ETV Bharat / sukhibhava

ಮೊಬೈಲ್ ಫೋನ್‌ಗಳ ಒತ್ತಡ: ಕಣ್ಣಿನ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯ

ಕೆಲಸದ ಹೊರತಾಗಿ ಅನೇಕ ಮಂದಿ ಕೂಡ ಅತಿ ಹೆಚ್ಚು ಮೊಬೈಲ್​​ ವೀಕ್ಷಣೆಯಲ್ಲಿ ತೊಡಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅದು ಕಣ್ಣಿನ ಮೇಲೆ ಬೀರುವ ಪರಿಣಾಮದ ಕುರಿತು ಅರಿವು ಮೂಡಿಸುವ ಅವಶ್ಯಕತೆ ಇದೆ.

Stress from mobile phones: Eye precautions is necessary

author img

By

Published : Apr 22, 2023, 5:13 PM IST

ಹೈದರಾಬಾದ್​: ತಂತ್ರಜ್ಞಾನ ಯುಗದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಯಿಂದಾಗಿ ಜನರು ಮೊಬೈಲ್​ ವ್ಯಸನಕ್ಕೆ ತುತ್ತಾಗಿರುವುದು ಸುಳ್ಳಲ್ಲ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಇದೀಗ ಮೊಬೈಲ್​ ಚಟಕ್ಕೆ ಒಳಗಾಗಿದ್ದಾರೆ. ಅಧ್ಯಯನ, ಕೆಲಸ, ಸಿನಿಮಾ, ಕಲಿಕೆ ಸೇರಿದಂತೆ ಎಲ್ಲದಕ್ಕೂ ಮೊಬೈಲ್​ ಅತ್ಯವಶ್ಯಕವಾಗಿದ್ದು, ಇದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಕೆಲಸದ ಹೊರತಾಗಿ ಅನೇಕ ಮಂದಿ ಕೂಡ ಅತಿ ಹೆಚ್ಚು ಮೊಬೈಲ್​​ ವೀಕ್ಷಣೆಯಲ್ಲಿ ತೊಡಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅದು ಕಣ್ಣಿನ ಮೇಲೆ ಬೀರುವ ಪರಿಣಾಮದ ಕುರಿತು ಅರ್ಥೈಸಬೇಕಾದ ಅವಶ್ಯಕತೆ ಇದೆ. ಅತಿ ಹೆಚ್ಚು ಮೊಬೈಲ್​ ವೀಕ್ಷಣೆ ಮಾಡಿದಂತೆ ಕಣ್ಣಿನ ಸುತ್ತ ಇರುವ ಸ್ನಾಯಗಳಲ್ಲಿ ಊತ ಹೆಚ್ಚುತ್ತದೆ. ಇದರಿಂದ ವ್ಯಕ್ತಿಯ ಏಕಾಗ್ರತೆ, ಕೇಳುವಿಕೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ದೆಹಲಿ ಕಣ್ಣಿನ ತಜ್ಞೆಯಾಗಿರುವ ಡಾ ಸಂಗೀತ ಭಂಡಾರಿ ತಿಳಿಸುವಂತೆ, ಅತಿ ಹೆಚ್ಚು ಮೊಬೈಲ್​ ವೀಕ್ಷಣೆಯಿಂದ ಕೇವಲ ವಯಸ್ಕರಲ್ಲಿ ಮಾತ್ರವಲ್ಲ, ಮಕ್ಕಳಲ್ಲಿ ಗಂಭೀರ ಸಮಸ್ಯೆ ಕಾಣಿಸುತ್ತಿದೆ ಎಂದಿದ್ದಾರೆ. ಅಲ್ಲದೇ, ದೀರ್ಘಕಾಲದ ಮೊಬೈಲ್​ ವೀಕ್ಷಣೆಯಿಂದ ಕಣ್ಣಿನ ಶುಷ್ಕತೆ ಸಮಸ್ಯೆ ಹೊರತಾಗಿ ಅನೇಕ ತೊಂದರೆ ಕಾಡುತ್ತದೆ.

ಮೊಬೈಲ್​ನ ಅತಿ ಹೆಚ್ಚು ಮತ್ತು ಸೂಕ್ತವಲ್ಲದ ಬಳಕೆ ಅನೇಕ ಸಮಸ್ಯೆಗೆ ಕಾರಣವಾಗಿದೆ. ಮೊಬೈಲ್​​ ಅನ್ನು ಕಣ್ಣಿಗೆ ಹತ್ತಿರದಲ್ಲಿ ಹಿಡಿದು ನೋಡುವುದು, ಮಂದ ಅಥವಾ ಕತ್ತಲಲ್ಲಿ ವೀಕ್ಷಿಸುವುದು, ಕೆಟ್ಟ ಭಂಗಿಯಲ್ಲಿ ನೋಡುವುದು ಕಣ್ಣಿನ ಒತ್ತಡಕ್ಕೆ ಕಾರಣವಾಗಿದೆ. ಇದು ಕಣ್ಣು ಕಳೆದು ಕೊಳ್ಳುವ ಅಥವಾ ಅಸ್ಪಷ್ಟ ವೀಕ್ಷಣೆ, ತಲೆ ನೋವು, ಏಕಾಗ್ರತೆ, ಕಡಿತದಂತಹ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಇದರ ಹೊರತಾಗಿ ಕಾಡುವ ಸಮಸ್ಯೆಗಳೆಂದರೆ

