ETV Bharat / sukhibhava

ಜಿನಿವಾದಲ್ಲಿ 76ನೇ ವಿಶ್ವ ಆರೋಗ್ಯ ಅಸೆಂಬ್ಲಿ ಆರಂಭ - ಡಬ್ಲ್ಯೂಎಚ್​ಒನ 76ನೇ ವಿಶ್ವ ಆರೋಗ್ಯ ಅಸೆಂಬ್ಲಿ

ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾಗಿ 75 ವರ್ಷಗಳು ಪೂರ್ಣಗೊಂಡಿದ್ದು, ಹಲವು ಆರೋಗ್ಯ ಸಾಧನೆಗಳ ಗುರಿ ನಿರ್ಮಿಸಿದೆ.

The 76th World Health Assembly began in Geneva

author img

By

Published : May 22, 2023, 12:48 PM IST

ಜಿನಿವಾ: ವಿಶ್ವ ಆರೋಗ್ಯ ಸಂಸ್ಥೆ 75ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರದಿಂದ ಡಬ್ಲ್ಯೂಎಚ್​ಒನ 76ನೇ ವಿಶ್ವ ಆರೋಗ್ಯ ಅಸೆಂಬ್ಲಿ ಆರಂಭವಾಗಿದೆ. ಈ ಬಾರಿ ಜೀವ ಉಳಿಸುವಿಕೆ, ಎಲ್ಲರಿಗೂ ಆರೋಗ್ಯ ಎಂಬ ನಿಟ್ಟಿನಲ್ಲಿ ಸಂಸ್ಥೆ ಗಮನ ಹರಿಸಿದೆ.

ಸಂಘಟನೆಯ ತಕ್ಷಣದ ಮತ್ತು ದೀರ್ಘಾವಧಿ ಭವಿಷ್ಯಕ್ಕೆ ಹೊಸ ನಿರ್ಣಯದೊಂದಿಗೆ ಭಾನುವಾರ ವಿಶ್ವ ಆರೋಗ್ಯ ಅಸೆಂಬ್ಲಿ ಆರಂಭವಾಗಿದ್ದು, ಮುಂದಿನ ಎರಡು ವರ್ಷದ ಬಜೆಟ್​ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಸುಸ್ಥಿರ ಹಣಕಾಸು ಮತ್ತು ಡಬ್ಲ್ಯೂಎಚ್​ಒ ಪ್ರಕ್ರಿಯೆ ಸುಧಾರಣೆಗೆ ಬದಲಾವಣೆ, ಹೊಣೆಗಾರಿಕೆಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

‘10 ದಿನದ ಸಭೆಯಲ್ಲಿ ಪ್ರತಿನಿಧಿಗಳು ಜಾಗತಿಕ ಆರ್ಥಿಕ ತುರ್ತು ಪರಿಸ್ಥಿತಿ ಮತ್ತು ಗಂಭೀರ ಪಾತ್ರದಲ್ಲಿ ಡಬ್ಲ್ಯೂಎಚ್​ಒ ನಿರ್ಣಯಕ ಪರಿಸ್ಥಿತಿಗಳ ಚರ್ಚೆ ನಡೆಸಲಿದ್ದಾರೆ. ಕಳೆದ ವರ್ಷದ ಪ್ರಗತಿ, ಸಾಧನೆ, ಸವಾಲು ಮತ್ತು ಭವಿಷ್ಯದ ಆದ್ಯತೆಗಳಾದ ವಿಶ್ವ ಆರೋಗ್ಯ ಕವರೇಜ್​, ತುರ್ತು ಸ್ಥಿತಿ, ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಉತ್ತೇಜನೆಯ ಡಬ್ಲ್ಯೂಎಚ್​ಒ ಕೆಲಸದ ಕುರಿತು ಪರಿಶೀಲನೆ ನಡೆಸಲಿದ್ದಾರೆ.

ಶಾಂತಿ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಒಂದು ರಾಷ್ಟ್ರದ ರೋಗಗಳು ಎಲ್ಲರಿಗೂ ಅಪಾಯ ಮಾಡುತ್ತದೆ. ಎಲ್ಲೆಡೆ, ಎಲ್ಲರಿಗೂ ಆರೋಗ್ಯ ಸುಧಾರಣೆಗೆ ಸಹಕಾರ ನೀಡುತ್ತದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟ್ಟೆರೆಸ್​ ತಿಳಿಸಿದರು. 75 ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಉಗಮವಾದಾಗಿನಿಂದಲೂ ಮಾನವನ ಆರೋಗ್ಯ ಹೆಚ್ಚು ಸುಧಾರಣೆ ಕಂಡಿದೆ. ಜಾಗತಿಕ ಜೀವನ ನಿರೀಕ್ಷೆಯೂ ಶೇ 50ರಷ್ಟು ಹೆಚ್ಚಾಗಿದೆ. ಶಿಶುಗಳ ಸಾವಿನ ಪ್ರಮಾಣ ಶೇ 60ರಷ್ಟು ಕುಸಿದಿದೆ, ಸಿಡುಬು ರೋಗವನ್ನು ನಿರ್ಮೂಲನೆ ಮಾಡಲಾಗಿದೆ ಎಂದು ತಿಳಿಸಿದರು.

