ETV Bharat / sukhibhava

ಸಂಪೂರ್ಣ ಧಾನ್ಯಕ್ಕಿಂತ ಜೋಳದಲ್ಲಿದೆ ಹಲವು ಪ್ರಯೋಜನ; ಅಧ್ಯಯನ - ಮನುಷ್ಯನ ಆರೋಗ್ಯ ಮತ್ತು ಅಭಿವೃದ್ಧಿ

ಬಿಳಿ ಮತ್ತು ಕಂದು ವೈವಿಧ್ಯದ ಜೋಳಗಳಲ್ಲಿ ಕ್ಯಾಲ್ಸಿಯಂ, ಮೆಗ್ನಿಶಿಯಂ, ಲ್ಯೂಸಿನ್​, ವಲೆನ್​ ಅಂಶ ಸಂಪೂರ್ಣ ಧಾನ್ಯಗಳಿಗಿಂತ ಹೆಚ್ಚಿನ ಮಟ್ಟದಲ್ಲಿದೆ.

sorghum  Bran has many advantages over whole grains

author img

By ETV Bharat Karnataka Team

Published : Sep 12, 2023, 1:56 PM IST

Updated : Sep 12, 2023, 2:19 PM IST

ಜೋಹಾನ್ಸ್​​ ಬರ್ಗ್​​: ಜೋಳ ಭಾರತದ ಪ್ರಮುಖ ಬೆಳೆಗಳಲ್ಲಿ ಒಂದಾಗಿದ್ದು, ಇದರಲ್ಲಿ ಮನುಷ್ಯನ ಆರೋಗ್ಯ ಮತ್ತು ಅಭಿವೃದ್ಧಿಗೆ ಬೇಕಾಗುವ ಹೆಚ್ಚಿನ ಮಟ್ಟದ ಅಮಿನೋ ಆಮ್ಲ ಮತ್ತು ಮಿನರಲ್ಸ್​ ಇದ್ದು ಸಾಮಾನ್ಯ ಬೇಳೆಗಳಿಗಿಂತ ಉತ್ತಮವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹವಾಮಾನ ಸ್ಥಿತಿಸ್ಥಾಪಕತ್ವದ ಸಿರಿಧಾನ್ಯದಲ್ಲಿ ಇದು ಒಂದಾಗಿದ್ದು, ಜಗತ್ತಿನಲ್ಲಿ ಜೋಳವನ್ನು ಉತ್ಪಾದಿಸುವ ಎರಡನೇ ಅತಿ ದೊಡ್ಡ ಭಾರತ ಆಗಿದ್ದು, ಇಲ್ಲಿ ಹೆಚ್ಚು ಸೇವಿಸುವ ಏಕದಳ ಧಾನ್ಯ ಕೂಡ ಆಗಿದೆ.

ದಕ್ಷಿಣ ಆಫ್ರಿಕಾದಲ್ಲಿನ ಜೋಹಾನ್ಸ್​ಬರ್ಗ್​​ ಯುನಿವರ್ಸಿಟಿಯ ತಂಡ ಈ ಸಂಬಂಧ ಸಂಶೋಧನೆ ನಡೆಸಿದ್ದು, ಬಿಳಿ ಮತ್ತು ಕಂದು ವೈವಿಧ್ಯದ ಜೋಳಗಳಲ್ಲಿ ಕ್ಯಾಲ್ಸಿಯಂ, ಮೆಗ್ನಿಶಿಯಂ, ಲ್ಯೂಸಿನ್​ ವಲೆನ್ ಅಂಶ ​ಸಂಪೂರ್ಣ ಧಾನ್ಯಗಳಿಗಿಂತ ಹೆಚ್ಚಿನ ಮಟ್ಟದಲ್ಲಿದೆ.

ಕಂದು ಜೋಳದ ಹೊಟ್ಟಿನಲ್ಲಿ ಹೆಚ್ಚಿನ ಮಟ್ಟದ ಲ್ಯೂಸಿನ್ ಆಮ್ಲ ಇದ್ದು, ಇದು ಸ್ನಾಯುಗಳ ಅಭಿವೃದ್ಧಿ ಮತ್ತು ಮರುಜೋಡಣೆಗೆ ಅತ್ಯಗತ್ಯವಾಗಿದೆ. ವಲೆನ್​​ ಸ್ನಾಯುಗಳ ಟಿಶ್ಯೂನಲ್ಲಿ ಪ್ರಮುಖವಾಗಿದ್ದು, ಹಾರ್ಮೋನ್​ ಉತ್ಪಾದನೆ ಬೆಳವಣಿಗೆಗೆ ಸಹಾಕಾರಿಯಾಗಿದೆ. ಈ ಅಂಶವೂ ಜೋಳದಲ್ಲಿ 100ಗ್ರಾಂ ಗೆ ಶೇ 80ಗ್ರಾಂನಷ್ಟಿದೆ.

ಕಂದು ಜೋಳದಲ್ಲಿ ಕ್ಯಾಲ್ಸಿಯಂ 100 ಗ್ರಾಂಗೆ 1020.91 ಎಂಜಿ ಮತ್ತು ಮೆಗ್ನಿಶಿಯಂ 100 ಗ್ರಾಂ 292.25 ಎಂಜಿ ಇದೆ. ಮಿನರಲ್ಸ್​ ಕೂಡ ಇದ್ದು, ಇದು ಮೂಳೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಬಿಳಿ ಜೋಳದಲ್ಲಿ ಕ್ಯಾಲ್ಸಿಯಂ 100 ಗ್ರಾಂಗೆ 995 ಎಂಜಿ ಇದ್ದರೆ ಮೆಗ್ನಿಶಿಯಂ 100 ಗ್ರಾಂ 226.02 ಎಂಜಿ ಇದೆ.

