ETV Bharat / sukhibhava

ಮನೆಯಲ್ಲೇ ಸಿಲುಕಿದ್ದೀರಾ? ಫಿಟ್‌ನೆಸ್‌ ವ್ಯಾಯಾಮ ಪ್ರಾರಂಭಿಸಲು ಕೆಲ ಸಲಹೆಗಳು ಇಲ್ಲಿವೆ! - ಲಾಕ್​ಡೌನ್ ಫಿಟ್‌ನೆಸ್‌

ಕೊರೊನಾ ಹಿನ್ನೆಲೆ ಮನೆಯಲ್ಲಿಯೇ ಇರುವವರು ಫಿಟ್​ನೆಸ್ ಕಾಯ್ದುಕೊಳ್ಳಲು ನಿಯಮಿತ ವ್ಯಾಯಾಮ ಅತ್ಯಗತ್ಯ. ಇದಕ್ಕಾಗಿ ಕೆಲವು ಟಿಪ್ಸ್ ಇಲ್ಲಿವೆ.

Lockdown-fitness
Lockdown-fitness
author img

By

Published : Apr 23, 2021, 6:59 PM IST

ಹೈದರಾಬಾದ್: ಕೊರೊನಾ ಹಿನ್ನೆಲೆ ಮನೆಯಲ್ಲಿಯೇ ಇರುವವರು ಹಾಗೂ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವವರ ಜೀವನ ಶೈಲಿಯಲ್ಲಿ ಗಂಭೀರ ಬದಲಾವಣೆಗಳಾಗುತ್ತವೆ. ಆದರೆ, ಈ ಸಂದರ್ಭದಲ್ಲಿ ಫಿಟ್​ನೆಸ್ ಕಾಯ್ದುಕೊಳ್ಳಲು ನಿಯಮಿತ ವ್ಯಾಯಾಮ ಅತ್ಯಗತ್ಯ. ಫಿಟ್ನೆಸ್ ಐಕಾನ್ ಮತ್ತು ಐಕಾನಿಕ್ ಬಿಸಿನೆಸ್ ರಿಯಾಲಿಟಿ ಶೋನದ ಭಾರತೀಯ ಅಭ್ಯರ್ಥಿ ನೀರಜ್ ಪುರಾನ್ ರಾವ್ ಕೆಲವು ಟಿಪ್ಸ್ ನೀಡಿದ್ದಾರೆ.

ಸ್ವಯಂ ಬದ್ಧತೆ:

ಫಿಟ್​ನೆಸ್ ಸಾಧಿಸುವ ನಿಮ್ಮ ಪ್ರಕ್ರಿಯೆಯಲ್ಲಿ ಪೂರ್ಣ ಬದ್ಧತೆ ಅತೀ ಅಗತ್ಯ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಫಿಟ್‌ನೆಸ್ ಎಂದರೆ ಪರಿಪೂರ್ಣ ಸಮತೋಲನವನ್ನು ಕಂಡು ಹಿಡಿಯುವುದರಿಂದ ಈ ಸವಾಲನ್ನು ತೆಗೆದುಕೊಳ್ಳಲು ನೀವು ಸಂಪೂರ್ಣವಾಗಿ ಸಿದ್ಧರಾಗಿರಬೇಕು. ಸ್ವಯಂ ಬದ್ಧತೆಯ ಕೊರತೆಯಿಂದ ನಿಮ್ಮ ಅಪೇಕ್ಷಿತ ಗುರಿಗಳನ್ನು ತಲುಪುವುದು ಕಷ್ಟವಾಗುತ್ತದೆ.

ಸ್ಪಷ್ಟ ಗುರಿಯನ್ನು ಹೊಂದಿ:

ಫಿಟ್‌ನೆಸ್ ದಿನಚರಿಯಲ್ಲಿ ತೊಡಗುವ ಮೊದಲು ಮೊದಲ ಹೆಜ್ಜೆ ನಿಮ್ಮ ಗುರಿ ಏನೆಂಬುದನ್ನು ಅರ್ಥಮಾಡಿಕೊಳ್ಳುವುದು. ಅದು ತೂಕ ಇಳಿಸುವುದು, ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುವುದು, ಫ್ಲೆಕ್ಸಿಬಲ್ ಆಗುವುದು ಅಥವಾ ಸ್ನಾಯುವಿನ ಶಕ್ತಿಯನ್ನು ಬೆಳೆಸುವುದು. ನಿಮಗೆ ಬೇಕಾದುದನ್ನು ನಿರ್ಧರಿಸಿ, ಫಿಟ್‌ನೆಸ್ ದಿನಚರಿಯನ್ನು ಹಾಕಿಕೊಳ್ಳಿ.

ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿ:

ನಿಮ್ಮ ದೇಹವು ಬದಲಾವಣೆಗೆ ಬಹಳ ಸಮರ್ಥವಾಗಿದ್ದರೂ, ನಿಮ್ಮ ಫಿಟ್‌ನೆಸ್ ಪ್ರಯಾಣವನ್ನು ನೀವು ಪ್ರಾರಂಭಿಸಿದ ಮೊದಲ ದಿನವೇ ಹೆವಿವೇಯ್ಟ್‌ಗಳೊಂದಿಗೆ ಮಾಡಲು ನಿರೀಕ್ಷಿಸುವುದು ಅಸಾಧ್ಯ. ನಿಮ್ಮ ಫಿಟ್‌ನೆಸ್ ಗುರಿಗಳ ಆಧಾರದ ಮೇಲೆ ಉತ್ತಮ ವ್ಯಾಯಾಮ ದಿನಚರಿಯನ್ನು ಕಂಡುಹಿಡಿಯಲು ಸಹಾಯ ಮಾಡುವ ವರ್ಗವನ್ನು ನೀವು ಪ್ರಯತ್ನಿಸಬಹುದು. ಮೊದಲಿಗೆ ಸಣ್ಣ ಮಟ್ಟದ ವ್ಯಾಯಮ ಪ್ರಾರಂಭಿಸಿ, ಬಳಿಕ ದಿನ ಕಳೆದಂತೆ ಕಷ್ಟಕರವಾದ ವ್ಯಾಯಮ ಮಾಡಬಹುದು.

ಮುಂದುವರೆಸುವುದು ಮುಖ್ಯ:

ಫಿಟ್‌ನೆಸ್‌ ಹಾಗೂ ವ್ಯಾಯಾಮದ ಪ್ರಕ್ರಿಯೆಯು ಬೇಸರದ ಸಂಗತಿಯಾಗಿದ್ದರೂ, ನೀವು ಅದನ್ನು ಬಿಟ್ಟುಬಿಡಬಾರದು. ನೀವು ಪ್ರತಿದಿನ ಒಂದೇ ರೀತಿಯ ವ್ಯಾಯಾಮ ಮಾಡಬೇಕಾಗಿಲ್ಲ, ಬದಲಿಗೆ ಚುರುಕಾದ ನಡಿಗೆ ಅಥವಾ 5-10 ಸೂರ್ಯ ನಮಸ್ಕಾರಗಳನ್ನು ಮಾಡಲು ಪ್ರಯತ್ನಿಸಬಹುದು.

ಸ್ನೇಹಿತನನ್ನು ಹುಡುಕಿ:

ನಿಮ್ಮಂತಹ ಫಿಟ್‌ನೆಸ್ ಗುರಿಗಳನ್ನು ಹೊಂದಿರುವ ವ್ಯಾಯಮ ಸ್ನೇಹಿತ ಈ ಪ್ರಯಾಣದಲ್ಲಿ ಹೆಚ್ಚಿನ ಬೆಂಬಲವನ್ನು ನೀಡಬಹುದು. ನಿಮ್ಮ ಫಿಟ್ನೆಸ್ ಗುರಿಗಳನ್ನು ಹಾಗೂ ನೀವು ಮಾಡುವ ವ್ಯಾಯಮದ ಕುರಿತು ಪರಸ್ಪರ ಹಂಚಿಕೊಳ್ಳಬಹುದು.

ಸರಿಯಾದ ಆಹಾರ ಸೇವನೆ:

ನೀವು ನಿಮ್ಮ ಫಿಟ್ನೆಸ್ ಪ್ರಯಾಣವನ್ನು ಪ್ರಾರಂಭಿಸಿದ್ದೀರಿ ಮತ್ತು ವ್ಯಾಯಾಮ ಮಾಡಲು ಪ್ರೇರಣೆ ಪಡೆದಿದ್ದೀರಿ ಎಂದರೆ ಜೊತೆಗೆ ಉತ್ತಮ ಆಹಾರ ಸೇವನೆಯೂ ಅಗತ್ಯ. ಸರಿಯಾದ ರೀತಿಯ ಆಹಾರ ಸೇವಿಸದೇ ಇದ್ದಲ್ಲಿ, ನಿಮ್ಮ ಫಿಟ್‌ನೆಸ್ ದಿನಚರಿ ವ್ಯರ್ಥವಾಗಬಹುದು. ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನೀರು ನಿಮ್ಮ ದೇಹಕ್ಕೆ ಅತೀ ಅಗತ್ಯ. ಕಾರ್ಬೋಹೈಡ್ರೇಟ್​ಗಳು, ಪ್ರೋಟೀನ್​ಗಳು ಮತ್ತು ಆರೋಗ್ಯಕರ ಕೊಬ್ಬನ್ನು ಸಮಾನ ಪ್ರಮಾಣದಲ್ಲಿ ಸೇವಿಸುವುದು ಅತ್ಯಗತ್ಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.