ಮಧುಮೇಹ ಎಂಬುದು ದೀರ್ಘ ಚಯಾಪಚಯನ ಸಮಸ್ಯೆ. ಜಗತ್ತಿನಾದ್ಯಂತ ಮಿಲಿಯನ್ಗಟ್ಟಲೆ ಮಂದಿ ಇದರ ಪರಿಣಾಮಕ್ಕೆ ತುತ್ತಾಗಿದ್ದಾರೆ. ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪರ್ಯಾಯ ಚಿಕಿತ್ಸೆಗಳನ್ನು ಹುಡುಕಲಾಗುತ್ತಿದೆ. ಭಾರತದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಶೇ 40ರಷ್ಟು ಮಧುಮೇಹ ಪ್ರಕರಣಗಳು ಏರಿಕೆ ಕಂಡಿದ್ದು, 100 ಮಿಲಿಯನ್ಗೂ ಹೆಚ್ಚು ಮಂದಿಯ ಮೇಲೆ ಪರಿಣಾಮ ಬೀರಿದೆ. ಆರೋಗ್ಯಕರ ಜೀವನಶೈಲಿಯಲ್ಲಿ ಸರಿಯಾದ ಪೋಷಕಾಂಶ ಮತ್ತು ನಿಯಮಿತ ವ್ಯಾಯಾಮಗಳಿಂದ ಮಧುಮೇಹಿಗಳ ಜೀವನ ಕೂಡಿರಬೇಕು. ಆಯುರ್ವೇದ ಗಿಡಮೂಲಿಕೆಗಳು ರಕ್ತದ ಸಕ್ಕರೆ ನಿಯಂತ್ರಿಸಿ, ಒಟ್ಟಾರೆ ಜೀವನದ ಗುಣಮಟ್ಟವನ್ನು ಅಭಿವೃದ್ಧಿಪಡಿಸುವಲ್ಲಿ ವಿಶೇಷ ಕೊಡುಗೆ ನೀಡಿವೆ.
ಆಯುರ್ವೇದ ಎಂಬುದು ಭಾರತದ ಪುರಾತನ ವೈದ್ಯಕೀಯ ಚಿಕಿತ್ಸಾ ಪದ್ಧತಿ. ಆಯುರ್ವೇದದ ಗಿಡಮೂಲಿಕೆಗಳು ರಕ್ತದ ಸಕ್ಕರೆ ಮಟ್ಟದ ಸಾಮರ್ಥ್ಯವನ್ನು ನಿಯಂತ್ರಣದಲ್ಲಿಡುವ ಸಂಬಂಧ ಈಗಾಗಲೇ ಮಾನ್ಯತೆ ಪಡೆದಿವೆ. ಮಧುಮೇಹ ಕಂಟ್ರೋಲ್ ಮಾಡುವ ಆಯುರ್ವೇದ ಪದ್ಧತಿಯ ಕೆಲವು ಗಿಡಮೂಲಿಕೆಗಳ ಮಾಹಿತಿ ಇಲ್ಲಿದೆ.
ಕರೇಲಾ: ಹಾಗಲಕಾಯಿ ಎಂದು ಕರೆಯುವ ಈ ಕರೇಲಾವೂ ಆಯುರ್ವೇದದಲ್ಲಿ ಆ್ಯಂಟಿ ಡಯಾಬಿಟಿಕ್ (ಮಧುಮೇಹ ವಿರೋಧಿ)ಯಾಗಿ ಬಳಕೆ ಮಾಡಲಾಗುತ್ತದೆ. ಇದು ಇನ್ಸುಲಿನ್ ರೀತಿಯ ಪೊಲಿಪೆಟೈಡ್ ಸಂಯೋಜನೆ ಹೊಂದಿದೆ. ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಣೆ ಮಾಡುತ್ತದೆ. ಹಾಗಲಕಾಯಿ ಗ್ಲುಕೋಸ್ ಅಭಿವೃದ್ಧಿಪಡಿಸುತ್ತದೆ. ಇನ್ಸುಲಿನ್ ಹೆಚ್ಚಿಸುತ್ತದೆ. ಇದರಿಂದ ದೀರ್ಘಕಾಲ ಮಧುಮೇಹ ನಿಯಂತ್ರಣ ಉತ್ತಮ.
