ETV Bharat / sukhibhava

ಮಗುವಿಗೆ ಹಲ್ಲು ಹುಟ್ಟುವ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ - ಮಕ್ಕಳಲ್ಲಿ ಹಾಲು ಹಲ್ಲು ಹುಟ್ಟುವ ಪ್ರಕ್ರಿಯೆ

ಮಗುವಿಗೆ ಹಲ್ಲು ಹುಟ್ಟುವ ಸಮಯ ಹಲವರಿಗೆ ತ್ರಾಸದಾಯಕವಾಗಿರುತ್ತದೆ. ಈ ಸಂದರ್ಭದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಹಿನ್ನೆಲೆ ಯಾವ ರೀತಿ ಮುನ್ನೆಚ್ಚರಿಕೆವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮಗುವಿಗೆ ಹಲ್ಲು ಹುಟ್ಟುವ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆ ವಹಿಸುವುದು ಅವಶ್ಯ
some-precautions-are-necessary-during-teething-of-the-baby
author img

By

Published : Feb 27, 2023, 10:23 AM IST

Updated : Feb 27, 2023, 10:35 AM IST

ಬೆಂಗಳೂರು: ಮಗು ಹುಟ್ಟಿದ ಐದಾರು ತಿಂಗಳ ಬಳಿಕ ಅವರಲ್ಲಿ ಹಲ್ಲು ಹುಟ್ಟುವ ಪ್ರಕ್ರಿಯೆ ಶುರುವಾಗುತ್ತದೆ. ಈ ಹಲ್ಲು ಬರುವಾಗ ಅನೇಕ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. ವಸಡು ನೋವು ಸೇರಿದಂತೆ ಹೊಟ್ಟೆ ನೋವು, ಜ್ವರ ಮತ್ತಿತ್ತರ ಆರೋಗ್ಯ ಸಮಸ್ಯೆಗಳು ಅವರಲ್ಲಿ ಕಾಣಬಹುದಾಗಿದೆ. ಇದರಿಂದ ಈ ಸಮಯದಲ್ಲಿ ಅನೇಕ ಮಕ್ಕಳು ಬಹಳಷ್ಟು ಕಿರಿಕಿರಿಗೆ ಒಳಗಾಗುತ್ತವೆ.

ಮಗುವಿಗೆ ಹಾಲು ಹಲ್ಲು ಹುಟ್ಟುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಬೆಂಗಳೂರಿನ ಮಕ್ಕಳ ತಜ್ಞ ಡಾ. ಟಿಎಸ್​ ರಾವ್​ ಹೇಳುವಂತೆ, ಮಕ್ಕಳಿಗೆ ಹಲ್ಲು ಬೆಳೆಯುವ ಸಂದರ್ಭದಲ್ಲಿ ಅವರು ಎದುರಿಸುವ ಕೆಲವು ಸಾಮಾನ್ಯ ತೊಂದರೆಗಳ ಕುರಿತು ಅರ್ಥೈಸಿಕೊಂಡು, ಅದರ ಉಪ ಶಮನಕ್ಕೆ ಮುಂದಾಗಬೇಕು. ಅದರ ಜೊತೆ ಮಕ್ಕಳ ಹಲ್ಲಿನ ಶುಚಿತ್ವವನ್ನು ಹೇಗೆ ಕಾಪಾಡಬೇಕು ಎಂಬುದನ್ನು ತಿಳಿಯಬೇಕು ಎನ್ನುತ್ತಾರೆ ತಜ್ಞರು.

ಈ ಸಮಸ್ಯೆ ಸಾಮಾನ್ಯ: ಹಲ್ಲು ಬೆಳೆಯುವ ಅವಧಿಯಲ್ಲಿ ಮಕ್ಕಳಿಗೆ ಎಲ್ಲಾ ಮಕ್ಕಳಿಗೂ ತೊಂದರೆಯಾಗುದಿಲ್ಲ. ಆದರೆ, ಕೆಲವು ಮಕ್ಕಳಿಗೆ ಅಲ್ಪ ಸಮಸ್ಯೆ ಕಾಡಬಹುದು ಎನ್ನುತ್ತಾರೆ ಡಾ ರಾವ್. ಹಲ್ಲು ಹುಟ್ಟುವ ಮೊದಲು ಮಕ್ಕಳ ವಸಡಿನಲ್ಲಿ ಕಡಿತ, ನೋವು, ಕೆಲವೊಮ್ಮೆ ಊತ ಕೂಡ ಕಾಣಿಸುತ್ತದೆ. ಮಕ್ಕಳಲ್ಲಿ ಎಲ್ಲ ಹಲ್ಲುಗಳು ತಕ್ಷಣಕ್ಕೆ ಹುಟ್ಟುವುದಿಲ್ಲ. ಇದಕ್ಕೆ ಕೆಲವು ಸಮಯ ಬೇಕು. ಇಂತಹ ಪರಿಸ್ಥಿತಿಯಲ್ಲಿ ವಸಡಿನಲ್ಲಿ ಕಿರಿಕಿರಿಯಾಗಬಹುದು.

