ETV Bharat / sukhibhava

ಕೋವಿಡ್​ನಿಂದ ವಾಸನೆ, ರುಚಿ ಗ್ರಹಿಕೆ ಕಳೆದುಕೊಂಡಿದ್ದರೆ ಈ ಸುದ್ದಿ ತಪ್ಪದೇ ಓದಿ..! - ರುಚಿಯ ಗ್ರಹಿಸುವಿಕೆ ಕಳೆದುಕೊಂಡಿದ್ದ ಮಂದಿ

ಕೋವಿಡ್​ ಸೋಂಕಿನ ಆರಂಭಿಕ ಲಕ್ಷಣಗಳಲ್ಲಿ ಪ್ರಮುಖವಾಗಿದ್ದು ಎಂದರೆ ವಾಸನೆ ಮತ್ತು ರುಚಿಯ ಶಕ್ತಿ ಕಳೆದುಕೊಂಡಿದ್ದಾಗಿದೆ.

Study shows Covid related loss of taste and smell improves in 3 yrs

author img

By ETV Bharat Karnataka Team

Published : Nov 20, 2023, 5:09 PM IST

ಲಂಡನ್​( ಬ್ರಿಟನ್​): ಕೋವಿಡ್​ 19 ಸೋಂಕಿನಿಂದಾಗಿ ವಾಸನೆ ಮತ್ತು ರುಚಿಯ ಗ್ರಹಿಸುವಿಕೆ ಕಳೆದುಕೊಂಡಿದ್ದ ಮಂದಿ ಅನೇಕ ದಿನಗಳ ಕಾಲ ಈ ಶಕ್ತಿಯನ್ನು ಕಳೆದುಕೊಂಡಿದ್ದು ಸುಳ್ಳಲ್ಲ. ಆದರೆ, ನಿಧಾನವಾಗಿ ಮೂರು ವರ್ಷಗಳ ಬಳಿಕ ಮತ್ತೆ ತಮ್ಮ ವಾಸನೆ ಮತ್ತು ರುಚಿಯನ್ನು ಗ್ರಹಿಸುವ ಸಾಮರ್ಥ್ಯದಲ್ಲಿ ಅಭಿವೃದ್ಧಿ ಕಂಡು ಬಂದಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೋವಿಡ್​ ಸೋಂಕಿನ ಆರಂಭಿಕ ಲಕ್ಷಣಗಳಲ್ಲಿ ಪ್ರಮುಖವಾಗಿದ್ದು ಎಂದರೆ ವಾಸನೆ ಮತ್ತು ರುಚಿಯ ಶಕ್ತಿ ಕಳೆದುಕೊಳ್ಳುವುದಾಗಿತ್ತು. ಇದಾದ ನಂತರದಲ್ಲಿ ಬಂದ ಒಮ್ರಿಕಾನ್​ ಮತ್ತು ಇತರ ರೂಪಾಂತಾರಗಳು ಕೂಡ ರುಚಿ ಮತ್ತು ವಾಸನೆ ಗ್ರಹಿಕೆ ಮೇಲೆ ಕಡಿಮೆ ಪರಿಣಾಮ ಹೊಂದಿದ್ದವು.

