ETV Bharat / sukhibhava

ಸಾಮಾಜಿಕ ಜಾಲತಾಣದ ಬಳಕೆ ಯುವಜನತೆ ಮತ್ತು ಮಕ್ಕಳಲ್ಲಿ ಖಿನ್ನತೆ ಉಂಟು ಮಾಡಲ್ಲ: ಸಂಶೋಧನೆ - ಆತಂಕ ಮತ್ತು ಖಿನ್ನತೆ ಲಕ್ಷಣ ಬೆಳೆಸಲು

ನಾರ್ವೆಯ ಮನೋವಿಜ್ಞಾನ ಪ್ರಾಧ್ಯಾಪಕರು ನಡೆಸಿದ ಅಧ್ಯಯನದಲ್ಲಿ ಅತಿಯಾದ ಸಾಮಾಜಿಕ ಬಳಕೆ ಮಕ್ಕಳಲ್ಲಿ ಖಿನ್ನತೆ ಮೂಡಿಸುವುದಿಲ್ಲ ಎಂದು ತಿಳಿಸಿದ್ದಾರೆ.

Social media use is not a cause of depression in youth and children

author img

By ETV Bharat Karnataka Team

Published : Aug 26, 2023, 10:36 AM IST

ನವದೆಹಲಿ: 10 ರಿಂದ 16 ವರ್ಷದ ಮಕ್ಕಳು ಅತಿಯಾದ ಇನ್​​ಸ್ಟಾಗ್ರಾಂ, ಯೂಟ್ಯೂಬ್​ ಮತ್ತು ಫೇಸ್​ಬುಕ್​ ಬಳಕೆಯು ಅವರಲ್ಲಿ ಆತಂಕ ಮತ್ತು ಖಿನ್ನತೆ ಲಕ್ಷಣ ಬೆಳೆಸಲು ಸಾಧ್ಯವಿಲ್ಲ ಎಂದು ಹೊಸ ಅಧ್ಯಯನ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಆತಂಕ ಮತ್ತು ಖಿನ್ನತೆ ಪ್ರಕರಣಗಳು ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಬಳಕೆ ಕೂಡ ಹೆಚ್ಚುತ್ತಿದೆ ಎಂಬ ನಂಬಿಕೆ ಇದೆ ಎಂದು ನಾರ್ವೇಜಿಯನ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಮನೋ ವಿಜ್ಞಾನ ವಿಭಾಗದ ಪ್ರಧ್ಯಾಪಕರಾದ ಸಿಲ್ಜೆ ಸ್ಟೈನ್ಸ್ಬೆಕ್ ತಿಳಿಸಿದ್ದಾರೆ.

ಈ ಅಧ್ಯಯನದ ಕುರಿತು ಕಂಪ್ಯೂಟರ್ಸ್​ ಇನ್​​ ಹ್ಯೂಮನ್​ ಬಿಹೇವಿಯೋದಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಯುವ ಜನರು ಸಾಮಾಜಿಕ ಮಾಧ್ಯಮದ ಬಳಕೆಯು ಅವರಲ್ಲಿ ಆಗಾಗ್ಗೆ ಗಟ್ಟಿ ಭಾವನೆಯನ್ನು ಸೃಷ್ಟಿಸಿದೆ. ಈ ವಿಚಾರ ಸಂಬಂಧ ಪೋಷಕರು ಮತ್ತು ವೃತ್ತಿಪರರಲ್ಲಿ ಸಾಕಷ್ಟು ಕಾಳಜಿ ಇದೆ ಎಂದು ಸ್ಟೈನ್ಸ್ಬೆಕ್​ ತಿಳಿಸಿದ್ದಾರೆ.

ನಾರ್ವೆಯ ಟ್ರೊಂಡೆಮ್ ನಗರದ 800 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು,​ ಸಾಮಾಜಿಕ ಮಾಧ್ಯಮದ ಬಳಕೆ ಮತ್ತು ಮಾನಸಿಕ ಅಸ್ವಸ್ಥತೆಯ ರೋಗಲಕ್ಷಣಗಳ ಕುರಿತು ಆರು ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ. ಮಕ್ಕಳು 10 ವರ್ಷದಿಂದ 16 ವರ್ಷ ಆಗುವವರೆಗೆ ಪ್ರತಿ ವರ್ಷ ಅವರ ದತ್ತಾಂಶ ಸಂಗ್ರಹಿಸಲಾಗಿದೆ.