ಮಕ್ಕಳಲ್ಲಿ ಹಾಲು ಹಲ್ಲು ಹುಟ್ಟುವ ಪ್ರಕ್ರಿಯೆ: ಮಕ್ಕಳಲ್ಲಿ ಹಲ್ಲು ಹುಟ್ಟುವ ಸಂದರ್ಭದಲ್ಲಿ ವಸಡಿನ ಸ್ನಾಯುವಿನಲ್ಲಿ ನೋವು ಕಾಡುತ್ತದೆ. ಆರು ತಿಂಗಳ ಮಕ್ಕಳ ತಮ್ಮ ಈ ನೋವು ಭರಿಸಲಾಗದೇ, ಅಳಲು ಶುರುಮಾಡುತ್ತದೆ. ಈ ವೇಳೆ, ಪೋಷಕರು ಕೂಡ ಸರಿಯಾದ ಸಮಸ್ಯೆ ಅರಿಯದೇ ತೊಂದರೆಗೆ ಒಳಗಾಗಬಹುದು. ಆರು ತಿಂಗಳ ಬಳಿಕ ಮಕ್ಕಳಲ್ಲಿ ಹುಟ್ಟುವ ಈ ಹಲ್ಲು ತಾತ್ಕಲಿಕವಾಗಿದ್ದು, ಇದನ್ನು ಹಾಲು ಹಲ್ಲು ಎಂದು ಕರೆಯುತ್ತಾರೆ. ಕೆಲವು ವರ್ಷಗಳ ಬಳಿಕ ಇವು ಬಿದ್ದು, ಶಾಶ್ವತ ಹಲ್ಲುಗಳು ಹುಟ್ಟುತ್ತದೆ. ವಯಸ್ಕರಲ್ಲಿ 32 ಹಲ್ಲುಗಳು ಸಾಮಾನ್ಯವಾಗಿದ್ದರೆ, ಮಕ್ಕಳಲ್ಲಿ ಕೇವಲ 20 ಹಾಲು ಹಲ್ಲುಗಳು ಹುಟ್ಟುತ್ತವೆ. ಈ 20 ಹಲ್ಲು ಹುಟ್ಟಲು ಮೂರು ವರ್ಷಗಳ ಸಮಯ ಬೇಕು. ಈ ಹಲ್ಲು ಹುಟ್ಟುವ ಸಮಯದಲ್ಲಿ ವಸಡಿನ ಸ್ನಾಯುಗಳ ಮೇಲೆ ಪರಿಣಾಮ ಕೂಡ ಕಾಣಬಹುದು. ಈ ಸ್ನಾಯುಗಳು ಕಿವಿಗಳಿಗೆ ಸಂಪರ್ಕ ಹೊಂದಿದ್ದು, ಇದರ ಪರಿಣಾಮ ಕಿವಿ ನೋವು ಕೂಡ ಕಾಣಬಹುದಾಗಿದೆ.

