ETV Bharat / sukhibhava

ಟ್ಯಾಟೂ ಹಾಕಿಸುವ ಯೋಚನೆಯಲ್ಲಿದ್ದೀರಾ? ಮಾರಣಾಂತಿಕ ಕಾಯಿಲೆಗೆ ತುತ್ತಾಗಬಹುದು ಎಚ್ಚರ! - ಹಚ್ಚೆ ಅಥವಾ ಟ್ಯಾಟು

ದೇಹದ ಮೇಲೆ ಹಾಕಿಸುವ ಹಚ್ಚೆ ಅಥವಾ ಟ್ಯಾಟು ಬಗ್ಗೆ ಮುನ್ನೆಚ್ಚರಿಕೆವಹಿಸದಿದ್ದರೆ ಏಡ್ಸ್​ನಂತಹ ರೋಗ ನಿಮ್ಮ ದೇಹವನ್ನು ಸೇರಬಹುದು.

ಟ್ಯಾಟು
ಟ್ಯಾಟು
author img

By

Published : Aug 13, 2023, 10:48 AM IST

ಟ್ಯಾಟೂ ಅಥವಾ ಹಚ್ಚೆಗಿರುವ ಟ್ರೆಂಡ್​ ಮಾತ್ರ ಕಮ್ಮಿಯಾಗುವ ಮಾತೇ ಇಲ್ಲ. ತಮ್ಮ ದೇಹದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ತಮ್ಮ ಇಷ್ಟದ ಟ್ಯಾಟೂ​ಗಳನ್ನು ಜನರು ಹಾಕಿಸಿಕೊಂಡು ಖುಷಿ ಪಡುತ್ತಾರೆ. ಆದರೆ ಈ ಹಚ್ಚೆ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಮಾರಣಾಂತಿಕ ಪರಿಣಾಮ ಬೀರುತ್ತದೆ ಎಂಬುದು ತಿಳಿದಿದಿಯಾ. ಹಾಗಾದರೆ ಒಮ್ಮೆ ಈ ಸುದ್ದಿಯನ್ನು ಓದಿ.

ಹೌದು, ಸ್ಟೈಲಿಶ್​​ ಆಗಿ ಕಾಣಲು ನೀವು ಕೈ ಮೇಲೆ, ಎದೆ ಮೇಲೆ, ಕಾಲಿನ ಮೇಲೆ, ಕುತ್ತಿಗೆಯ ಭಾಗ, ಬೆನ್ನಿನ ಮೇಲೆಲ್ಲ ಟ್ಯಾಟೂ ಹಾಕಿಸಿಕೊಂಡಿರಬಹುದು. ಇದೇ ಟ್ಯಾಟೂ ಏಡ್ಸ್ ಸೇರಿದಂತೆ ಅನೇಕ ಗಂಭೀರ ಕಾಯಿಲೆಗೆ ಕಾರಣವಾಗಲಿವೆ. ಇದಕ್ಕೂ ಮೊದಲೂ ಹಚ್ಚೆ ಹಾಕಿಸಿಕೊಂಡಿದ್ದರಿಂದ ಅನೇಕರು ಹೆಪಟೈಟಿಸ್ ಸಿ ಕಾಯಿಲೆಗಳಿಗೆ ತುತ್ತಾಗಿರುವುದು ನಿಮಗೆ ಗೊತ್ತೇ ಇದೆ. ಇದೇ ರೀತಿ ಏಡ್ಸ್​ ನಂತರ ಅಪಾಯಕಾರಿ ಸೋಂಕಿಗೆ ನೀವು ತುತ್ತಾಗಬಹುದು.