ಸವಾಲೊಡ್ಡಿದ ಕೋವಿಡ್​ ಸೋಂಕು: ಕೋವಿಡ್​ 19 ಸಾಂಕ್ರಾಮಿಕವೂ ಸಾರ್ವಜನಿಕ ಅರೋಗ್ಯ ಸುಧಾರಣೆ ಪ್ರಕ್ರಿಯೆಯನ್ನು ಹಿಮ್ಮುಖವಾಗುವಂತೆ ಮಾಡಿತು. ಕಳೆದೊಂದು ದಶಕದಿಂದ ಮಾಡಿದ ಆರೋಗ್ಯ ಲಾಭಗಳನ್ನು ಮತ್ತಷ್ಟು ನಾಶಪಡಿಸುವ ಅಪಾಯವನ್ನು ಎದುರಿಸುವಂತೆ ಮಾಡಿತು. ಅಲ್ಲದೇ ಸುಸ್ಥಿರ ಅಭಿವೃದ್ಧಿ ಗುರಿಗಳಿಂದ ಹಿಂದೆ ಸರಿಯುತ್ತೇವೆ. ಆದರೆ ಇದು ಅನಿವಾರ್ಯವಲ್ಲ ಅವರು ಒತ್ತಿ ಹೇಳಿದರು. ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಮತ್ತು ಎಲ್ಲರಿಗೂ ಉನ್ನತ ಗುಣಮಟ್ಟದ ಆರೋಗ್ಯವನ್ನು ಸಾಧಿಸಲು ವಿಶ್ವ ಆರೋಗ್ಯ ಸಂಸ್ಥೆ ಅನ್ನು ಬೆಂಬಲಿಸಲು ಅವರು ಇದೇ ವೇಳೆ ಎಲ್ಲರೂ ಕರೆ ನೀಡಿದರು.

ವಿಶ್ವ ಆರೋಗ್ಯ ಅಸೆಂಬ್ಲಿಯ ಆರಂಭದಲ್ಲಿ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆದ್ರೊಸ್​ ಅಧನೊಮ್​​ ಗೆಬ್ರೀಯಸ್, ಕಳೆದ 75 ವರ್ಷಗಳಲ್ಲಿ ಸಂಸ್ಥೆ ಮಾಡಿದ ಪ್ರಮುಖ ಸಾಧನೆಗಳನ್ನು ಅರಿವು ಮೂಡಿಸಲಾಗುತ್ತಿದೆ. ವಿಶ್ವದ ನಿರೀಕ್ಷೆಗಳು ಅಗಾಧವಾಗಿ ಬೆಳೆದಿದ್ದು, ಸಂಸ್ಥೆಯೂ ಅನೇಕ ಸಂಕೀರ್ಣ ಸವಾಲುಗಳನ್ನು ಎದುರಿಸಿದೆ. ರಸ್ತೆಗಳು ಕಠಿಣವಾಗಿರಬಹುದು. ಆದರೆ, ಅಂತಿಮ ಗುರಿ ನಿಶ್ಚಿತ ಎಂದು ತಿಳಿಸಿದರು.

ಮೋದಿ ಮಾತು: ವಿಶ್ವ ಸಂಸ್ಥೆಯ 75ನೇ ವರ್ಷಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ. 75 ವರ್ಷಗಳಿಂದ ಜಗತ್ತಿನ ಜನರ ಆರೋಗ್ಯಕ್ಕೆ ಸೇವೆ ಸಲ್ಲಿಸುವ ಮೂಲಕ ವಿಶ್ವ ಸಂಸ್ಥೆ ಐತಿಹಾಸಿಕ ಮೈಲಿಗಲ್ಲು ಸಾಧಿಸಿರುವುದಕ್ಕೆ ಶುಭಾಶಯ ಎಂದಿರುವ ಅವರು, ಮುಂದಿನ 25 ವರ್ಷಗಳಲ್ಲೇ ಡಬ್ಲ್ಯೂಎಚ್​ಒ ಗುರಿ ನಿರ್ಧರಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಬಗ್ಗೆ ಎಚ್ಚರ ವಹಿಸುವಂತೆ WHO ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.