ಮೊಬೈಲ್​ನ ಪ್ರಕಾಶಮಾನವಾದ ಬೆಳಕಿನಿಂದ ಕಣ್ಣಿನ ನರ ಮತ್ತು ಪುಪಿಲ್ಸ್​ ಸಂಕುಚಿತಗೊಳ್ಳಬಹುದು

  • ಪದೇ ಪದೆ ತಲೆನೋವು
  • ಏಕಾಗ್ರತೆ ಭಂಗ
  • ಮೊಬೈಲ್​ ಬಳಿಕ ಬೇರೆ ಕಡೆ ದೃಷ್ಟಿ ನೆಟ್ಟಾಗ ಕೆಲವು ಕಾಲ ಬ್ಲಾಕ್​ಔಟ್​ ಅನುಭವ
  • ಕಣ್ಣು ದೃಷ್ಟಿ ಮೇಲೆ ಕೆಟ್ಟ ಪರಿಣಾಮ
  • ಕಣ್ಣಿನ ಶುಷ್ಕತೆ​ ಇದರಿಂದ ಕಡಿತ ಮತ್ತು ಉರಿತ ಸಮಸ್ಯೆ
  • ಕಣ್ಣಿನ ಮೇಲೆ ಅತಿ ಹೆಚ್ಚು ಒತ್ತಡ
  • ಕ್ಯಾಟರಾಕ್ಟ್​ ಸೇರಿದಂತೆ ಇತರೆ ಸಮಸ್ಯೆ
  • ಇತ್ತೀಚಿನ ದಿನದಲ್ಲಿ ಮೊಬೈಲ್​ ಪ್ರತಿಯೊಬ್ಬರಿಗೂ ಚಟವಾಗಿದೆ

ಮೊಬೈಲ್​ ವೀಕ್ಷಣೆ ಅನಿವಾರ್ಯವಾಗಿರುವ ಹಿನ್ನೆಲೆ ಅದನ್ನು ತ್ಯಜಿಸದೇ ಅದರ ವೀಕ್ಷಣೆ ದೃಷ್ಟಿಯಲ್ಲಿ ಕೆಲವು ಮುಂಜಾಗ್ರತೆವಹಿಸಬೆಕು ಎಂದು ವೈದ್ಯರು ಸೂಚಿಸುತ್ತಾರೆ.

  • 20/20/20 ನಿಯಮ ಪಾಲನೆ. ಅಂದರೆ ಏನೇ ಕೆಲಸ ಇರಲಿ ದೀರ್ಘಕಾಕದ ಮೊಬೈಲ್​ ವೀಕ್ಷಣೆ 20 ನಿಮಿಷದ ಬಳಿಕ ಬ್ರೇಕ್​ ತೆಗೆದುಕೊಳ್ಳಬೇಕು. 20 ಅಡಿ ದೂರದಲ್ಲಿರುವ ಯಾವುದಾದರೂ ವಸ್ತುವನ್ನು 20 ಸೆಕೆಂಡ್​ ವೀಕ್ಷಿಸಬೇಕು
  • ಸ್ಮಾರ್ಟ್​ ಫೋನ್​ಗೆ ಆ್ಯಂಟಿ ಕ್ಲೇರ್​ ಬಳಕೆ ಮಾಡಬಹುದು
  • ಮೊಬೈಲ್​ ಅನ್ನು ಮುಖದಿಂದ ಕನಿಷ್ಠ 16ರಿಂದ 18 ಇಂಚು ದೂರ ಅಂತರ ಕಾಯ್ದುಕೊಳ್ಳಬೇಕು
  • ಕತ್ತಲಲ್ಲಿ ಸ್ಮಾರ್ಟ್​ಫೋನ್​ ಅಥವಾ ಲ್ಯಾಪ್​ಟಾಪ್​ ಬಳಕೆ ಬೇಡ
  • ರಾತ್ರಿ ಹೊತ್ತು ಡಾರ್ಕ್​ ಮೂಡ್​ನಲ್ಲಿ ಮೊಬೈಲ್​ ಬಳಕೆ
  • ಮೊಬೈಲ್​ನ ಬ್ರೈಟ್​ನೆಸ್​ನಲ್ಲಿ ಸಮತೋಲನ ಕಾಯ್ದುಕೊಳ್ಳಿ
  • ಮೊಬೈಲ್​ ಪರದೆ ಶುಚಿಯಾಗಿರಿಸಿ.
  • ಅತಿ ಹೆಚ್ಚು ವೀಕ್ಷಣೆ ಮಾಡುವ ಅನಿವಾರ್ಯ ಎದುರಾದರೆ ಪ್ರತಿ ಅರ್ಧಗಂಟೆಗೊಮ್ಮೆ 10 ರಿಂದ 20 ಬಾರಿ ಕಣ್ಣು ಮಿಟುಕಿಸಿ