ಟ್ಯಾಟೂಗು ಏಡ್ಸ್​ಗೂ ಸಂಬಂಧ ಹೇಗೆ?: ದೇಹದ ಮೇಲ್ಭಾಗ ಹಾಕಿಸಿಕೊಳ್ಳುವ ಟ್ಯಾಟೂ ದೇಹದ ಒಳಗೆ ಹೇಗೆ ಕಾಯಿಲೆಗೆ ಕಾರಣವಾಗಬಹದು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದಕ್ಕೆ ಉತ್ತರ ಇಲ್ಲಿದೆ. ನೀವು ಹಚ್ಚೆ ಹಾಕಿಸಿಕೊಳ್ಳುವಾಗ ಖಂಡಿತ ಗಮನಿಸಿರುತ್ತೀರಿ. ನಿಮ್ಮ ಚರ್ಮದ ಮೇಲೆ ಹಚ್ಚೆ ಹಾಕುವಾಗ ಸೂಜಿಯಂತಹ ಪರಿಕರಣವನ್ನು ಉಪಯೋಗಿಸುತ್ತಾರೆ. ಇದರ ಒಳಗೆ ವಿವಿಧ ಬಣ್ಣಗಳನ್ನು ಬಳಸುತ್ತಾರೆ. ಇಲ್ಲಿ ನೀವು ಹಚ್ಚೆ ಹಾಕಿಸುವುದು ತಪ್ಪಲ್ಲ. ಆದರೆ ನೀವು ಹಚ್ಚೆ ಹಾಕಿಸಿಕೊಳ್ಳುವಾಗ ಬಳಸುವ ಸೂಜಿ ಅಥವಾ ಪರಿಕರಣಗಳು ಶುದ್ಧವಾಗಿದೆಯಾ ಎಂಬುದು ಮುಖ್ಯವಾಗಿರುತ್ತದೆ.

ಎಲ್ಲಿಯಾದರು ಆ ಸೂಜಿಯನ್ನು ಈ ಮೊದಲು ಬೇರೆಯವರಿಗೆ ಟ್ಯಾಟೂ ಹಾಕಲು ಬಳಸಿ ನಂತರ ಅದೇ ಸೂಜಿಯನ್ನು ನಿಮಗೂ ಬಳಸಿದರೆ ಅಪಾಯ. ಬೇರೆಯವರ ರಕ್ತ ಆ ಸೂಜಿಯಲ್ಲಿದ್ದು, ಅದನ್ನೇ ಬೇರೆಯವರಿಗೆ ಬಳಸಿದಾಗ ಆ ರಕ್ತದ ಅಂಶಗಳು ನಿಮ್ಮ ದೇಹಕ್ಕೆ ಸೇರುವ ಸಾಧ್ಯತೆ ಶೇಕಡ 75 ರಷ್ಟಿದೆ. ಇದರಿಂದ ಬೇರೆಯವರಿಗೆ ಇರುವ ರೋಗ ನಿಮಗೂ ಹರಡುವ ಸಾಧ್ಯತೆ ಇದೆ. ಇದಲ್ಲದೆ ಚರ್ಮದ ಸಮಸ್ಯೆಗಳು, ಅಲರ್ಜಿ ಉಂಟಾಗಿ ಗುಣಪಡಿಸಲಾಗದ ಮಟ್ಟಿಗೆ ಉಲ್ಬಣಿಸಬಹುದು.

ಅಳಿಸಲು ಅಸಾಧ್ಯ: ಒಂದು ಬಾರಿ ಟ್ಯಾಟೂ ಅಥವಾ ಹಚ್ಚೆ ಹಾಕಿಸಿಕೊಂಡರೆ ಅದನ್ನು ಅಳಿಸುವುದು ಅಸಾಧ್ಯ. ಇದುವರೆಗೆ ಅದನ್ನು ಶಾಶ್ವತವಾಗಿ ತೆಗೆಯುವ ಚಿಕಿತ್ಸೆ ಕಂಡು ಹಿಡಯಲಾಗಲಿಲ್ಲ. ಅನೇಕರು ಇದಕ್ಕಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ. ಆದರೂ ಟ್ಯಾಟೂ ಸಂಪೂರ್ಣವಾಗಿ ಹೋಗುವುದಿಲ್ಲ. ನಿಮ್ಮ ದೇಹದಲ್ಲಿ ಒಂದು ಚಿಕ್ಕ ಟ್ಯಾಟೂ ಹಾಕಿಸಿಕೊಂಡರು ಸಾಕಷ್ಟು ನೋವನ್ನು ಅನುಭವಿಸಬೇಕಾಗುತ್ತದೆ.

