ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕಿನ ಅಪಾಯ ಕಡಿಮೆ ಆಗುತ್ತದೆ. ಲಸಿಕೆ ಪಡೆದ ಬಳಿಕ ವ್ಯಕ್ತಿಯೊಬ್ಬನ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಸಂಶೋಧನೆ ವಿವರಿಸಿದೆ. ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ಅಧ್ಯಯನದಲ್ಲಿ ಪೈಜರ್, ಬಯೋಟೆಕ್ ಕೋವಿಡ್ ಲಸಿಕೆ ಪಡೆದವರಲ್ಲಿ ಪ್ರತಿರಕ್ಷಣಾ ಕೋಶ ಹೆಚ್ಚಿದೆ. ಲಸಿಕೆಯ ನಂತರದಲ್ಲಿ ಸಾರ್ಸ್- ಕೋವ್-2 ಸೋಂಕು ಅಧ್ಯಯನ ನಡೆಸಿದಾಗ ಅದರ ತೀವ್ರತೆಯ ಮಟ್ಟ ಕಡಿಮೆಯಾಗಿದೆ ಎಂದು ಅಧ್ಯಯನ ಹೇಳುತ್ತದೆ.
ಪ್ರತಿರಕ್ಷಣೆ ಹಾನಿ ತಡೆಯುತ್ತದೆ: ಕೋವಿಡ್ ಲಸಿಕೆ ಪಡೆಯದವರಿಗಿಂತ ಪಡೆದವರಲ್ಲಿ ಸಾರ್ಸ್-ಕೋವ್-2 ಲಕ್ಷಣಗಳ ಪ್ರಭಾವ ಕಡಿಮೆ ಇದೆ. ಅಲ್ಲದೇ ಸಾರ್ಸ್ ಕೋವ್- 2 ಸ್ಪೈಕ್ ಪ್ರೋಟೀನ್ ಅನ್ನು ಗುರಿಯಾಗಿಸುವ ಪ್ರತಿರಕ್ಷಣಾ ಕೋಶದಲ್ಲೂ ಸುಧಾರಣೆ ಕಾಣಬಹುದಾಗಿದೆ. ಸಾರ್ಸ್-ಕೋವ್-2 ಸೋಂಕಿನಿಂದ ಚೇತರಿಕೆ ಕಂಡು ಲಸಿಕೆ ಪಡೆದವರು, ಲಸಿಕೆ ಪಡೆಯದವರಿಗಿಂತ ಹೆಚ್ಚು ರಕ್ಷಣೆಗೆ ಒಳಗಾಗುತ್ತಾರೆ. ಸೋಂಕು ನಮ್ಮ ಪ್ರಮುಖ ಪ್ರತಿರಕ್ಷಣೆ ಮೇಲೆ ಹಾನಿ ಮಾಡುವುದನ್ನು ಲಸಿಕೆ ತಡೆಯುತ್ತದೆ ಎಂಬುದನ್ನು ಫಲಿತಾಂಶ ತಿಳಿಸಿದೆ. ಈ ಸಂಬಂಧ ಜರ್ನಲ್ ಇಮ್ಯುನಿಟಿಯಲ್ಲಿ ಕೂಡ ಪ್ರಕಟವಾಗಿದೆ.
ಸ್ಟ್ಯಾನ್‌ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಮೈಕ್ರೋಬಯಾಲಜಿ ಮತ್ತು ಇಮ್ಯುನೊಲಾಜಿಯ ಪ್ರಾಧ್ಯಾಪಕರಾದ ಮಾರ್ಕ್ ಎಂ ಡೇವಿಸ್ ನೇತೃತ್ವದಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಸಂಶೋಧಕರು CD4+ T ಜೀವಕೋಶಗಳು ಮತ್ತು CD8+ T ಜೀವಕೋಶಗಳು SARS-CoV-2 ಸೋಂಕು ಮತ್ತು ಲಸಿಕೆಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ವಿಶ್ಲೇಷಿಸಲು ಅತ್ಯಂತ ಸೂಕ್ಷ್ಮವಾದ ಸಾಧನವನ್ನು ವಿನ್ಯಾಸಗೊಳಿಸಿದ್ದಾರೆ.
ಟಿ.ಕೋಶದ ಮೇಲೆ ಅಧ್ಯಯನ: ಈ ಜೀವಕೋಶಗಳು ವೈರಸ್‌ಗೆ ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಯನ್ನು ಬಲಗೊಳಿಸುತ್ತದೆ. ಜೊತೆಗೆ ಸೋಂಕಿಗೆ ಒಳಗಾದ ಇತರ ಜೀವಕೋಶಗಳನ್ನು ಕೊಲ್ಲುತ್ತವೆ. ಅಲ್ಲದೇ ಕೋವಿಡ್ ಅನ್ನು ಮತ್ತೆ ಬಾರದಂತೆ ತಡೆಯಲು ಸಹಾಯ ಮಾಡುತ್ತದೆ. ಅಧ್ಯಯನಕ್ಕೆ ಟಿ.ಕೋಶಗಳನ್ನು ಪತ್ತೆ ಮಾಡಿ ಅದರ ಮೇಲೆ ವೈರಸ್ ಸ್ಪೈಕ್ ಪ್ರೋಟಿನ್ ದಾಳಿ ಅನುಸಾರ ಸಾಧನವನ್ನು ವಿನ್ಯಾಸ ಮಾಡಲಾಗಿದೆ. ಈ ವೇಳೆ ಲಸಿಕೆಗಳು ಯಾವ ರೀತಿ ಪ್ರತಿ ರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ನಡೆಸಲಾಗಿದೆ.
ಈ ಅಧ್ಯಯನಕ್ಕೆ ಮೂರು ಸ್ವಯಂಪ್ರೇರಿತ ಗುಂಪುಗಳ ಮೇಲೆ ಸಂಶೋಧನೆ ನಡೆಸಲಾಗಿದೆ. ಇದರಲ್ಲಿ ಒಂದು ಗುಂಪು ಸಾರ್ಸ್ ಕೋವ್- 2 ಸೋಂಕಿಗೆ ತುತ್ತಾಗದ ಎರಡು ಡೋಸ್ ಲಸಿಕೆ ಪಡೆದಿದೆ. ಎರಡನೇ ಗುಂಪು ಈ ಹಿಂದೆ ಸಾರ್ಸ್- ಕೋವ್-2 ಸೋಂಕಿಗೆ ತುತ್ತಾಗಿ ಬಳಿಕ ಫೈಜರ್ ಬಯೋಟೆಕ್ ಕೋವಿಡ್ ಲಸಿಕೆ ಪಡೆದಿದೆ. ಮೂರನೇ ಗುಂಪು ಯಾವುದೇ ಲಸಿಕೆಯನ್ನು ಪಡೆದಿಲ್ಲ. ಲಸಿಕೆಗೆ ಮೊದಲು ಸಾರ್ಸ್ ಕೋವ್-2 ಸೋಂಕಿಗೆ ಒಳಗಾದ ಜನರಲ್ಲಿ ಸ್ಪೈಕ್-ನಿರ್ದಿಷ್ಟ CD8+ T ಕೋಶಗಳನ್ನು ಗಣನೀಯವಾಗಿ ಕಡಿಮೆ ಮಟ್ಟದಲ್ಲಿ ಉತ್ಪಾದಿಸಿದೆ ಎಂದು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಓಮ್ರಿಕಾನ್ XBB 1.5 ತಳಿಯು ಹೆಚ್ಚು ರೂಪಾಂತರ ಹೊಂದಿದ್ದು, ಬಲು ಬೇಗ ಹರಡುತ್ತೆ!