಂದು. ಕ್ಯಾರೆಟ್​​, ಹಾಲು, ಸಕ್ಕರೆ ಮತ್ತು ತುಪ್ಪದಿಂದ ಮಾಡಿದ ಹಲ್ವಾವನ್ನು ಸೇವಿಸುವುದರಿಂದ ಅದರಲ್ಲಿನ ಸಾಮಗ್ರಿ ದೇಹಕ್ಕೆ ಹೇರಳ ಪೋಷಕಾಂಶ ನೀಡುತ್ತದೆ.

ಹಸಿರು ತರಕಾರಿ: ಚಳಿಗಾಲದ ಸಮಯದಲ್ಲಿ ದೇಹದ ಜೀರ್ಣ ಶಕ್ತಿ ಕುಸಿಯುತ್ತದೆ. ಈ ಹಿನ್ನೆಲೆಯಲ್ಲಿ ಹಗುರ ಪೋಷಕಾಂಶಯುಕ್ತ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಸಮೃದ್ದ ಪೋಷಕಾಂಶಯುಕ್ತ ಹಸಿರು ತರಕಾರಿಗಳು ಈ ನಿಟ್ಟಿನಲ್ಲಿ ನೆರವಾಗುತ್ತವೆ.

ಗೋದಾ ಕಾ ಲಡ್ಡು/ಅಂಟು ಉಂಡೆ: ಇದು ಭಾರತದ ಸಾಂಪ್ರದಾಯಿಕ ಸಿಹಿತಿನಿಸು. ಸೇವನೆ ಮಾಡುವಂತಹ ಅಂಟು, ಗೋಧಿ ಹಿಟ್ಟು, ತುಪ್ಪ ಮತ್ತು ಅನೇಕ ಒಣಹಣ್ಣು ಮತ್ತು ಮಸಾಲೆಗಳಿಂದ ಇದನ್ನು ಮಾಡಲಾಗುತ್ತದೆ. ಚಳಿಗಾಲದಲ್ಲಿ ಇದು ದೇಹಕ್ಕೆ ಬೇಕಾದ ಉಷ್ಣಾಂಶ ನೀಡಿ, ಬೆಚ್ಚಗಿರಿಸುತ್ತದೆ.

ಮಿಠಾಯಿ: ಭಾರತೀಯರ ಅಚ್ಚುಮೆಚ್ಚಿನ ಸಿಹಿ ತಿನಿಸುಗಳ ಪೈಕಿ ಚಿಕ್ಕಿ/ ಮಿಠಾಯಿಗಳು ಪ್ರಮುಖ. ಕಡಲೆ ಬೀಜ, ಎಣ್ಣು, ಬೆಲ್ಲದಿಂದ ತಯಾರಿಸುವ ಈ ಮಿಠಾಯಿಗಳು ಬಹುತೇಕರಿಗೆ ಮೆಚ್ಚಾಗುತ್ತವೆ. ಇದೂ ಕೂಡ ದೇಹಕ್ಕೆ ಅಗತ್ಯ ಪ್ರಮಾಣದ ಎಣ್ಣೆಯ ಅಂಶವನ್ನು ಪೂರೈಸಿ, ಶಕ್ತಿ ನೀಡುತ್ತದೆ.

ಪಂಜಿರಿ: ಉತ್ತರ ಭಾರತದ ಸಾಂಪ್ರದಾಯಿಕ ಸಿಹಿತಿನಿಸು ಇದು. ಹಬ್ಬ-ಹರಿದಿನದಂತಹ ವಿಶೇಷ ಸಂದರ್ಭದಲ್ಲಿ ತಯಾರಿಸಲಾಗುತ್ತದೆ. ಮಹಿಳೆಯರು ತಮ್ಮ ಋತುಚಕ್ರವನ್ನು ಮುಂದೂಡಲು ಇದನ್ನು ಸೇವಿಸುವುದನ್ನು ಕಾಣಬಹುದು. ಹಿಟ್ಟು, ತುಪ್ಪ, ಸಕ್ಕರೆ, ಒಣ ಹಣ್ಣುಗಳಿಂದ ಕೂಡಿರುವ ಈ ಸಿಹಿ ಸಮೃದ್ದ ಆರೋಗ್ಯ ಪ್ರಯೋಜಗಳನ್ನು ನೀಡುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಅಡುಗೆ ಮನೆಯೇ ಔಷಧಾಲಯ; ಕೆಮ್ಮು- ನೆಗಡಿಗೆ ಅಲ್ಲೇ ಇದೆ ಮದ್ದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.