ಚೆನ್ನೈ: ತಮಿಳುನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ 3ಡಿ ತಂತ್ರಜ್ಞಾನ ಆಧಾರಿತ ಸುಧಾರಿತ ನ್ಯೂರೋಪ್ಲಾಸ್ಟಿಕ್ ಸರ್ಜರಿ ನಡೆಸುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಚೆನ್ನೈನ ಕಿಲ್ಪಾಕು ಮೆಡಿಕಲ್ ಕಾಲೇಜ್ನ ನ್ಯೂರೋ ಸರ್ಜರಿ ತಂಡ ಈ ಗಮನಾರ್ಹ ಸಾಧನೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ. 29 ವರ್ಷದ ಯುವಕ ಅಪಘಾತದಿಂದ ಗಂಭೀರ ಮಿದುಳಿನ ಗಾಯಕ್ಕೆ ಒಳಗಾಗಿ, ಕೋಮಾಕ್ಕೆ ಜಾರಿದ್ದ. ಇಲ್ಲಿಕ ಕಿಲ್ಪಾಕು ಮೆಡಿಕಲ್ ಕಾಲೇಜಿನಲ್ಲಿ ಈತ ದಾಖಲಾಗಿದ್ದು, ಈತನ ಮಿದುಳಿಗೆ ರಕ್ತ ಪೂರೈಕೆ ಮಾಡುವಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಆತ ಜೀವನ್ಮರಣದ ಹೋರಾಟ ನಡೆಸುತ್ತಿದ್ದ. ಈ ಹಿನ್ನೆಲೆಯಲ್ಲಿ ರೋಗಿಯ ಜೀವ ಉಳಿಸಲು ಮುಂದಾದ ಡಾ ಕೊಡೇಶ್ವರನ್ ನೇತೃತ್ವದ ತಂಡ ಈ ಚಿಕಿತ್ಸೆ ನಡೆಸಿದೆ.
ಈ ಶಸ್ತ್ರ ಚಿಕಿತ್ಸೆಯಲ್ಲಿ ರೋಗಿಯ ತಲೆ ಬುರುಡೆಯ ಭಾಗ ಮತ್ತು ಮಿದುಳಿನಲ್ಲಿದ್ದ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದು ಹಾಕಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ನ್ಯೂರೋಸರ್ಜಿಕಲ್ ಐಸಿಯು ಅಲ್ಲಿ ಈತನನ್ನು ಡಾ ಚಂದ್ರಶೇಖರನ್ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ. ಶಸ್ತ್ರ ಚಿಕಿತ್ಸೆ ಬಳಿಕ ಆತ ಮಾತನಾಡಲು, ನಡೆಯುವುದರ ಜೊತೆಗೆ ದೈನಂದಿನ ಚಟುವಟಿಕೆಯನ್ನು ಸ್ವತಃ ಮಾಡಿಕೊಳ್ಳಲು ಮುಂದಾಗಿದ್ದಾನೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಭಾಗದಲ್ಲಿ ಇನ್ನೂ ಊತವಿದೆ. ಕಾಲಾಂತರದಲ್ಲಿ ತಲೆಬುರುಡೆ ಸ್ಥಿರವಾಗುವುದರ ಜೊತೆಗೆ ಊತವೂ ಕಡಿಮೆಯಾಗುತ್ತದೆ.
ಈ ಹಿಂದೆ ಇಂತಹ ರೋಗಿಗಳು ತಲೆ ಬುರುಡೆ ಊನದಿಂದ ಬದುಕುತ್ತಿದ್ದರು. ಬಳಿಕ ಬೋನ್ ಸಿಮೆಂಟ್ ಮತ್ತು ಟೈನಾನಿಯಂ ಮೆಶ್ಗಳಂತಹ ಹಲವು ಮಾದರಿಗಳನ್ನ ಈ ಊನ ಮುಚ್ಚಲು ಪರಿಚಯಿಸಲಾಯಿತು. ಆದರೆ ಇವು ದುರ್ಬಲ ಸುರಕ್ಷತೆ ಹೊಂದಿವೆ. ಇದೀಗ ಅಭಿವೃದ್ಧಿ ಹೊಂದಿದ ತಂತ್ರಜ್ಞಾನವಾದ ಸ್ಟೇಟ್ ಆಫ್ ದಿ ಆರ್ಟ್ 3ಡಿ ಪ್ರಿಟೆಂಟ್ ಟೈಟಾನಿಯಂ ತಲೆ ಬುರುಡೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ಇದನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಮಾಡಲಾಗುತ್ತಿದೆ.
ಮುಖ್ಯಮಂತ್ರಿಗಳ ಸಮಗ್ರ ಆರೋಗ್ಯ ವಿಮಾ ಯೋಜನೆ ಅಡಿ ನ್ಯೂರೋ ಸರ್ಜರಿ ವಿಭಾಗ ಈ 3-ಡಿ ಪ್ರಿಟೆಂಡ್ ಟೈಟಾನಿಯಂ ತಲೆಬುರುಡೆ ರಚಿಸಿದೆ. ಇದಕ್ಕಾಗಿ 1ಕ್ಕಿಂತ ಸುಧಾರಿತ ಕಂಪ್ಯೂಟೆಡ್ ಟೊಮೊಗ್ರಾಫಿ ಇಮೆಂಜಿಂಗ್ ಬಳಸಿಕೊಂಡು ಡಾ ದೇವಿ ಮಿನಲ್ ಸಹಾಯದಿಂದ ಮಾಡಲಾಗಿದೆ.
ಈ 3ಡಿ ಪ್ರಿಟೆಂಡ್ ಟೈಟಾನಿಯಂ ಕರ್ನಿಯೊಪ್ಲಾಸ್ಟಿಯನ್ನು ಸರ್ಕಾರಿ ಕಿಲ್ಪಾಕು ಮೆಡಿಕಲ್ ಕಾಲೇಜಿನ ಡಿನ್ ಆಗಿರುವ ಪ್ರೊ ಡಾ ಕೆ ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ಮಾಡಲಾಗಿದೆ. ಮೂರು ಗಂಟೆಗಳ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮೂರು ವಾರಗಳ ಬಳಿಕ ರೋಗಿ ಸಾಮಾನ್ಯ ಸ್ಥಿತಿ ಬಂದಿದ್ದಾನೆ.
ಈ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡಲಾಗಿದ್ದು, ತಮಿಳುನಾಡಿ ಸಿಎಂಸಿಎಚ್ಐಎಸ್ ಯೋಜನೆ ಅಡಿ ಸ್ಟಾಲಿನ್ ಅವರು ರೋಗಿ ವೆಚ್ಚ ಭರಿಸಿದ್ದಾರೆ. ಈ ಶಸ್ತ್ರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ 3 ರಿಂದ 5 ಲಕ್ಷ ವ್ಯಯವಾಗುತ್ತದೆ. ಇದೇ ತಂಡದಿಂದ ಇದೇ ರೀತಿಯ ಇಬ್ಬರೂ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ಭಾರತೀಯ ಯುವ ಜನರ ಮಾನಸಿಕ ಅರೋಗ್ಯದ ಮೇಲೆ ಕೋವಿಡ್ ಮತ್ತು ಹವಮಾನ ಬದಲಾವಣೆಯಿಂದ ನಕಾರಾತ್ಮಕ ಪರಿಣಾಮ