ಮಕ್ಕಳು ಮತ್ತು ಅವರ ಪೋಷಕರಲ್ಲೂ ಕೂಡ ಸಂದರ್ಶನದ ವೇಳೆ ಖಿನ್ನತೆ ಮತ್ತು ಆತಂಕದಂತಹ ಲಕ್ಷಣಗಳನ್ನು ಪತ್ತೆ ಮಾಡಲಾಯಿತು. ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳನ್ನು ಮಾಡಿದಾಗ ಲೈಕ್​ ಮತ್ತು ಕಮೆಂಟ್​ ವಿಚಾರದಲ್ಲಿ ಹುಡುಗ ಮತ್ತು ಹುಡುಗಿಯರಲ್ಲಿ ಒಂದೆ ರೀತಿಯ ಫಲಿತಾಂಶಗಳು ಕಂಡು ಬಂದವು.

ಇದೇ ವಿಚಾರವಾಗಿ ಅನೇಕ ವರ್ಷಗಳ ಕಾಲ ನಡೆಸಿದ ಅಧ್ಯಯನದಲ್ಲಿ ಹಾಗೂ ಈ ಬಗ್ಗೆ ನಡೆಸಿದ ಆಳವಾದ ಸಂದರ್ಶನದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಮಾನಸಿಕ ಅಸ್ವಸ್ಥತೆ ಲಕ್ಷಣಗಳು ಪರಸ್ಪರ ಸಂಬಂಧವನ್ನು ಹೊಂದಿರುವ ಕುರಿತು ಹಲವು ಸತ್ಯಗಳನ್ನು ಬಹಿರಂಗಗೊಂಡಿವೆ.

ಈ ಹಿಂದೆ ಕೂಡ ಇದೇ ಸಂಶೋಧಕರ ತಂಡ ನಡೆಸಿದ ಅಧ್ಯಯನದಲ್ಲಿ ನಾರ್ವೆಯ ಸುಮಾರು ಶೇ 5ರಷ್ಟು ಯುವಜನತೆ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದು, ಅಲ್ಲದೇ ಈ ಖಿನ್ನತೆ ಮಕ್ಕಳಲ್ಲಿ ಹೆಚ್ಚಿತ್ತು ಎಂಬುದಾಗಿ ಕಂಡುಕೊಳ್ಳಲಾಗಿತ್ತು. 10ರಲ್ಲಿ ಒಂದು ಮಗುವು ಆತಂಕದ ಸಮಸ್ಯೆಯನ್ನು ತನ್ನ 4 ರಿಂದ 14 ವರ್ಷದ ವಯೋಮಿತಿಯಲ್ಲಿ ಅನುಭವಿಸುತ್ತಿತ್ತು.

ಬರುವ ವರ್ಷಗಳಲ್ಲಿ ಸಂಶೋಧಕರು ಹೇಗೆ ಸಾಮಾಜಿಕ ಜಾಲತಾಣಗಳು ಸೈಬರ್​ ಕಿರುಕುಳ ಮತ್ತು ನಗ್ನ ಚಿತ್ರ ಪೋಸ್ಟ್​​ಗಳು ಹದಿ ಹರೆಯದ ಮಕ್ಕಳ ಬೆಳವಣಿಗೆ ಮತ್ತು ಸಮಾಜದ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಪರಿಶೀಲಿಸುವ ಉದ್ದೇಶ ಹೊಂದಿದ್ದಾರೆ. (IANS)

ಇದನ್ನೂ ಓದಿ: ವಾಯುಮಾಲಿನ್ಯ ತಗ್ಗಿಸಿ, ಡೆಮೆನ್ಶಿಯಾ ರೋಗದಿಂದ ಪಾರಾಗಿ: ವೈದ್ಯರ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.