ಈ ಕುರಿತು ಸಿವಿಲ್ ಆಸ್ಪತ್ರೆಯ ಸಿಎಂಎಸ್ ಡಾ. ರಾಜೇಶ್ ಕುಮಾರ್ ಶ್ರೀವಾಸ್ತವ್​ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಅವರು ಹೇಳುವ ಪ್ರಕಾರ, ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆಟಗಾರರು, ತಮ್ಮದೇ ಕ್ಷೇತ್ರಕ್ಕೆ ಸಂಬಂಧಿಸಿ ಅನೇಕರು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಹಚ್ಚೆ ಹಾಕಿಸಿಕೊಳ್ಳುವ ಮೊದಲು ಜನರು ಈ ಕೆಲ ವಿಷಯಗಳ ಬಗ್ಗೆ ಗಮನಹರಿಸಬೇಕು. ಟ್ಯಾಟೂ ಹಾಕಿಸಿಕೊಳ್ಳುವ ಬಯಕೆಯಿಂದ ಸಿಕ್ಕಿದ ಕಡೆಯೆಲ್ಲಾ ಹಾಕಿಸಬಾರದು.

ಅನೇಕ ಜನರು ಸೂಜಿಯನ್ನು ಬದಲಾಯಿಸದೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ತೆರೆದಿರುವ ಟ್ಯಾಟೂ ಅಂಗಡಿಗಳಲ್ಲಿ, ಫುಟ್​ ಪಾತ್​ಗಳಲ್ಲಿ, ಜಾತ್ರೆಯಲ್ಲಿನ ಅಂಗಡಿಗಳಲ್ಲಿ ಹಾಕಿಸಿಕೊಳ್ಳುವಾಗ ತುಂಬಾ ಜಾಗೃತರಾಗಿರಬೇಕು. ಬದಲಿಗೆ ಉತ್ತಮ ವೃತ್ತಿಪರ ಟ್ಯಾಟೂ ತಯಾರಕರ ಬಳಿಗೆ ಹೋಗಿ ಹಾಕಿಸಿಕೊಳ್ಳಿ. ಮುನ್ನೆಚ್ಚರಿಕೆಯಾಗಿ ಟ್ಯಾಟೂ ಹಾಕುವಾತ ಆ ಕೆಲಸದಲ್ಲಿ ಪರಿಣಿತರಾಗಿದ್ದಾರಾ, ಅವರ ಕೈಯಲ್ಲಿ ಆ ಪರಿಕರಗಳು ಎಷ್ಟು ಸ್ವಚ್ಛ-ಸುರಕ್ಷಿತವಾಗಿದೆ ಎಂಬುದನ್ನು ನೋಡಲು ಮರೆಯದಿರಿ. ಒಟ್ಟಾರೆಯಾಗಿ ಬಾಹ್ಯ ಸೌಂದರ್ಯಕ್ಕಾಗಿ ಮುಂದೆ ಭವಿಷ್ಯದಲ್ಲಿ ಬರಬಹುದಾದ ಅಪಾಯದ ಬಗ್ಗೆ ಎಚ್ಚರವಿರಲಿ.

ಇದನ್ನೂ ಓದಿ: ಗುಂಗುರು ಕೂದಲಿಗೆ ಕಾರಣ ಏನು? ಕೂದಲಿನ ವಿನ್ಯಾಸದ ಬಗ್ಗೆ ತಜ್ಞರು ಹೇಳುವುದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.