ETV Bharat / sukhibhava

ನಕಲಿ ಔಷಧ ಪ್ರಕರಣ: ಸಿಬಿಐ ತನಿಖೆಗೆ ದೆಹಲಿ ವಿಚಕ್ಷಣ ಇಲಾಖೆ ಒತ್ತಾಯ - ಕಳಪೆ ಗುಣಮಟ್ಟದ ಔಷಧ

ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ (ಜಿಎನ್​ಸಿಟಿಡಿ) ಆಸ್ಪತ್ರೆಗಳಲ್ಲಿ ಪ್ರಮಾಣಿತ ಗುಣಮಟ್ಟದ ಔಷಧಗಳ ಪೂರೈಕೆ ಆಗಿಲ್ಲ ಎಂಬ ವಿಚಾರ ಇದೀಗ ದೊಡ್ಡಮಟ್ಟದ ಸುದ್ದಿಯಾಗಿದೆ.

suspected spurious drugs Delhi Vigilance Dept calls for CBI probe

author img

By ETV Bharat Karnataka Team

Published : Dec 29, 2023, 12:05 PM IST

ನವದೆಹಲಿ: ಆಪ್​ ಸರ್ಕಾರದಿಂದ ಕಳಪೆ ಗುಣಮಟ್ಟದ ಔಷಧಗಳ ಸರಬರಾಜು ಪ್ರಕರಣ ಕುರಿತಂತೆ ದೆಹಲಿ ಸರ್ಕಾರದ ವಿಚಕ್ಷಣ ನಿರ್ದೇಶನಾಲಯವು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ. ಅಲ್ಲದೇ ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಕೇಂದ್ರ ಗೃಹ ಸಚಿವಾಲಯಕ್ಕೆ ಗುರುವಾರ ಈ ಸಂಬಂಧ ಪತ್ರ ಬರೆದಿರುವ ವಿಚಕ್ಷಣಾಲಯ, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ (ಜಿಎನ್​ಸಿಟಿಡಿ) ಆಸ್ಪತ್ರೆಗಳಲ್ಲಿ ಪ್ರಮಾಣಿತ ಗುಣಮಟ್ಟದ ಔಷಧಗಳ ಪೂರೈಕೆ ಮಾಡದೆ ಇರುವ ಕುರಿತು ವರದಿಯಾಗಿದೆ. ಈ ಬಗ್ಗೆ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದೆ.

ದೆಹಲಿಯ ವಿಚಕ್ಷಣಾ ವಿಶೇಷ ಕಾರ್ಯದರ್ಶಿ ವೈವಿವಿಜೆ ರಾಜಶೇಖರ್​​, ಈ ಹಿಂದೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಸುಧಾಂಶ್ ಪಂತ್ ಅವರಿಗೆ ಬರೆದ ಪತ್ರದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಗುಣಮಟ್ಟದ ಔಷದ ಬಳಕೆಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದೇ ವೇಳೆ ಔಷಧಗಳನ್ನು ತಕ್ಷಣಕ್ಕೆ ಹಿಂಪಡೆಯುವಂತೆ ಮತ್ತು ವಿರತಣೆ ನಡೆಸಿದ ಉತ್ಪಾದಕರು ಹಾಗೂ ಪೂರೈಕೆದಾರರ ವಿರುದ್ಧ ಅಗತ್ಯ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದೇ ವೇಳೆ ಅವರು, ಈಗಾಗಲೇ ಮೊಹಲ್ಲಾ ಕ್ಲಿನಿಕ್​ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಈ ಸಂಬಂಧ 2018 ರ ಫೆಬ್ರವರಿಯಲ್ಲಿ ಪ್ರಾಥಮಿಕ ತನಿಖೆ ಬಗ್ಗೆ ಕೂಡ ದಾಖಲಿಸಲಾಗಿದೆ. ಸಿಪಿಎ ಈ ಹಿಂದೆ ವಶಕ್ಕೆ ಪಡೆದಿದ್ದ ಔಷಧಿಗಳೇ ಇವು ಎಂಬ ಬಗ್ಗೆಯೂ ತನಿಖೆ ಆಗಬೇಕಿದೆ. ಅಲ್ಲದೇ ಇವುಗಳನ್ನೇ ಮೊಹಲ್ಲಾ ಕ್ಲಿನಿಕ್​ನಲ್ಲಿ ರೋಗಿಗಳಿಗೆ ವಿತರಿಸಲಾಗಿದೆಯಾ? ಇಲ್ಲವಾ ಎಂಬುದನ್ನೂ ಗಮನಿಸಬೇಕಿದೆ. ಹೀಗಾಗಿ, ಹೆಚ್ಚಿನ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದಿದ್ದಾರೆ.

ಡಿಸೆಂಬರ್​ 23ರಂದು ದೆಹಲಿಯ ಎಲ್​ಜಿ ವಿಕೆ ಸಕ್ಸೆನಾ ಕೂಡ ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಮಾಣಿತ ಗುಣಮಟ್ಟದ ಔಷಧಗಳ ಪೂರೈಕೆ ವಿಚಾರವನ್ನು ಸಿಬಿಐಗೆ ವಹಿಸಬೇಕು ಎಂದು ಶಿಫಾರಸು ಮಾಡಿದ್ದರು. ಡಿಸೆಂಬರ್​ 24ರಂದು ದೆಹಲಿ ವಿಚಕ್ಷಣಾ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿಗೆ ಪತ್ರ ಬರೆದು ಗುಣಮಟ್ಟದ ಮಾತ್ರೆಗಳನ್ನು ವಶಕ್ಕೆ ಪಡಿಸಿಕೊಳ್ಳಬೇಕು, ಅಲ್ಲದೇ, ಈ ಔಷಧ ವಿತರಿಸಿದ ಕಂಪನಿಗಳಿಗೆ ಯಾವುದೇ ಪಾವತಿ ಮಾಡದಂತೆ ಆಗ್ರಹಿಸಿದ್ದರು.

ಈ ಪತ್ರದಲ್ಲಿ ಆರೋಗ್ಯ ಕಾರ್ಯದರ್ಶಿ ರಾಜಶೇಖರ್​​, ದೆಹಲಿ ಔಷಧ ಪರೀಕ್ಷಾ ಪ್ರಯೋಗಾಲಯಕ್ಕೆ ಸಲ್ಲಿಸಿದ್ದ ಹಲವು ವರದಿಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಸರ್ಕಾರಿ ಅನುಮೋದಿತ ಖಾಸಗಿ ಪ್ರಯೋಗಾಲಯಗಳು ಈ ಔಷಧಗಳು ಗುಣಮಟ್ಟದಲ್ಲಿದ್ದ ಎಂಬ ಕುರಿತು ಸಲ್ಲಿಸಿದ ಇತರ ವರದಿಗಳನ್ನು ಸೇರಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಮೂರ್ಛೆ ರೋಗ ಔಷಧ ನಕಲಿ ಎಂದ ಬಿಜೆಪಿ ವಿರುದ್ಧ ಆಪ್ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.