ಇನ್ನು ಕಣ್ಣಿಗೆ ಹೆಚ್ಚು ಒತ್ತಡ ಬೀಳದಂತೆ ಕಾಪಾಡಲು ಕೆಲವು ಸರಳ ಕಣ್ಣಿನ ವ್ಯಾಯಾಮ ಮಾಡುವುದು ಕೂಡ ಅವಶ್ಯವಾಗುತ್ತದೆ.

  • ಕುಳಿತಾಗ ನಿಮ್ಮ ಕಣ್ಣಿನ 10 ಇಂಚು ದೂರದಲ್ಲಿ ಹೆಬ್ಬೆರಳನ್ನು ಒಟ್ಟು 10 ಸೆಕೆಂಡ್​ ಕಾಲ ಅದರ ಮೇಲೆ ಗಮನ ಕೇಂದ್ರಕರಿಸಿ. ಬಳಿಕ 15 ಸೆಕೆಂಡ್​ ಬೇರೆ ವಸ್ತುವಿನ ಮೇಲೆ ಗಮನಹರಿಸಿ. ಬಳಿಕ ಮತ್ತೆ ಹೆಬ್ಬೆರಳು ಕಡೆ ಗಮನ ಇರಿಸಿ.
  • ಇದೇ ರೀತಿ ಹೆಬ್ಬೆರಳನ್ನು ಚಲನೆ ಮಾಡಿ. ಆ ಚಲನೆ ದಿಕ್ಕಿಗೆ ಕಣ್ಣು ದೃಷ್ಟಿ ಸಾಗುವಂತೆ ಮಾಡಿ. ಇದರ ಜೊತೆ ಕಣ್ಣನ್ನು ವೃತ್ತಾಕಾರ ಮತ್ತು ವಿರುದ್ಧ ವೃತ್ತಾಕಾರವಾಗಿ ನೋಡುವ ಅಭ್ಯಾಸವನ್ನು 5 ಬಾರಿ ಮಾಡಿ
  • ಯಾವುದಾದರು ಸ್ಥಳದಲ್ಲಿ ಕುಳಿತು ಅಥವಾ ಮಲಗಿ. ಕಣ್ಣನ್ನು 10 ರಿಂದ 15 ಬಾರಿ ಮಿಟುಕಿಸಿ. ಬಳಿಕ 20 ಸೆಕೆಂಡ್​ ಕಣ್ಣು ಮುಚ್ಚಿ ವಿರಾಮಿಸಿ
  • ಕಣ್ಣನ್ನು ಮುಚ್ಚಿ 5 ಸೆಕೆಂಡ್​ ಬಿಗಿಯಾಗಿ ಹಿಡಿದು ಬಳಿಕ ತೆರೆಯಿರಿ
  • ಕೈಯನ್ನು ಕಣ್ಣಿನ ನೇರಕ್ಕೆ ಹಿಡಿದು ಅದನ್ನು ಎಡದಿಂದ ಬಲಕ್ಕೆ ನಿಧಾನವಾಗಿ ತಿರುಗಿಸಿ. ಈ ರೀತಿ ಮಾಡುವಾಗ ಕೈ ಚಲನೆಯ ರೀತಿ ಕಣ್ಣಿನ ಚಲನೆ ಇರಲಿದೆ.
  • ಅಂಗೈಯನ್ನು ಚೆನ್ನಾಗಿ ಉಜ್ಜಿ, ಬಿಸಿಯಾದ ಬಳಿಕ ಕಣ್ಣಿನ ಮೆಲೆ ಇಡಿ.

ಕಣ್ಣಿನ ಸಮಸ್ಯೆಯನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು. ಯಾವುದೇ ರೀತಿಯ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅತಿ ಹೆಚ್ಚು ಮೊಬೈಲ್​ ವೀಕ್ಷಣೆ ದೃಷ್ಟಿ ದೋಷಗಳು ಮಾತ್ರವಲ್ಲ, ಅನೇಕ ಗಂಭೀರ ಮತ್ತು ಶಾಶ್ವತ ಸಮಸ್ಯೆಗಳ ಅಪಾಯವೂ ಹೆಚ್ಚಾಗುತ್ತದೆ

ಇದನ್ನೂ ಓದಿ: ಮೊಬೈಲ್‌ನಲ್ಲೇ ಕಳೆದು ಹೋಗ್ತಿದೆ ಮಕ್ಕಳ ಬೇಸಿಗೆ ರಜೆಯ ಅಮೂಲ್ಯ ಸಮಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.