ಈ ಅಧ್ಯಯನವನ್ನು ಜಾಮಾ ಓಟೋಲರಿಂಗೋಲಜಿ-ಹೆಡ್ ಮತ್ತು ನೆಕ್ ಸರ್ಜರಿಯಲ್ಲಿ ಪ್ರಕಟಿಸಲಾಗಿದೆ. 2020ರ ಮಾರ್ಚ್​ ಮತ್ತು ಏಪ್ರಿಲ್​ನಲ್ಲಿ ಸಾರ್ಸ್​ ಕೋವ್​ 2 ಸೋಂಕು ಪಾಸಿಟಿವ್​ ಬಂದವರಲ್ಲಿ ಕೋವಿಡ್​ ಸೌಮ್ಯ ಸ್ವಭಾವದ ಲಕ್ಷಣದಿಂದ ರುಚಿ ಮತ್ತು ವಾಸನೆ ಕಳೆದುಕೊಂಡ 88 ಮಂದಿಯನ್ನು ಅಧ್ಯಯನ ನಡೆಸಲಾಗಿದೆ. ಈ ಜನರಲ್ಲಿ ಎಷ್ಟು ದಿನಗಳ ಬಳಿಕ ತಮ್ಮ ಈ ಗ್ರಹಣ ಶಕ್ತಿ ಪುನರ್​​ಸ್ಥಾಪನೆಯಾಗಿದೆ ಎಂಬುದರ ಕುರಿತು ಪರಿಶೀಲಿಸಲಾಗಿದೆ.

ಅದರ ಅನುಸಾರ ಮೊದಲ ಕೋವಿಡ್​ನಲ್ಲಿ ಶೇ 64.8 ಮಂದಿ ತಮ್ಮ ವಾಸನೆ ಅಥವಾ ರುಚಿ ಗ್ರಹಣ ಶಕ್ತಿ ಕಳೆದು ಕೊಂಡರೆ ಎರಡನೇ ಕೋವಿಡ್​ನಲ್ಲಿ ಶೇ 31.8ರಷ್ಟು ಮತ್ತು ಮೂರನೇ ವರ್ಷದಲ್ಲಿ ಶೇ 15.9ರಷ್ಟು ಕಳೆದುಕೊಂಡಿದ್ದರು ಎಂದು ಇಟಲಿಯ ಯುನಿವರ್ಸಿಟಿ ಆಫ್​ ಟ್ರೈಸ್ಟೆ ತಿಳಿಸಿದೆ.

ಈ ಅಧ್ಯಯನದಲ್ಲಿ ಈ ರೀತಿ ಗ್ರಹಣಶಕ್ತಿ ಕಳೆದುಕೊಂಡ 50 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವರಲ್ಲಿ ದೀರ್ಘಾವಧಿಯವರೆಗೆ ರುಚಿ ಅಥವಾ ವಾಸನೆಯ ನಷ್ಟವನ್ನು ಹೊಂದಿರುವ ಸಾಧ್ಯತೆ ಕಡಿಮೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮೂರು ವರ್ಷಗಳ ಗಮನಾರ್ಹ ಅವಧಿಯಲ್ಲಿ ವಾಸನೆ ಮತ್ತು ರುಚಿ ಮರಳಿ ಬಂದಿದೆ. ಇದು ಅಧ್ಯಯನದ ವೇಳೆ ಬಹಿರಂಗವಾಗಿದೆ. ಅವರಲ್ಲಿ ನಿಧಾನವಾಗಿ ರುಚಿ ಮತ್ತು ವಾಸನೆ ಗ್ರಹಿಸುವ ಶಕ್ತಿಯಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಅಧ್ಯಯನ ತಿಳಿಸಿದೆ.

ಕೋವಿಡ್​ ಬಳಿಕ ಪರಿಸ್ಥಿತಿಯಲ್ಲಿ ರೋಗಿಗಳು ಕೀಮೋಸೆನ್ಸರಿ ಬದಲಾವಣೆಗಳು ಆರಂಭಿಕ ಸೋಂಕಿನ ನಂತರ 3 ವರ್ಷಗಳ ನಂತರ ವಾಸನೆ ಚೇತರಿಕೆ ಕಂಡು ಬಂದಿದೆ ಎಂದು ಭರವಸೆ ನೀಡಬೇಕು ಎಂದು ಸಂಶೋಧಕರು ಹೇಳಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಋತುಮಾನದ ಜ್ವರವಾದ ಕೋವಿಡ್​​, ಚಳಿಗಾಲದಲ್ಲಿ ಹೆಚ್ಚಲಿದೆ ಬಾಧೆ: ಅಧ್ಯಯನ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.