ತಾಯಿ ಮಕ್ಕಳಿಬ್ಬರು ವಹಿಸಬೇಕು ಕಾಳಜಿ: ಇನ್ನು ಅನೇಕ ಮಕ್ಕಳಲ್ಲಿ ಹಲ್ಲು ಬರುವ ಸಂದರ್ಭದಲ್ಲಿ ಮಕ್ಕಳು ಎಲ್ಲವನ್ನು ಕಚ್ಚಲು ಮುಂದಾಗುತ್ತಾರೆ. ವಸಡಿನಲ್ಲಿ ಉಂಟಾಗುವ ಕಡಿತದಿಂದಾಗಿ ತಮ್ಮ ಬೆರಳುಗಳನ್ನು ಕಚ್ಚುತ್ತಾರೆ. ಜೊತೆಗೆ ಕೈಗೆ ಸಿಕ್ಕ ವಸ್ತುಗಳನ್ನು ಅವರು ಕಚ್ಚುವುದರಿಂದ ಅವರಲ್ಲಿ ಅತಿಸಾರ ಕಾಡುತ್ತದೆ. ಮಕ್ಕಳಿಗೆ ಹಲ್ಲು ಬರುವ ಸಂದರ್ಭದಲ್ಲಿ ಹಾಲುಣಿಸುವ ತಾಯಂದಿರು ಕೂಡ ಸಮಸ್ಯೆ ಎದುರಿಸುತ್ತಾರೆ. ಹಾಲುಣಿಸುವಾಗ ಮಕ್ಕಳು ಕೂಡ ಕಚ್ಚುವುದರಿಂದ ಅನೇಕರಿಗೆ ಗಾಯವಾಗುವ ಸಾಧ್ಯತೆಗಳಿವೆ.

ಹಲ್ಲು ಬರುವ ಸಂದರ್ಭದಲ್ಲಿ ಸೊಂಕು, ಜೀರ್ಣ ಸಮಸ್ಯೆ ಮತ್ತು ಜ್ವರ ಕಾಡುವುದರಿಂದ ಈ ಸಂಬಂಧ ಕೆಲವು ಮುನ್ನೆಚ್ಚರಿಕೆ ವಹಿಸಬೇಕಿದೆ. ಮಕ್ಕಳ ಬಟ್ಟೆ, ಆಟದ ಸಾಮಾಗ್ರಿ ಸೇರಿದಂತೆ ಸುತ್ತಮುತ್ತ ವಸ್ತುಗಳ ಶುಚಿತ್ವ ಕಾಪಾಡಿ. ಈ ಸಂದರ್ಭದಲ್ಲಿ ಮಕ್ಕಳು ಪದೇ ಪದೇ ಬೆರಳನ್ನು ಕಚ್ಚುವುದರಿಂದ ಅವರ ಕೈಯನ್ನು ಶುಚಿಗೊಳಿಸುತ್ತಿರಬೇಕು.

ಅನೇಕರು ಮಕ್ಕಳಲ್ಲಿನ ವಸಡಿನ ಕಡಿತದ ಸಮಸ್ಯೆಗೆ ಟೀಥರ್​ ಅನ್ನು ನೀಡುತ್ತಾರೆ. ಇದು ವಸಡಿನ ಕಡೆತವನ್ನು ಕಡಿಮೆ ಮಾಡುತ್ತದೆ. ಇವುಗಳನ್ನು ನೀಡುವ ಮುನ್ನ ಅವು ಉತ್ತಮ ಗುಣಮಟ್ಟದ ಶುಚಿತ್ವ ಹೊಂದಿದೆಯಾ ಎಂಬುದನ್ನು ಗಮನಿಸದೇ ಸಣ್ಣ ಮತ್ತು ಒರಟಿನ ಟೀಥರ್​ ನೀಡಬೇಡಿ

ಮಕ್ಕಳ ವಸಡಿಗೆ ಹಾನಿಯಾಗುವ ವಸ್ತುವನ್ನು ಮಗುವಿಗೆ ನೀಡಬೇಡಿ. ಈ ಸಮಯದಲ್ಲಿ ಮಗುವಿನ ಮೃದುವಾದ ತಾಜಾ ತರಕಾರಿ ಅಥವಾ ಹಣ್ಣನ್ನು ಕೂಡ ಕಚ್ಚಲು ನೀಡಬಹುದು. ಇದು ಮಗುವಿನ ಪೋಷಕಾಂಶವನ್ನು ನೀಡುತ್ತದೆ. ಮಗುವಿಗೆ ಸ್ನಾನ ಮಾಡಿಸುವಾಗ, ಹಾಲು ಕುಡಿದ ಬಳಿಕ ಅವುಗಳ ವಸಡನ್ನು ಮೃದುವಾಗಿ ಬೆರಳಿನಲ್ಲಿ ಅಥವಾ ಮೃದು ಒದ್ದೆ ಬಟ್ಟೆಯಲ್ಲಿ ಮಸಾಜ್​ ಮಾಡಿ.

ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ವಾರದ ಆಹಾರ ಕ್ರಮ ಹೇಗಿರಬೇಕು? ಇಲ್ಲಿವೆ ಟಿಪ್ಸ್​

Last Updated : Feb 27, 2023, 10:35 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.