ಬೇಸಿಗೆ ಕಾರಣಕ್ಕಾಗಿ ಚರ್ಮದ ಆರೈಕೆಗೋಸಸ್ಕರ ಸಾಕಷ್ಟು ಮಂದಿ ವಿಧವಿಧವಾದ ಕ್ರೀಮ್‌ಗಳನ್ನು ಮತ್ತು ಲೋಷನ್ಗಳನ್ನು ಬಳಸುತ್ತಾರೆ. ಚರ್ಮ ಕಳೆಗುಂದುವುದನ್ನು ತಪ್ಪಿಸಲು ಅನೇಕ ವೈದ್ಯಕೀಯ ಉತ್ಪನ್ನಗಳಿವೆ.
ವಿಶೇಷವಾಗಿ ಬೇಸಿಗೆಯಲ್ಲಿ ಸೂರ್ಯನಿಂದ ರಕ್ಷಿಸಲು ಅನೇಕ ಉತ್ಪನ್ನಗಳಿದ್ದು, ಅವುಗಳಲ್ಲಿ ಕೆಲವು ಚರ್ಮಕ್ಕೆ ಹಾನಿಕಾರಕವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಯಾವುದೇ ರೂಪದಲ್ಲಿರುವ ಸ್ಟಿರಾಯ್ಡ್ ಕ್ರೀಮ್‌ಗಳು ಚರ್ಮಕ್ಕೆ ಒಳ್ಳೆಯದಲ್ಲ ಎಂದು ತಜ್ಞರ ಅಭಿಪ್ರಾಯ.
ಕೆಲವರು ಫಂಗಲ್ ಸೋಂಕು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಹಾಗೂ ಚರ್ಮವನ್ನು ಕಾಂತಿಯುತಗೊಳಿಸಲು ಬೆಟ್ನೋವೇಟ್‌ನಂತಹ ಕ್ರೀಮ್‌ಗಳನ್ನು ಬಳಸುತ್ತಾರೆ. ಈ ಕ್ರೀಮ್‌ಗಳು ಸದ್ಯಕ್ಕೆ ಪರಿಣಾಮಕಾರಿ ಎಂದು ಎನಿಸಿದರೂ, ದೀರ್ಘಕಾಲದ ಬಳಕೆಯಿಂದಾಗಿ ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಈ ಕ್ರೀಮ್ಗಳ ಬಳಕೆಯಿಂದ ಚರ್ಮವು ಸೂಕ್ಷ್ಮವಾಗುತ್ತದೆ. ಆದ್ದರಿಂದ ಸೂರ್ಯನಿಗೆ ಒಡ್ಡಿಕೊಂಡರೆ, ಚರ್ಮವು ಕೆಂಪಾಗುತ್ತದೆ. ಆಗ ಚರ್ಮಕ್ಕೆ ಹಾನಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಸ್ಟೀರಾಯ್ಡ್ ಕ್ರಿಮ್ಗಳ ಬಳಕೆಯಿಂದ ಉಂಟಾಗುವ ಸಮಸ್ಯೆಗಳು..
- ಮುಖವನ್ನು ತೊಳೆದುಕೊಂಡಾಗ ಕೆಂಪಾಗಿ ಕಾಣಿಸುತ್ತದೆ.
- ಬಿಸಿಲಿಗೆ ಒಡ್ಡಿಕೊಂಡಾಗ ಚರ್ಮದ ಮೇಲೆ ಉರಿ ಕಾಣಿಸಿಕೊಳ್ಳುತ್ತದೆ
- ಮುಖದ ಮೇಲೆ ಕೂದಲುಗಳು ಬೆಳವಣಿಗೆಯಾಗುವುದು
- ಚರ್ಮದ ಮೇಲೆ ಶಾಶ್ವತವಾಗಿ ಬಿಳಿ ಕಲೆಗಳು ಕಾಣುವುದು
- ಮುಖದ ಮೇಲಿನ ರಕ್ತನಾಳಗಳು ಸ್ಪಷ್ಟವಾಗಿ ಗೋಚರಿಸುವುದು
ಏನು ಮಾಡಬೇಕು..? ಏನು ಮಾಡಬಾರದು?
- ಬಳಕೆ ಮಾಡುತ್ತಿರುವ ಸ್ಟೀರಾಯ್ಡ್ ಕ್ರೀಮ್ ಅನ್ನು ಕ್ರಮೇಣ ತಗ್ಗಿಸಬೇಕು
- ಒಳ್ಳೆಯ ಸನ್ಸ್ಕ್ರೀನ್, ಮಾಯಿಶ್ಚರೈಸರ್ ಉಪಯೋಗಿಸಿ
- ಮನೆ ಮದ್ದುಗಳನ್ನು ಬಳಸುವುದು ಅಷ್ಟೇನೂ ಒಳ್ಳೆಯದಲ್ಲ
- ಚರ್ಮದ ಸಮಸ್ಯೆಗಳಿಗೆ ಡರ್ಮಾಟಲಾಜಿಸ್ಟ್ ಅನ್ನು ಸಂಪರ್ಕಿಸಿ