ETV Bharat / sukhibhava

ಸಣ್ಣ ಮಕ್ಕಳಿಗೆ ಕೋವಿಡ್​ mRNA ಲಸಿಕೆ ಸುರಕ್ಷಿತ; ಅಡ್ಡ ಪರಿಣಾಮವಿಲ್ಲ - mRNA ಲಸಿಕೆ ಸಂಪೂರ್ಣವಾಗಿ ಸುರಕ್ಷಿತ

ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ವಿಭಾಗ ಜೂನ್​ 2022ರಿಂದ ಮಾರ್ಚ್​ 2023ರವರೆಗೆ ಈ ಅಧ್ಯಯನ ನಡೆಸಿದೆ. ಫೈಜರ್​ ಮತ್ತು ಮೊಡಾರ್ನೊ ಎಂಬ ಎರಡು ಲಸಿಕೆಗಳನ್ನು ಪರೀಕ್ಷಿಸಲಾಗಿದೆ.

The covid mRNA vaccine in young children is safe, with no side effects

author img

By

Published : Jun 6, 2023, 3:01 PM IST

ನ್ಯೂಯಾರ್ಕ್​: ನಾಲ್ಕು ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಸಣ್ಣ ಮಕ್ಕಳಿಗೆ ಕೋವಿಡ್​ 19 ವಿರುದ್ಧ ನೀಡಲಾಗುತ್ತಿರುವ mRNA ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಎಂದು ಹೊಸ ಅಧ್ಯಯನ ತಿಳಿಸಿದೆ. ಮಕ್ಕಳಿಗೆ 2,45,00 ಡೋಸ್​ಗಳ ಲಸಿಕೆ ನೀಡಿದ ಬಳಿಕ ಈ ವಿಚಾರ ಗೊತ್ತಾಗಿದೆ.

mRNA ಲಸಿಕೆ ಮಕ್ಕಳಲ್ಲಿ ಗಂಭೀರ ಅಡ್ಡ ಪರಿಣಾಮ ಹೊಂದಿದೆಯೇ ಎಂಬ ಬಗ್ಗೆ ಮೊದಲ ಅಧ್ಯಯನ ನಡೆಸಲಾಗಿದೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ವಿಭಾಗ ಜೂನ್​ 2022ರಿಂದ ಮಾರ್ಚ್​ 2023ರವರೆಗೆ ಅಧ್ಯಯನ ನಡೆಸಿದ್ದು, ಫೈಜರ್​ ಮತ್ತು ಮೊಡಾರ್ನೊ ಎಂಬ ಎರಡು ಲಸಿಕೆಗಳನ್ನು ವಿಶೇಷವಾಗಿ ಗಮನಿಸಲಾಗಿದೆ.

ಅಧ್ಯಯನ ವರದಿಯನ್ನು ಜರ್ನಲ್​ ಪಿಡಿಯಾಟ್ರಿಕ್ಸ್​ನಲ್ಲಿ ಪ್ರಕಟಿಸಲಾಗಿದೆ. ಚಿಕ್ಕ ಮಕ್ಕಳಿಗೆ ಲಸಿಕೆ ನೀಡಿದಾಗ ಅವರ ಹೃದಯದಲ್ಲಿ ಊರಿಯೂತದಂತಹ ಮಯೋಕಾರ್ಡಿಯಾಟಿಸ್ಟ್​​ಗಳ ಸುಳಿವು ಪತ್ತೆಯಾಗಿಲ್ಲ ಎಂದು ತಿಳಿಸಿದೆ. ಸಣ್ಣ ಮಕ್ಕಳ ಗುಂಪಿನಲ್ಲಿ ನಾವು ಮಯೋಕಾರ್ಡಿಯಟಿಸ್ಟ್ ಅಥವಾ ಪೆರಿಕಾರ್ಡಿಯಟಿಸ್ಟ್​​ಗಳು ಪತ್ತೆಯಾಗಿಲ್ಲ. ಇದು ಹೆಚ್ಚು ಭರವಸೆ ನೀಡಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ಕ್ರಿಸ್ಟಿನ್​ ಗೊಡರ್ಡ್ ಹೇಳಿದ್ದಾರೆ.