ಜಾಮುನ್: ನೇರಳೆ ಹಣ್ಣೆಂದು ಕರೆಯುವ ಇದು ಹೈಪೊಗ್ಲೆಸೆಮಿಕ್ ಪರಿಣಾಮ ಹೊಂದಿದ್ದು, ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಇದು ಅಂತೋಕ್ಲೆನಿನ್ಸ್, ಎಲಾಜಿಕ್ ಆಮ್ಲ ಮತ್ತು ಪಾಲಿಪೆನಲ್ನಂತಹ ಬಯೋಆ್ಯಕ್ಟಿವ್ ಸಂಯೋಜನೆ ಹೊಂದಿದೆ. ನೇರಳೆಹಣ್ಣನ್ನು ಸೇವಿಸುವುದರಿಂದ ರಕ್ತದ ಗ್ಲುಕೋಸ್ ಮಟ್ಟ ನಿಯಂತ್ರಿಸುವ ಜೊತೆಗೆ ಇನ್ಸುಲಿನ್ ಸೂಕ್ಷ್ಮತೆಯನ್ನು ಅಭಿವೃದ್ಧಿಪಡಿಸಬಹುದು. ಇದು ಮಧಯಮೇಹದ ಅಪಾಯ ತಗ್ಗಿಸುತ್ತದೆ.
ಗಿಲೊಯ್: ಅಮೃತಬಳ್ಳಿ ಎಂದು ಹೆಸರಾಗಿರುವ ಇದರ ಎಲೆಗಳು ಕೂಡ ಇನ್ಸುಲಿನ್ ಉತ್ತೇಜಿಸಿ, ಇನ್ಸುಲಿನ್ ಸೂಕ್ಷ್ಮತೆ ಮೇಲೆ ಪರಿಣಾಮ ಬೀರುತ್ತದೆ. ಇದೂ ಕೂಡ ರಕ್ತದ ಸಕ್ಕರೆ ಮಟ್ಟಕ್ಕೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಊರಿಯೂತದ ಪರಿಣಾಮ ಹೊಂದಿದ್ದು, ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ ಗುಣವು ಪ್ಯಾನಕ್ರಯೆಟಿಕ್ ಬೆಟಾ ಕೋಶಗಳ ರಕ್ಷಣೆ ಮಾಡುತ್ತದೆ.
ಆಮ್ಲಾ: ಬೆಟ್ಟದ ನೆಲ್ಲಿಕಾಯಿ ಎಂದೇ ಹೇಳುವ ಇದು ಆಯುರ್ವೇದದ ಪ್ರಮುಖ ಗಿಡಮೂಲಿಕೆ. ಇದು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವ ಜೊತೆಗೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣ ಇದರಲ್ಲಿದ್ದು, ಇದು ಕೂಡ ಪ್ಯಾನ್ಕ್ರಿಯಟಿಕ್ ಕಾರ್ಯನಿರ್ವಹಣೆ ಅಭಿವೃದ್ಧಿ ಮಾಡುತ್ತದೆ. ಆಕ್ಸಿಡೆಟಿವ್ ಒತ್ತಡ ಮತ್ತು ಊರಿಯೂತ ಕಡಿಮೆ ಮಾಡುತ್ತದೆ.
ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸೆಗೆ ಬದಲಾಗಿ ಆಯುರ್ವೇದ ಗಿಡಮೂಲಿಕೆಗಳನ್ನು ಬಳಕೆ ಮಾಡಲು ಸಾಧ್ಯವಿಲ್ಲ. ಆದರೆ, ಇದು ರಕ್ತದ ಸಕ್ಕರೆ ನಿಯಂತ್ರಣ ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತದೆ.
ಇದನ್ನೂ ಓದಿ: Diabetes: ಹೆಚ್ಚು ಜಂಕ್ಫುಡ್ ತಿನ್ನುವಿರಾ? ಎಚ್ಚರ! ಮಕ್ಕಳಲ್ಲೂ ಹೆಚ್ಚುತ್ತಿದೆ ಮಧುಮೇಹ