ಬೇಳೆಗಳ ಹೊಟ್ಟುಗಳಲ್ಲಿನ ಪೋಷಕಾಂಶವೂ ಕಡಿತ ಪೌಷ್ಠಿಕಾಂಶದ ಕಾಳಜಿ ವಿಷಯವಾಗಿದೆ. ಹೊಟ್ಟು ತೆಗೆಯುವುದು ಹೊಟ್ಟು ಕಣಗಳ ಗಾತ್ರದಲ್ಲಿನ ಕಡಿತದ ಪೌಷ್ಟಿಕಾಂಶದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ನಿಯಮಿತವಾಗಿ ಧಾನ್ಯ ಆಹಾರಗಳನ್ನು ಸೇವನೆ ಮಾಡುವುದರಿಂದ ದೀರ್ಘ ಆರೋಗ್ಯ ಪ್ರಯೋಜನಗಳಿದೆ ಎಂಬುದರ ಕುರತು ಬಲವಾದ ವಿಜ್ಞಾನಿ ಪುರಾವೆ ಇದೆ. ಅಧ್ಯಯನವೂ ಧಾನ್ಯಗಳ ಭಾಗವಾಗಿ ಒಳಗೊಂಡಿರುವ ಹೊಟ್ಟು ಘಟಕದೊಂದಿಗೆ ಸಂಯೋಜಿಸುತ್ತವೆ.

ಈ ಅಧ್ಯಯನವನ್ನು ಜರ್ನಲ್​ ಹೆಲಿಯೊನ್​ನಲ್ಲಿ ಪ್ರಕಟಿಸಲಾಗಿದೆ. ಸಂಶೋಧಕರು ವಿಶ್ಲೇಷಿಸಿದಂತೆ ಹೊಟ್ಟಿನ ಫೈಬರ್​​ ಅಂಶ ಇತರೆ ಧಾನ್ಯಗಳಿಗೆ ಹೋಲಿಕೆ ಮಾಡಿದರೆ ಹೆಚ್ಚಿದ್ದು, ಸಂಪೂರ್ಣ ಧಾನ್ಯಗಳಿಗಿಂತ ಅಧಿಕವಾಗಿದೆ.

ಸಂಪೂರ್ಣ ಧಾನ್ಯಕ್ಕೆ ಹೋಲಿಕೆ ಮಾಡಿದಾಗ ಬಿಲಿ ಸೋರ್ಗಮ್​ ಹೊಟ್ಟಿನಲ್ಲಿ 278.4ರಷ್ಟು ಕಚ್ಚಾ ನಾರು ಮತ್ತು ಕಂದು ಜೋಳದ ಹೊಟ್ಟಿನಲ್ಲಿ ಶೇ 203 ಕಚ್ಚಾ ಫೈಬರ್​ ಹೊಂದಿದೆ. ಈ ಜೋಳದಲ್ಲಿ ಕೊಬ್ಬಿನಾಂಶ ಹೊಂದಿದ್ದು, ಸಸ್ಯಾಧಾರಿತ ತೈಲ ಮಾರುಕಟ್ಟೆ ತೆರೆಯಬಹುದು ಎಂದಿದೆ.

ಬಿಳಿ ಜೋಳದಲ್ಲಿ 120.7ರಷ್ಟು ಕಚ್ಚಾ ಕೊಬ್ಬಿದ್ದರೆ, ಕಂದು ಸೋರ್ಗಮ್​ ಹೊಟ್ಟಿನಲ್ಲಿ ಶೇ 81.3ರಷ್ಟು ಕಚ್ಛಾ ಕೊಬ್ಬು ಇದೆ

ಜೋಳ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಗೋಧಿ, ಬಾರ್ಲಿ ಮತ್ತು ಅಕ್ಕಿಗಿಂತ ನೈಸರ್ಗಿಕ ಗ್ಲುಟನ್​ ಮುಕ್ತವಾಗಿದೆ. ಹೊಟ್ಟೆ ಕಾಯಿಲೆಗೆ ಇದು ಸುರಕ್ಷಿತವಾಗಿದೆ. ಮಧುಮೇಹ ಹೊಂದಿರುವವರಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹವಾಮಾನ ಸ್ಥಿತಿಸ್ಥಾಪಕ ಬೆಳೆಯಾಗಿರುತ್ತದೆ. ಪೌಷ್ಟಿಕಾಂಶದ ಮೂಲ ಒದಗಿಸುತ್ತದೆ. ಜೀವನೋಪಾಯ ಸೃಷ್ಟಿಸಬಹುದು ಮತ್ತು ಸುಸ್ಥಿರ ಕೃಷಿ ಉತ್ತೇಜಿಸುತ್ತದೆ ಎಂದು ಲೇಖಕರು ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ದೇಶದಲ್ಲಿ 10ರಲ್ಲಿ 6 ಮಂದಿ ಹದಿಹರೆಯದ ಹೆಣ್ಣುಮಕ್ಕಳನ್ನು ಕಾಡುತ್ತಿದೆ ರಕ್ತಹೀನತೆ; ಅಧ್ಯಯನ

Last Updated : Sep 12, 2023, 2:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.