ಕೋವಿಡ್​ ಲಸಿಕೆಯಿಂದಾಗಿ ಮಯೋಕಾರ್ಡಿಟಿಸ್ಟ್​​ ಪತ್ತೆ ಮಾಡುತ್ತದೆ. ಇದು ಅನೇಕ ಬಾರಿ ಹದಿಹರೆಯದ ಮತ್ತು ವಯಸ್ಕರಲ್ಲಿ ಕಾಣಿಸಿಕೊಂಡಿದೆ. ತಜ್ಞರ ತಂಡವು 23 ಗಂಭೀರ ಸಾಮರ್ಥ್ಯದ ಅಡ್ಡ ಪರಿಣಾಮ ವೈದ್ಯಕೀಯ ದಾಖಲೆಗಳನ್ನು ​​ಪರಿಶೀಲನೆ ನಡೆಸಿದೆ. ಇದರಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಪಾರ್ಶ್ವವಾಯು, ಮಿದುಳಿನ ಉರಿಯೂತ ಸೇರಿದೆ.

ಅಧ್ಯಯನದಲ್ಲಿ ಯಾವುದೇ ಗಂಭೀರ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ. ನಿರ್ದಿಷ್ಟವಾಗಿ ಹೇಳುವುದಾದರೆ ಲಸಿಕೆ ರೋಗಕ್ಕೆ ಕಾರಣವಾಗುವ ಯಾವುದೇ ಕಾಳಜಿಯ ವಿಷಯವೂ ಇಲ್ಲ. 2 ವರ್ಷಕ್ಕಿಂತ ಒಳಗಿನ ಮಕ್ಕಳಲ್ಲಿ ಸಾಮಾನ್ಯವಾಗಿ ಪ್ರತಿರಕ್ಷಣಗಳು ಕಂಡುಬರುತ್ತವೆ ಎಂದಿದ್ದಾರೆ.

ಈ ಹಿಂದೆ ಸಿಡಿಸಿ ತೋಳುಗಳನ್ನು ನೋವು ಅಥವಾ ಜ್ವರದಂತಹ ರೋಗ ನಿರೋಧಕದಿಂದ ಸೌಮ್ಯ ಅಡ್ಡ ಪರಿಣಾಮಗಳನ್ನು ಲಸಿಕೆ ತೋರಿಸಿದೆ. ಅಧ್ಯಯನಕ್ಕೆ ಆರರಿಂದ 4 ವರ್ಷದ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 1,35,00 ಡೋಸ್​ಗಳನ್ನು ಫೈಜರ್​​ ಲಸಿಕೆ ನೀಡಿದರೆ ಮಾಡರ್ನಾ ಲಸಿಕೆಯನ್ನು 1,12,006 ಮಕ್ಕಳಿಗೆ ನೀಡಲಾಗಿತ್ತು. ದೊಡ್ಡ ಗಾತ್ರದ ಅಧ್ಯಯನದಲ್ಲಿ mRNA ಲಸಿಕೆಗಳಿಂದ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ ಎದು ಹಿರಿಯ ಲೇಖಕಿ ನಿಕೋಲಾ ಕ್ಲೈನ್ ಹೇಳುತ್ತಾರೆ.

ಕೋವಿಡ್​ ಇಂದು ಜಾಗತಿಕ ತುರ್ತು ಪರಿಸ್ಥಿತಿ ಅಲ್ಲದೇ ಇದ್ದರೂ, ಸೋಂಕು ಎಲ್ಲ ವಯಸ್ಸಿನವರಿಗೆ ದೀರ್ಘಕಾಲದ ಬೆದರಿಕೆ ಒಡ್ಡಲಿದೆ. ಈ ಹಿನ್ನೆಲೆಯಲ್ಲಿ ಕೋವಿಡ್​ ಲಸಿಕೆಯನ್ನು ಮಕ್ಕಳಿಗೆ ನೀಡುವುದರಿಂದ ಅನಾರೋಗ್ಯ ಕಡಿಮೆ ಮಾಡುಬಹುದು. ಇದರ ಜೊತೆಗೆ ಕುಟುಂಬದಲ್ಲಿ ವೈರಸ್​ ಸೋಂಕು ಹರಡುವುದನ್ನು ತಪ್ಪಿಸಿ, ಅನಾರೋಗ್ಯದಿಂದ ರಕ್ಷಣೆ ಪಡೆಯಬಹುದು ಎಂದು ಸಂಶೋಧನೆ ವಿಶ್ಲೇಷಿಸಿದೆ.

ಇದನ್ನೂ ಓದಿ: ಅಕಾಲಿಕ ಜನನದ ಮಕ್ಕಳನ್ನು ಉಳಿಸುವಲ್ಲಿ ಕಾಂಗರೂ ಮದರ್​ ಕೇರ್​​ ಸಹಾಯಕ; ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.